ಬೆಂಗಳೂರು, ಫೆಬ್ರುವರಿ 20: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಳೆದ ಕೆಲ ತಿಂಗಳಿಂದ ಕಂಡಿದ್ದ ವಿಪರೀತ ಬೆಲೆ ಏರಿಕೆ ಆಟ ಇದೀಗ ಕಡಿಮೆಗೊಂಡಿದೆ. ಬೆಲೆಗಳು ಸ್ಥಿರಗೊಳ್ಳುವ ಲಕ್ಷಣ ಕಾಣುತ್ತಿದೆ. ನಿನ್ನೆ ಗುರುವಾರ 210 ರೂಗಳಷ್ಟು ಏರಿಕೆ ಆಗಿದ್ದ ಚಿನ್ನದ ಬೆಲೆ (Gold Rates) ಇವತ್ತು 30 ರೂ ಕಡಿಮೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ನಿನ್ನೆ 15 ರೂ ಏರಿಕೆ ಆಗಿತ್ತು. ಇವತ್ತು ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ವಿದೇಶಗಳಲ್ಲಿ ಹಲವೆಡೆ ಬೆಲೆಗಳ ಅಲ್ಪ ಏರಿಳಿಕೆಗಳಾಗಿವೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,43,150 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,56,170 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,43,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 27,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 20ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,617 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,315 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,713 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,617 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,315 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 14,315 ರೂ
- ಚೆನ್ನೈ: 14,420 ರೂ
- ಮುಂಬೈ: 14,315 ರೂ
- ದೆಹಲಿ: 14,330 ರೂ
- ಕೋಲ್ಕತಾ: 14,315 ರೂ
- ಕೇರಳ: 14,315 ರೂ
- ಅಹ್ಮದಾಬಾದ್: 14,320 ರೂ
- ಜೈಪುರ್: 14,330 ರೂ
- ಲಕ್ನೋ: 14,330 ರೂ
- ಭುವನೇಶ್ವರ್: 14,315 ರೂ
ಇದನ್ನೂ ಓದಿ: ದೆಹಲಿಯ ಎಐ ಶೃಂಗಸಭೆಯಲ್ಲಿ 8 ವರ್ಷದ ಬಾಲಕನಿಂದ ಮುಖ್ಯ ಭಾಷಣ; ಏನಿವನ ಸಾಧನೆ?
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಮಲೇಷ್ಯಾ: 598 ರಿಂಗಿಟ್ (13,913 ರುಪಾಯಿ)
- ದುಬೈ: 557.25 ಡಿರಾಮ್ (13,802 ರುಪಾಯಿ)
- ಅಮೆರಿಕ: 156 ಡಾಲರ್ (14,191 ರುಪಾಯಿ)
- ಸಿಂಗಾಪುರ: 198.20 ಸಿಂಗಾಪುರ್ ಡಾಲರ್ (14,206 ರುಪಾಯಿ)
- ಕತಾರ್: 553.50 ಕತಾರಿ ರಿಯಾಲ್ (14,025 ರೂ)
- ಸೌದಿ ಅರೇಬಿಯಾ: 565 ಸೌದಿ ರಿಯಾಲ್ (13,703 ರುಪಾಯಿ)
- ಓಮನ್: 59.35 ಒಮಾನಿ ರಿಯಾಲ್ (14,025 ರುಪಾಯಿ)
- ಕುವೇತ್: 45.42 ಕುವೇತಿ ದಿನಾರ್ (13,526 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 270 ರೂ
- ಚೆನ್ನೈ: 270 ರೂ
- ಮುಂಬೈ: 270 ರೂ
- ದೆಹಲಿ: 270 ರೂ
- ಕೋಲ್ಕತಾ: 270 ರೂ
- ಕೇರಳ: 270 ರೂ
- ಅಹ್ಮದಾಬಾದ್: 270 ರೂ
- ಜೈಪುರ್: 270 ರೂ
- ಲಕ್ನೋ: 270 ರೂ
- ಭುವನೇಶ್ವರ್: 270 ರೂ
- ಪುಣೆ: 270
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ