ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 12, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರದ ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿ ಇದಾಗಿದ್ದು, ಪುಷ್ಯ ನಕ್ಷತ್ರದಲ್ಲಿ ಚಂದ್ರ ಸಂಚರಿಸುತ್ತಿದ್ದಾನೆ. ಇದು ಶ್ರಾವಣ ಮಾಸಕ್ಕೆ ಕಾಲಿಡುತ್ತಿರುವ ದಿನವೂ ಆಗಿದೆ. ಇಂದಿನ ದಿನವು ಪವಿತ್ರ ಕಾರ್ಯಗಳಿಗೆ, ಜಪ, ತಪ ಮತ್ತು ದಾನಗಳಿಗೆ ಪ್ರಾಶಸ್ತ್ಯವಾಗಿದೆ. ಸೂರ್ಯ ಗ್ರಹಣವಿದ್ದರೂ ಭಾರತದಲ್ಲಿ ಗೋಚಾರವಿಲ್ಲದ ಕಾರಣ ಆಚರಣೆಯ ಅವಶ್ಯಕತೆಯಿಲ್ಲ. ಭೀಮನ ಅಮಾವಾಸ್ಯೆಯಾದ ಇಂದು ಪತಿದೇವರನ್ನು ಪೂಜಿಸುವ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸಲಾಗುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.