ಐಪಿಎಲ್‌ನಲ್ಲಿ (IPL) ಅಬ್ಬರಿ ಬೊಬ್ಬಿರಿದಿದ್ದ ಟೀಂ ಇಂಡಿಯಾ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಪೆವಿಲಿಯನ್ ಪರೇಡ್ ನಡೆಸುತ್ತಿದ್ದಾರೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಪ್ರತಿ ಎಸೆತವನ್ನು ಸಿಕ್ಸರ್ಗಟ್ಟಲು ಯತ್ನಿಸುತ್ತಿದ್ದ ಭಾರತದ ಬ್ಯಾಟ್ಸ್ಮನ್ಗಳು ವಿದೇಶಿ ಪಿಚ್‌ಗಳಲ್ಲಿ ರನ್ ಬರ ಎದುರಿಸುತ್ತಿದ್ದಾರೆ. ಮೊದಲಿಗೆ ಐರ್ಲೆಂಡ್ ವಿರುದ್ಧ ಟಿ20 ಸರಣಿ ಸೋತಿದ್ದ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ (India vs England) ವಿರುದ್ಧವೂ ಸರಣಿ ಸೋಲಿನ ಆತಂಕದಲ್ಲಿದೆ. ಇದಕ್ಕೆ ಕಾರಣ ತಂಡದಲ್ಲಿನ ಸಾಂಘಿಕ ಹೋರಾಟದ ಕೊರತೆ. ಬ್ಯಾಟಿಂಗ್ ವಿಭಾಗದಲ್ಲಿ ಯಾರೂ ಪರಿಸ್ಥಿತಿಗೆ ಅನುಗುಣವಾಗಿ ಆಡುತ್ತಿಲ್ಲ. ಹಾಗೆಯೇ ಅನಾನುಭವಿ ಬೌಲಿಂಗ್ ವಿಭಾಗಕ್ಕೂ ರನ್ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದು ತಂಡದ ಸೋಲಿಗೆ ಕಾರಣವಾಗುತ್ತಿದೆ. ಇದರ ನಡುವೆ ಇಂಗ್ಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ಜೋಫ್ರಾ ಆರ್ಚರ್, ಟೀಂ ಇಂಡಿಯಾ ಆಟಗಾರರು ಐಪಿಎಲ್ ಗುಂಗಿನಿಂದ ಹೊರಬಂದು ನಿಜವಾದ ಕ್ರಿಕೆಟ್ಗೆ ಒತ್ತು ನೀಡಲಿ ಎಂಬ ಎಚ್ಚರಿಕೆ ನೀಡಿದ್ದಾರೆ.
ಮೂರನೇ ಟಿ20 ಪಂದ್ಯ ಮುಗಿದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಆರ್ಚರ್ ಟೀಂ ಇಂಡಿಯಾ ಆಟಗಾರರು ಎಲ್ಲಿ ಎಡವುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಿದರು. ಅದರಲ್ಲೂ ಬಹುಮುಖ್ಯವಾಗಿ ಟೀಂ ಇಂಡಿಯಾ ಆಟಗಾರರು ಐಪಿಎಲ್ ಗುಂಗಿನಿಂದ ಹೊರಬಂದು, ಇಂಗ್ಲೆಂಡ್ ಪರಿಸ್ಥಿತಿಗೆ ತಕ್ಕನಾಗಿ ಆಡಬೇಕು ಎಂಬುದನ್ನು ಒತ್ತಿ ಹೇಳಿದರು.
JOFRA ARCHER TALKING ABOUT IPL FLAT PITCHES AFTER INDIA STRUGGLES 🤯
He explained that IPL pitches are flatter & the boundaries are smaller, making batting easier.
In England, he said, it’s “back to normal cricket,” where bowlers get more assistance & batters need to be more…
— Kashif (@KashifNdmCric) July 8, 2026
ಐಪಿಎಲ್‌ನಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್
ಭಾರತೀಯ ಬ್ಯಾಟ್ಸ್‌ಮನ್‌ಗಳ ವಿರುದ್ಧದ ನಿಮ್ಮ ತಂತ್ರವು ಐಪಿಎಲ್ ತಂತ್ರಕ್ಕಿಂತ ಹೇಗೆ ಭಿನ್ನವಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಆರ್ಚರ್, ‘ಇಂಗ್ಲಿಷ್ ಪರಿಸ್ಥಿತಿಗಳಲ್ಲಿ ಬೌಲರ್‌ಗಳು ಸಣ್ಣ ವಿವರಗಳ ಬಗ್ಗೆ ನಿರಂತರವಾಗಿ ಚಿಂತಿಸುವ ಬದಲು ಸಾಂಪ್ರದಾಯಿಕ ವಿಧಾನಗಳಿಗೆ ಒಗ್ಗಿಕ್ಕೊಳ್ಳುವುದು ಉತ್ತಮ. ಐಪಿಎಲ್‌ನಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ ಹಾಗೂ ಚಿಕ್ಕ ಬೌಂಡರಿಗಳನ್ನು ಇಡುವುದರಿಂದ ಅಲ್ಲಿ ನೀವು ತುಂಬಾ ಜಾಗರೂಕರಾಗಿ ಬೌಲ್ ಮಾಡಬೇಕು. ಆದರೆ ಇಲ್ಲಿ ಬೌಲರ್ಗಳಿಗೆ ಕೆಲವು ತಪ್ಪುಗಳನ್ನು ಮಾಡಲು ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ.
IND vs SL: ಟಿ20 ಸರಣಿ ರದ್ದು; ಭಾರತ- ಲಂಕಾ ನಡುವಿನ ಟೆಸ್ಟ್ ಸರಣಿ ವೇಳಾಪಟ್ಟಿ ಪ್ರಕಟ
ವಿಶೇಷ ಇನ್ನಿಂಗ್ಸ್ನ ಅಗತ್ಯವಿರುತ್ತದೆ
ಹೀಗಾಗಿ ಇಂಗ್ಲೆಂಡ್ನಲ್ಲಿ ಗೆಲುವಿಗೆ 200+ ಟಾರ್ಗೆಟ್ ಸಾಕು ಎಂದು ನಾನು ಭಾವಿಸುತ್ತೇನೆ. ಆದರೆ ಐಪಿಎಲ್‌ನಲ್ಲಿ 200 ಕ್ಕಿಂತ ಹೆಚ್ಚು ಸ್ಕೋರ್‌ಗಳನ್ನು ಸುಲಭವಾಗಿ ಬೆನ್ನಟ್ಟಲಾಗುತ್ತದೆ. ಹಾಗಂತ ಇಂಗ್ಲೆಂಡ್ ಪಿಚ್‌ಗಳಲ್ಲಿ 200 ರನ್ ಗಳಿಸಿದರೆ ಗೆಲುವು ಖಚಿತ ಎಂದು ಹೇಳಲಾಗದು. ಆದರೆ ಈ 200+ ರನ್ಗಳ ಗುರಿಯನ್ನು ಬೆನ್ನಟ್ಟಲು ಎದುರಾಳಿ ತಂಡದಿಂದ ವಿಶೇಷ ಇನ್ನಿಂಗ್ಸ್ನ ಅಗತ್ಯವಿರುತ್ತದೆ. ಇನ್ನು ಈ ಪಂದ್ಯದಲ್ಲಿ ನಮ್ಮ ತಂಡದ ಎಲ್ಲಾ ಬೌಲರ್‌ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ಹೀಗಾಗಿ ಅವರೆಲ್ಲರಿಗೂ ವಿಕೆಟ್ಗಳು ಸಿಕ್ಕವು. ಎಲ್ಲರೂ ತಂಡದ ಗೆಲುವಿಗೆ ಕೊಡುಗೆ ನೀಡಿದ್ದಕ್ಕೆ ನನಗೆ ಸಂತೋಷವಾಗಿದೆ’ ಎಂದು ಆರ್ಚರ್ ಹೇಳಿಕೊಂಡಿದ್ದಾರೆ.