Category Archives: Blog

Your blog category

Video: ಸಾರ್ವಜನಿಕ ಶೌಚಾಲಯದಲ್ಲಿ ಎರಡೂವರೆ ತಿಂಗಳ ನಾಯಿ ಮರಿ ಮೇಲೆ ಅತ್ಯಾಚಾರವೆಸಗಿದ ಕಾಮುಕ – Kannada News | Mumbai: Newborn Puppy Brutally Abused in Malad, Suspect Taken into Custody

ಮುಂಬೈ, ಜನವರಿ 21: ಎರಡೂವರೆ ತಿಂಗಳ ನಾಯಿ(Dog) ಮರಿ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ಮುಂಬೈನ ಮಲಾಡ್ ಪ್ರದೇಶದಲ್ಲಿ ನಡೆದಿದೆ. ಯುವಕನೊಬ್ಬ ಮರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕ್ರೂರವಾಗಿ ಥಳಿಸಿದ ಆಘಾತಕಾರಿ ಪ್ರಾಣಿ ಹಿಂಸೆಯ ಘಟನೆ ಬೆಳಕಿಗೆ ಬಂದಿದೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ  ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪ್ರಾಣಿ ಕಲ್ಯಾಣ ಸಂಸ್ಥೆ ಪಿಎಎಲ್ (ಪ್ಯೂರ್ ಅನಿಮಲ್ ಲವರ್ಸ್) ಫೌಂಡೇಶನ್ ಹಂಚಿಕೊಂಡಿರುವ ಈ ವೀಡಿಯೊದಲ್ಲಿ ಮುಂಬೈ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ಕಾರ್ಯಕರ್ತರು ಆ ಪ್ರದೇಶದ ಸಾರ್ವಜನಿಕ ಶೌಚಾಲಯಕ್ಕೆ ಪ್ರವೇಶಿಸುತ್ತಿರುವುದನ್ನು ತೋರಿಸಲಾಗಿದ್ದು, ಆರೋಪಿಯು ಕೃತ್ಯ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

ವಿಡಿಯೋದಲ್ಲಿ ಆ ವ್ಯಕ್ತಿ ಆರಂಭದಲ್ಲಿ ಬಾಗಿಲು ತೆರೆಯಲು ನಿರಾಕರಿಸುವುದನ್ನು ಕಾಣಬಹುದು. ನಂತರ ಪೊಲೀಸರು ಬಲವಂತವಾಗಿ ಒಳಗೆ ಪ್ರವೇಶಿಸಿ ಆತನನ್ನು ವಶಕ್ಕೆ ಪಡೆದರು. ಅರೆಬೆತ್ತಲೆಯಾಗಿ ಮತ್ತು ಶಾರ್ಟ್ಸ್ ಧರಿಸಿ ಕಾಣಿಸಿಕೊಂಡ ಆರೋಪಿಯನ್ನು  ವಶಕ್ಕೆ ತೆಗೆದುಕೊಳ್ಳಲಾಯಿತು.

ಮತ್ತಷ್ಟು ಓದಿ: ಬೀದಿ ನಾಯಿ ಅಲ್ಲ, ಪೊಲೀಸ್ ಠಾಣೆ ಮೆಟ್ಟಿಲೇರಿತು ಸಾಕು ನಾಯಿ ಜಗಳ! ಅಸಲಿಗೆ ಆಗಿದ್ದೇನು ಗೊತ್ತೇ?

ಪಿಎಎಲ್ ಫೌಂಡೇಶನ್ ಪ್ರಕಾರ, ನಾಯಿಮರಿಯನ್ನು ತಕ್ಷಣವೇ ರಕ್ಷಿಸಿ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಯಿತು. ನಾಯಿಮರಿ ಈಗ ವೈದ್ಯಕೀಯ ಆರೈಕೆಯಲ್ಲಿದೆ ಮತ್ತು ಗಂಭೀರ ಸ್ಥಿತಿಯಲ್ಲಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:38 pm, Wed, 21 January 26

Source link

‘ಆತ್ಮಸಾಕ್ಷಿ ಬೇಡ್ವಾ’; ಸುದೀಪ್ ಪ್ರಕರಣದ ಅಸಲಿಯತ್ತು ಬಿಚ್ಚಿಟ್ಟ ಚಕ್ರವರ್ತಿ ಚಂದ್ರಚೂಡ್

‘ವಾರಸ್ದಾರ’ ಧಾರಾವಾಹಿ ಶೂಟಿಂಗ್ ವೇಳೆ ತಮ್ಮ ತೋಟ ನಾಶ ಮಾಡಲಾಗಿದೆ ಎಂಬ ಆರೋಪವನ್ನು ಚಿಕ್ಕಮಗಳೂರಿನ ದೀಪಕ್ ಮಯೂರ್ ಮಾಡಿದ್ದರು. ಈ ಧಾರಾವಾಹಿ ನಿರ್ಮಾಣ ಮಾಡಿದ್ದು ಸುದೀಪ್. ಸುದೀಪ್ ಹಾಗೂ ಅವರ ಆಪ್ತ ಚಕ್ರವರ್ತಿ ಚಂದ್ರಚೂಡ್ ಹಣ ಕೊಡೋದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ದೀಪಕ್ ದೂರು ನೀಡಿದ್ದಾರೆ. ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಸ್ಪಷ್ಟನೆ ನೀಡಿದ್ದಾರೆ. ‘ದೀಪಕ್ ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿದ್ದಾರೆ. ಅವರಿಗೆ ಆತ್ಮ ಸಾಕ್ಷಿಯೇ ಇಲ್ಲ’ ಎಂದಿದ್ದಾರೆ. ಸಂಪೂರ್ಣ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಕ್ರಮವಾಗಿ ಗುಜರಾತ್ ವಾಹನಗಳಿಗೆ ಎಫ್​ಸಿ ಮಾಡಿದ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್​ ಅಮಾನತು – Kannada News | Karnataka RTO Officer Nisar Ahmed Suspended for Illegally Issuing Fitness Certificates to Gujarat Vehicles

ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್​ ಅಮಾನತು

ಬೆಂಗಳೂರು, ಜನವರಿ 21: ಗುಜರಾತ್ (Gujrat) ವಾಹನಗಳಿಗೆ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್ (FC) ನೀಡಿದ ಗಂಭೀರ ಆರೋಪದ ಮೇಲೆ ಕೋರಮಂಗಲ ಆರ್‌ಟಿಒದ ಹಿರಿಯ ಮೋಟರ್ ನಿರೀಕ್ಷಕ ನಿಸಾರ್ ಅಹಮದ್ ಅವರನ್ನು ಅಮಾನತುಗೊಳಿಸಲಾಗಿದೆ. ಈ ಭ್ರಷ್ಟಾಚಾರದ ಬಗ್ಗೆ ‘ಟಿವಿ9’ ದಾಖಲೆಗಳ ಸಹಿತ ವರದಿ ಮಾಡಿತ್ತು. ನಂತರ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು ತನಿಖೆಗೆ ಆದೇಶಿಸಿತ್ತು. ಕೋರಮಂಗಲ ಆರ್‌ಟಿಒ ಅಧಿಕಾರಿಗಳು ಗುಜರಾತ್ ವಾಹನಗಳ ಖುದ್ದು ತಪಾಸಣೆ ನಡೆಸದೆಯೇ ಅವುಗಳಿಗೆ ಎಫ್‌ಸಿ ನೀಡಿದ್ದರು.

ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ಪ್ರಕಾರ, ಯಾವುದೇ ರಾಜ್ಯದಲ್ಲಾದರೂ ವಾಹನಗಳ ಎಫ್‌ಸಿ ಮಾಡಿಸಿಕೊಳ್ಳಲು ಅವಕಾಶವಿದೆ. ಆದರೆ, ವಾಹನವವನ್ನು ಖುದ್ದು ಆರ್‌ಟಿಒ ಮುಂದೆ ಹಾಜರುಪಡಿಸಿದ ನಂತರ ಪರಿಶೀಲನೆ ನಡೆಸಿಯೇ ಎಫ್​ಸಿ ನೀಡಬೇಕು ಎಂಬ ನಿಯಮವಿದೆ. ಆದರೆ, ಕೋರಮಂಗಲ ಆರ್‌ಟಿಒ ಅಧಿಕಾರಿಗಳು, ವಾಹನಗಳು ಇಲ್ಲಿಗೆ ಬಂದಿದ್ದವು, ನಾವು ಖುದ್ದಾಗಿ ಪರಿಶೀಲಿಸಿದ್ದೇವೆ ಎಂದು ಸುಳ್ಳು ಹೇಳಿ ಎಫ್‌ಸಿಗಳನ್ನು ನೀಡಿದ್ದರು. ಆದರೆ, ಆ ಸಮಯದಲ್ಲಿ ಆ ವಾಹನಗಳು ಗುಜರಾತ್‌ನಲ್ಲಿ ಸಂಚರಿಸುತ್ತಿರುವುದನ್ನು ಅಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಸಮೇತ ಬಹಿರಂಗಪಡಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಸಾರಿಗೆ ಇಲಾಖೆ ಸಚಿವರು ತನಿಖೆಗೆ ಆದೇಶಿಸಿದ್ದರು. ಜಂಟಿ ಕಮಿಷನರ್ ನೇತೃತ್ವದಲ್ಲಿ ತನಿಖೆ ನಡೆದು, ಮೇಲ್ನೋಟಕ್ಕೆ ನಿಸಾರ್ ಅಹಮದ್ ಅವರು ತಪ್ಪೆಸಗಿರುವುದು ಕಂಡುಬಂದಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ರಾಜ್ಯ ಸಾರಿಗೆ ಇಲಾಖೆ ಆಯುಕ್ತರು ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದು ಪ್ರಾಥಮಿಕ ಹಂತದ ಕ್ರಮವಾಗಿದ್ದು, ಈ ಅಕ್ರಮದಲ್ಲಿ ಶಾಮೀಲಾಗಿರುವ ಇತರೆ ಅಧಿಕಾರಿಗಳ ಬಗ್ಗೆಯೂ ತನಿಖೆ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅಧಿಕಾರಿಗಳ ಅಮಾನತು ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕರ್ನಾಟಕದ ಮಾನ ಗುಜರಾತ್​ನಲ್ಲಿ ಹರಾಜಿಗಿಟ್ಟ ಆರ್​ಟಿಒ ಅಧಿಕಾರಿಗಳು! ಕಾಸು ಕೊಟ್ರೆ ವಾಹನ ತಪಾಸಣೆಯೇ ಮಾಡದೆ ಕೊಡ್ತಾರೆ ಎಫ್​ಸಿ

ಗುಜರಾತ್‌ನ ಸುಮಾರು 50 ಶಾಲಾ ಬಸ್‌ಗಳಿಗೆ ಕೋರಮಂಗಲ ಆರ್‌ಟಿಒ ಕಚೇರಿಯಿಂದ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗಿತ್ತು. ಈ ಅಕ್ರಮವನ್ನು ಗುಜರಾತ್ ರಾಜ್ಯದ ಸಾರಿಗೆ ಅಧಿಕಾರಿಗಳೇ ಬಯಲಿಗೆಳೆದಿದ್ದರು. ವಾಹನಗಳು ನಮ್ಮ ರಾಜ್ಯದಲ್ಲಿದ್ದಾಗ, ಕರ್ನಾಟಕದಲ್ಲಿ ಎಫ್​ಸಿ ಹೇಗೆ ನೀಡಲಾಯಿ ತುಎಂದು ಪ್ರಶ್ನಿಸಿ, ಸಾಕ್ಷ್ಯಾಧಾರಗಳೊಂದಿಗೆ ಕರ್ನಾಟಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಸಾಕ್ಷ್ಯಾಧಾರಗಳು ಟಿವಿ9ಗೆ ಲಭ್ಯವಾಗಿದ್ದವು. ಅದನ್ನಿಟ್ಟುಕೊಂಡೇ ವರದಿ ಮಾಡಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಜೆಟ್ 2026: ಆಸ್ಪತ್ರೆಗಳು ಹೆಚ್ಚಬೇಕು, ಸ್ಥಳೀಯ ಉತ್ಪಾದನೆ ಹೆಚ್ಚಬೇಕು- ಹೆಲ್ತ್​ಕೇರ್ ಉದ್ಯಮದ ಬಜೆಟ್ ನಿರೀಕ್ಷೆಗಳು… – Kannada News | Budget 2026, healthcare industry wants medical infrastructure expansion

ನವದೆಹಲಿ, ಜನವರಿ 21: ಭಾರತದ ವೈದ್ಯಕೀಯ ಕ್ಷೇತ್ರದ ಉದ್ಯಮ ಬಹಳ ವೇಗದಲ್ಲಿ ಬೆಳೆಯುತ್ತಿದ್ದರೂ ಹಲವು ಸಮಸ್ಯೆಗಳು, ಅಡೆತಡೆಗಳಿಂದ ಬಳಲುತ್ತಿರುವುದು ಹೌದು. ಜಾಗತಿಕ ಅನಿಶ್ಚಿತತೆ ಮತ್ತು ಅಮೆರಿಕದ ಟ್ಯಾರಿಫ್​ಗಳು ಭಾರತದಲ್ಲಿಯ ಈ ಉದ್ಯಮದ ಉತ್ಸಾಹ ಕುಂದಿಸಿದೆ. ಹೆಚ್ಚಿನ ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಮುಂದುವರಿದಿದೆ. ಫಾರ್ಮಾ ಕಂಪನಿಗಳು ಅಮೆರಿಕದ ಟ್ಯಾರಿಫ್​ನಿಂದ ಭೀತಿಗೊಂಡಿವೆ. ಈ ಹಿನ್ನೆಲೆಯಲ್ಲಿ ಮುಂಬರುವ ಬಜೆಟ್​ನಲ್ಲಿ (Union Budget) ಹೆಲ್ತ್​ಕೇರ್ ಉದ್ಯಮದ ಸಮಸ್ಯೆಗಳನ್ನು ಅರಿತು ಸರ್ಕಾರ ಒಂದಷ್ಟು ಕ್ರಮಗಳನ್ನು ಘೋಷಿಸಬಹುದು ಎನ್ನುವ ನಿರೀಕ್ಷೆಯಲ್ಲಿ ಉದ್ಯಮ ಇದೆ.

ಮೆಡಿಕಲ್ ಇನ್​ಫ್ರಾಸ್ಟ್ರಕ್ಚರ್ ವಿಸ್ತರಣೆ ನಿರೀಕ್ಷೆ…

ದೇಶದ ಮೊದಲ ಸ್ತರ ಮತ್ತು ಎರಡನೇ ಸ್ತರದ ನಗರಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳ ಸಂಖ್ಯೆ ಹೆಚ್ಚಿಸಬೇಕು. ಅದಕ್ಕೆ ತಕ್ಕುದಾಗಿ ವೈದ್ಯರು, ನರ್ಸ್ ಹಾಗು ಇತರ ಸಿಬ್ಬಂದಿಯ ನೇಮಕಾತಿಗಳೂ ಆಗಬೇಕು. ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಹೂಡಿಕೆ ಆಗಬೇಕು ಎಂದು ಈ ಉದ್ಯಮ ವಲಯ ನಿರೀಕ್ಷಿಸುತ್ತಿದೆ.

ಇದನ್ನೂ ಓದಿ: ಬಜೆಟ್​ನಲ್ಲಿ ಫ್ಯಾಮಿಲಿ ಭಾಗ್ಯ; ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ ತರಲು ಯೋಜನೆ; ಯಾರಿಗೆ ಲಾಭ?

ಮ್ಯಾನುಫ್ಯಾಕ್ಚರಿಂಗ್ ಸಾಮರ್ಥ್ಯ ಹೆಚ್ಚಬೇಕು…

ಆರ್ ಅಂಡ್ ಡಿ ಒಳಗೊಂಡ ವೈದ್ಯಕೀಯ ತಂತ್ರಜ್ಞಾನ ಉತ್ಪಾದನೆಗೆ ಉತ್ತೇಜಿಸಲಾಗುವಂತೆ ಪಿಎಲ್​ಐ ಸ್ಕೀಮ್ ಅನ್ನು ಮಾರ್ಪಡಿಸಬೇಕು ಎನ್ನುವ ಕೂಗು ಕೇಳಿಬರುತ್ತಿದೆ.

ಫಾರ್ಮಾ ಸೆಕ್ಟರ್​ನಲ್ಲೂ ಪರಿವರ್ತನೆಗೆ ಕೂಗು ಕೇಳಿ ಬಂದಿದೆ. ಸದ್ಯ ಫಾರ್ಮಾ ಕ್ಷೇತ್ರದಲ್ಲಿ ಕಡಿಮೆ ಮೌಲ್ಯದ ಸರಕುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. ಆದರೆ, ಹೆಚ್ಚು ಮೌಲ್ಯದ ಸರಕುಗಳ ಉತ್ಪಾದನೆಗೆ ಆಧ್ಯತೆ ಕೊಡುವ ರೀತಿಯಲ್ಲಿ ಬೆಳವಣಿಗೆ ಆಗಬೇಕು. ಈ ನಿಟ್ಟಿನಲ್ಲಿ 2026ರ ಬಜೆಟ್​ನಲ್ಲಿ ಗಮನ ಹರಿಸಲಿ ಎಂದು ಫಾರ್ಮಾ ಉದ್ಯಮಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: 2025ರಲ್ಲಿ ಸರ್ಕಾರ ತೆಗೆದುಕೊಂಡ ಪ್ರಮುಖ ಸುಧಾರಣೆಗಳಿವು…

ಜನರ ಜೇಬಿಂದ ಆಸ್ಪತ್ರೆ ವೆಚ್ಚ ಭರಿಸುವುದನ್ನು ಕಡಿಮೆ ಮಾಡಬೇಕು. ಹೆಲ್ತ್ ಇನ್ಷೂರೆನ್ಸ್, ಟ್ಯಾಕ್ಸ್ ಡಿಡಕ್ಷನ್ ಇತ್ಯಾದಿ ಹೆಚ್ಚಿಸಬೇಕು. ಜನರು ಕೆಲಸ ಮಾಡುವ ಕಂಪನಿಗಳು ಉದ್ಯೋಗಿಗಳ ಆರೋಗ್ಯ ಕಾಳಜಿ ಯೋಜನೆಗಳನ್ನು ನಡೆಸಬೇಕು. ಇವೇ ಮುಂತಾದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೀತಿ ರೂಪಿಸಬೇಕು ಎಂದು ಹೆಲ್ತ್​ಕೇರ್ ಉದ್ಯಮದವರು ಕೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 12:34 pm, Wed, 21 January 26

Source link

ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಕೊಂದು ಎಸ್ಕೇಪ್​​: ಮೃತದೇಹ ಕಚ್ಚಿತಿಂದ ಕಾಡು ಪ್ರಾಣಿಗಳು! – Kannada News | Drunk Friends Kill Man; Wild Animals Devour Body in Hassan

ಹಾಸನ/ಕಲಬುರಗಿ, ಜನವರಿ 21: ಕುಡಿದ ಮತ್ತಿನಲ್ಲಿ ಗೆಳೆಯರು ಸ್ನೇಹಿತನನ್ನೇ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ. ಗಣೇಶ್​(46) ಮೃತ ದುರ್ದೈವಿಯಾಗಿದ್ದು, ಅಶೋಕ್ ಮತ್ತು ಸುಧೀರ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ​ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಪ್ರಕರಣ ಸಂಬಂಧ ಆರೋಪಿಗಳನ್ನ ಹಳ್ಳಿಮೈಸೂರು ಪೊಲೀಸರು ಬಂಧಿಸಿದ್ದಾರೆ.

ಜ.19ರಂದು ಜಮೀನು ಕಾವಲು ಕಾಯಲು ಗಣೇಶ್​ ಹೋಗಿದ್ದು, ಈ ವೇಳೆ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡಿದ್ದ. ಬಳಿಕ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ ಶುರುವಾಗಿದ್ದು, ಮಾತಿಗೆ ಮಾತು ಬೆಳೆದು ಚಾಕುವಿನಿಂದ ಇರಿದು ಗಣೇಶ್ ಕೊಲೆ ನಡೆದಿದೆ. ಸ್ಥಳದಲ್ಲೇ ಗಣೇಶ್ ಶವ ಬಿಟ್ಟು ಆರೋಪಿಗಳು ಪರಾರಿಯಾಗಿದ್ದು, ಮೃತದೇಹದ ತಲೆ ಮತ್ತು ಕುತ್ತಿಗೆ ಭಾಗವನ್ನು ಕಾಡು ಪ್ರಾಣಿಗಳು ಕಚ್ಚಿ ತಿಂದಿವೆ. ಶವ ಗಮನಿಸಿದ ಕರ್ತವ್ಯಕ್ಕೆ ತೆರಳಿದ್ದ ಅರಣ್ಯ ಸಿಬ್ಬಂದಿ ಈ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಮತ್ತು ಸೋಕೋ ತಂಡ ಭೇಟಿ ನೀಡಿ ಪರಿಶೀಲಿಸಿದ್ದು,  ಬಂಧಿತ ಅಶೋಕ್ ಈಗಾಗಲೇ ಕೊಲೆ ಕೇಸ್​ನಲ್ಲಿ ಜೈಲಿಗೆ ಹೋಗಿ ಬಂದಿದ್ದಾತ ಎಂಬ ವಿಷಯ ಗೊತ್ತಾಗಿದೆ. ಈ ಬಗ್ಗೆ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಲೇಡಿ ಫಿಟ್ನೆಸ್ ಇನ್​ಫ್ಲುಯೆನ್ಸರ್​​ಗೆ ಲೈಂಗಿಕ ಕಿರುಕುಳ; ಹರಿಯಾಣ ವ್ಯಕ್ತಿ ಅರೆಸ್ಟ್​​

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ

ಕಲಬುರಗಿಯ ಮೋಹನ್ ಲಾಡ್ಜ್ ಬಳಿಯ ಪಾರ್ಕ್​ನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಸೈಯದ್ ಮೆಹಬೂಬ್(21) ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದು, ಹಳೇ ದ್ವೇಷಕ್ಕೆ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸೈಯದ್ ಮೆಹಬೂಬ್ ಕೆಲವು ಕಳ್ಳತನ ಪ್ರಕರಣಗಳ ಆರೋಪಿಯೂ ಆಗಿದ್ದು, ಸ್ಥಳಕ್ಕೆ ಕಲಬುರಗಿ ಪೊಲೀಸ್ ಆಯುಕ್ತ ಶರಣಪ್ಪ ಭೇಟಿನೀಡಿ ಪರೀಶಿಲನೆ ನಡೆಸಿದ್ದಾರೆ. ಈ ಬಗ್ಗೆ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹುಬ್ಬಳ್ಳಿಯಲ್ಲಿ ಸ್ಲಂ ಬೋರ್ಡ್ ಮನೆ ಹಂಚಿಕೆಗೆ ಮುಹೂರ್ತ ಫಿಕ್ಸ್; ಜನವರಿ 24ಕ್ಕೆ ಭರ್ಜರಿ ಕಾರ್ಯಕ್ರಮ – Kannada News | Hubballi Slum Board Homes: 42 Thousand Homes are to be Handed Over on January 24

ಹುಬ್ಬಳ್ಳಿಯಲ್ಲಿ ಸ್ಲಂ ಬೋರ್ಡ್ ಮನೆ ಹಂಚಿಕೆಗೆ ಮುಹೂರ್ತ ಫಿಕ್ಸ್

ಹುಬ್ಬಳ್ಳಿ, ಜನವರಿ 21: ಸ್ವಂತದಾದ ಸೂರು ಹೊಂದಬೇಕು ಎನ್ನುವುದು ಬಡ ಮತ್ತು ಮಧ್ಯಮ ವರ್ಗದವರ ಕನಸು. ರಾಜ್ಯ ಸರ್ಕಾರ ಈ ಕನಸನ್ನು ಈಡೇರಿಸಲು ಮುಂದಾಗಿದ್ದು, ರಾಜ್ಯದಲ್ಲಿ ನಲವತ್ತೆರಡು ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ಮಾಡಿದೆ. ಈ ಮನೆಗಳ ಹಂಚಿಕೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಇದೇ ಜನವರಿ 24ರಂದು ಹುಬ್ಬಳ್ಳಿಯಲ್ಲಿ (Hubballi) ಅದ್ದೂರಿ ಕಾರ್ಯಕ್ರಮ ನಡೆಯಲಿದೆ.

ಒಂದು ವರ್ಷ ಕಾಯಿಸಿದ ಸರ್ಕಾರ!

ಹುಬ್ಬಳ್ಳಿ ನಗರದ ಮಂಟೂರು ರಸ್ತೆಯಲ್ಲಿ ಸ್ಲಂ ಬೋರ್ಡ್ ವತಿಯಿಂದ ಜಿ+3 ಮಾದರಿಯಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಮನೆಗಳಿಗೆ ಕಳೆದ ಒಂದು ವರ್ಷದಿಂದ ಉದ್ಘಾಟನೆ ಭಾಗ್ಯ ಸಿಕ್ಕಿರಲಿಲ್ಲ. ಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷರು ಸೇರಿದಂತೆ ಹಿರಿಯ ನಾಯಕರ ಸಮಯಾವಕಾಶ ಲಭ್ಯವಾಗದೇ ಮನೆ ಹಂಚಿಕೆ ಕಾರ್ಯಕ್ರಮ ಪದೇಪದೇ ಮುಂದೂಡಲ್ಪಟ್ಟಿತ್ತು. 2013–18ರ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಕಾಲದಲ್ಲಿ ಈ ಮನೆಗಳಿಗೆ ಮಂಜೂರಾತಿ ದೊರೆತಿದ್ದರೂ, ಕಾಮಗಾರಿಯ ನಿಧಾನಗತಿಯ ಕಾರಣ ತಡವಾಗಿತ್ತು. ಕಳೆದ ವರ್ಷವೇ ಮನೆಗಳ ನಿರ್ಮಾಣ ಪೂರ್ಣಗೊಂಡರೂ ಫಲಾನುಭವಿಗಳಿಗೆ ಹಂಚಿಕೆ ಆಗಿರಲಿಲ್ಲ.

ಸಚಿವ ಜಮೀರ್ ನೇತೃತ್ವದಲ್ಲಿ ಮನೆ ಹಂಚಿಕೆ

ಈಗ ವಸತಿ ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದು, ಬೃಹತ್ ವೇದಿಕೆ, ಜನರಿಗಾಗಿ ಬಸ್ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಅನೇಕ ವರ್ಷಗಳಿಂದ ಸ್ವಂತ ಮನೆ ಕನಸು ಕಂಡಿದ್ದ ಸಾವಿರಾರು ಕುಟುಂಬಗಳಿಗೆ ಇದು ಹೊಸ ಜೀವನದ ಆರಂಭವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

VIDEO: ಮೊದಲ ಓವರ್​ನಲ್ಲಿ ಗೆರೆ ದಾಟಿ ಔಟಾದ ಬಾಬರ್ ಆಝಂ – Kannada News | Babar Azam Dismissed For A Duck in BBL 2026

ಬಿಗ್ ಬ್ಯಾಷ್ ಲೀಗ್​ನಲ್ಲಿ ಬಾಬರ್ ಆಝಂ ಅವರ ಕಳಪೆ ಪ್ರದರ್ಶನ ಮುಂದುವರೆದಿದೆ. ಈ ಕಳಪೆ ಪ್ರದರ್ಶನದ ನಡುವೆ ಕ್ವಾಲಿಫೈಯರ್ ಪಂದ್ಯದಲ್ಲಿ ಔಟಾದ ರೀತಿ ಈಗ ಚರ್ಚೆಗೆ ಕಾರಣವಾಗಿದೆ. ಪರ್ತ್​ನಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್​ನ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ಹಾಗೂ ಪರ್ತ್ ಸ್ಕಾಚರ್ಸ್​​ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ತ್​ ಸ್ಕಾಚರ್ಸ್ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 147 ರನ್​ಗಳು ಮಾತ್ರ. ಈ ಸುಲಭ ಗುರಿಯನ್ನು ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಆಘಾತ ನೀಡಿದ್ದು ಬಾಬರ್ ಆಝಂ.

ಏಕೆಂದರೆ ಅಲ್ಪ ಮೊತ್ತದ ಗುರಿ ಹೊಂದಿದ್ದರೂ ಬಾಬರ್ ಆಝಂ ಮೊದಲ ಓವರ್​ನ ಮೊದಲ ಎಸೆತದಲ್ಲೇ ಮುನ್ನುಗ್ಗಿ ಬಂದು ಶಾಟ್ ಬಾರಿಸಲು ಪ್ರಯತ್ನಿಸಿದ್ದರು. ಅತ್ತ ಮೊದಲ ಓವರ್​ನಲ್ಲಿ ಸ್ಪಿನ್ನರ್​ನನ್ನು ಬಳಸಿ ವಿಕೆಟ್​ ಬೇಟೆಗೆ ಪರ್ತ್ ಸ್ಕಾಚರ್ಸ್ ತಂಡ ಪ್ಲ್ಯಾನ್ ರೂಪಿಸಿತ್ತು.

ಈ ತಂತ್ರವನ್ನು ಅರಿಯದೇ ಬಾಬರ್  ಕ್ರೀಸ್ ಗೆರೆ ದಾಟುತ್ತಿದ್ದಂತೆ ವಿಕೆಟ್ ಕೀಪರ್ ಬೇಲ್ಸ್ ಎಗರಿಸಿದರು. ಈ ಮೂಲಕ ಬಾಬರ್ ಆಝಂ ಮೊದಲ ಓವರ್​ನ 2ನೇ ಎಸೆತದಲ್ಲೇ ಸ್ಟಂಪ್ ಔಟ್ ಔಟಾಗಿ ಶೂನ್ಯದೊಂದಿಗೆ ಮರಳಿದರು.

ಹೀಗೆ ಮೊದಲ ಓವರ್​ನಲ್ಲೇ ಸ್ಟಂಪ್ ಔಟ್ ಆಗಿ ಹೊರ ನಡೆದಿರುವ ಬಾಬರ್ ಆಝಂ ಅವರ ಬ್ಯಾಟಿಂಗ್ ವೈಖರಿಯ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದೆ. ಅದರಲ್ಲೂ ಸಿಡ್ನಿ ಸಿಕ್ಸರ್ಸ್ ಅಭಿಮಾನಿಗಳು ಪಾಕ್ ದಾಂಡಿಗನ ಕಳಪೆಯಾಟಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಏಕೆಂದರೆ ಈ ಪಂದ್ಯದಲ್ಲಿ ಮೊದಲ ಓವರ್​ನಲ್ಲೇ ವಿಕೆಟ್ ಕೈಚೆಲ್ಲುವ ಮೂಲಕ ಬಾಬರ್ ಆಝಂ ನೀಡಿದ ಆತ್ಮ ವಿಶ್ವಾಸದೊಂದಿಗೆ ಪರ್ತ್ ಸ್ಕಾಚರ್ಸ್ ತಂಡವು ಅತ್ಯುತ್ತವಾಗಿ ಬೌಲಿಂಗ್ ಸಂಘಟಿಸಿದರು. ಪರಿಣಾಮ ಸಿಡ್ನಿ ಸಿಕ್ಸರ್ಸ್ 15 ಓವರ್​ಗಳಲ್ಲಿ 99 ರನ್​ಗಳಿಸಿ ಆಲೌಟ್ ಆಗಿದ್ದಾರೆ. ಈ ಮೂಲಕ ಪರ್ತ್​ ಸ್ಕಾಚರ್ಸ್ ತಂಡವು 48 ರನ್​ಗಳ ಜಯ ಸಾಧಿಸಿ ಫೈನಲ್​ಗೆ ಪ್ರವೇಶಿಸಿದೆ.

Source link

Red Coral Gemstone: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ – Kannada News | Red Coral Gemstone: Astrological Benefits and How to Wear Guide for Mars

ವೈದಿಕ ಜ್ಯೋತಿಷ್ಯದಲ್ಲಿ ಹವಳವನ್ನು ಮಂಗಳ ಗ್ರಹಕ್ಕೆ ಸಂಬಂಧಿಸಿದ ಅತ್ಯಂತ ಶಕ್ತಿಶಾಲಿ ರತ್ನವೆಂದು ಪರಿಗಣಿಸಲಾಗುತ್ತದೆ. ಇದು ಶಕ್ತಿ, ಧೈರ್ಯ, ಕ್ರಿಯಾಶೀಲತೆ ಮತ್ತು ಹೋರಾಟದ ಮನೋಭಾವವನ್ನು ಪ್ರತಿನಿಧಿಸುತ್ತದೆ. ಜಾತಕದಲ್ಲಿ ಮಂಗಳ ದುರ್ಬಲವಾಗಿದ್ದರೆ ಅಥವಾ ಅಶುಭ ಗ್ರಹಗಳ ಪ್ರಭಾವದಲ್ಲಿದ್ದರೆ, ಭಯ, ಅತಿಯಾದ ಕೋಪ, ಶಕ್ತಿಯ ಕೊರತೆ ಹಾಗೂ ವೈವಾಹಿಕ ಅಥವಾ ವೃತ್ತಿಜೀವನದ ಸಮಸ್ಯೆಗಳು ಉಂಟಾಗಬಹುದು ಎಂಬ ನಂಬಿಕೆ ಇದೆ.

ಹವಳವು ಸಮುದ್ರ ಜೀವಿಗಳಿಂದ ಉತ್ಪತ್ತಿಯಾದ ನೈಸರ್ಗಿಕ ರತ್ನವಾಗಿದ್ದು, ಮುಖ್ಯವಾಗಿ ಮೆಡಿಟರೇನಿಯನ್ ಸಮುದ್ರ ಪ್ರದೇಶದಲ್ಲಿ ಕಂಡುಬರುತ್ತದೆ. ಇದರ ಬಣ್ಣ ತಿಳಿ ಕೆಂಪಿನಿಂದ ಹಿಡಿದು ಗಾಢ ಕೆಂಪುವರೆಗೆ ಇರುತ್ತದೆ. ಉತ್ತಮ ಗುಣಮಟ್ಟದ ಹವಳವು ಘನವಾಗಿದ್ದು, ನಯವಾದ ಮೇಲ್ಮೈಯನ್ನು ಹೊಂದಿರುತ್ತದೆ ಹಾಗೂ ಕಪ್ಪು ಕಲೆಗಳು ಅಥವಾ ಬಿರುಕುಗಳಿಲ್ಲದೇ ಸ್ವಾಭಾವಿಕವಾಗಿ ಕಾಣುತ್ತದೆ. ಇದು ಗಾಜಿನಂತೆ ಮಿನುಗುವುದಿಲ್ಲ ಎಂಬುದೂ ನಿಜವಾದ ಹವಳದ ಒಂದು ಲಕ್ಷಣವಾಗಿದೆ.

ವೈದಿಕ ಗ್ರಂಥಗಳ ಪ್ರಕಾರ, ಹವಳವನ್ನು ಧರಿಸುವುದರಿಂದ ಮಂಗಳ ಗ್ರಹದ ಶಕ್ತಿ ಸಮತೋಲನಗೊಳ್ಳುತ್ತದೆ. ವಿಶೇಷವಾಗಿ ಮಂಗಳನ ಮಹಾದಶೆ ಅಥವಾ ಅಂತರ್ಧಶೆ ನಡೆಯುವ ಸಂದರ್ಭದಲ್ಲಿ, ಅಥವಾ ಮಂಗಳ ದುರ್ಬಲವಾಗಿರುವ ಸಂದರ್ಭಗಳಲ್ಲಿ ಹವಳವನ್ನು ಶಿಫಾರಸು ಮಾಡಲಾಗುತ್ತದೆ. ಈ ಸಮಯದಲ್ಲಿ ವ್ಯಕ್ತಿಗೆ ಕಿರಿಕಿರಿ, ಆತುರ, ರಕ್ತಸಂಬಂಧಿ ತೊಂದರೆಗಳು, ಒಡಹುಟ್ಟಿದವರೊಂದಿಗೆ ಸಂಘರ್ಷ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ಹವಳವು ಇಂತಹ ಸಮಸ್ಯೆಗಳನ್ನು ಕಡಿಮೆ ಮಾಡಿ ಆತ್ಮವಿಶ್ವಾಸ, ಧೈರ್ಯ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಸಾಂಸ್ಕೃತಿಕವಾಗಿ ಹವಳವನ್ನು ಯೋಧರು ಮತ್ತು ರಕ್ಷಕರ ರತ್ನವೆಂದು ಪರಿಗಣಿಸಲಾಗುತ್ತಿತ್ತು. ಪ್ರಾಚೀನ ಭಾರತದಲ್ಲಿ ಸೈನಿಕರು, ಸೇನಾನಾಯಕರೂ ಕೂಡ ಗಾಯ, ಭಯ ಮತ್ತು ಸೋಲಿನಿಂದ ರಕ್ಷಿಸಿಕೊಳ್ಳಲು ಹವಳವನ್ನು ಧರಿಸುತ್ತಿದ್ದರು. ಇಂದಿಗೂ ಕ್ರೀಡಾಪಟುಗಳು, ಸೈನಿಕರು, ಎಂಜಿನಿಯರ್‌ಗಳು, ಪೊಲೀಸ್ ಸಿಬ್ಬಂದಿ ಮತ್ತು ನಾಯಕತ್ವದ ಹುದ್ದೆಗಳಲ್ಲಿ ಇರುವವರಿಗೆ ಈ ರತ್ನ ಹೆಚ್ಚು ಅನುಕೂಲಕರವೆಂದು ಜ್ಯೋತಿಷಿಗಳು ಹೇಳುತ್ತಾರೆ. ಆಧ್ಯಾತ್ಮಿಕವಾಗಿ ಮಂಗಳವು ಶಿಸ್ತು ಮತ್ತು ಕಠಿಣತೆಗೆ ಸಂಬಂಧಿಸಿದ ಗ್ರಹವಾಗಿರುವುದರಿಂದ, ಯೋಗ, ಸಮರಕಲೆಗಳು ಮತ್ತು ದೈಹಿಕವಾಗಿ ಶ್ರಮದಾಯಕ ವೃತ್ತಿಗಳಲ್ಲಿ ತೊಡಗಿರುವವರಿಗೆ ಹವಳ ಸಹಾಯಕವಾಗುತ್ತದೆ.

ಹವಳವನ್ನು ಖರೀದಿಸುವಾಗ ಅದರ ಶುದ್ಧತೆ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಟೊಳ್ಳಾದ, ಕೃತಕವಾಗಿ ಬಣ್ಣ ಹಾಕಿದ ಅಥವಾ ನಕಲಿ ಹವಳವನ್ನು ಧರಿಸುವುದರಿಂದ ಯಾವುದೇ ಜ್ಯೋತಿಷ್ಯ ಪ್ರಯೋಜನ ದೊರಕುವುದಿಲ್ಲ. ಸಾಮಾನ್ಯವಾಗಿ 5 ರಿಂದ 9 ರಟ್ಟಿ ತೂಕದ ಹವಳವನ್ನು ಶಿಫಾರಸು ಮಾಡಲಾಗುತ್ತದೆ, ಆದರೆ ವ್ಯಕ್ತಿಯ ಜಾತಕ, ದೇಹದ ತೂಕ ಮತ್ತು ಮಂಗಳನ ಸ್ಥಿತಿಯನ್ನು ಆಧರಿಸಿ ಸರಿಯಾದ ತೂಕವನ್ನು ನಿಶ್ಚಯಿಸಬೇಕು.

ಇದನ್ನೂ ಓದಿ: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಬಹಳಷ್ಟು ಜನರು ಜಾತಕ ಪರಿಶೀಲನೆ ಇಲ್ಲದೇ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹವಳವನ್ನು ಧರಿಸುವುದು ಒಂದು ಸಾಮಾನ್ಯ ತಪ್ಪಾಗಿದೆ. ಜಾತಕದಲ್ಲಿ ಮಂಗಳ ಈಗಾಗಲೇ ತುಂಬಾ ಬಲಶಾಲಿಯಾಗಿದ್ದರೆ, ಹವಳವನ್ನು ಧರಿಸುವುದರಿಂದ ಕೋಪ, ಆತುರ ಅಥವಾ ಅಪಘಾತಗಳ ಸಾಧ್ಯತೆ ಹೆಚ್ಚಾಗಬಹುದು. ಆದ್ದರಿಂದ ಹವಳವನ್ನು ಶಾಶ್ವತವಾಗಿ ಧರಿಸುವ ಮೊದಲು ಕೆಲವು ದಿನಗಳ ಕಾಲ ಪ್ರಯೋಗಾತ್ಮಕವಾಗಿ ಧರಿಸಿ ಫಲಿತಾಂಶವನ್ನು ಗಮನಿಸುವುದು ಮತ್ತು ಅನುಭವಿ ಜ್ಯೋತಿಷಿಯ ಸಲಹೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ.

ಜ್ಯೋತಿಷ್ಯ ನಂಬಿಕೆಯ ಪ್ರಕಾರ, ಸರಿಯಾದ ವಿಧಾನದಲ್ಲಿ ಧರಿಸಿದ ಹವಳವು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿ ದೈಹಿಕ ಶಕ್ತಿಯನ್ನು ಬಲಪಡಿಸುತ್ತದೆ. ಮಂಗಳ ದೋಷದ ಪರಿಣಾಮವನ್ನು ಕಡಿಮೆ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳು, ಕ್ರೀಡೆ ಮತ್ತು ವೃತ್ತಿಜೀವನದಲ್ಲಿ ಯಶಸ್ಸಿಗೆ ಸಹಾಯ ಮಾಡುತ್ತದೆ ಎಂಬ ನಂಬಿಕೆ ಇದೆ. ಸಾಮಾನ್ಯವಾಗಿ ಹವಳವನ್ನು ಚಿನ್ನ ಅಥವಾ ತಾಮ್ರದಲ್ಲಿ ಉಂಗುರವಾಗಿ, ಬಲ ಕೈಯ ಉಂಗುರ ಬೆರಳಿನಲ್ಲಿ, ಮಂಗಳವಾರ ಬೆಳಿಗ್ಗೆ ಶುಕ್ಲ ಪಕ್ಷದಲ್ಲಿ ಧರಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಧರಿಸುವ ವೇಳೆ ಮಂಗಳ ಮಂತ್ರವನ್ನು ಪಠಿಸುವುದರಿಂದ ಅದರ ಫಲ ಹೆಚ್ಚು ದೊರೆಯುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:08 pm, Wed, 21 January 26

Source link

ಹೇಳಿದ್ದೇ ಒಂದು, ಅಲ್ಲಿ ಮಾಡಿದ ಕಥೆಯೇ ಇನ್ನೊಂದು; ಫ್ಲಾಪ್ ಚಿತ್ರದ ಬಗ್ಗೆ ರಶ್ಮಿಕಾ ಮಾತು – Kannada News | Rashmika Mandanna Exposes ‘Sikandar’ Script Change, Flop Film Controversy

ಯಾವುದೇ ಸಿನಿಮಾ ಹಿಟ್ ಆದರೆ ಅದರ ಹುಳುಕುಗಳು ಏನಿವೆ ಎಂಬುದು ಚರ್ಚೆಗೆ ಬರೋದೇ ಇಲ್ಲ. ಎಲ್ಲಾ ಕಲಾವಿದರು ಪ್ರೀತಿಯಿಂದ ಮಾತನಾಡುತ್ತಾರೆ. ಒಬ್ಬರನ್ನೊಬ್ಬರು ಹೊಗಳುತ್ತಾರೆ. ನಿರ್ದೇಶಕರ ಶ್ರಮವನ್ನು ಮೆಚ್ಚುತ್ತಾರೆ. ಅದೇ ಸಿನಿಮಾ ಫ್ಲಾಪ್ ಆಯಿತು ಎಂದುಕೊಳ್ಳಿ, ಆಗ ಶುರುವಾಗುತ್ತೆ ನೋಡಿ ಕಿತ್ತಾಟ. ‘ಸಿಕಂದರ್’ ಸಿನಿಮಾ ವಿಷಯದಲ್ಲಿ ಹೀಗೇ ಆಯಿತು. ಸಲ್ಮಾನ್ ಸೆಟ್​​ಗೆ ತಡವಾಗಿ ಬರುತ್ತಾರೆ ಎಂದು ನಿರ್ದೇಶಕ ಎಆರ್ ಮುರುಗದಾಸ್ ಆರೋಪಿಸಿದ್ದರು. ಇದಕ್ಕೆ ಸಲ್ಲು ಕೌಂಟರ್ ಕೂಡ ಕೊಟ್ಟಿದ್ದರು. ಈಗ ಈ ಫ್ಲಾಪ್ ಚಿತ್ರದ ಮತ್ತೊಂದು ಹುಳುಕನ್ನು ರಶ್ಮಿಕಾ ಮಂದಣ್ಣ (Rashmika Mandanna) ಬಿಚ್ಚಿಟ್ಟಿದ್ದಾರೆ.

‘ಎಆರ್ ಮುರುಗದಾಸ್ ಅವರು ಸ್ಕ್ರಿಪ್ಟ್ ಹೇಳುವಾಗ ಆ ಕಥೆ ಬೇರೆ ರೀತಿಯೇ ಇತ್ತು. ಅದು ಸಿನಿಮಾ ಆದಾಗ ಕಥೆ ಸಂಪೂರ್ಣವಾಗಿ ಬದಲಾಯಿತು. ಸಿನಿಮಾಗಳಲ್ಲಿ ಅದು ಸಾಮಾನ್ಯ. ಸಿನಿಮಾ ಸಾಗಿದಂತೆ ಕಥೆ ಬದಲಾಗುತ್ತದೆ. ಸಿಕಂದರ್ ಚಿತ್ರದಲ್ಲೂ ಹಾಗೆಯೇ ಆಯಿತು’ ಎಂದು ರಶ್ಮಿಕಾ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ಮಧ್ಯೆ ಯಾವುದೇ ಕೆಮಿಸ್ಟ್ರಿ ಇರಲಿಲ್ಲ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಕಥೆ ಚೆನ್ನಾಗಿ ಇದ್ದರೂ ಇವರ ಪರ್ಫಾರ್ಮೆನ್ಸ್ ಕಾರಣದಿಂದ ಸಿನಿಮಾ ಹಿಟ್ ಆಗುತ್ತಿರಲಿಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ರಶ್ಮಿಕಾ ಮಂದಣ್ಣ ನಟನೆ ಮೊದಲಿಗಿಂತ ಸಾಕಷ್ಟು ಏಳ್ಗೆ ಕಂಡಿದೆ. ಆದರೆ, ಮರಸುತ್ತುವ ಪಾತ್ರಗಳು ಮಾತ್ರ ಅವರಿಗೆ ಹೊಂದಿಕೆ ಆಗುತ್ತವೆ ಎಂಬ ಅಭಿಪ್ರಾಯವೂ ಇದೆ. ‘ಸಿಕಂದರ್’ ಸಿನಿಮಾದ ಬಜೆಟ್​ ದೊಡ್ಟ ಮಟ್ಟದಲ್ಲಿದೆ. ಆದರೆ. ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 200 ಕೋಟಿ ರೂಪಾಯಿ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ನಿರ್ಮಾಪಕರಿಗೆ ನಷ್ಟವಾಗಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಮದುವೆಗೂ ಮುನ್ನ ವಿದೇಶದಲ್ಲಿ ಕಾಲ ಕಳೆದು ಬಂದ ರಶ್ಮಿಕಾ, ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಅವರು ಸದ್ಯ ಮದುವೆ ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ.ವಿಜಯ್ ದೇವರಕೊಂಡ ಜೊತೆ ಅವರ ಮದುವೆ ನಡೆಯುತ್ತಿದೆ. ಫೆಬ್ರವರಿ 26ರಂದು ರಶ್ಮಿಕಾ ಅವರು ರಾಜಸ್ಥಾನದಲ್ಲಿ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಾ ಇದೆ. ಈ ವಿಷಯವನ್ನು ಅವರಿನ್ನೂ ಖಚಿತಪಡಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿಧಿ ಸಿಕ್ಕಿದ್ದೇ ಸಿಕ್ಕಿದ್ದು, ಲಕ್ಕುಂಡಿಯಲ್ಲಿ ಜಮೀನಿನ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ – Kannada News | Gold Treasure Discovery Sparks Land Price Boom in Gdag’s Lakkundi, Rates Hit All Time High

ಗದಗ, ಜನವರಿ 21: ಗದಗದ (Gadag) ಲಕ್ಕುಂಡಿಯಲ್ಲಿ (Lakkundi) ಮನೆಗೆ ಪಾಯ ಆಗೆಯುವಾಗ ಬಂಗಾರದ ನಿಧಿ ಸಿಕ್ಕಿದ್ದು ನಂತರ ಹಲವಾರು ಬೆಳವಣಿಗೆಗೆ ಸಾಕ್ಷಿಯಾಗಿದೆ. ಇದೀಗ ಲಕ್ಕುಂಡಿಯಲ್ಲಿ ಸರ್ಕಾರದ ವತಿಯಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು ಆರನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನಗಳ ಉತ್ಖನನದಲ್ಲಿ ಅನೇಕ ಐತಿಹಾಸಿಕ ವಸ್ತುಗಳು ದೊರೆತಿದ್ದು ಪಟ್ಟಣದ ಪಾರಂಪರಿಕ ಮಹತ್ವ ಹೆಚ್ಚಿಸಿದೆ. ಮತ್ತೊಂದೆಡೆ, ಈ ಎಲ್ಲ ಬೆಳವಣಿಗೆಗಳಿಂದಾಗಿ ಲಕ್ಕುಂಡಿಯಲ್ಲಿ ಜಮೀನಿನ ಬೆಲೆ ಎರಡು ವರ್ಷಗಳ ಹಿಂದಿನ ದರಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ಈ ಪ್ರದೇಶದಲ್ಲಿ ಜಮೀನಿನ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಕೇವಲ ಎರಡು ವರ್ಷಗಳ ಹಿಂದೆ, ಅಂದರೆ 2023 ರಲ್ಲಿ ಲಕ್ಕುಂಡಿ ಬಳಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಕೃಷಿ ಭೂಮಿಯ ಬೆಲೆ ಎಕರೆಗೆ ಸುಮಾರು 50 ಲಕ್ಷ ರೂ.ಗಳಷ್ಟಿತ್ತು. ಈಗ ಬೆಲೆ ಬಹುತೇಕ ದ್ವಿಗುಣಗೊಂಡಿದ್ದು, ಈ ಪ್ರದೇಶದ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಲಕ್ಕುಂಡಿಯಲ್ಲಿ ಭೂಮಿ ಬೆಲೆ ಹೆಚ್ಚಳಕ್ಕೆ ಅಸಲಿ ಕಾರಣ ಏನು?

ಗ್ರಾಮದ ಪಾರಂಪರಿಕ ಮೌಲ್ಯದಲ್ಲಿ ಹೆಚ್ಚಳ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಂಪರ್ಕದಲ್ಲಿ ಸುಧಾರಣೆ ಕಂಡುಬಂದಿದ್ದು ಈ ಪ್ರದೇಶದ ತ್ವರಿತ ಬೆಳವಣಿಗೆಗೆ ಕಾರಣ ಎಂದು ರಿಯಲ್ ಎಸ್ಟೇಟ್ ಏಜೆಂಟರು ಮತ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಕ್ಕುಂಡಿ ಮತ್ತು ಸುತ್ತಮುತ್ತ ಉತ್ಖನನ ಪ್ರಾರಂಭಿಸುವ ಪ್ರವಾಸೋದ್ಯಮ ಇಲಾಖೆಯ ನಿರ್ಧಾರ ಕೂಡ ಗ್ರಾಮದ ಭವಿಷ್ಯವನ್ನು ಗಮನಾರ್ಹವಾಗಿ ಬದಲಾಯಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ವರದ ಉಲ್ಲೇಖಿಸಿದೆ.

ಉತ್ಖನನವು ಐತಿಹಾಸಿಕ ಕಲಾಕೃತಿಗಳು ಮತ್ತು ಸಂಪತ್ತನ್ನು ಹೊರತೆಗೆಯಲು ಕಾರಣವಾಗುತ್ತದೆ. ಅಷ್ಟೇ ಅಲ್ಲದೆ, ಉತ್ತಮ ಪುನರ್ವಸತಿ ಮತ್ತು ವಸತಿಗೆ ದಾರಿ ಮಾಡಿಕೊಡುತ್ತದೆ ಎಂದು ಗ್ರಾಮಸ್ಥರು ಆಶಿಸಿದ್ದಾರೆ. ಪೂರ್ವಜರ ಮನೆಗಳನ್ನು ಹೊಂದಿರುವ ಕೆಲವು ನಿವಾಸಿಗಳು ಸರ್ಕಾರವು ತಮ್ಮ ಅಸ್ತಿತ್ವದಲ್ಲಿರುವ ಸ್ಥಳ ಪ್ರದೇಶಗಳಿಗೆ ಅನುಗುಣವಾಗಿ ಪರ್ಯಾಯ ಮನೆಗಳನ್ನು ಒದಗಿಸಬೇಕೆಂದು ನಿರೀಕ್ಷಿಸಿದ್ದಾರೆ. 70ರ ಹರೆಯದ ನಿವಾಸಿಯೊಬ್ಬರು ತಮ್ಮ ಕುಟುಂಬವು ಎರಡು ಅಂತಸ್ತಿನ ಪೂರ್ವಜರ ಮನೆಯನ್ನು ಹೊಂದಿದ್ದು, ಸರ್ಕಾರವು ಅದರ ಬದಲಿಗೆ ಒಳ್ಳೆಯ ಮನೆಯನ್ನು ಒದಗಿಸುತ್ತದೆ ಎಂದು ಆಶಿಸಿದ್ದಾರೆ. ಏಕೆಂದರೆ ಅವರು ತಮ್ಮ ಪೂರ್ವಜರು ನಿರ್ಮಿಸಿದ ಮನೆಗಳನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ.

ಉತ್ಖನನ ಸ್ಥಳಗಳಲ್ಲಿ ಹಾಜರಿದ್ದ ಹಲವಾರು ಗ್ರಾಮಸ್ಥರು, ಆವಾಸ್ ಯೋಜನೆಯಂತಹ ಯೋಜನೆಗಳ ಅಡಿಯಲ್ಲಿ ತಮಗೆ ಮನೆಗಳನ್ನು ನೀಡಬಾರದು. ಬದಲಿಗೆ ತಮ್ಮ ಅಸ್ತಿತ್ವದಲ್ಲಿರುವ ಆಸ್ತಿಗಳ ಪಾರಂಪರಿಕ ಮೌಲ್ಯವನ್ನು ಪರಿಗಣಿಸಿ ಸರಿಯಾದ ಬದಲಿ ಮನೆಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಗೆದಷ್ಟು ಕೌತಕ: ಲಕ್ಕುಂಡಿಯಲ್ಲಿ 4ನೇ ದಿನದ ಉತ್ಖನನದಲ್ಲಿ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ

ಆದರೆ, ಕೃಷಿ ಭೂಮಿಯನ್ನು ವಸತಿ ನಿವೇಶನಗಳಾಗಿ ಪರಿವರ್ತಿಸುವುದರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯು ಸುಗಮ ಸಂಪರ್ಕವನ್ನು ಒದಗಿಸುತ್ತಿದ್ದು, ಲಕ್ಕುಂಡಿ ಬಗ್ಗೆ ಹೂಡಿಕೆದಾರರ ಆಸಕ್ತಿ ತೀವ್ರವಾಗಿ ಹೆಚ್ಚಾಗಿದೆ ಎಂದೂ ವರದಿ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link