RR vs SRH: 6,6,6,6..ಮೊದಲ ಓವರ್ನಲ್ಲೇ ಸಿಕ್ಸರ್‌ಗಳ ಮಳೆ; ದಾಖಲೆ ಬರೆದ ವೈಭವ್ – Kannada News | IPL 2026: Vaibhav Suryavanshi Smashes Record Breaking 4 Sixes in 1st Over vs SRH
ಐಪಿಎಲ್ 2026 ರ 36 ನೇ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರಸ್ಪರ ಮುಖಾಮುಖಿಯಾಗಿದ್ದವು. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಪರ ವೈಭವ್ ಸೂರ್ಯವಂಶಿ ಮೊದಲ ಓವರ್ನಲ್ಲೇ ಸಿಕ್ಸರ್‌ಗಳ ಮಳೆ ಹರಿಸಿದರು. ಸನ್‌ರೈಸರ್ಸ್ ವೇಗಿ ಪ್ರಫುಲ್ ಹಿಂಗೆ ವಿರುದ್ಧ ಸತತ 4 ಸಿಕ್ಸರ್ಗಳನ್ನು ಬಾರಿಸಿ ತನ್ನ ಹಳೆಯ ಸೇಡನ್ನು ತೀರಿಸಿಕೊಂಡರು. ವಾಸ್ತವವಾಗಿ, ಈ ಆವೃತ್ತಿಯ 21 ನೇ ಪಂದ್ಯದಲ್ಲಿ ಇದೇ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಇದೇ…