ಭಾರತ ಮತ್ತು ಶ್ರೀಲಂಕಾ ನಡುವೆ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಅಂತ್ಯವಾಗಿದೆ. 4ನೇ ದಿನದ ಎರಡನೇ ಸೆಷನ್ನಲ್ಲಿ ಟೀಂ ಇಂಡಿಯಾವನ್ನು 193 ರನ್ಗಳಿಗೆ ಆಲೌಟ್ ಮಾಡಿದ ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿತು. 4ನೇ ದಿನದಾಟದಂತ್ಯಕ್ಕೆ ಶ್ರೀಲಂಕಾ ಪ್ರಮುಖ 4 ವಿಕೆಟ್ಗಳನ್ನು ಕಳೆದುಕೊಂಡು 84 ರನ್ ಕಲೆಹಾಕಿದೆ. ಹೀಗಾಗಿ ಕೊನೆಯ ದಿನ ಶ್ರೀಲಂಕಾ 288 ರನ್ಗಳ ಗುರಿ ಬೆನ್ನಟ್ಟಬೇಕಾಗಿದೆ. ಇತ್ತ ಟೀಂ ಇಂಡಿಯಾ ಪರ ಮಾನವ್ ಸುತಾರ್ 2 ವಿಕೆಟ್ಗಳನ್ನು ಪಡೆದರೆ, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದರು. ರವೀಂದ್ರ ಜಡೇಜಾಗೂ ವಿಕೆಟ್ ಸಿಕ್ಕಿತ್ತಾದರೂ, ಅದು ನೋ ಬಾಲ್ ಆಗಿದ್ದ ಕಾರಣ ಜಡೇಜಾ ವಿಕೆಟ್ ವಂಚಿತರಾದರು.