Headlines

CSK vs MI: ಇದು ನಮ್ಮ ಸೀಸನ್ ಅಲ್ಲ: ಸಿಎಸ್​ಕೆ ವಿರುದ್ಧದ ಸೋಲಿನ ನಂತರ ದುಃಖಿತರಾದ ಹಾರ್ದಿಕ್ ಪಾಂಡ್ಯ – Kannada News | Hardik Pandya Post Match Statement after loss vs CSK He said This is not our season

ಬೆಂಗಳೂರು (ಮೇ. 03): ಐಪಿಎಲ್ 2026 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಕಮ್​ಬ್ಯಾಕ್ ಮಾಡಿದಂತೆ ಕಾಣುತ್ತಿದೆ. ಶನಿವಾರ ನಡೆದ 44 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅನ್ನು 8 ವಿಕೆಟ್‌ಗಳಿಂದ ಸೋಲಿಸಿ ಸಿಎಸ್​ಕೆ ಮತ್ತೊಂದು ಗೆಲುವು ಕಂಡಿತು. ಈ ಋತುವಿನಲ್ಲಿ ಚೆನ್ನೈ ಮುಂಬೈಯನ್ನು ಸೋಲಿಸಿದ್ದು ಇದು ಎರಡನೇ ಬಾರಿ. 160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ ಕೇವಲ 18.1 ಓವರ್‌ಗಳಲ್ಲಿ ಜಯಗಳಿಸಿತು. ಈ ಸೋಲಿನೊಂದಿಗೆ, ಮುಂಬೈಗೆ ಪ್ಲೇಆಫ್‌ನ ಬಾಗಿಲು ಬಹುತೇಕ ಮುಚ್ಚಿದಂತಾಗಿದೆ. ಪಂದ್ಯದ ನಂತರ, ನಾಯಕ ಹಾರ್ದಿಕ್ ಪಾಂಡ್ಯ ಅವರ ಮುಖದಲ್ಲಿ ನಿರಾಶೆ ಸ್ಪಷ್ಟವಾಗಿ ಗೋಚರಿಸಿತು, ಅವರು ತಂಡದ ಪ್ರದರ್ಶನದ ಬಗ್ಗೆ ಅಚ್ಚರಿ ಹೇಳಿಕೆ ನೀಡಿದರು.

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ, ಹಾರ್ದಿಕ್ ಪಾಂಡ್ಯ ತಮ್ಮ ತಂಡವು ಆಟದ ಪ್ರತಿಯೊಂದು ಅಂಶದಲ್ಲೂ ಹಿಂದುಳಿದಿದೆ ಎಂದು ಒಪ್ಪಿಕೊಂಡರು. “ಇದು ನಮ್ಮ ಸೀಸನ್ ಅಲ್ಲ. ಅವರು ನಮಗಿಂತ ಉತ್ತಮವಾಗಿ ಆಡಿದರು. ಅವರು ಉತ್ತಮವಾಗಿ ಬೌಲಿಂಗ್ ಮಾಡಿದರು, ಉತ್ತಮವಾಗಿ ಫೀಲ್ಡಿಂಗ್ ಮಾಡಿದರು ಮತ್ತು ನಮಗಿಂತ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು” ಎಂದು ಹಾರ್ದಿಕ್ ಹೇಳಿದರು.

ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಕಳಪೆ

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 159 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಈ ಪಿಚ್‌ನಲ್ಲಿ ನಾವು ಗಳಿಸಿದ ರನ್‌ಗಳು ತುಂಬಾ ಕಡಿಮೆ ಎಂದು ನಾಯಕ ಹೇಳಿದರು. ಬ್ಯಾಟಿಂಗ್ ಘಟಕದ ವೈಫಲ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ಪಿಚ್‌ನಲ್ಲಿ 180-190 ಸ್ಕೋರ್ ಉತ್ತಮ ಮೊತ್ತವಾಗುತ್ತಿತ್ತು, ಆದರೆ ನಾವು ಲಯವನ್ನು ಕಂಡುಕೊಳ್ಳಲಿಲ್ಲ. ನಾವು ಹೆಚ್ಚು ಲೆಕ್ಕಾಚಾರದ ಕ್ರಿಕೆಟ್ ಆಡಬೇಕಾಗಿತ್ತು. ಒಟ್ಟಾರೆಯಾಗಿ, ನಾವು ಬ್ಯಾಟಿಂಗ್ ಘಟಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ” ಎಂದು ಒಪ್ಪಿಕೊಂಡರು.

CSK vs DC: ಸಿಎಸ್​​ಕೆ ವಿರುದ್ಧ ಸೋತ ಮುಂಬೈ ಐಪಿಎಲ್​ನಿಂದ ಭಾಗಶಃ ಔಟ್

ಬೌಲಿಂಗ್ ಬಗ್ಗೆ ಹಾರ್ದಿಕ್ ಹೇಳಿದ್ದೇನು?

ಚೆನ್ನೈ ತಂಡದ ಬ್ಯಾಟ್ಸ್‌ಮನ್‌ಗಳ ವಿರುದ್ಧ ಮುಂಬೈ ತಂಡದ ಬೌಲರ್‌ಗಳು ನಿಷ್ಪರಿಣಾಮಕಾರಿ ಎಂದು ಸಾಬೀತಾಯಿತು. ಗುರಿಯನ್ನು ರಕ್ಷಿಸುವಾಗ, ಮುಂಬೈ ಇಂಡಿಯನ್ಸ್ ತಂಡವು ಈ ಹಿಂದೆ ಗುರುತಿಸಿಕೊಂಡಿರುವಷ್ಟು ಚುರುಕುತನ ಬೌಲರ್‌ಗಳಲ್ಲಿ ಇರಲಿಲ್ಲ. ಬೌಲಿಂಗ್ ಬಗ್ಗೆ ಮಾತನಾಡಿದ ಹಾರ್ದಿಕ್, “ಬೌಲಿಂಗ್ ಘಟಕವಾಗಿ, ಅವರು ನಮಗಿಂತ ಶ್ರೇಷ್ಠರಾಗಿದ್ದರು. ನಮಗೆ ಲಭ್ಯವಿರುವ ಬೌಲಿಂಗ್ ಆಯ್ಕೆಗಳೊಂದಿಗೆ ನಾವು ಮೈದಾನಕ್ಕೆ ಇಳಿದೆವು. ಆದರೆ, ಅದು ಯಶಸ್ಸು ತಂದುಕೊಡಲಿಲ್ಲ” ಎಂದು ಹೇಳಿದರು.

ಈ ಸೋಲಿನ ನಂತರ ಮುಂಬೈನ ಪರಿಸ್ಥಿತಿ ಈಗ ಅನಿಶ್ಚಿತವಾಗಿದೆ. ಇದು 9 ಪಂದ್ಯಗಳಲ್ಲಿ ಮುಂಬೈನ 7 ನೇ ಸೋಲು, ಹಾರ್ದಿಕ್ ಪಡೆ ಕೇವಲ 4 ಅಂಕಗಳನ್ನು ಹೊಂದಿದ್ದಾರೆ. ಅವರು ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದ್ದಾರೆ. ಇಲ್ಲಿಂದ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಲು ಮುಂಬೈ ತಂಡದಲ್ಲಿ ಪವಾಡ ನಡೆಯಬೇಕಷ್ಟೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:03 am, Sun, 3 May 26

Source link

Leave a Reply

Your email address will not be published. Required fields are marked *