Category Archives: Blog

Your blog category

ಆಸ್ಪತ್ರೆಯಿಂದಲೇ ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ – Kannada News | CM Siddaramaiah Gives Minister D Sudhakar health update after met kims hospital Doctors

ಬೆಂಗಳೂರು, (ಏಪ್ರಿಲ್ 25): ಯೋಜನೆ ಮತ್ತು ಸಾಂಖಿತ ಇಲಾಖೆ ಸಚಿವ ಡಿ ಸುಧಾಕರ್ (Minister D Sudhakar) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಸದ್ಯ ಬೆಂಗಳೂರಿನ  (Bengaluru) ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ಸುಧಾಕರ್ ಅವರ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)  ಅವರು ಇಂದು ಏಪ್ರಿಲ್ 25) ಕಿಮ್ಸ್ ಆಸ್ಪತ್ರಗೆ ಭೇಟಿ ನೀಡಿ ಸುಧಾಕರ್ ಅವರ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು.

ಡಿ.ಸುಧಾಕರ್ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಚಿವ ಡಿ.ಸುಧಾಕರ್​ಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಶ್ವಾಸಕೋಶ ಕಸಿ ಮಾಡಬೇಕಾದರೆ ಬ್ರೈನ್ ಕಾನ್ಸಿಯಸ್ ಇರಬೇಕು. ಡಿ.ಸುಧಾಕರ್​ಗೆ ಪ್ರಜ್ಞೆ ಬಂದಮೇಲೆ ವೈದ್ಯರು ನಿರ್ಧಾರ ಮಾಡಲಿದ್ದಾರೆ.ವೆಂಟಿಲೇಷನ್​ನಲ್ಲಿ ಬೇರೆ ಎಲ್ಲಾ ಆರ್ಗನ್ಸ್​ ಸ್ಟೇಬಲ್​ ಆಗಿವೆ. ಆದ್ರೆ, ಬ್ರೈನ್ ಮಾತ್ರ ಕಾನ್ಸಿಯಸ್ ಆಗಿಲ್ಲ.ನಾಳೆ (ಏಪ್ರಿಲ್ 26) ಕಿಮ್ಸ್ ಆಸ್ಪತ್ರೆಯ ವೈದ್ಯರು ಸಿಟಿ ಸ್ಕ್ಯಾನ್ ಮಾಡಲಿದ್ದು, ಸಿಟಿ ಸ್ಕ್ಯಾನ್ ನಂತರ ಕಂಡಿಷನ್ ಏನು ಅಂತಾ ಗೊತ್ತಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: D Sudhakar Health Bulletin: ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಡಾಕ್ಟರ್

Source link

Chanakya Niti: ಈ ಅಭ್ಯಾಸಗಳು ನಿಮ್ಮನ್ನು ಒಂಟಿಯಾನ್ನಾಗಿಸುತ್ತದೆ ಎಚ್ಚರ! – Kannada News | Chanakya Niti: Chanakya says that you will have to be alone because of these habits

ನಮ್ಮ ಅಭ್ಯಾಸಗಳು ಕೂಡ ನಮ್ಮ ಉನ್ನತಿ-ಅವನತಿಯನ್ನು ನಿರ್ಧರಿಸುತ್ತವೆ. ಹೌದು ಕೆಲವೊಂದು ಒಳ್ಳೆಯ ಅಭ್ಯಾಸಗಳು ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ದರೆ, ಕೆಲವೊಂದು ಅಭ್ಯಾಸಗಳು ಜೀವನಕ್ಕೆ ಮುಳುವಾಗುತ್ತದೆ, ಶಾಂತಿಯನ್ನು ಹಾಳು ಮಾಡುತ್ತದೆ. ಅದರಲ್ಲೂ ಕೆಲವು ಕೆಟ್ಟ ಅಭ್ಯಾಸಗಳು ಕ್ರಮೇಣ ನಮ್ಮನ್ನು ಒಂಟಿತನಕ್ಕೆ (Loneliness) ಕರೆದೊಯ್ಯುತ್ತವೆ. ಇದರಿಂದಾಗಿ ಒಬ್ಬಂಟಿಯಾಗಿಯೇ ಜೀವನಪೂರ್ತಿ ಕಳೆಯಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹಾಗಿದ್ರೆ ಒಂಟಿತನಕ್ಕೆ ಕಾರಣವಾಗುವ ಪ್ರಮುಖ ಅಭ್ಯಾಸಗಳು ಯಾವುವು ಎಂಬುದನ್ನು ತಿಳಿಯೋಣ.

ಈ ಅಭ್ಯಾಸಗಳೇ ಒಂಟಿತನಕ್ಕೆ ಕಾರಣ:

ಇತರರನ್ನು ಅರ್ಥಮಾಡಿಕೊಳ್ಳದಿರುವುದು: ನಾವು ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ಸಂಬಂಧಗಳು ಕ್ರಮೇಣ ದುರ್ಬಲಗೊಳ್ಳುತ್ತದೆ. ಪ್ರತಿಯೊಬ್ಬರೂ ಕೂಡ ತಮ್ಮ ಭಾವನೆಗಳನ್ನು ಗೌರವಿಸುವ ಜನರೊಂದಿಗೆ ಮಾತನಾಡಲು ಮತ್ತು ಇರಲು ಬಯಸುತ್ತಾರೆ. ಆದರೆ ನಾವು ಅವರ ಭಾವನೆಗಳ ಬಗ್ಗೆ ಕಾಳಜಿ ವಹಿಸದಿದ್ದರೆ, ಅವರು ನಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಈ ನಂಬಿಕೆ ಕಳೆದುಹೋದಾಗ, ಅವರು ನಮ್ಮೊಂದಿಗೆ ಮಾತನಾಡುವುದನ್ನು ಸಹ ನಿಲ್ಲಿಸುತ್ತಾರೆ. ಪರಿಣಾಮವಾಗಿ, ನಾವು ಒಂಟಿತನವನ್ನು ಅನುಭವಿಸುತ್ತೇವೆ. ಆದ್ದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುವುದು ತುಂಬಾನೇ ಮುಖ್ಯ.

ಅತಿಯಾದ ಕೋಪ: ಸಣ್ಣ ವಿಷಯಗಳಿಗೂ ಕೋಪಗೊಳ್ಳುವ ಜನರಿಂದ ಸ್ನೇಹಿತರು, ಕುಟುಂಬ ಸದಸ್ಯರು ಸಹ ದೂರವಾಗುತ್ತಾರೆ. ಕೋಪಗೊಂಡಾಗ ನಾವು ಏನು ಮಾತನಾಡುತ್ತೇವೆ ಎಂಬ ಅರಿವು ನಮಗೆ ಇರುವುದಿಲ್ಲ, ಆದರೆ ಇದು ನಮ್ಮ ಸುತ್ತಲಿನ ಜನರ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಕಾಲಾನಂತರದಲ್ಲಿ, ಇದು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ  ಮತ್ತು ಎಲ್ಲರೂ ನಮ್ಮಿಂದ ದೂರ ಹೋಗುತ್ತಾರೆ. ಇದು ಒಂಟಿತನಕ್ಕೆ ಕಾರಣವಾಗುತ್ತದೆ.

ನಂಬಿಕೆಯ ಕೊರತೆ: ಅನುಮಾನ ಮತ್ತು ಅಪನಂಬಿಕೆಯಿಂದ ಸಂಬಂಧಗಳು ದುರ್ಬಲಗೊಳ್ಳುತ್ತವೆ. ಹೌದು ನಂಬಿಕೆ ಇಲ್ಲದಿದ್ದರೆ ಸಂಬಂಧಗಳಲ್ಲಿ ಅಂತರ ಬೆಳೆಯುತ್ತದೆ. ಕಾಲಾನಂತರದಲ್ಲಿ, ಇದು ಒಂಟಿತನಕ್ಕೆ ಕಾರಣವಾಗಬಹುದು ಮತ್ತು ಜನರು ನಮ್ಮಿಂದ ದೂರವಾಗಬಹುದು ಮತ್ತು ನಾವು ಒಬ್ಬಂಟಿಯಾಗಿಯೇ ಜೀವನ ನಡೆಸಬೇಕಾಗುತ್ತದೆ ಎಂದಿದ್ದಾರೆ ಚಾಣಕ್ಯ.

ಇದನ್ನೂ ಓದಿ: ಅಭ್ಯಾಸಗಳು ನಿಮ್ಮಲ್ಲಿದ್ದರೆ ಜೀವನದಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದಿದ್ದಾರೆ ಚಾಣಕ್ಯ

ಸ್ವಾರ್ಥಿಯಾಗಿರುವುದು: ಸ್ವಾರ್ಥಿಗಳು ಇತರರ ಅಗತ್ಯತೆಗಳು ಮತ್ತು ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ಕಾಲಾನಂತರದಲ್ಲಿ ಇದು ಅವರ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಅವರಿಗೆ ಅಗತ್ಯವಿದ್ದಾಗ ಸಹಾಯ ಮಾಡಲು ಕಡಿಮೆ ಜನರಿರುತ್ತಾರೆ. ಇದು ಅವರನ್ನು ಸಾಮಾಜಿಕವಾಗಿ ಪ್ರತ್ಯೇಕಗೊಳಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಮತ್ತು ಒಂಟಿತನಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ ಚಾಣಕ್ಯ.

ನಕಾರಾತ್ಮಕ ಆಲೋಚನೆಗಳು: ನಕಾರಾತ್ಮಕವಾಗಿ ಯೋಚಿಸುವ ಜನರ ಸುತ್ತ ಯಾರೂ ಇರಲು ಬಯಸುವುದಿಲ್ಲ. ಅಂತಹ ಆಲೋಚನೆಗಳು ಸಂಬಂಧಗಳನ್ನು ದುರ್ಬಲಗೊಳಿಸುತ್ತವೆ. ಎಲ್ಲದರಲ್ಲೂ ತಪ್ಪುಗಳನ್ನು ಹುಡುಕುವುದು ಮತ್ತು ನಕಾರಾತ್ಮಕ ರೀತಿಯಲ್ಲಿ ಮಾತನಾಡುವುದು ನಿಮ್ಮ ಸುತ್ತಮುತ್ತಲಿನವರನ್ನು ದೂರವಿಡಬಹುದು. ಇದು ಒಂಟಿತನಕ್ಕೂ ಕಾರಣವಾಗಬಹುದು ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಷಕಾರಿ ಹಾವಿನಿಂದ 30 ಮಕ್ಕಳನ್ನು ಕಾಪಾಡಿ ಪ್ರಾಣ ಬಿಟ್ಟ ಬೀದಿ ನಾಯಿ ಕಾಳಿ! – Kannada News | Stray dog Kali becomes Hero after sacrifices life to save 30 students from Venomous snake in Odisha

ಒಡಿಶಾ, ಏಪ್ರಿಲ್ 25: ವಿಷಕಾರಿ ಹಾವಿನಿಂದ 30 ಮಕ್ಕಳನ್ನು ರಕ್ಷಿಸಿದ ನಂತರ ಒಡಿಶಾದಲ್ಲಿ ಬೀದಿ ನಾಯಿ ವೀರಮರಣವನ್ನಪ್ಪಿದೆ. ಒಡಿಶಾದ ಹಳ್ಳಿಯೊಂದರಲ್ಲಿ ವಿಷಕಾರಿ ಹಾವಿನಿಂದ 30ಕ್ಕೂ ಹೆಚ್ಚು ಚಿಕ್ಕ ಮಕ್ಕಳನ್ನು ರಕ್ಷಿಸಿದ ನಂತರ ಬೀದಿ ನಾಯಿ (Stray Dog) ಸಾವನ್ನಪ್ಪಿದೆ. ಇದು ಸ್ಥಳೀಯ ನಿವಾಸಿಗಳಲ್ಲಿ ಭಾರೀ ದುಃಖವನ್ನು ಉಂಟುಮಾಡಿದೆ. ತಮ್ಮ ಮಕ್ಕಳನ್ನು ಕಾಪಾಡಲು ಪ್ರಾಣ ಬಿಟ್ಟ ಕಾಳಿ ಎಂಬ ಬೀದಿ ನಾಯಿಯ ಶವವನ್ನು ಮೆರವಣಿಗೆ ಮಾಡಿ ಊರಿನವರೆಲ್ಲರೂ ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಮೂಲಕ ಅವರು ಆ ಬೀದಿನಾಯಿಗೆ ಗೌರವ ಸಲ್ಲಿಸಿದ್ದಾರೆ.

ಆ ಏರಿಯಾದವರಿಂದ ಕಾಳಿ ಎಂದು ಕರೆಯಲ್ಪಡುತ್ತಿದ್ದ ಬೀದಿನಾಯಿ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಧೀರಕುಲ ಗ್ರಾಮದಲ್ಲಿ ಬಹಳ ಜನಪ್ರಿಯವಾಗಿತ್ತು. ಸೋಮವಾರ ಬೆಳಿಗ್ಗೆ ಸುಮಾರು ಎಂಟೂವರೆ ಗಂಟೆಗೆ ಹತ್ತಿರದ ಪ್ರಾಥಮಿಕ ಶಾಲೆಯಾದ ಶ್ರೀ ಜಗನ್ನಾಥ ಶಿಶು ವಿದ್ಯಾ ಮಂದಿರದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಾಲಾ ಆವರಣದ ಹೊರಗೆ ಕುಳಿತಿದ್ದಾಗ ವಿಷಕಾರಿ ಹಾವು ಅವರ ಕಡೆಗೆ ಬರುತ್ತಿತ್ತು. ಇದನ್ನು ನೋಡಿದ ಕಾಳಿ ನಾಯಿ ಆ ಹಾವನ್ನು ಕಚ್ಚಿ ಕೊಂದಿತು. ಹಾವು ಕಚ್ಚಿದರೂ ಹೆದರದ ಕಾಳಿ ಹಿಂಜರಿಕೆಯಿಲ್ಲದೆ ಆ ಹಾವಿನೊಂದಿಗೆ ಹೋರಾಡಿತು.

ಇದನ್ನೂ ಓದಿ: ಬೀದಿ ನಾಯಿ ಪರಚಿದ್ದಕ್ಕೆ ಲಸಿಕೆ ಪಡೆಯಲು ಭಯಪಟ್ಟ ಬಾಲಕಿ, ರೇಬಿಸ್​ನಿಂದ ಸಾವು

ಹಾವು ಮತ್ತು ನಾಯಿಯ ಜಗಳವನ್ನು ನೋಡುತ್ತಾ ಭಯಗೊಂಡಿದ್ದ ಆ 30 ಮಕ್ಕಳ ಬಳಿ ಹಾವಿಗೆ ಹೋಗಲು ಅವಕಾಶ ನೀಡದ ಆ ನಾಯಿ ತನ್ನ ಪ್ರಾಣವನ್ನೇ ಒತ್ತೆಯಿಟ್ಟು ಮಕ್ಕಳನ್ನು ಕಾಪಾಡಿತು. ಈ ಜಗಳದ ವೇಳೆ ವಿಷಕಾರಿ ಹಾವು ಕಾಳಿಯ ಬಾಯಿಗೆ ಕಚ್ಚಿತು. ಈ ವಿಷದಿಂದ ನಾಯಿ ಸಾವನ್ನಪ್ಪಿತು. ಕಾಳಿಯ ಸಾವಿನ ಸುದ್ದಿ ಹಳ್ಳಿಯಾದ್ಯಂತ ಹರಡಿದಾಗ ಊರಿನ ನಿವಾಸಿಗಳು ದುಃಖಿತರಾದರು. ಆ ನಾಯಿಗೆ ಗೌರವ ಸಲ್ಲಿಸಲು ನಾಯಿಯ ಅಂತ್ಯಕ್ರಿಯೆಯ ಮೆರವಣಿಗೆಯನ್ನು ಆಯೋಜಿಸಿದರು. ನಾಯಿಯ ದೇಹವನ್ನು ಟ್ರಾಲಿಯ ಮೇಲೆ ಇರಿಸಿ, ಹೂವುಗಳಿಂದ ಅಲಂಕರಿಸಿ, ಬಿಳಿ ಬಟ್ಟೆಯಲ್ಲಿ ಸುತ್ತಿ, ಪೂರ್ಣ ವಿಧಿವಿಧಾನಗಳೊಂದಿಗೆ ಸಮಾಧಿ ಮಾಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆಯಲ್ಲಿ ಬಿಪಿ ಸಾಮಾನ್ಯವಾಗಿದ್ದರೂ ಹೃದಯಕ್ಕೆ ಅಪಾಯ: ಮಾಸ್ಕ್ಡ್ ಹೈಪರ್ಟೆನ್ಷನ್ ಬಗ್ಗೆ ವೈದ್ಯರ ಎಚ್ಚರಿಕೆ – Kannada News | What Is Masked Hypertension? Hidden Cause of Stroke and Heart Attack

ಇತ್ತೀಚಿನ ದಿನಗಳಲ್ಲಿ ಆರೋಗ್ಯ ತಪಾಸಣೆ ವೇಳೆ ರಕ್ತದ ಒತ್ತಡ (BP) ಸಾಮಾನ್ಯವಾಗಿದೆ ಎಂದು ಬಂದರೂ, ಹೃದಯಕ್ಕೆ ಅಪಾಯ ಇರುವ ಸಾಧ್ಯತೆ ಇದೆ ಎಂದು ತಜ್ಞರು . ಎಚ್ಚರಿಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು ಮಾಸ್ಕ್ಡ್ ಹೈಪರ್ಟೆನ್ಷನ್ (Masked Hypertension) ಎಂದು ಕರೆಯಲಾಗುತ್ತದೆ. ಅಂದರೆ, ಆಸ್ಪತ್ರೆ ಅಥವಾ ಕ್ಲಿನಿಕ್‌ನಲ್ಲಿ ಬಿಪಿ ನಾರ್ಮಲ್ ಕಾಣಿಸಿಕೊಂಡರೂ, ದಿನನಿತ್ಯದ ಜೀವನದಲ್ಲಿ ಅದು ಹೆಚ್ಚಾಗಿರುವ ಸ್ಥಿತಿಯಾಗಿದೆ. ಹಾಗಾದರೆ ಇದು ಜೀವಕ್ಕೆ ಅಪಾಯಕಾರಿಯೇ, ಈ ರೀತಿಯಾಗುವುದಕ್ಕೆ ಕಾರಣವೇನು, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಾಸ್ಕ್ಡ್ ಹೈಪರ್ಟೆನ್ಷನ್ ಎಂದರೇನು?

ತಜ್ಞರ ಪ್ರಕಾರ, ಈ ಸ್ಥಿತಿಯಲ್ಲಿ ವ್ಯಕ್ತಿಯ ಬಿಪಿ ಆಸ್ಪತ್ರೆಯಲ್ಲಿ 120/80 mmHg ಆಸುಪಾಸು ಇರುತ್ತದೆ. ಆದರೆ ಮನೆ ಅಥವಾ ಕೆಲಸದ ಸ್ಥಳದಲ್ಲಿ ಇದು 140/90 mmHg ಅಥವಾ ಅದಕ್ಕಿಂತ ಹೆಚ್ಚಾಗಿರಬಹುದು.

ಏಕೆ ಇದು ಅಪಾಯಕಾರಿ?

ಮಾಸ್ಕ್ಡ್ ಹೈಪರ್ಟೆನ್ಷನ್ ಅಪಾಯಕಾರಿ ಏಕೆಂದರೆ ಇದು ಸುಲಭವಾಗಿ ಪತ್ತೆಯಾಗುವುದಿಲ್ಲ. ದೀರ್ಘಕಾಲ ಬಿಪಿ ಹೆಚ್ಚಾಗಿ ಇರುವುದರಿಂದ ಹೃದಯದ ಮೇಲೆ ಒತ್ತಡ ಹೆಚ್ಚುತ್ತದೆ. ಇದರ ಪರಿಣಾಮವಾಗಿ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು. ಮಾನಸಿಕ ಒತ್ತಡ, ಕೆಲಸದ ಒತ್ತಡ, ಆತಂಕ ಮತ್ತು ಅಶಾಂತಿ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಅದಲ್ಲದೆ ಕೆಲವರು ಹೊರಗಿನ ಪರಿಸ್ಥಿತಿಗಳಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ, ಆದರೆ ಆಸ್ಪತ್ರೆಯಲ್ಲಿ ಶಾಂತವಾಗಿರುವುದರಿಂದ ಬಿಪಿ ಸಾಮಾನ್ಯವಾಗಿ ಕಾಣಿಸುತ್ತದೆ.

ಇದನ್ನೂ ಓದಿ: ನಿಮಗೆ ಹೈ ಬಿಪಿ ಇದ್ಯಾ? ಹಾಗಿದ್ರೆ ಸ್ಟ್ರೋಕ್ ಆಗದಂತೆ ತಡೆಯಲು ಈ ರೀತಿ ಮಾಡಿ

ಹೇಗೆ ಗುರುತಿಸಬೇಕು?

ವೈದ್ಯರು ಹೇಳುವಂತೆ, ಕೇವಲ ಆಸ್ಪತ್ರೆಯಲ್ಲಿ ಬಿಪಿ ಪರೀಕ್ಷೆ ಮಾಡಿಸಿದರೆ ಸಾಕಾಗುವುದಿಲ್ಲ. 24 ಗಂಟೆಗಳ ಆಂಬ್ಯುಲೇಟರಿ ರಕ್ತದೊತ್ತಡ ಮಾನಿಟರಿಂಗ್ (ABPM) ಮಾಡಿಸುವುದು ಉತ್ತಮ. ಇದು ದಿನಪೂರ್ತಿ ಬಿಪಿ ಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ.

ತಡೆಗಟ್ಟಲು ಸಲಹೆಗಳು:

  • ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ
  • ಉಪ್ಪಿನ ಸೇವನೆ ಕಡಿಮೆ ಮಾಡಿ
  • ಮಾನಸಿಕ ಒತ್ತಡ ನಿಯಂತ್ರಿಸಿ
  • ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ

ತಜ್ಞರ ಸಲಹೆಯಂತೆ, ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಹೃದಯದ ಆರೋಗ್ಯ ಕಾಪಾಡಲು ಅತ್ಯಂತ ಮುಖ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ, ವಿತಂಡ ವಾದ ಮುಂದುವರೆಸಿದ ಚೇತನ್: ವಿಡಿಯೋ – Kannada News | Chetan Ahimsa talks about Dr Rajkumar’s memorial watch video

ಡಾ ರಾಜ್​ಕುಮಾರ್ (Dr Rajkumar) ಅವರ ಸಮಾಧಿ ಕುರಿತು ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ನಿನ್ನೆ ಮಾಡಿರುವ ಫೇಸ್​​ಬುಕ್ ಪೋಸ್ಟ್ ತೀವ್ರ ಟೀಕೆಗೆ ಗುರಿ ಆಗಿದೆ. 2.50 ಎಕರೆ ಭೂಮಿಯನ್ನು ಒಬ್ಬ ವ್ಯಕ್ತಿಯ ಸಮಾಧಿಗೆ ಕೊಡುವುದು ಸರಿಯೇ ಎಂಬಂತೆ ಚೇತನ್ ಅಹಿಂಸ ಪ್ರಶ್ನೆ ಮಾಡಿದ್ದಾರೆ. ಇಂದು ಟಿವಿ9 ಜೊತೆಗೆ ಮಾತನಾಡಿರುವ ಚೇತನ್ ಅಹಿಂಸ, ತಮ್ಮ ಪ್ರಶ್ನೆಯ ಉದ್ದೇಶ ಏನು ಎಂಬುದನ್ನು ವಿವರವಾಗಿ ವಿವರಿಸಿದ್ದಾರೆ. ರಾಜ್​ಕುಮಾರ್ ಎಂಬ ಒಬ್ಬ ವ್ಯಕ್ತಿಯ ಪ್ರಚಾರಕ್ಕಾಗಿ ಅಷ್ಟು ಭೂಮಿಯನ್ನು ಮೀಸಲಿಟ್ಟ ಸರ್ಕಾರವನ್ನು ತಾವು ಟೀಕಿಸುತ್ತಿರುವುದಾಗಿ ಚೇತನ್ ಅಹಿಂಸ ಹೇಳಿದ್ದಾರೆ. ಚೇತನ್ ಅಹಿಂಸ ವಾದವೇನು? ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

DC vs PBKS: ದಾಖಲೆಯ 152 ರನ್..! ಕನ್ನಡಿಗ ರಾಹುಲ್ ಅಬ್ಬರಕ್ಕೆ ಹಳೆಯ ದಾಖಲೆಗಳೆಲ್ಲ ಧ್ವಂಸ – Kannada News | KL Rahul’s Record 152*: DC Scores 264 vs PK in IPL 2026; Highest Indian Score!

ಐಪಿಎಲ್ 2026 ಟೂರ್ನಮೆಂಟ್‌ನ 35 ನೇ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ದಾಖಲೆಯ 264 ರನ್ ಕಲೆಹಾಕಿದೆ. ಇದು ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕಲೆಹಾಕಿದ ಅತ್ಯಧಿಕ ಮೊತ್ತವಾಗಿದೆ.

Source link

MECON Recruitment 2026: 103 ವೃತ್ತಿಪರ ಹುದ್ದೆಗಳಿಗೆ ಅರ್ಜಿ ಆಹ್ವಾನ; ಬೆಂಗಳೂರಿನಲ್ಲೇ ನಡೆಯಲಿದೆ ಸಂದರ್ಶನ! – Kannada News | MECON Recruitment 2026: 103 Professional Posts, Apply Online for Walk in Interview

ಉಕ್ಕು ಸಚಿವಾಲಯದ ಅಧೀನದಲ್ಲಿರುವ ಪ್ರತಿಷ್ಠಿತ MECON ಲಿಮಿಟೆಡ್‌ನಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಇಲ್ಲಿದೆ ಒಂದು ಉತ್ತಮ ಅವಕಾಶ. ಒಟ್ಟು 103 ವೃತ್ತಿಪರ ಹುದ್ದೆಗಳ ಭರ್ತಿಗಾಗಿ ಸಂಸ್ಥೆಯು ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ಹುದ್ದೆಗಳು ಪೂರ್ಣ ಸಮಯದ ಸ್ಥಿರ-ಅವಧಿಯ (FTFT) ಒಪ್ಪಂದದ ಆಧಾರದ ಮೇಲೆ ಇರಲಿವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಗಡುವಿನೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.

ಈ ನೇಮಕಾತಿ ಅಭಿಯಾನದ ಅಡಿಯಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು 103 ವೃತ್ತಿಪರರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ಹುದ್ದೆಗೆ ಬೇಕಾದ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ಅನುಭವದ ವಿವರಗಳನ್ನು MECON ಲಿಮಿಟೆಡ್‌ನ ಅಧಿಕೃತ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ನೀಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ತಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಅಧಿಸೂಚನೆಯನ್ನು ಕೂಲಂಕಷವಾಗಿ ಓದಿಕೊಳ್ಳಲು ಸೂಚಿಸಲಾಗಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಈಗಾಗಲೇ ಚಾಲನೆಯಲ್ಲಿದ್ದು, ಮೇ 11 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಆಯ್ಕೆ ಪ್ರಕ್ರಿಯೆಯು ಅತ್ಯಂತ ನೇರವಾಗಿದ್ದು, ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಬದಲಾಗಿ, ದೇಶದ ಪ್ರಮುಖ ನಗರಗಳಾದ ಬೆಂಗಳೂರು, ದೆಹಲಿ, ರಾಂಚಿ ಮತ್ತು ಕೋಲ್ಕತ್ತಾಗಳಲ್ಲಿ ನಡೆಯಲಿರುವ ವಾಕ್-ಇನ್ ಸಂದರ್ಶನಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸಂದರ್ಶನದ ನಿಖರವಾದ ದಿನಾಂಕ, ಸಮಯ ಮತ್ತು ಸ್ಥಳದ ವಿವರಗಳನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಪ್ರಕಟಿಸಲಾಗುವುದು. ಸಂದರ್ಶನದಲ್ಲಿ ತೋರುವ ದಕ್ಷತೆಯ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಆಯ್ಕೆಯಾದವರಿಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಅರ್ಜಿ ಸಲ್ಲಿಸಲು ಇಚ್ಛಿಸುವವರು MECON ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ‘ನೇಮಕಾತಿ’ (Recruitment) ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಅರ್ಜಿ ಸಲ್ಲಿಸಿದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳುವುದು ಉತ್ತಮ. ಸಂದರ್ಶನಕ್ಕೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳು ಮತ್ತು ಅವುಗಳ ಪ್ರತಿಗಳನ್ನು ಮರೆಯದೆ ತರಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, SSLC ಫಲಿತಾಂಶ ಏರಿಕೆ ಆಗಿದ್ಹೇಗೆ? ದಾಖಲೆಯ ರಿಸಲ್ಟ್​​ ಬಗ್ಗೆ ವಿಶ್ವನಾಥ್ ಅನುಮಾನ – Kannada News | BJP MLC H Vishwanath doubts on Karnataka SSLC Results 2026

ಮೈಸೂರು, (ಏಪ್ರಿಲ್ 25): ಎಸ್​ಎಸ್​​ಎಲ್​​ಸಿ ಪರೀಕ್ಷೆ 1 ಫಲಿತಾಂಶ (SSLC Results 2026) ಪ್ರಕಟವಾಗಿದ್ದು, ಈ ಬಾರಿ ದಾಖಲೆಯ ಶೇ.94.1ರಷ್ಟು ಫಲಿತಾಂಶ ದಾಖಲಾಗಿದೆ. ಇದು ಕರ್ನಾಟಕ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ದಾಖಲೆಯ ಫಲಿತಾಂಶ ಬಂದಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಖುಷಿಯಿಂದಲೇ ಹೇಳಿಕೊಂಡಿದ್ದಾರೆ. ಆದ್ರೆ, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿನ ಅನಿರೀಕ್ಷಿತ ಏರಿಕೆಯ ಕುರಿತು ಮಾಜಿ ಶಿಕ್ಷಣ ಸಚಿವ, ಪರಿಷತ್ ಸದಸ್ಯ ಎಚ್. ವಿಶ್ವನಾಥ್ (BJP MLC H Vishwanath) ತೀವ್ರ ಅಚ್ಚರಿ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ರಾಜ್ಯದಾದ್ಯಂತ ಅದರಲ್ಲೂ ವಿಶೇಷವಾಗಿ ಯಾದಗಿರಿ, ಬಳ್ಳಾರಿ ಮತ್ತು ಬೀದರ್‌ನಂತಹ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಶಿಕ್ಷಕರ ಕೊರತೆ ಇದ್ದರೂ ಸಹ, ಇಷ್ಟು ದೊಡ್ಡ ಮಟ್ಟದ ಫಲಿತಾಂಶ ಬಂದಿರುವುದು ಹೇಗೆ ಸಾಧ್ಯ? ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರೆತೆ ಇದೆ, ಈ ನಡುವೆ ಗ್ರೇಸ್ ಮಾರ್ಕ್ ನೀಡಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿದರೆ ಮುಂದೆ ಅವರ ಭವಿಷ್ಯ ಏನು? ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Karnataka SSLC Result 2026: ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ ಶೇ 94.1ರಷ್ಟು ಮಂದಿ ಪಾಸ್, 7 ಮಂದಿ ರಾಜ್ಯಕ್ಕೇ ಟಾಪ್!

Source link

ಡಾ ರಾಜ್ ಸಮಾಧಿ ಬಗ್ಗೆ ಕೊಂಕು ತೆಗೆದ ಚೇತನ್ ಅಹಿಂಸ ವಿರುದ್ಧ ದೂರು – Kannada News | Dr Rajkumar Sena gave complaint against Chetan Ahimsa

ನಿನ್ನೆ (ಏಪ್ರಿಲ್ 24) ರಾಜ್ಯದಾದ್ಯಂತ ಕಲಾಚೇತನ ಡಾ ರಾಜ್​ಕುಮಾರ್ (Dr Rajkumar) ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯ್ತು. ಡಾ ರಾಜ್​ಕುಮಾರ್ ಅವರ ಕರ್ನಾಟಕಕ್ಕೆ, ಕನ್ನಡಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯ್ತು. ಆದರೆ ಈ ವೇಳೆ ನಟ, ಸ್ವಯಂ ಘೋಷಿತ ಹೋರಾಟಗಾರ ಚೇತನ್ ಅಹಿಂಸ ಅವರು ರಾಜ್​​ಕುಮಾರ್ ಅವರ ಸಮಾಧಿಗೆ ಸರ್ಕಾರ ಸ್ಥಳ ಕೊಟ್ಟಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಒಂದನ್ನು ಹಂಚಿಕೊಂಡರು. ಅಣ್ಣಾವ್ರ ಸಮಾಧಿಗೆ 2.50 ಎಕರೆ ಸ್ಥಳ ನೀಡಿತ್ತು ಸೂಕ್ತ ನಿರ್ಧಾರವಲ್ಲ ಎಂದು ಚೇತನ್ ಹೆಳಿದ್ದರು. ನಿನ್ನೆಯೇ ಚೇತನ್ ಅವರ ಈ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ರಾಜ್​ಕುಮಾರ್ ಅಭಿಮಾನಿಗಳು ಚೇತನ್ ವಿರುದ್ಧ ದೂರು ಸಹ ದಾಖಲಿಸಿದ್ದಾರೆ.

ಡಾ ರಾಜ್​ಕುಮಾರ್ ಸೇನೆ ಹೆಸರಿನ ಸಂಘಟನೆಯು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಚೇತನ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ. ‘ಚೇತನ್‌ ಅಹಿಂಸ ಎಂಬ ವ್ಯಕ್ತಿ ಕನ್ನಡ ಚಿತ್ರರಂಗದ ವರನಟ ಡಾ ರಾಜಕುಮಾರ್‌ ಅವರ ಸ್ಮಾರಕದ ಬಗ್ಗೆ ಆತನ ಸಾಮಾಜಿಕ ಜಾಲತಾಣವಾದಲ್ಲಿ ಅವಹೇಳನಕಾರಿ ಹೇಳಿಕೆ ಬರೆದುಕೊಂಡು ಕನ್ನಡ ಚಿತ್ರಾಭಿಮಾನಿಗಳಿಗೆ ಹಾಗೂ ಡಾ ರಾಜ್‌ ಕುಮಾರ್‌ ಅವರ ಅಭಿಮಾನಿಗಳಿಗೆ ಅಪಮಾನಿಸಿದ್ದಾನೆ. ಘನ ಪೊಲೀಸ್‌ ಇಲಾಖೆ ಕೂಡಲೆ ಕ್ರಮ ಕೈಗೊಂಡು ಚೇತನ್‌ ಅಹಿಂಸ ಎಂಬ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಿದ್ದೇವೆ’ ಎಂದಿದ್ದಾರೆ.

‘ಪದ್ಮಭೂಷಣ ಕರ್ನಾಟಕ ರತ್ನ ಡಾ ರಾಜಕುಮಾರ್‌ ಎಂದರೆ ಅವರೊಂದು ಬೃಹತ್‌ ಶಕ್ತಿ. ಡಾ ರಾಜ್‌ ಎಂದರೆ ಗೋಕಾಕ್‌ ಚಳವಳಿ ನೇತಾರ ಮತ್ತು ಕನ್ನಡ ನಾಡು ನುಡಿ ನೆಲ ಜಲ ಭಾಷೆಗಾಗಿ ಶ್ರಮಿಸಿದ ಗಣ್ಯಮಾನ್ಯರು ನಮ್ಮ ರಾಜಕುಮಾರ್‌. ಶೈಕ್ಷಣಿಕ ಸಂಸ್ಥೆಗಳಿಗೆ ಧಾರ್ಮಿಕ ಕ್ಷೇತ್ರಗಳಿಗೆ ಪೊಲೀಸ್‌ ಇಲಾಖೆಯ ಪರಿಹಾರ ನಿಧಿ, ನೆರೆ ಹಾವಳಿ, ಬರಪರಿಹಾರ ನಿಧಿಗಾಗಿ ಶ್ರಮಿಸಿದ ವ್ಯಕ್ತಿ ರಾಜಕುಮಾರ್‌, ಕಾರ್ಗಿಲ್‌ ಯುದ್ಧದಲ್ಲಿ ಮಡಿದ ಯೋಧರ ಸೇವೆಗೆ ರಸಮಂಜರಿ ಕಾರ್ಯಕ್ರಮದ ಮುಖಾಂತರ ಸಹಾಯಧನ ಮಾಡಿದ ವ್ಯಕ್ತಿ ರಾಜಕುಮಾರ್‌, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆಸ್ಪತ್ರೆಗಳಿಗೆ ಮಿಡಿದ ಜೀವ ಡಾ.ರಾಜಕುಮಾರ್‌, ಕನ್ನಡದ ಅಸ್ಮಿತೆ ರಾಜಕುಮಾರ್‌ ಬಡತನದ ಬೇಗೆಯಲ್ಲಿ ವೃತ್ತಿ ರಂಗಭೂಮಿಗೆ ದುಡಿದ ವ್ಯಕ್ತಿ ಮುಂದೆ ಕನ್ನಡ ಚಲನಚಿತ್ರರಂಗದಲ್ಲಿ ಪೌರಾಣಿಕ ಐತಿಹಾಸಿಕ ಜನಪದ ಸಾಮಾಜಿಕ ಸಾಂಸಾರಿಕ ಭಕ್ತಿಪ್ರಧಾನ ಭಾವಪ್ರಧಾನತೆಯ ಮೂಲಕ ಅತ್ಯುನ್ನತ ಪಾತ್ರಗಳನ್ನು ನಿರ್ವಹಿಸಿದವರು ಡಾ.ರಾಜಕುಮಾರ್‌ ಇಂತಹ ಮಹಾನ್‌ ಕಲಾವಿದ ಮೇರುನಟನ ಸಾಧನೆಯನ್ನು ಗಮನಿಸಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮತ್ತು ದೇಶ ವಿದೇಶಗಳು ಅತ್ಯಂತ ಪ್ರೀತಿಯಿಂದ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ. ಕನ್ನಡ ನಾಡಿನ ಕೋಟಿ ಕೋಟಿ ಅಭಿಮಾನಿಗಳ ಮನಸ್ಸಿಗೆ ಧಕ್ಕೆ ಉಂಟುಮಾಡಿರುವ ಚೇತನ ಎಂಬ ವ್ಯಕ್ತಿಯ ಮೇಲೆ ಕೂಡಲೆ ಕ್ರಮ ಕೈಗೊಂಡು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಬೇಕೆಂದು ಮತ್ತು ಕರ್ನಾಟಕದ ಜನತೆಯಲ್ಲಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸುತ್ತೇವೆ’ ಎಂದಿದ್ದಾರೆ.

ಇದನ್ನೂ ಓದಿ:ಕಾಣಿಸುತ್ತಿಲ್ಲ ‘ಕೆಡಿ’ ಸಿನಿಮಾ ಟ್ರೇಲರ್; ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಗೆ ಇನ್ನೊಂದು ವಿಘ್ನ

ಚೇತನ್ ಅಹಿಂಸ ಹೇಳಿರುವ ಮಾತಿನ ವಿರುದ್ಧ ಹಲವಾರು ಮಂದಿ ಈಗಾಗಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್​ಕುಮಾರ್ ಅವರಿಗೆ ಸರ್ಕಾರವು ಸೂಕ್ತ ಗೌರವವನ್ನೇ ನೀಡಿದೆ. ಅಲ್ಲದೆ ಸ್ಮಾರಕ ನಿರ್ಮಾಣವಾಗಿ ಮೂರು ದಶಕಗಳ ಬಳಿಕ ಈಗ ವಿನಾಕಾರಣ ಆ ಬಗ್ಗೆ ಆಕ್ಷೇಪ ಎತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಹ ಅಹಿಂಸ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಾರಾ ಗೋವಿಂದು ಸಹ ಚೇತನ್ ಅಹಿಂಸ ವಿರುದ್ಧ ಗುಡುಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮದ್ವೆಗೆ ಕೆಲವೇ ಗಂಟೆಗಳಿರುವಾಗಲೇ ವಧು ನಾಪತ್ತೆ: ಪೋಷಕರಲ್ಲಿ ಅದೊಂದು ಅನುಮಾನ – Kannada News | Bride Disappears from Sirsi Home Before Wedding; Parents File Complaint

ನಾಪತ್ತೆಯಾಗಿರುವ ಯುವತಿ Image Credit source: tv9 kannada

ಕಾರವಾರ, ಏಪ್ರಿಲ್​ 25: ಹಸೆಮಣೆ ಏರಬೇಕಿದ್ದ ಯುವತಿಯೊಬ್ಬಳು (girl) ಮದುವೆಗೆ ಕೆಲವೇ ಗಂಟೆಗಳಿರುವಾಗ ನಾಪತ್ತೆಯಾಗಿರುವಂತಹ (Missing) ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ನಡೆದಿದೆ. ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ಇದೀಗ ಆತಂಕದ ಮೌನ ಆವರಿಸಿದೆ. ಶಿರಸಿ ನಗರದ ನಿವಾಸಿ ಸೀಫಾ ಖಾನ್ ನಾಪತ್ತೆಯಾಗಿರುವ ಯುವತಿ. MBBS ಓದುತ್ತಿದ್ದ ಯುವಕನೊಂದಿಗೆ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಶಿರಸಿಯ ಹೊಸ ಮಾರುಕಟ್ಟೆ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.

ನಡೆದಿದ್ದೇನು?

ಇಂದು (ಏಪ್ರಿಲ್ 25) ಮಧ್ಯಾಹ್ನ ಶಿರಸಿಯ ಉಸರಿ ರಸ್ತೆಯ ಕಲ್ಯಾಣ ಮಂಟಪದಲ್ಲಿ ಸೀಫಾ ಖಾನ್​​ ಮದುವೆ ನಿಶ್ಚಯವಾಗಿತ್ತು. ಮದುವೆಯ ಸಿದ್ಧತೆಗಳಲ್ಲಿ ಕುಟುಂಬಸ್ಥರೆಲ್ಲರೂ ಬ್ಯುಸಿಯಾಗಿದ್ದರು. ಆದರೆ, ವಧುವನ್ನು ಸಜ್ಜುಗೊಳಿಸಲು ಆಕೆಯ ಕೋಣೆಗೆ ಹೋಗಿ ನೋಡಿದಾಗ ಯುವತಿ ಕಾಣಿಸಲಿಲ್ಲ. ಮನೆಯವರು ಸುತ್ತಮುತ್ತ ಹಾಗೂ ಪರಿಚಿತರ ಮನೆಗಳಲ್ಲಿ ಎಷ್ಟೇ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ.

ಇದನ್ನೂ ಓದಿ: ‘ತಂಗಿ ತಂಗಿ ಎನ್ನುತ್ತಿದ್ದವನ ಜತೆಗೇ ಓಡಿಹೋಗಿ ಮದುವೆಯಾದ್ಳು!’ ಪತ್ನಿಯ ವಂಚನೆ ಬಗ್ಗೆ ಪತಿಯ ಅಳಲು

ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈ ಘಟನೆ ಬರಸಿಡಿಲಿನಂತೆ ಎರಗಿದೆ. ಎಲ್ಲಿ ಹುಡುಕಿದರೂ ಯುವತಿ ಪತ್ತೆಯಾಗದ ಹಿನ್ನೆಲೆಯಲ್ಲಿ, ಆತಂಕಕ್ಕೊಳಗಾದ ಪಾಲಕರು ಕೊನೆಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

MBBS ಯುವಕನೊಂದಿಗೆ ಓಡಿ ಹೋಗಿರುವ ಶಂಕೆ: ಪೊಲೀಸರಿಗೆ ದೂರು ನೀಡಿದ ಪೋಷಕರು

ಇನ್ನು ಸೀಫಾ ಖಾನ್, MBBS ಓದುತ್ತಿದ್ದ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಆತನೊಂದಿಗೆ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಕುಟುಂಬಸ್ಥರು ಅವರ ಪ್ರೀತಿಯನ್ನ ಒಪ್ಪಿರಲಿಲ್ಲ. ಇಂದು ಬೇರೆಯವರ ಜೊತೆ ಮದುವೆ ಮಾಡಲು ನಿಶ್ಚಯಿಸಿದ್ದರು. ಆದರೆ ಅಷ್ಟರಲ್ಲಿ ಯುವತಿ ನಾಪತ್ತೆ ಆಗಿದ್ದಾಳೆ. ಸದ್ಯ ಮಗಳನ್ನ ಹುಡುಕಿಕೊಡುವಂತೆ ಯುವತಿಯ ತಂದೆ ಝಹೀರ್ ಖಾನ್ ಶಿರಸಿಯ ಹೊಸ ಮಾರುಕಟ್ಟೆ ಠಾಣೆಗೆ ದೂರು ನೀಡಿದ್ದಾರೆ.

ಮದುವೆಗೆ ಒಂದು ತಿಂಗಳು ಇರುವಾಗಲೇ ಮದುಮಗ ಗಾಯಬ್

ಇನ್ನು ಇತ್ತೀಚೆಗೆ ಇಂತಹದೊಂದು ಘಟನೆ ರಾಯಚೂರಿನಲ್ಲಿ ನಡೆದಿತ್ತು. ಮದುವೆಗೆ ಒಂದು ತಿಂಗಳು ಇರುವಾಗಲೇ ಯುವಕ ನಾಪತ್ತೆ ಆಗಿದ್ದ. ಇಡೀ ಊರಿಗೆ ಬಾಡೂಟ ಹಾಕಿಸಿದ ಮಾರನೇ ದಿನವೇ ಗಾಯಬ್ ಆಗಿದ್ದ. ಇತ್ತ ತಂದೆ-ತಾಯಿ ಇಲ್ಲದ ಮೊಮ್ಮಗನನ್ನ ಸಲುಹಿದ್ದ ಅಜ್ಜಿ ಕಣ್ಣಿರು ಹಾಕಿದ್ದರು. ಮೊಮ್ಮಗನಿಗಾಗಿ ಉಪವಾಸ ಕೂಡ ಮಾಡಿದ್ದರು.

25 ವರ್ಷದ ಮುದ್ದುರಂಗಪ್ಪ ನಾಪತ್ತೆಯಾಗಿದ್ದ ಯುವಕ. ಬಿಎ ಡಿಗ್ರಿ ಮುಗಿಸಿ ಹೊಲ ಮನೆ ಕೆಲಸ ಮಾಡಿಕೊಂಡಿದ್ದ. ಕಳೆದೊಂದು ವರ್ಷದ ಹಿಂದೆ ಮುದ್ದುರಂಗಪ್ಪಗೆ ಸಂಬಂಧಿಕರೊಬ್ಬರ ಯುವತಿ ಜೊತೆ ಮದುವೆ ಫಿಕ್ಸ್ ಆಗಿತ್ತು. ಇನ್ನೊಂದು ತಿಂಗಳಲ್ಲಿ ಮದುವೆ ಆಗಬೇಕಿತ್ತು. ಈ ಮುದ್ದುರಂಗಪ್ಪ ಕುಟುಂಬದಲ್ಲಿ ಮದುವೆಗೂ ಮುನ್ನ ಮರಿ ಹೊಡೆದು ಇಡೀ ಊರಿಗೆ ಬಾಡೂಟ ಹಾಕಿಸುವ ಪದ್ದತಿ ಇದೆ.

ಇದನ್ನೂ ಓದಿ: ಮದ್ವೆಯಾದ ಏಳೇ ತಿಂಗಳಿಗೆ ನವವಧು ಇದ್ದಕ್ಕಿದ್ದಂತೆ ಸಾವು: ಸಾವಿನ ಸುತ್ತ ಅನುಮಾನದ ಹುತ್ತ

ಹಾಗಾಗಿ ಇಡೀ ಊರಿಗೆ ಬಾಡೂಟ ಹಾಕಿಸಿದ್ದ. ಹೀಗೆ ಬಾಡೂಟ ಹಾಕಿಸಿ ಮದುವೆ ತಯಾರಿಯಲ್ಲಿದ್ದ ಮುದ್ದುರಂಗಪ್ಪ ಮರುವ ದಿನವೇ ನಾಪತ್ತೆಯಾಗಿದ್ದ. ಎಷ್ಟೇ ಹುಡುಕಿದರೂ ಪತ್ತೆಯಾಗಿಲ್ಲ. ಹೀಗಾಗಿ ಮಾನ್ವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಎಫ್​ಐಆರ್ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link