ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಜುಲೈ 4 ರ ಶನಿವಾರ ನಡೆಯಲಿದೆ. ಚೆಸ್ಟರ್-ಲೆ-ಸ್ಟ್ರೀಟ್ನಲ್ಲಿ ನಡೆದ ಸರಣಿಯ ಮೊದಲ ಪಂದ್ಯ ಭಾರೀ ಮಳೆಯಿಂದಾಗಿ ಡ್ರಾದಲ್ಲಿ ಕೊನೆಗೊಂಡಿತ್ತು. ಇದೀಗ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಉಭಯ ತಂಡಗಳು ಸರಣಿಯಲ್ಲಿ ಮುನ್ನಡೆ ಸಾಧಿಸುವ ಗುರಿಯನ್ನು ಹೊಂದಿವೆ. ಆದರೆ ಈ ಸರಣಿಯಲ್ಲಿ ಪಂದ್ಯಗಳು ಆರಂಭವಾಗುವ ಸಮಯ ರಾತ್ರಿ 10 ಗಂಟೆಯಾದ್ದರಿಂದ ಅಭಿಮಾನಿಗಳು ಕೊಂಚ ನಿರಾಶೆಗೊಂಡಿದ್ದರು. ಏಕೆಂದರೆ ಭಾರತೀಯರು ನಿದ್ರೆಗೆ ಜಾರುವ ಸಮಯಕ್ಕೆ ಮೊದಲ ಟಿ20 ಪಂದ್ಯ ಆರಂಭವಾಗಿತ್ತು. ಇದರಿಂದಾಗಿ ಮೊದಲ ಪಂದ್ಯವನ್ನು ಹೆಚ್ಚಿನವರು ವೀಕ್ಷಿಸಿರಲಿಲ್ಲ. ಆದರೆ ಎರಡನೇ ಟಿ20 ಪಂದ್ಯಕ್ಕೆ ಆ ಸಮಸ್ಯೆ ಇರುವುದಿಲ್ಲ. ಏಕೆಂದರೆ 2ನೇ ಟಿ20 ಪಂದ್ಯ ಬಹುಬೇಗನೇ ಆರಂಭವಾಗಲಿದೆ.
ಸಂಜೆ 7 ಗಂಟೆಗೆ ಆರಂಭವಾಗಲಿದೆ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆಯಲಿದೆ. ಈ ನಿರ್ಣಾಯಕ ಪಂದ್ಯದ ಟಾಸ್ ಭಾರತೀಯ ಕಾಲಮಾನ ಸಂಜೆ 6:30 ಕ್ಕೆ ನಡೆಯಲಿದ್ದು, ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಆದ್ದರಿಂದ, ಈ ಹೈ-ವೋಲ್ಟೇಜ್ ಮುಖಾಮುಖಿಯನ್ನು ವೀಕ್ಷಿಸಲು ಭಾರತೀಯ ಅಭಿಮಾನಿಗಳು ನಿದ್ರೆಗೆಡುವ ಅವಶ್ಯಕತೆ ಇಲ್ಲ. ಪಂದ್ಯವು ಅಡೆತಡೆಯಿಲ್ಲದೆ ಮುಂದುವರಿದರೆ ರಾತ್ರಿ 11 ಗಂಟೆಯೊಳಗೆ ಫಲಿತಾಂಶ ಹೊರಬೀಳಲಿದೆ.
ಸರಣಿಯ ಮೊದಲ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ಭಾರತ 189 ರನ್ಗಳನ್ನು ಕಲೆಹಾಕಿತು. ಆದಾಗ್ಯೂ, ಇಂಗ್ಲೆಂಡ್ ಇನ್ನಿಂಗ್ಸ್ ಪ್ರಾರಂಭವಾಗುವ ಮೊದಲು ಭಾರೀ ಮಳೆ ಸುರಿಯಲಾರಂಭಿಸಿದರಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದೀಗ ಎರಡನೇ ಟಿ20 ಪಂದ್ಯ ಶನಿವಾರ ಸಂಜೆ 7 ಗಂಟೆಗೆ ಪ್ರಾರಂಭವಾಗುವುದರಿಂದ, ಕ್ರಿಕೆಟ್ ಅಭಿಮಾನಿಗಳು ಪೂರ್ಣ 20 ಓವರ್ಗಳ ಆಟವನ್ನು ನಿರೀಕ್ಷಿಸಬಹುದು.
IND vs SL: ಟಿ20 ಸರಣಿ ರದ್ದು; ಭಾರತ- ಲಂಕಾ ನಡುವಿನ ಟೆಸ್ಟ್ ಸರಣಿ ವೇಳಾಪಟ್ಟಿ ಪ್ರಕಟ
ಮ್ಯಾಂಚೆಸ್ಟರ್ನಲ್ಲಿ ಪ್ರದರ್ಶನ ಹೇಗಿದೆ?
ಎಂಟು ವರ್ಷಗಳ ನಂತರ ಟೀಂ ಇಂಡಿಯಾ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿದೆ. ಟೀಂ ಇಂಡಿಯಾ ಇಲ್ಲಿಯವರೆಗೆ ಅಲ್ಲಿ ಎರಡು ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯವನ್ನು ಗೆದ್ದು ಒಂದು ಪಂದ್ಯವನ್ನು ಸೋತಿದೆ. ಟೀಂ ಇಂಡಿಯಾ ಕೊನೆಯ ಬಾರಿಗೆ 2018 ರಲ್ಲಿ ಈ ಮೈದಾನದಲ್ಲಿ ಟಿ20 ಪಂದ್ಯವನ್ನು ಆಡಿದ್ದು, ಆ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 3:50 pm, Fri, 3 July 26