IND vs ENG: ರಣರೋಚಕ ಪಂದ್ಯದಲ್ಲಿ ಇಂಗ್ಲೆಂಡ್‌ ಮಣಿಸಿ ಫೈನಲ್​ಗೇರಿದ ಟೀಂ ಇಂಡಿಯಾ – Kannada News | Team India’s Road to Final: Epic Win vs England in T20 WC 2026 Semifinal Mumbai

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2026 ರ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್‌ ಪಂದ್ಯವನ್ನು 7 ರನ್​ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್​ಗೇರಿದೆ. ರನ್​ಗಳ ಮಳೆಯೇ ಹರಿದ ಈ ಪಂದ್ಯ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಅದರ ಫಲವಾಗಿ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 253 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಕೂಡ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿತು. ಗುರಿ ದೊಡ್ಡದಿದ್ದರಿಂದ ಇಂಗ್ಲೆಂಡ್‌, ಭಾರತಕ್ಕೆ ಸುಲಭ ತುತ್ತಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಆಂಗ್ಲರ ಪರ ಕೆಚ್ಚೆದೆಯ ಬ್ಯಾಟಿಂಗ್‌ ಪ್ರದರ್ಶಿಸಿದ ಜೆಕಬ್ ಬೆಥೆಲ್ ಸ್ಫೋಟಕ ಶತಕ ಸಿಡಿಸಿ ಇಂಗ್ಲೆಂಡ್​ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಆದರೆ ಕೊನೆಯ 4 ಓವರ್​ಗಳಲ್ಲಿ ಪಂದ್ಯದ ದಿಕ್ಕು ಬದಲಿಸಿದ ಭಾರತದ ಬೌಲರ್​ಗಳು ತಂಡವನ್ನು ರಣರೋಚಕ ಗೆಲುವಿನತ್ತ ಕೊಂಡೊಯ್ದರು.

Published On – 10:51 pm, Thu, 5 March 26

Source link

Leave a Reply

Your email address will not be published. Required fields are marked *