ಶಿವಮೊಗ್ಗ, ಏಪ್ರಿಲ್ 25: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ (shivamogga) ಮತ್ತೆ ನೆತ್ತರು ಹರಿದಿದೆ. ಲವ್ (Love) ವಿಚಾರಕ್ಕೆ ಶುರುವಾದ ಜಗಳವೊಂದು ಕೊಲೆ ಯತ್ನದಲ್ಲಿ ಅಂತ್ಯವಾಗಿದ್ದು, 17 ವರ್ಷದ ಯುವಕನ ತಲೆಯನ್ನ ಮಚ್ಚಿನಿಂದ ಸೀಳಿ ವಿಕೃತಿ ಮೆರೆಯಲಾಗಿದೆ. ತಲೆಯಲ್ಲೇ ಮಚ್ಚು ಸಿಲುಕಿಕೊಂಡ ಸ್ಥಿತಿಯಲ್ಲಿ ಯುವಕ ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ.
ನಡೆದಿದ್ದೇನು?
ಶಿವಮೊಗ್ಗದ ವಾದಿ ಎ ಹುದಾ ಬಡಾವಣೆಯಲ್ಲಿ ಲವ್ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಆರೋಪಿ ಸೊಹೇಲ್ ಎಂಬಾತನಿಗೆ ಯುವತಿಯೊಬ್ಬಳ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೆ, ತಾನು ಮದುವೆಯಾಗಲಿರುವ ಯುವತಿಯನ್ನು 17 ವರ್ಷದ ಅಪ್ರಾಪ್ತ ಯುವಕ ಪ್ರೀತಿಸುತ್ತಿದ್ದಾನೆ ಮತ್ತು ಆಕೆಯ ಸಂಪರ್ಕದಲ್ಲಿದ್ದಾನೆ ಎಂಬ ವಿಷಯ ಸೊಹೇಲ್ಗೆ ತಿಳಿದು ಕೆಂಡಾಮಂಡಲವಾಗಿದ್ದ. ಇದೇ ಸೇಡಿನಿಂದ ಯುವಕನನ್ನು ಮುಗಿಸಲು ಸೊಹೇಲ್ ಸಂಚು ರೂಪಿಸಿದ್ದ.
ತಲೆಯಲ್ಲೇ ಮಚ್ಚು ಬಿಟ್ಟು ಕ್ರೌರ್ಯ
ನಿನ್ನೆ ರಾತ್ರಿ ಸೊಹೇಲ್ ತನ್ನ ಐವರು ಸಹಚರರೊಂದಿಗೆ ಯುವಕನ ಮನೆ ಬಳಿ ಹೊಂಚು ಹಾಕಿ ಕುಳಿತಿದ್ದ. ಯುವಕ ಕಾಣಿಸಿಕೊಳ್ಳುತ್ತಿದ್ದಂತೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಮಚ್ಚಿನಿಂದ ತಲೆಗೆ ಹೊಡೆದಾಗ ಆ ಮಚ್ಚು ತಲೆಯ ಒಳಗೇ ಸಿಲುಕಿಕೊಂಡಿದೆ. ನನ್ನವಳ ತಂಟೆಗೆ ಬಂದರೆ ಇದೇ ಗತಿ ಎಂಬಂತೆ ಮಚ್ಚನ್ನು ತಲೆಯಲ್ಲೇ ಬಿಟ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಮದ್ವೆಗೆ ಕೆಲವೇ ಗಂಟೆಗಳಿರುವಾಗಲೇ ವಧು ನಾಪತ್ತೆ: ಪೋಷಕರಲ್ಲಿ ಅದೊಂದು ಅನುಮಾನ
ಹಿಂದೆ-ಮುಂದೆ ನೋಡದೆ ಸೊಹೇಲ್ 17 ವರ್ಷದ ಯುವಕನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ. ಇದರಿಂದ ಆತನ ಸ್ಥಿತಿ ಗಂಭೀರವಾಗಿದೆ. ವೈದ್ಯರು ಹರಸಾಹಸ ಪಟ್ಟು ತಲೆಯಲ್ಲಿದ್ದ ಮಚ್ಚನ್ನು ಹೊರ ತೆಗೆದಿದ್ದಾರೆ. ಸದ್ಯ ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಘಟನೆಯಿಂದ ವಾದಿ ಎ ಹುದಾ ಬಡಾವಣೆ ಮತ್ತು ನಗರದ ಜನರು ಬೆಚ್ಚಿಬಿದ್ದಿದ್ದಾರೆ. ತುಂಗಾ ನಗರ ಪೊಲೀಸರು ಮರ್ಡರ್ ಕೇಸ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಘಟನೆಯಲ್ಲಿ ಈಗಾಗಲೇ ಕೆಲವರನ್ನು ವಶಕ್ಕೆ ಕೂಡ ಪಡೆದುಕೊಂಡಿದ್ದಾರೆ. ಇನ್ನು ನಾಪತ್ತೆಯಾದ ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.
ಇದನ್ನೂ ಓದಿ: ಅತ್ತೆ ಮಗಳ ಜೊತೆ ಸರಸ, ಬೇರೊಬ್ಬಳ ಜತೆ ಸಂಸಾರ: ಇದೇನಿದು ವಿದ್ಯೆ ಕಲಿಸುವ ಗುರುವಿನ ಆಟ?
ಲವ್ ವಿಚಾರಕ್ಕೆ ಯುವಕರ ನಡುವೆ ಶುರುವಾದ ಗಲಾಟೆ ಕೊಲೆ ಮಾಡುವ ಹಂತಕ್ಕೆ ಹೋಗಿದ್ದು ಮಾತ್ರ ಆತಂಕ ಸೃಷ್ಟಿಸಿದೆ. ಅತ್ತ 17 ವರ್ಷದ ಯುವಕ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
