ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಇನ್ನೇರಡು ದಿನಗಳಲ್ಲಿ ಆರಂಭವಾಗಲಿದೆ. ಸರಣಿಯ ಮೊದಲ ಏಕದಿನ ಪಂದ್ಯ ಜೂನ್ 13 ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಧ್ಯಾಹ್ನ 1:30 ಕ್ಕೆ ಪ್ರಾರಂಭವಾಗುವ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಪ್ರಮುಖ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ (PC- PTI).
ವಾಸ್ತವವಾಗಿ ಗಾಯದಿಂದ ಬಳಲುತ್ತಿದ್ದ ರೋಹಿತ್ ಶರ್ಮಾ ಈ ಏಕದಿನ ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿತ್ತು. ಆದರೆ ಕಳೆದೆರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳನ್ನು ಗಮನಿಸಿದರೆ ರೋಹಿತ್ ಶರ್ಮಾ ಏಕದಿನ ಸರಣಿಗಾಗಿ ತಂಡವನ್ನು ಕೂಡಿಕೊಂಡಿರುವುದನ್ನು ನೋಡಬಹುದು (PC- PTI).
ಗಾಯದಿಂದ ಚೇತರಿಸಿಕೊಂಡು ಫಿಟ್ನೆಸ್ ಪರೀಕ್ಷೆಯಲ್ಲೂ ಪಾಸ್ ಆಗಿರುವ ರೋಹಿತ್ ಶರ್ಮಾ ಮೊದಲ ಏಕದಿನ ಪಂದ್ಯದಲ್ಲಿ ಆಡಿದರೆ ಭಾರತದ ಪರ ಏಕದಿನ ಪಂದ್ಯವನ್ನಾಡಿದ ಅತ್ಯಂತ ಹಿರಿಯ ಆಟಗಾರನೆಂಬ ದಾಖಲೆ ಬರೆಯಲಿದ್ದಾರೆ. ರೋಹಿತ್ ಶರ್ಮಾಗೆ ಪ್ರಸ್ತುತ ವಯಸ್ಸು 39 ವರ್ಷ 44 ದಿನಗಳಾಗಿದ್ದು, ಈ ವಯಸ್ಸಿನಲ್ಲಿ ಏಕದಿನ ಪಂದ್ಯ ಆಡಿದ ಅತ್ಯಂತ ಹಿರಿಯ ಭಾರತೀಯ ಆಟಗಾರನೆಂಬ ಹೆಗ್ಗಳಿಕೆ ಅವರದಾಗಲಿದೆ (PC- PTI).
ರೋಹಿತ್ ಶರ್ಮಾ ಅವರಿಗೂ ಮೊದಲು ಈ ದಾಖಲೆ ಮೊಹಿಂದರ್ ಅಮರನಾಥ್ ಅವರ ಹೆಸರಿನಲ್ಲಿತ್ತು. ಮೊಹಿಂದರ್ ಅಮರನಾಥ್ 39 ವರ್ಷ 36 ದಿನಗಳ ವಯಸ್ಸಿನಲ್ಲಿ ಏಕದಿನ ಪಂದ್ಯವನ್ನಾಡುವ ಮೂಲಕ ಭಾರತ ಪರ ಏಕದಿನ ಪಂದ್ಯವನ್ನಾಡಿದ ಅತ್ಯಂತ ಹಿರಿಯ ಆಟಗಾರನೆಂಬ ದಾಖಲೆಯನ್ನು ಹೊಂದಿದ್ದರು (PC- PTI).
ಇದೀಗ ಜೂನ್ 13 ರಂದು ರೋಹಿತ್ ಶರ್ಮಾ ಅಫ್ಘಾನಿಸ್ತಾನದ ವಿರುದ್ಧ ಅಖಾಡಕ್ಕಿಳಿಯುವ ಮೂಲಕ ಮೊಹಿಂದರ್ ಅಮರನಾಥ್ ಅವರ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ (PC- PTI).




