Headlines

IND vs NAM: ನಮೀಬಿಯಾ ವಿರುದ್ಧ 93 ರನ್​ಗಳಿಂದ ಗೆದ್ದ ಟೀಂ ಇಂಡಿಯಾ – Kannada News | T20 World Cup 2026: India Dominates Namibia by 93 Runs; Kishan and Pandya Shine

2026ರ ಟಿ20 ವಿಶ್ವಕಪ್​ನ 18ನೇ ಪಂದ್ಯದಲ್ಲಿ ಭಾರತ ಹಾಗೂ ನಮೀಬಿಯಾ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯಕ್ಕೂ ಮುನ್ನ ನಿರೀಕ್ಷಿಸಿದ ಫಲಿತಾಂಶವೇ ಪಂದ್ಯದ ಬಳಿಕವೂ ಹೊರಬಿದ್ದಿದೆ. ಈ ಪಂದ್ಯದಲ್ಲಿ ನಮೀಬಿಯಾ ತಂಡವನ್ನು 93 ರನ್​ಗಳ ಭಾರಿ ಅಂತರದಿಂದ ಮಣಿಸಿದ ಟೀಂ ಇಂಡಿಯಾ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 209 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನಮೀಬಿಯಾ ಕೇವಲ 116 ರನ್​ಗಳಿಗೆ ಆಲೌಟ್ ಆಯಿತು. ಭಾರತದ ಈ ಗೆಲುವಿನಲ್ಲಿ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರವಹಿಸಿದರು. ಇಶಾನ್ 24 ಎಸೆತಗಳಲ್ಲಿ 61 ರನ್ ಗಳಿಸಿದರೆ, ಪಾಂಡ್ಯ 28 ಎಸೆತಗಳಲ್ಲಿ 52 ರನ್ ಬಾರಿಸುವುದರ ಜೊತೆಗೆ ಎರಡು ವಿಕೆಟ್‌ಗಳನ್ನು ಸಹ ಪಡೆದರು.

ಫೆಬ್ರವರಿ 12 ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಸ್ಫೋಟಕ ಆರಂಭವನ್ನು ನೀಡಿ, ಪವರ್‌ಪ್ಲೇನಲ್ಲಿ ತಂಡವನ್ನು 86 ರನ್‌ಗಳಿಗೆ ಕೊಂಡೊಯ್ದರು. ಇಶಾನ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿ, 24 ಎಸೆತಗಳಲ್ಲಿ 61 ರನ್‌ಗಳಿಸಿ ಔಟಾದರು. ಅವರ ನಂತರ ಹಾರ್ದಿಕ್ ಪಾಂಡ್ಯ 28 ಎಸೆತಗಳಲ್ಲಿ 52 ರನ್‌ಗಳ ಬಿರುಸಿನ ಆಟವಾಡಿದರು. ಆದಾಗ್ಯೂ, ಕೊನೆಯ 2 ಓವರ್‌ಗಳಲ್ಲಿ ಟೀಂ ಇಂಡಿಯಾ ಕೇವಲ 10 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ನಮೀಬಿಯಾ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಗರಿಷ್ಠ 4 ವಿಕೆಟ್‌ಗಳನ್ನು ಪಡೆದರು.

ಈ ಗುರಿ ಬೆನ್ನಟ್ಟಿದ ನಮೀಬಿಯಾ ಪವರ್‌ಪ್ಲೇನಲ್ಲಿ 57 ರನ್‌ಗಳನ್ನು ಗಳಿಸುವ ಮೂಲಕ ಸ್ಫೋಟಕ ಆರಂಭವನ್ನು ಪಡೆದುಕೊಂಡಿತು. ಆರಂಭಿಕರಾದ ಜಾನ್ ಫ್ರೈಲಿಂಕ್ ಮತ್ತು ಲಾರೆನ್ ಸ್ಟೀನ್‌ಕ್ಯಾಂಪ್ ಉತ್ತಮ ಜೊತೆಯಾಟ ಕಟ್ಟಿದರು. ಆದಾಗ್ಯೂ, ಪವರ್‌ಪ್ಲೇ ಮುಗಿದ ನಂತರ, ನಮೀಬಿಯಾದ ಇನ್ನಿಂಗ್ಸ್ ಕುಸಿಯಿತು. ವರುಣ್ ಚಕ್ರವರ್ತಿ ಸತತ ಎರಡು ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದರು. ನಂತರ ಅಕ್ಷರ್ ಪಟೇಲ್ ಎರಡು ವಿಕೆಟ್‌ಗಳನ್ನು ಪಡೆದರು. ಹಾಗೆಯೇ ಹಾರ್ದಿಕ್ ಪಾಂಡ್ಯ 18 ನೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆದು ನಮೀಬಿಯಾದ ಸೋಲನ್ನು ಖಚಿತಪಡಿಸಿದರು.

Published On – 10:45 pm, Thu, 12 February 26

Source link

Leave a Reply

Your email address will not be published. Required fields are marked *