Headlines

Daily Devotional: ದೇವರಿಗೆ ನಿಜವಾಗಿಯೂ ಕಣ್ಣಿಲ್ಲವೇ? ಲೋಕರೂಢಿ ಮಾತಿನ ಅರ್ಥವೇನು? – Kannada News | Divine Intervention: The Profound Meaning of “Is God Blind?” A Devotional Insight

ದೇವರಿಗೆ ಕಣ್ಣಿಲ್ಲವಾImage Credit source: Pinterest

ಹಳ್ಳಿಗಳಲ್ಲಿ ಬಳಕೆಯಲ್ಲಿರುವ ಅನೇಕ ಗಾದೆಗಳು, ನಾಣ್ಣುಡಿಗಳು ಮತ್ತು ಮಾತುಗಳ ಹಿಂದೆ ಆಳವಾದ ತತ್ವಗಳು ಹಾಗೂ ಅರ್ಥಗಳಿವೆ. ಅಂತಹ ಒಂದು ಮಹತ್ವದ ಮಾತಾಗಿದೆ, “ದೇವರಿಗೆ ಕಣ್ಣಿಲ್ಲವಾ”. ಈ ಮಾತು ಯಾವಾಗ ಮತ್ತು ಏಕೆ ನಮ್ಮಿಂದ ಹೊರಹೊಮ್ಮುತ್ತದೆ, ಮತ್ತು ಅದರ ಫಲಿತಾಂಶವೇನು ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಸಾಮಾನ್ಯವಾಗಿ, ಈ ಮಾತನ್ನು ಅತೀವ ನೋವು, ಅಸಹಾಯಕತೆ ಅಥವಾ ಘೋರ ಅನ್ಯಾಯಕ್ಕೆ ಒಳಗಾದಾಗ ಮನದಾಳದಿಂದ ಉಚ್ಚರಿಸುತ್ತೇವೆ. ನಮ್ಮ ಕಡೆ ನ್ಯಾಯವಿದ್ದರೂ ಮೋಸ ಹೋದಾಗ, ಅಥವಾ ಬಲಿಷ್ಠರ ವಿರುದ್ಧ ಹೋರಾಡಿ ಹೋರಾಡಿ ಸಾಕಾಗಿ ಹೋದಾಗ ಈ ಭಾವನಾತ್ಮಕ ಉದ್ಗಾರ ಹೊರಬರುತ್ತದೆ. ಇದು ಕೇವಲ ಮೌಖಿಕ ಅಭಿವ್ಯಕ್ತಿಯಲ್ಲ, ಬದಲಿಗೆ ನಮ್ಮ ಭಾವನೆಗಳ ತೀವ್ರತೆಯ ಪ್ರತೀಕವಾಗಿದೆ. ಯಾವುದೇ ಜಪ, ತಪ ಅಥವಾ ಪೂಜೆಯ ಅಗತ್ಯವಿಲ್ಲದೆ, ಕೇವಲ ಹೃದಯದ ಆಳದಿಂದ ಹೊರಹೊಮ್ಮುವ ಈ ಕರೆಯು ಶಕ್ತಿಯುತವಾಗಿದೆ.

ಸಂಕಷ್ಟದ ಸಂದರ್ಭಗಳಲ್ಲಿ, ನಾವು ಧರ್ಮಬದ್ಧವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆದುಕೊಂಡಿದ್ದರೂ ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ಅಥವಾ ರಾಜಕೀಯವಾಗಿ ಸಂಪೂರ್ಣವಾಗಿ ಕುಗ್ಗಿ ಹೋದಾಗ ಈ ಮಾತು ಸ್ವಾಭಾವಿಕವಾಗಿ ಬರುತ್ತದೆ. ಇದು ಕೇವಲ ಬಡವರ ಅಥವಾ ಶ್ರೀಮಂತರ ಮಾತುಗಳಲ್ಲ, ಸಾಮಾನ್ಯ ಮನುಷ್ಯನ ಅಳಲು. ಈ ಮಾತಿಗೆ ಯಾವುದೇ ವಿಶೇಷ ಮಹನೀಯತೆ ಅಥವಾ ತಪಸ್ವಿಗಳ ಪದವಿ ಬೇಕಾಗಿಲ್ಲ, ಸಾಮಾನ್ಯರೂ ಕೂಡ ಈ ವಾಕ್ಯಶಕ್ತಿಯನ್ನು ಹೊಂದಬಹುದು.

ಕರ್ಮ ಸಿದ್ಧಾಂತದ “ಮಾಡಿದ್ದುಣ್ಣೋ ಮಹಾರಾಯ” ಎಂಬ ಮಾತಿನ ಆಚೆಗೆ, ಈ “ದೇವರಿಗೆ ಕಣ್ಣಿಲ್ಲವಾ” ಎಂಬ ಮಾತು ಮಹತ್ವ ಪಡೆಯುತ್ತದೆ. ನಮ್ಮ ಬಾಯಿಂದ ಈ ಮಾತು ಹೊರಬಂದಾಗ, ತಕ್ಷಣವೇ ಭಗವಂತನ ಅನುಗ್ರಹವು ನಮಗೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದು ಶುಭ ನುಡಿಯೇ ಶಕುನ ಎಂಬ ನಂಬಿಕೆಗೆ ಪೂರಕವಾಗಿದೆ, ಅಂದರೆ ಶುಭ ನುಡಿಗಳಿಂದ ಶುಭ ಫಲಿತಾಂಶಗಳು ಪ್ರಾಪ್ತವಾಗುತ್ತವೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಮಹಾಭಾರತದ ದ್ರೌಪದಿ ವಸ್ತ್ರಾಪಹರಣದ ಸಂದರ್ಭದಲ್ಲಿ ಇದಕ್ಕೆ ಸ್ಪಷ್ಟ ಉದಾಹರಣೆಯಿದೆ. ಭೀಷ್ಮ, ಪಂಚಪಾಂಡವರು, ಮತ್ತು ಇಡೀ ಕುಟುಂಬದ ಸದಸ್ಯರು ಉಪಸ್ಥಿತರಿದ್ದರೂ, ಯಾರೊಬ್ಬರೂ ಅಸಹಾಯಕರಾಗಿದ್ದ ದ್ರೌಪದಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅಂತಹ ಸಂದರ್ಭದಲ್ಲಿ, ದ್ರೌಪದಿ “ಅನೇತಾ ಶರಣಂ ನಾಸ್ತಿ” ಎಂದು ತಿಳಿದು, ಕೃಷ್ಣ ಭಗವಾನನನ್ನು “ಅಪ್ಪ, ನಿನಗೆ ಕಣ್ಣಿಲ್ವಾ?” ಎಂದು ಮನದಾಳದಿಂದ ಕರೆದಳು. ಆಕೆಯ ಆ ತೀವ್ರವಾದ ಕರೆಯಿಂದಾಗಿ ಕೃಷ್ಣನು ತಕ್ಷಣವೇ ಪ್ರತ್ಯಕ್ಷನಾಗಿ ಆಕೆಯನ್ನು ರಕ್ಷಿಸಿದನು.

ಅದೇ ರೀತಿ ಕಲಿಯುಗದಲ್ಲಿಯೂ ಸಹ, ನಾವು ನ್ಯಾಯವಂತರಾಗಿ, ಸತ್ಯವಂತರಾಗಿ ಮತ್ತು ಧರ್ಮವಂತರಾಗಿ ನಡೆದುಕೊಂಡಾಗ, ಆದರೆ ಕಷ್ಟಗಳು ನಮ್ಮನ್ನು ಸುತ್ತುವರಿದಾಗ, ನಮ್ಮ ಕೊನೆಯ ಭರವಸೆಯಾಗಿ “ದೇವರಿಗೆ ಕಣ್ಣಿಲ್ಲವಾ” ಎಂಬ ಮಾತು ಹೊರಬರುತ್ತದೆ. ಇದು ಕೇವಲ ಒಂದು ಮಾತು ಎಂದರ್ಥವಲ್ಲ, ಬದಲಿಗೆ ಹೃದಯದಿಂದ ಅತ್ತಾಗ, ಭಗವಂತನು ಬಂದೇ ಬರುತ್ತಾನೆ ಎಂಬ ಅಚಲ ನಂಬಿಕೆಯನ್ನು ಇದು ಸೂಚಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *