ಟಿ20 ವಿಶ್ವಕಪ್ 2026 ರ ಗುಂಪು ಹಂತದ ಪಂದ್ಯಗಳು ಮುಗಿದಿದ್ದು ಸೂಪರ್ 8 ಸುತ್ತು ಪ್ರಾರಂಭವಾಗಿದೆ. ಈ ಸುತ್ತಿನ ಮೂರನೇ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಪರಸ್ಪರ ಮುಖಾಮುಖಿಯಾಗಿವೆ. ಇದು ಸೂಪರ್ 8 ನಲ್ಲಿ ಉಭಯ ತಂಡಗಳ ಮೊದಲ ಪಂದ್ಯವಾಗಿದೆ. ಕುತೂಹಲಕಾರಿಯಾಗಿ, ಎರಡೂ ತಂಡಗಳು ಪಂದ್ಯಾವಳಿಯ ಗುಂಪು ಹಂತದಲ್ಲಿ ಅಜೇಯವಾಗಿ ಉಳಿದಿವೆ. ಆದ್ದರಿಂದ, ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಯಾರೇ ಸೋತರೂ ಅದು ಪಂದ್ಯಾವಳಿಯ ಮೊದಲ ಸೋಲಾಗಲಿದೆ.