
ಈ ಆವೃತ್ತಿಯಿಂದ ಐಪಿಎಲ್ನಿಂದ ಸಿಎಸ್ಕೆ ತಂಡದ ಪರ ಆಡುತ್ತಿರುವ ಸಂಜು ಸ್ಯಾಮನ್ಸ್ ಕೊನೆಗೂ ತಮ್ಮ ಲಯ ಕಂಡುಕೊಂಡಿದ್ದಾರೆ. ಆವೃತ್ತಿಯ ಮೊದಲ ಮೂರು ಪಂದ್ಯಗಳಲ್ಲಿ ನಿರಾಶೆ ಮೂಡಿಸಿದ ಸಂಜು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಆರಂಭದಿಂದಲೂ ತಾಳ್ಮೆಯ ಆಟ ಪ್ರದರ್ಶಿಸಿದ ಸಂಜು ಸ್ಯಾಮ್ಸನ್, ಮುಖೇಶ್ ಕುಮಾರ್ ಎಸೆದ ಇನ್ನಿಂಗ್ಸ್ನ ಒಂಬತ್ತನೇ ಓವರ್ನ ಮೊದಲ ಎಸೆತದಲ್ಲಿ ಸಿಂಗಲ್ ಪಡೆಯುವ ಮೂಲಕ ತಮ್ಮ ಅರ್ಧಶತಕ ಪೂರೈಸಿದರು.
ಸಂಜು ಕೇವಲ 26 ಎಸೆತಗಳಲ್ಲಿ ಒಟ್ಟು 9 ಬೌಂಡರಿಗಳ ಸಹಿತ ಸಿಎಸ್ಕೆ ಪರ ತಮ್ಮ ಮೊದಲ ಅರ್ಧಶತಕ ಬಾರಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಸಂಜು ಸ್ಯಾಮ್ಸನ್ ಈ ಅರ್ಧಶತಕ ಬಾರಿಸುವ ಮೂಲಕ ಉಳಿಸಿಕೊಂಡಿದ್ದಾರೆ. ರುತುರಾಜ್ ಔಟಾದ ನಂತರ ಒತ್ತಡಕ್ಕೆ ಮಣಿಯದೆ ಜವಾಬ್ದಾರಿಯುತ ಇನ್ನಿಂಗ್ಸ್ ಆಡುತ್ತಿರುವ ಸಂಜು ಶತಕದತ್ತ ಸಾಗುತ್ತಿದ್ದಾರೆ.