Headlines

GT vs CSK: ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು – Kannada News | Shubman Gill’s IPL 2026 Blaze: Smashes 23 Ball Fifty vs CSK, Sets Multiple Records

2026 ರ ಐಪಿಎಲ್‌ನಲ್ಲಿ ಅದ್ಭುತ ಫಾರ್ಮ್​ನಲ್ಲಿರುವ ಶುಭ್​ಮನ್ ಗಿಲ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಹಲವಾರು ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಗಿಲ್ ಈ ಐಪಿಎಲ್‌ನಲ್ಲಿ 600 ರನ್​ಗಳ ಗಡಿ ದಾಟಿದ್ದಾರೆ. ಈ ಮೂಲಕ ಈ ಆವೃತ್ತಿಯಲ್ಲಿ 600 ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಇದು ಆರನೇ ಅರ್ಧಶತಕವಾಗಿದೆ. ಗಿಲ್, ಲಕ್ನೋ, ಕೆಕೆಆರ್, ರಾಜಸ್ಥಾನ್ ರಾಯಲ್ಸ್, ಕೆಕೆಆರ್, ದೆಹಲಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐವತ್ತಕ್ಕೂ ಹೆಚ್ಚು ರನ್​ಗಳ ಇನ್ನಿಂಗ್ಸ್‌ ಆಡಿದ್ದಾರೆ.

ಐಪಿಎಲ್‌ನಲ್ಲಿ ಮೂರನೇ ಬಾರಿಗೆ 600 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಗಿಲ್, ವಾರ್ನರ್ ಮತ್ತು ಗೇಲ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದರ ಜೊತೆಗೆ ಗಿಲ್ ಟಿ20 ಕ್ರಿಕೆಟ್‌ನಲ್ಲಿ 6,000 ರನ್‌ಗಳನ್ನು ಪೂರೈಸಿದ್ದಾರೆ. ಗಿಲ್ ಕೇವಲ 185 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು, 184 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದ ವಿರಾಟ್ ಕೊಹ್ಲಿಯ ನಂತರದ ಸ್ಥಾನದಲ್ಲಿದ್ದಾರೆ. ಕನ್ನಡಿಗ ರಾಹುಲ್ ಕೇವಲ 166 ರನ್ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಶುಭಮನ್ ಗಿಲ್ ಚೆನ್ನೈ ವಿರುದ್ಧ ಸುದರ್ಶನ್ ಅವರೊಂದಿಗೆ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ಇಬ್ಬರು ಆಟಗಾರರು ಶತಕದ ಪಾಲುದಾರಿಕೆಯನ್ನು ಹಂಚಿಕೊಂಡಿದ್ದು ಇದು 10 ನೇ ಬಾರಿ. ಈ ಮೂಲಕ ಗಿಲ್-ಸುದರ್ಶನ್ ಜೋಡಿ ಡಿವಿಲಿಯರ್ಸ್ ಮತ್ತು ವಿರಾಟ್ ಅವರ ದಾಖಲೆಯನ್ನು ಸರಿಗಟ್ಟಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *