
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 13, ಬುಧವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಪರಾಭವ ನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣ ಪಕ್ಷ, ಏಕಾದಶಿ, ವಿಷ್ಕಂಭ ಯೋಗ, ಬಾಲವ ಕರಣ ಮತ್ತು ಉತ್ತರಾಭಾದ್ರ ನಕ್ಷತ್ರದ ಈ ಶುಭ ದಿನದಂದು ಗ್ರಹಗಳ ಸ್ಥಾನದ ಆಧಾರದ ಮೇಲೆ ಭವಿಷ್ಯವನ್ನು ನೀಡಲಾಗಿದೆ. ಇಂದು ರವಿ ಮೇಷ ರಾಶಿಯಲ್ಲಿ ಮತ್ತು ಚಂದ್ರ ಮೀನ ರಾಶಿಯ ಉತ್ತರಾಭಾದ್ರ ನಕ್ಷತ್ರದಲ್ಲಿ ಸಂಚರಿಸುತ್ತಾನೆ. ರಾಹುಕಾಲ ಮಧ್ಯಾಹ್ನ 12:15 ರಿಂದ 1:50 ರವರೆಗೆ ಇರುತ್ತದೆ. ಆದರೆ ಶುಭಕಾರ್ಯಗಳಿಗೆ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲ ಬೆಳಗ್ಗೆ 10:40 ರಿಂದ ಮಧ್ಯಾಹ್ನ 12:15 ರವರೆಗೆ ಲಭ್ಯವಿದೆ ಎಂದು ಗುರೂಜಿ ತಿಳಿಸಿದ್ದಾರೆ.