Headlines

DC vs PBKS: ರಾಹುಲ್ ಹೋರಾಟ ವ್ಯರ್ಥ; ಕ್ಯಾಚ್ ಬಿಟ್ಟು ಮ್ಯಾಚ್ ಸೋತ ಡೆಲ್ಲಿ – Kannada News | Punjab Kings Create IPL History: Record Chase of 265 Runs Against Delhi Capitals

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ (DC vs PBKS) ನಡುವೆ ನಡೆದ ಐಪಿಎಲ್ 2026 (IPL 2026) ರ 35 ನೇ ಪಂದ್ಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಐಪಿಎಲ್‌ನಲ್ಲಿ ಇದುವರೆಗೆ ಯಾವ ತಂಡಕ್ಕೂ ಸಾಧ್ಯವಾಗದ ದಾಖಲೆಯೊಂದು ಪಂಜಾಬ್ ಕಿಂಗ್ಸ್ ತಂಡದ ಪಾಲಾಯಿತು. ಉಭಯ ತಂಡಗಳಿಂದ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಯೇ ಹರಿದ ಈ ಪಂದ್ಯವನ್ನು ಅಂತಿಮವಾಗಿ ಗೆದ್ದುಕೊಳ್ಳುವಲ್ಲಿ ಪಂಜಾಬ್ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 265 ರನ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಇನ್ನು 7 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.

ಡೆಲ್ಲಿ ಪಾಲಿಗೆ ವಿಲನ್ ಆದ ಕರುಣ್

ಈ ಮೂಲಕ ಪಂಜಾಬ್ ಐಪಿಎಲ್ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಿದ ತಂಡವೆಂಬ ದಾಖಲೆ ಬರೆಯಿತು. ಈ ದಾಖಲೆಯ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪವರ್‌ಪ್ಲೇನಲ್ಲಿಯೇ ಅರ್ಧದಷ್ಟು ಪಂದ್ಯವನ್ನು ಗೆದ್ದುಕೊಂಡಿತು. ಉಳಿದಂತೆ ಕರುಣ್ ನಾಯರ್ ಕೈಚೆಲ್ಲಿದ ಎರಡು ಸುಲಭ ಕ್ಯಾಚ್​ಗಳಿಂದ ಪಂಜಾಬ್ ಕಿಂಗ್ಸ್‌ ಗೆಲುವು ದಾಖಲಿಸಿತು. ವಾಸ್ತವವಾಗಿ ನಿರ್ಣಾಯಕ ಹಂತದಲ್ಲಿ ಕರುಣ್ ನಾಯರ್, ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರ ಎರಡು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಈ ಜೀವದಾನಗಳ ಲಾಭ ಪಡೆದ ಅಯ್ಯರ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ರಾಹುಲ್ ದಾಖಲೆಯ ಶತಕ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 28 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಪಾಥುಮ್ ನಿಸ್ಸಂಕ 11 ರನ್‌ಗಳಿಗೆ ಔಟಾದರು. ಆ ನಂತರ, ಎರಡನೇ ವಿಕೆಟ್‌ಗೆ ಪಂಜಾಬ್ ಬರೋಬ್ಬರಿ 220 ರನ್‌ಗಳವರೆಗೆ ಕಾಯಬೇಕಾಯಿತು. ಏಕೆಂದರೆ ಕೆಎಲ್ ರಾಹುಲ್ ಮತ್ತು ನಿತೀಶ್ ರಾಣಾ ಪಂಜಾಬ್ ಕಿಂಗ್ಸ್ ಬೌಲರ್‌ಗಳ ವಿರುದ್ಧ ಅಬ್ಬರಿಸಿ ದಾಖಲೆಯ ಜೊತೆಯಾಟ ನಡೆಸಿದರು. ನಿತೀಶ್ ರಾಣಾ 44 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 91 ರನ್ ಗಳಿಸಿ ಔಟಾದರೆ, ಕೆಎಲ್ ರಾಹುಲ್ 67 ಎಸೆತಗಳಲ್ಲಿ 16 ಬೌಂಡರಿ ಮತ್ತು 9 ಸಿಕ್ಸರ್‌ಗಳೊಂದಿಗೆ ಅಜೇಯ 152 ರನ್ ಗಳಿಸಿದರು. ಇವರಿಬ್ಬರ ಆಟದಿಂದಾಗಿ ಡೆಲ್ಲಿ ದಾಖಲೆಯ ಮೊತ್ತ ಪೇರಿಸಿತು.

ಪಂಜಾಬ್​ಗೆ ದಾಖಲೆಯ ಜಯ

265 ರನ್‌ಗಳನ್ನು ಬೆನ್ನಟ್ಟಿದ ಪಂಜಾಬ್​ಗೆ ಪ್ರಿಯಾಂಶ್ ಆರ್ಯ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಸ್ಫೋಟಕ ಆರಂಭ ಒದಗಿಸಿದರು. ಪವರ್‌ಪ್ಲೇನಲ್ಲಿಯೇ ಈ ಜೋಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪಂದ್ಯದಿಂದ ಹೊರಹಾಕಿದರು. ಮೊದಲ 6 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ ಈ ಜೋಡಿ 116 ರನ್ ಕಲೆಹಾಕಿತು. ಐಪಿಎಲ್ ಟೂರ್ನಿಯಲ್ಲಿ ಪವರ್‌ಪ್ಲೇನಲ್ಲಿ ಇದು ಎರಡನೇ ಅತ್ಯಧಿಕ ಸ್ಕೋರ್ ಆಗಿತ್ತು. ತಂಡ 126 ರನ್‌ಗಳಾಗಿದ್ದಾಗ, ಪ್ರಿಯಾಂಶ್ ಆರ್ಯ ರೂಪದಲ್ಲಿ ಮೊದಲ ಹೊಡೆತ ಬಿದ್ದಿತು.

DC vs PBKS: ದಾಖಲೆಯ 152 ರನ್..! ಕನ್ನಡಿಗ ರಾಹುಲ್ ಅಬ್ಬರಕ್ಕೆ ಹಳೆಯ ದಾಖಲೆಗಳೆಲ್ಲ ಧ್ವಂಸ

ಪ್ರಿಯಾಂಶ್ ಆರ್ಯ 43 ರನ್‌ಗಳಿಗೆ ಔಟಾದರು. ನಂತರ ಪ್ರಭಾಂಶ್ ಸಿಂಗ್ 76 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೂಪರ್ ಕೊನೊಲಿ ಕೂಡ 17 ರನ್‌ಗಳಿಗೆ ಔಟಾದರೆ, ನೆಹಲ್ ವದೇರಾ ಇನ್ನಿಂಗ್ಸ್ ಕೂಡ 15 ಎಸೆತಗಳಲ್ಲಿ 25 ರನ್‌ಗಳಿಗೆ ಅಂತ್ಯವಾಯಿತು. ಈ ವಿಕೆಟ್‌ನಿಂದ ಪಂದ್ಯವು ದೆಹಲಿಯ ಪರವಾಗಿ ವಾಲಲು ಪ್ರಾರಂಭಿಸಿತು. ಆದರೆ ಕರುಣ್ ನಾಯರ್ ಶ್ರೇಯಸ್ ಅಯ್ಯರ್ ಅವರ ಎರಡು ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟಿದ್ದು, ಪಂದ್ಯಕ್ಕೆ ತಿರುವು ನೀಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:21 pm, Sat, 25 April 26

Source link

Leave a Reply

Your email address will not be published. Required fields are marked *