Headlines

CBSE 10 Second Board Exam: CBSE 10ನೇ ತರಗತಿ ಎರಡನೇ ಬಾರಿಯ ಬೋರ್ಡ್ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಮೇ 15ರಿಂದ ಪರೀಕ್ಷೆ ಆರಂಭ – Kannada News | CBSE Class 10th 2026 Second Board Exam Date Sheet Released: May 15 21 Schedule

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) 2026ರ ಸಾಲಿನ 10ನೇ ತರಗತಿಯ ಎರಡನೇ ಬಾರಿಯ ಬೋರ್ಡ್ ಪರೀಕ್ಷೆಯ ದಿನಾಂಕ ಪಟ್ಟಿಯನ್ನು (Date Sheet) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಮೊದಲ ಪ್ರಯತ್ನದಲ್ಲಿ ಅಂಕಗಳನ್ನು ಸುಧಾರಿಸಿಕೊಳ್ಳಲು ಬಯಸುವ ಅಥವಾ ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳಿಗೆ ಇದು ಸುವರ್ಣವಕಾಶವಾಗಲಿದೆ.

ಪರೀಕ್ಷಾ ಅವಧಿ ಮತ್ತು ವೇಳಾಪಟ್ಟಿ:

ಮಂಡಳಿಯ ಪ್ರಕಟಣೆಯಂತೆ, ಈ ವಿಶೇಷ ಪರೀಕ್ಷೆಗಳು ಮೇ 15 ರಿಂದ ಪ್ರಾರಂಭವಾಗಿ ಮೇ 21ರವರೆಗೆ ನಡೆಯಲಿವೆ. ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಕೇವಲ ಒಂದು ವಾರದ ಅವಧಿಯಲ್ಲಿ ಎಲ್ಲಾ ಪ್ರಮುಖ ವಿಷಯಗಳ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಸಿಬಿಎಸ್‌ಇ ನಿರ್ಧರಿಸಿದೆ. ಪ್ರತಿ ವಿಷಯಕ್ಕೂ ಸಾಕಷ್ಟು ಸಮಯಾವಕಾಶ ಸಿಗುವಂತೆ ವೇಳಾಪಟ್ಟಿಯನ್ನು ರೂಪಿಸಲಾಗಿದ್ದು, ವಿದ್ಯಾರ್ಥಿಗಳು ಆಯಾ ದಿನಾಂಕಕ್ಕೆ ಅನುಗುಣವಾಗಿ ಸಿದ್ಧತೆ ನಡೆಸಬಹುದಾಗಿದೆ.

ಪ್ರಮುಖ ವಿಷಯಗಳ ಪರೀಕ್ಷಾ ದಿನಾಂಕಗಳು:

ಪರೀಕ್ಷೆಯ ಮೊದಲ ದಿನವಾದ ಮೇ 15 ರಂದೇ ಗಣಿತ (Standard & Basic) ಪತ್ರಿಕೆ ನಡೆಯಲಿದೆ. ಮೇ 16 ರಂದು ಇಂಗ್ಲಿಷ್ ಭಾಷೆಯ ಎರಡೂ ಪತ್ರಿಕೆಗಳು ಹಾಗೂ ಮೇ 18 ರಂದು ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ. ಮೇ 19 ರಂದು ಹಿಂದಿ, ಉರ್ದು, ಪಂಜಾಬಿ, ಬಂಗಾಳಿ ಸೇರಿದಂತೆ ಪ್ರಾದೇಶಿಕ ಮತ್ತು ವಿದೇಶಿ ಭಾಷೆಗಳ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಯ ಅವಧಿಯು ವಿಷಯಗಳ ಆಧಾರದ ಮೇಲೆ ಎರಡು ಅಥವಾ ಮೂರು ಗಂಟೆಗಳ ಕಾಲ ಇರಲಿದೆ.

ಇದನ್ನೂ ಓದಿ: SSLC District Wise Result: ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ

ಅಂತಿಮ ಹಂತದ ಪರೀಕ್ಷೆಗಳು:

ಮೇ 20 ರಂದು ಸಂಸ್ಕೃತ, ಮಾಹಿತಿ ತಂತ್ರಜ್ಞಾನ (IT), ಕೃತಕ ಬುದ್ಧಿಮತ್ತೆ (AI) ಮತ್ತು ಚಿತ್ರಕಲೆಯಂತಹ ಐಚ್ಛಿಕ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಸರಣಿಯ ಅಂತಿಮ ದಿನವಾದ ಮೇ 21 ರಂದು ಸಮಾಜ ವಿಜ್ಞಾನ ಪತ್ರಿಕೆಯೊಂದಿಗೆ 2026ರ ಎರಡನೇ ಬೋರ್ಡ್ ಪರೀಕ್ಷೆಗಳು ಮುಕ್ತಾಯಗೊಳ್ಳಲಿವೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಮುಂದಿನ ಹಂತಕ್ಕೆ ತ್ವರಿತವಾಗಿ ಸಿದ್ಧರಾಗಲು ಅನುಕೂೂಲವಾಗಲಿದೆ.

ಮಂಡಳಿಯಿಂದ ವಿದ್ಯಾರ್ಥಿಗಳಿಗೆ ಸಲಹೆ:

ಈ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದ್ದು, ಸರಿಯಾದ ಅಧ್ಯಯನ ಯೋಜನೆ ಮತ್ತು ನಿರಂತರ ಅಭ್ಯಾಸದ ಮೂಲಕ ಉತ್ತಮ ಅಂಕ ಗಳಿಸಲು ಮಂಡಳಿ ಉತ್ತೇಜಿಸಿದೆ. ನಿಗದಿತ ಸಮಯದೊಳಗೆ ಸಿದ್ಧತೆಗಳನ್ನು ಪೂರ್ಣಗೊಳಿಸಿ, ಪರೀಕ್ಷಾ ಕೇಂದ್ರದ ನಿಯಮಗಳನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:54 pm, Fri, 24 April 26

Source link

Leave a Reply

Your email address will not be published. Required fields are marked *