ಕ್ರಿಕೆಟ್ ಅಂಗಳಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತೊಂದಿದೆ. ಈ ಮಾತು ಇಂಗ್ಲೆಂಡ್ ಪಾಲಿಗೆ ಅಕ್ಷರಶಃ ನಿಜವಾಗಿದೆ. ಏಕೆಂದರೆ ಟೀಮ್ ಇಂಡಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬಿಟ್ಟಂತಹ ಒಂದೇ ಒಂದು ಕ್ಯಾಚ್ನಿಂದಾಗಿ ಇದೀಗ ಆಂಗ್ಲರು ಟಿ20 ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ. ಇತ್ತ ಅಕ್ಷರ್ ಪಟೇಲ್ ಹಿಡಿದಂತಹ ಎರಡು ಅದ್ಭುತ ಕ್ಯಾಚ್ಗಳಿಂದಾಗಿ ಭಾರತ ತಂಡವು ಫೈನಲ್ಗೇರಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಆರಂಭಿಕ ಆಘಾತ ನೀಡುವಲ್ಲಿ ವಿಲ್ ಜ್ಯಾಕ್ಸ್ ಯಶಸ್ವಿಯಾದರು.
2ನೇ ಓವರ್ನ ಕೊನೆಯ ಎಸೆತದಲ್ಲಿ ಅಭಿಷೇಕ್ ಶರ್ಮಾ (6) ವಿಕೆಟ್ ಪಡೆಯುವ ಮೂಲಕ ಜ್ಯಾಕ್ಸ್ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಕೂಡ ಔಟಾಗಿ ಪೆವಿಲಿಯನ್ ಸೇರಬೇಕಿದ್ದರು. ಆದರೆ ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್ ನೀಡಿದ ಜೀವದಾನ ಇಡೀ ಪಂದ್ಯದ ಚಿತ್ರಣ ಬದಲಿಸಿತು.
ಜೋಫ್ರಾ ಆರ್ಚರ್ ಎಸೆದ ಈ ಪಂದ್ಯದ ಮೂರನೇ ಓವರ್ನ 2ನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ ಸುಲಭ ಕ್ಯಾಚ್ ನೀಡಿದ್ದರು. ಆದರೆ ಮಿಡ್ ಆನ್ನಲ್ಲಿದ್ದ ಹ್ಯಾರಿ ಬ್ರೂಕ್ ಚೆಂಡನ್ನು ಹಿಡಿಯುವಲ್ಲಿ ವಿಫಲರಾದರು.
Ohhhhh, Harry Brook! 😳
Sanju Samson makes the most of the lifeline and sends it into the stands! 🚀
ICC Men’s #T20WorldCup | Semi-final 2 | #INDvENG | LIVE NOW 👉 https://t.co/L2OuYBUDbL pic.twitter.com/zOWfIEAdUv
— Star Sports (@StarSportsIndia) March 5, 2026
ಈ ವೇಳೆ ಸಂಜು ಸ್ಯಾಮ್ಸನ್ ಕಲೆಹಾಕಿದ್ದ ಸ್ಕೋರ್ 7 ಎಸೆತಗಳಲ್ಲಿ 15 ರನ್ಗಳು ಮಾತ್ರ. 15 ರನ್ಗಳ ವೇಳೆಗೆ ಸಿಕ್ಕ ಜೀವದಾನವನ್ನು ಬಳಸಿಕೊಂಡ ಸ್ಯಾಮ್ಸನ್ ಅಬ್ಬರಿಸಲಾರಂಭಿಸಿದರು. ಪರಿಣಾಮ ಪವರ್ಪ್ಲೇ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಮೊತ್ತ 67 ಕ್ಕೆ ಬಂದು ನಿಂತಿತು.
ಇದಾದ ಬಳಿಕ ಕೂಡ ಸಿಡಿಲಬ್ಬರ ಮುಂದುವರೆಸಿದ ಸಂಜು ಸ್ಯಾಮ್ಸನ್ 35 ಎಸೆತಗಳಲ್ಲಿ 74 ರನ್ ಚಚ್ಚಿದರು. ಅಂದರೆ ಕ್ಯಾಚ್ ಡ್ರಾಪ್ ಆ ಬಳಿಕ ಸಂಜು ಸ್ಯಾಮ್ಸನ್ 200ರ ಸ್ಟ್ರೈಕ್ ರೇಟ್ನಲ್ಲಿ ರನ್ ಕಲೆಹಾಕಿದರು. ಈ ಮೂಲಕ 42 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 89 ರನ್ಗಳ ಕೊಡುಗೆ ನೀಡಿದರು.
ಇತ್ತ ಸಂಜು ಸ್ಯಾಮ್ಸನ್ 89 ರನ್ಗಳಿಸುತ್ತಿದ್ದಂತೆ 13 ಓವರ್ಗಳಲ್ಲಿ ಟೀಮ್ ಇಂಡಿಯಾ ಸ್ಕೋರ್ 160 ರನ್ಗೆ ಬಂದು ನಿಂತಿತು. ಇನ್ನುಳಿದ 7 ಓವರ್ಗಳಲ್ಲಿ ಅಬ್ಬರಿಸಿದ ಟೀಮ್ ಇಂಡಿಯಾ ಬ್ಯಾಟರ್ಗಳು ಅಂತಿಮವಾಗಿ 253 ರನ್ಗಳಿಸುವಲ್ಲಿ ಯಶಸ್ವಿಯಾದರು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು 20 ಓವರ್ಗಳಲ್ಲಿ 246 ರನ್ಗಳಿಸಿ 7 ರನ್ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.
ಅಂದರೆ ಸಂಜು ಸ್ಯಾಮ್ಸನ್ ಅವರ ಕ್ಯಾಚ್ ಅನ್ನು ಹ್ಯಾರಿ ಬ್ರೂಕ್ ಕೈ ಚೆಲ್ಲಿದ್ದು ಇಂಗ್ಲೆಂಡ್ ಪಾಲಿಗೆ ಅತ್ಯಂತ ದುಬಾರಿಯಾಯಿತು. ಅದು ಕೂಡ 74 ರನ್ಗಳ ದುಬಾರಿ. ಅಂದರೆ ಕ್ಯಾಚ್ ಕೈ ಬಿಟ್ಟ ಬಳಿಕ ಸ್ಯಾಮ್ಸನ್ ಬರೋಬ್ಬರಿ 74 ರನ್ಗಳನ್ನು ಕಲೆಹಾಕಿದ್ದರು. ಈ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು.
ಇದನ್ನೂ ಓದಿ: T20 World Cup 2028: ಮುಂದಿನ ಟಿ20 ವಿಶ್ವಕಪ್ಗೆ 12 ತಂಡಗಳು ಆಯ್ಕೆ
ಒಂದು ವೇಳೆ ಸಂಜು ಸ್ಯಾಮ್ಸನ್ ಅವರ ಕ್ಯಾಚ್ ಹಿಡಿದಿದ್ದರೆ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ್ದರು. ಆದರೆ ಬ್ರೂಕ್ ಮಾಡಿದ ತಪ್ಪಿನಿಂದಾಗಿ ಇಂಗ್ಲೆಂಡ್ 7 ರನ್ಗಳ ಸೋಲೊಪ್ಪಿಕೊಳ್ಳಬೇಕಾಯಿತು. ಈ ಸೋಲಿನೊಂದಿಗೆ ಆಂಗ್ಲರು ಗಂಟು ಮೂಟೆ ಕಟ್ಟಿದರೆ, ಟೀಮ್ ಇಂಡಿಯಾ ಫೈನಲ್ಗೆ ಎಂಟ್ರಿ ಕೊಟ್ಟಿದೆ.