CWG 2026: ಚಿನ್ನದ ಖಾತೆ ತೆರೆದ ಭಾರತ; ಹ್ಯಾಟ್ರಿಕ್ ಚಿನ್ನ ಗೆದ್ದ ಮೀರಾಬಾಯಿ ಚಾನು – Kannada News | Mirabai Chanu Bags Historic 3rd Consecutive CWG Gold in 48kg Weightlifting

2026 ರ ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಪದಕದ ಖಾತೆ ತೆರೆದಿದೆ. ಭಾರತೀಯ ವೇಟ್‌ಲಿಫ್ಟಿಂಗ್‌ನ ರಾಣಿ ಎಂದು ಕರೆಯಲ್ಪಡುವ ಸೈಖೋಮ್ ಮೀರಾಬಾಯಿ ಚಾನು ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದ್ದು, ಮಹಿಳೆಯರ 48 ಕೆಜಿ ವಿಭಾಗದಲ್ಲಿ  ಚಿನ್ನದ ಪದಕ ಗೆದ್ದಿದ್ದಾರೆ(PC-PTI).

ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಇದು ಮೀರಾಬಾಯಿ ಚಾನು ಅವರ ಸತತ ಮೂರನೇ ಚಿನ್ನದ ಪದಕವಾಗಿದ್ದು, ಇದರೊಂದಿಗೆ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಮೀರಾಬಾಯಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಒಟ್ಟು 190 ಕೆಜಿ ಭಾರ ಎತ್ತಿ ಸ್ವರ್ಣವನ್ನು ತನ್ನದಾಗಿಸಿಕೊಂಡರು. ಈ ಹಿಂದೆ ಅವರು 2014 ರ ಗೋಲ್ಡ್ ಕೋಸ್ಟ್ ಮತ್ತು 2022 ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿಯೂ ಭಾರತಕ್ಕೆ ಚಿನ್ನದ ಪದಕಗಳನ್ನು ಗೆದ್ದಿದ್ದರು(PC-PTI).

ಸ್ನ್ಯಾಚ್ ಸುತ್ತಿನಲ್ಲಿ 85 ಕೆಜಿ ತೂಕ ಎತ್ತಿದ ಮೀರಾಬಾಯಿ ಕಾಮನ್‌ವೆಲ್ತ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿದರು. ನಂತರ ಅವರು ಕ್ಲೀನ್ ಮತ್ತು ಜರ್ಕ್‌ನಲ್ಲಿ 105 ಕೆಜಿ ಎತ್ತುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಒಟ್ಟಾರೆಯಾಗಿ ಮೀರಾಬಾಯಿ ಚಾನು 190 ಕೆಜಿ ತೂಕ ಎತ್ತಿದರು(PC-PTI).

ಮಣಿಪುರದ ಇಂಫಾಲದವರಾದ ಸೈಖೋಮ್ ಮೀರಾಬಾಯಿ ಚಾನು ಭಾರತದ ಅತ್ಯಂತ ಯಶಸ್ವಿ ಮತ್ತು ದಂತಕಥೆಯ ವೇಟ್‌ಲಿಫ್ಟರ್‌ಗಳಲ್ಲಿ ಒಬ್ಬರು. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆಲ್ಲುವುದರಿಂದ ಹಿಡಿದು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸತತ ಮೂರು ಚಿನ್ನದ ಪದಕಗಳನ್ನು ಗೆಲ್ಲುವವರೆಗೆ, ಮೀರಾಬಾಯಿ ಚಾನು ಭಾರತಕ್ಕೆ ಹಲವಾರು ಪದಕಗಳನ್ನು ಗೆದ್ದಿದ್ದಾರೆ(PC-PTI).

 13 ವರ್ಷದವರಿದ್ದಾಗ ತರಬೇತಿ ಪ್ರಾರಂಭಿಸಿದ ಮೀರಾಬಾಯಿ ಚಾನು ಅವರ ಪ್ರಯಾಣ ಸುಲಭವಾಗಿರಲಿಲ್ಲ. ಆರಂಭಿಕ ದಿನಗಳಲ್ಲಿ, ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಅವರಿಗೆ ಸರಿಯಾದ ತರಬೇತಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಎಂದಿಗೂ ತಮ್ಮ ಛಲ ಬಿಡದ ಮೀರಾಬಾಯಿ ಇಂದು ಪ್ರಪಂಚದಾದ್ಯಂತ ಭಾರತಕ್ಕೆ ಕೀರ್ತಿ ತರುತ್ತಿದ್ದಾರೆ(PC-PTI).

Published On – 9:26 pm, Sun, 26 July 26

Source link

Leave a Reply

Your email address will not be published. Required fields are marked *