ಪ್ರತಿ ಐಪಿಎಲ್ನಂತೆ 2026 ರ ಐಪಿಎಲ್ (IPL 2026) ಕೂಡ ವಿವಾದಗಳಿಂದ ಹೊರತಾಗಿಲ್ಲ. ಆದರೆ ಈ ಆವೃತ್ತಿಯಲ್ಲಿ ಅಂಪೈರ್ಗಳು ನೀಡಿರುವ ತೀರ್ಪುಗಳೇ ಸಾಕಷ್ಟು ವಿವಾದ ಹುಟ್ಟಿಸಿವೆ. ಇದೀಗ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (GT vs RCB) ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 42ನೇ ಪಂದ್ಯದಲ್ಲೂ ಕೂಡ ಮತ್ತೊಂದು ವಿವಾದ ಭುಗಿಲೆದ್ದಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ (Rajat Patidar) ಅವರ ವಿಕೆಟ್ ದೊಡ್ಡ ವಿವಾದಕ್ಕೆ ಕಾರಣವಾಗಿಸಡ. ಈ ವಿವಾದ ಎಷ್ಟು ತೀವ್ರವಾಗಿತ್ತು ಎಂದರೆ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ಮುಖ್ಯ ತರಬೇತುದಾರ ಆಂಡಿ ಫ್ಲವರ್ ಅಂಪೈರ್ ಜೊತೆ ಬಹಿರಂಗವಾಗಿಯೇ ಮಾತಿನ ಚಕಮಕಿ ನಡೆಸಿದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆರ್‌ಸಿಬಿ ಅಭಿಮಾನಿಗಳು ಅಂಪೈರ್ಗೆ ಹಿಡಿಶಾಪ ಹಾಕುತ್ತಿದ್ದಾರೆ.
ವಿವಾದ ಹುಟ್ಟಿಸಿದ ಹೋಲ್ಡರ್ ಹಿಡಿದ ಕ್ಯಾಚ್
ನಾಯಕ ರಜತ್ ಪಾಟಿದಾರ್, ಎಂಟನೇ ಓವರ್‌ನಲ್ಲಿ ಅರ್ಷದ್ ಖಾನ್ ಎಸೆತದಲ್ಲಿ ಅದ್ಭುತ ಸಿಕ್ಸರ್ ಬಾರಿಸಿದರು. ಅದೇ ಓವರ್ನ ನಾಲ್ಕನೇ ಎಸೆತದಲ್ಲಿ ರಜತ್ ಮತ್ತೊಂದು ಸಿಕ್ಸರ್ ಬಾರಿಸಲು ಪ್ರಯತ್ನಿಸಿದರು. ಚೆಂಡು ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಕಡೆ ಮೇಲಕ್ಕೆ ಹೋಯಿತು. ಬೌಂಡರಿ ಲೈನ್ ಬಳಿ ಫಿಲ್ಡಿಂಗ್ ಮಾಡುತ್ತಿದ್ದ ಜೇಸನ್ ಹೋಲ್ಡರ್ ಓಡಿಬಂದು ಅದ್ಭುತ ಕ್ಯಾಚ್ ಪಡೆದರು. ಆದಾಗ್ಯೂ, ಕ್ಯಾಚ್ ತೆಗೆದುಕೊಂಡ ನಂತರ ಅವರು ಚೆಂಡನ್ನು ಹಿಡಿದಿದ್ದ ಎಡಗೈ ನೆಲಕ್ಕೆ ತಾಗಿತು. ವಿಡಿಯೋದಲ್ಲಿ ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸಿತು. ಹೀಗಾಗಿ ಪಾಟಿದಾರ್ ಔಟಾಗಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದಾಗ್ಯೂ, ಮೂರನೇ ಅಂಪೈರ್ ರಜತ್ ಅವರನ್ನು ಔಟ್ ಎಂದು ತೀರ್ಪು ನೀಡಿದರು. ನಂತರ ವಿರಾಟ್ ಕೊಹ್ಲಿ ಮತ್ತು ಆಂಡಿ ಫ್ಲವರ್ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ಆರಂಭಿಸಿದರು. ಇದರಿಂದ ಆಟವನ್ನು 2-3 ನಿಮಿಷಗಳ ಕಾಲ ನಿಲ್ಲಿಸಲಾಯಿತು.
ರೊಚ್ಚಿಗೆದ್ದ Romario Shepherd!❤️🔥
ವೀಕ್ಷಿಸಿ | #TATAIPL2026 👉 #GTvsRCB | LIVE NOW | ನಿಮ್ಮ Star Sports ಕನ್ನಡ & JioHotstar ನಲ್ಲಿ. #TATAIPL pic.twitter.com/RyBhRrI7PL
— Star Sports Kannada (@StarSportsKan) April 30, 2026
ಪಾಟೀದಾರ್ ಅವರನ್ನು ಔಟ್ ನೀಡಿದ್ದು ಏಕೆ?
ರಜತ್ ಪಾಟಿದಾರ್ ಅವರನ್ನು ಔಟ್ ನೀಡಲು ನೀಡಲಾದ ಕಾರಣವೆಂದರೆ, ಹೋಲ್ಡರ್ ಕ್ಯಾಚ್ ಹಿಡಿಯುವಾಗ ಸಂಪೂರ್ಣ ನಿಯಂತ್ರಣದಲ್ಲಿದ್ದರು. ಅವರ ಕೈ ನೆಲಕ್ಕೆ ತಾಗಿತ್ತಾದರೂ ಅವರು ಕೈಬೆರಳುಗಳು ಚೆಂಡಿನ ಅಡಿಯಲಿದ್ದವು ಎಂಬುದು ಅಂಪೈರ್ ಅವರ ವಾದವಾಗಿದೆ. ಆದಾಗ್ಯೂ, ಅಂಪೈರ್ ಅವರ ಈ ನಿರ್ಧಾರವು ವಿವಾದಕ್ಕೆ ಕಾರಣವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 9:21 pm, Thu, 30 April 26