ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲಿಂಗ್ ಅದ್ಭುತವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಅಮೋಘ ಆರಂಭ ಪಡೆದುಕೊಂಡರೂ ಅದಾದ ಬಳಿಕ ಟೀಂ ಇಂಡಿಯಾ ಬೌಲರ್ಗಳು ನಿಯಮಿತ ಅಂತರದಲ್ಲಿ ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗವನ್ನು ಕಟ್ಟಿಹಾಕಿದರು(PC-BCCI X).
ಈ ಪಂದ್ಯದಲ್ಲಿ ಭಾರತದ ಪರ ಬೌಲಿಂಗ್ನಲ್ಲಿ ಮಿಂಚಿದ ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ ತಮ್ಮ 10 ಓವರ್ಗಳ ಖೋಟಾದಲ್ಲಿ ಪ್ರಮುಖ 4 ವಿಕೆಟ್ಗಳನ್ನು ಕಬಳಿಸಿದರು. ಅದರಲ್ಲೂ ಶತಕದ ಜೊತೆಯಾಟ ನಡೆಸಿದ್ದ ಲಿಯಾಮ್ ಡಾಸನ್ ಮತ್ತು ಜೋ ರೂಟ್ ಅವರ ಜೊತೆಯಾಟವನ್ನು ಅಂತ್ಯಗೊಳಿಸುವಲ್ಲಿ ಅಕ್ಷರ್ ಯಶಸ್ವಿಯಾದರು(PC-BCCI X).
ಮೊದಲ ಏಕದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ 9.5 ಓವರ್ಗಳನ್ನು ಬೌಲ್ ಮಾಡಿ 62 ರನ್ಗಳನ್ನು ಬಿಟ್ಟುಕೊಟ್ಟು ನಾಲ್ವರು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಿದರು. ಅದರಲ್ಲೂ ಪಂದ್ಯದ ಕೊನೆಯ ಓವರ್ಗಳಲ್ಲಿ ಮ್ಯಾಜಿಕ್ ಮಾಡಿದ ಅಕ್ಷರ್ ಪಟೇಲ್ ಕೊನೆಯ ನಾಲ್ವರು ಬ್ಯಾಟ್ಸ್ಮನ್ಗಳನ್ನು ಬಲಿ ಪಡೆದರು(PC-BCCI X).
ಅಕ್ಷರ್ ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಲಿಯಾಮ್ ಡಾಸನ್, ಜೋಫ್ರಾ ಆರ್ಚರ್, ಜೋಶ್ ಟಂಗ್ ಮತ್ತು ಆದಿಲ್ ರಶೀದ್ ಅವರನ್ನು ಔಟ್ ಮಾಡಿದರು. ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಪಟೇಲ್ ಕೇವಲ 12 ಎಸೆತಗಳಲ್ಲಿ ಎಲ್ಲಾ ನಾಲ್ಕು ವಿಕೆಟ್ಗಳನ್ನು ಕಬಳಿಸಿದರು. ಈ ಮೂಲಕ ಇಂಗ್ಲೆಂಡ್ನ ಇನ್ನಿಂಗ್ಸ್ ಅನ್ನು 258 ರನ್ಗಳಿಗೆ ಸೀಮಿತಗೊಳಿಸಿದರು(PC-BCCI X).
ಇದರೊಂದಿಗೆ, ಅಕ್ಷರ್ ಪಟೇಲ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 41 ಮತ್ತು 50 ನೇ ಓವರ್ಗಳ ನಡುವೆ ನಾಲ್ಕು ವಿಕೆಟ್ಗಳನ್ನು ಕಬಳಿಸಿದ ಎರಡನೇ ಭಾರತೀಯ ಸ್ಪಿನ್ನರ್ ಎನಿಸಿಕೊಂಡರು. ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ 13 ವರ್ಷಗಳ ಹಿಂದೆ 2013 ರಲ್ಲಿ ಈ ಸಾಧನೆ ಮಾಡಿದ್ದರು. ಜಡೇಜಾ 2013 ರಲ್ಲಿ ಪೋರ್ಟ್ ಆಫ್ ಸ್ಪೇನ್ನಲ್ಲಿ ಶ್ರೀಲಂಕಾ ವಿರುದ್ಧದ ಕೊನೆಯ ಓವರ್ಗಳಲ್ಲಿ ನಾಲ್ಕು ವಿಕೆಟ್ಗಳನ್ನು ಕಬಳಿಸಿದ್ದರು(PC-BCCI X).




