Headlines

Homemade Butter: ಮೊಸರಿನಿಂದ ಫ್ರೆಶ್ ಬೆಣ್ಣೆ ತಯಾರಿಸಬಹುದು; ಅದಕ್ಕಾಗಿ ಈ ಸರಳ ಹಂತಗಳನ್ನು ಪಾಲಿಸಿ – Kannada News | Easy way to make fresh butter from curd

ಬೆಣ್ಣೆ ತಯಾರಿಸುವ ವಿಧಾನImage Credit source: Getty Images

ಅಡುಗೆಯ ರುಚಿ ಹೆಚ್ಚಿಸುವಲ್ಲಿ ಬೆಣ್ಣೆ (butter) ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಹೆಚ್ಚಿನವರು ತಾವು ತಯಾರಿಸುವ ಬಹುತೇಕ ಅಡುಗೆಗಳಿಗೆ ಬೆಣ್ಣೆ ಸೇರಿಸುತ್ತಾರೆ. ಈ ಬೆಣ್ಣೆಯನ್ನು ಸಾಮಾನ್ಯವಾಗಿ ಎಲ್ಲರೂ ಮಾರುಕಟ್ಟೆಗಳಿಂದ ಖರೀದಿ ಮಾಡುತ್ತಾರೆ. ಆದರೆ ಮಾರುಕಟ್ಟೆಗಳಲ್ಲಿ ಲಭ್ಯವಿರುವ ತುಪ್ಪದಂತೆ, ಬೆಣ್ಣೆಯು ಸಹ ಶುದ್ಧವಾಗಿರುವುದಿಲ್ಲ. ಈ ಕಲಬೆರಕೆ ಬೆಣ್ಣೆ ಆರೋಗ್ಯದ ಮೇಲೂ ಋಣಾತ್ಮಕ ಪರಿಣಾಮವನ್ನು ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಾರ್ಕೆಟ್‌ನಲ್ಲಿ ಸಿಗುವ ವಿವಿಧ ಬ್ರ್ಯಾಂಡ್‌ಗಳ ಬಟರ್‌ ಖರೀದಿಸುವ ಬದಲು ಮನೆಯಲ್ಲಿಯೇ ತಾಜಾ ಬೆಣ್ಣೆಯನ್ನು ತಯಾರಿಸಬಹುದು. ಹೌದು ಮೊಸರಿನಿಂದ ಬೆಣ್ಣೆ ತಯಾರಿಸಬಹುದು. ಮೊಸರಿನಿಂದ ಬೆಣ್ಣೆಯನ್ನು ತಯಾರಿಸುವ ಸಂಪೂರ್ಣ ಪ್ರಕ್ರಿಯೆಯ ಮಾಹಿತಿ ಇಲ್ಲಿದೆ ಇಲ್ಲಿದೆ.

ಮೊಸರಿನಿಂದ ಬೆಣ್ಣೆ ತಯಾರಿಸುವುದು ಹೇಗೆ?

ಜನರು ತಾಜಾ ಬೆಣ್ಣೆಯನ್ನು ತಯಾರಿಸಲು ಯಾವುದೇ ದುಬಾರಿ ಉಪಕರಣಗಳು ಅಥವಾ ವಿಶೇಷ ಪದಾರ್ಥಗಳು ಅಗತ್ಯವಿಲ್ಲ. ದಪ್ಪ ಕೆನೆಭರಿತ ಮೊಸರು ಮತ್ತು ಸರಿಯಾದ ವಿಧಾನವನ್ನು ಪಾಲಿಸುವ ಮೂಲಕ ಬೆಣ್ಣೆಯನ್ನು ತಯಾರಿಸಬಹುದು.

ಮೊಸರಿನಿಂದ ಬೆಣ್ಣೆ ತಯಾರಿಸಲು ಏನು ಬೇಕು?

1 ಕೆ.ಜಿ ದಪ್ಪ ಕೆನೆಭರಿತ ಮೊಸರು, ಸ್ವಲ್ಪ ಕೋಲ್ಡ್‌ ನೀರು, ಒಂದು ಪಾತ್ರೆ,ಕಡೆಗೋಲು ಅಥವಾ ಹ್ಯಾಂಡ್‌ ಬ್ಲೆಂಡರ್, ರುಚಿಗೆ ತಕ್ಕಷ್ಟು ಉಪ್ಪು (ನೀವು ಉಪ್ಪುಸಹಿತ ಬೆಣ್ಣೆಯನ್ನು ಮಾಡಲು ಬಯಸಿದರೆ ಮಾತ್ರ)

ಬೆಣ್ಣೆ ತಯಾರಿಸುವ ಪ್ರಕ್ರಿಯೆ:

ಮೊಸರನ್ನು ಚೆನ್ನಾಗಿ ಬೆರೆಸಿ: ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ 1 ಕೆಜಿ ಮೊಸರನ್ನು ಹಾಕಿ ಅದನ್ನು ಕಡೆಗೋಲಿನಿಂದ ಕಡೆಯಿರಿ, ಇಲ್ಲವೆ ಹ್ಯಾಂಡ್‌ ಬ್ಲೆಂಡರ್‌ ಸಹಾಯದಿಂದ ಚೆನ್ನಾಗಿ ಬೆರೆಸಿ. ಹೀಗೆ ನಿರಂತರವಾಗಿ ಬೆರೆಸಿದಾಗ ಮೊಸರಿನಲ್ಲಿರುವ ಕೊಬ್ಬು ಬೇರ್ಪಡಲು ಪ್ರಾರಂಭಿಸುತ್ತದೆ. ಸ್ವಲ್ಪ ಸಮಯದ ನಂತರ, ಬೆಣ್ಣೆಯ ತುಣುಕುಗಳು ಮೇಲ್ಭಾಗದಲ್ಲಿ ತೇಲಲು ಪ್ರಾರಂಭಿಸುತ್ತದೆ. ಆ ಸಂದರ್ಭದಲ್ಲಿ ಸ್ಲಲ್ಪ ಕೋಲ್ಡ್‌ ನೀರನ್ನು ಸೇರಿಸಿ, ಮತ್ತೆ ಬೆರೆಸಿ. ಕೋಲ್ಡ್‌ ನೀರು ಸೇರಿಸುವುದರಿಂದ ಸಣ್ಣ ಬೆಣ್ಣೆಯ ತುಣುಕುಗಳು  ಒಟ್ಟಿಗೆ ಬಂದು ದೊಡ್ಡ ಉಂಡೆಯಾಗಿ ರೂಪುಗೊಳ್ಳುತ್ತದೆ.

ಬೆಣ್ಣೆ ಮತ್ತು ಮಜ್ಜಿಗೆ ಬೇರ್ಪಡುತ್ತವೆ: ಕೋಲ್ಡ್‌ ನೀರು ಸೇರಿಸಿದ ಬಳಿಕ ಬೆಣ್ಣೆಯ ಸಣ್ಣ ಸಣ್ಣ ಕಣಗಳು ಉಂಡೆಯಾಗಿ ರೂಪುಗೊಂಡು ಮೇಲ್ಭಾಗದಲ್ಲಿ ನೆಲೆಗೊಳ್ಳುತ್ತದೆ ಮತ್ತು ಕೆಳಭಾಗದಲ್ಲಿ ತೆಳುವಾದ ದ್ರವ ಉಳಿಯುತ್ತದೆ. ಈ ದ್ರವವು ಮಜ್ಜಿಗೆಯಾಗಿದ್ದು, ಇದನ್ನು ಎಸೆಯುವ ಮಸಾಲೆಯನ್ನು ಸೇರಿಸಿ ಕುಡಿಯಬಹುದು. ಬೆಣ್ಣೆ ಮೊಸರಿನಿಂದ ಸಂಪೂರ್ಣವಾಗಿ ಬೇರ್ಪಟ್ಟ ನಂತರ ಬೆಣ್ಣೆಯ ಉಂಡೆಯನ್ನು ನಿಧಾನಕ್ಕೆ ತೆಗೆದು, ಅದನ್ನು ತಣ್ಣೀರಿನಲ್ಲಿ ಎರಡರಿಂದ ಮೂರು ಬಾರಿ ನಿಧಾನವಾಗಿ ತೊಳೆಯಿರಿ. ಇದು ಬೆಣ್ಣೆಯಲ್ಲಿ ಉಳಿದ ಮಜ್ಜಿಗೆಯನ್ನು ತೆಗೆದುಹಾಕಲು  ಸಹಾಯ ಮಾಡುತ್ತದೆ. ಕೊನೆಯಲ್ಲಿ ಕೈಗಳಿಂದ ಹಿಂಡಿ ಬೆಣ್ಣೆಯಲ್ಲಿರುವ ಹೆಚ್ಚುವರಿ ನೀರನ್ನು ತೆಗೆದುಹಾಕಿ, ನಂತರ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಡಿ. ನೀವು ಉಪ್ಪುಸಹಿತ ಬೆಣ್ಣೆಯನ್ನು ಇಷ್ಟಪಟ್ಟರೆ, ನೀವು ಸ್ವಲ್ಪ ಉಪ್ಪನ್ನು ಸೇರಿಸಬಹುದು.

ಇದನ್ನೂ ಓದಿ: ಸ್ಪೂನ್‌ ಬಿಟ್ಟು ಕೈಯಲ್ಲಿ ಊಟ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ನೋಡಿ

ಬೆಣ್ಣೆಯನ್ನು ದೀರ್ಘಕಾಲ ತಾಜಾವಾಗಿಡುವುದು ಹೇಗೆ?

ಮನೆಯಲ್ಲಿ ತಯಾರಿಸಿದ ಬೆಣ್ಣೆಯನ್ನು ಯಾವಾಗಲೂ ಸ್ವಚ್ಛ, ಒಣ, ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಡಿ. ಬೆಣ್ಣೆಯ ಡಬ್ಬವನ್ನು ಫ್ರಿಡ್ಜ್‌ನಲ್ಲಿ ಇಡುವುದು ಉತ್ತಮ. ಮುಖ್ಯವಾದ ವಿಷಯವೇನೆಂದರೆ ಡಬ್ಬದಲ್ಲಿ ಸ್ಟೋರ್‌ ಮಾಡಿಟ್ಟ ಬೆಣ್ಣೆಯನ್ನು ತೆಗೆಯಲು ಯಾವಾಗಲೂ ಒಣ, ಸ್ವಚ್ಛವಾದ ಚಮಚವನ್ನು ಬಳಸಿ. ಇದರಿಂದ ಬೆಣ್ಣೆ ಬಹು ದಿನಗಳವರೆಗೆ ತಾಜಾವಾಗಿರುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *