Headlines

IND vs ZIM T20 WC Live Score: ಭಾರತ- ಜಿಂಬಾಬ್ವೆ ನಡುವೆ ನಿರ್ಣಾಯಕ ಪಂದ್ಯ – Kannada News | India vs Zimbabwe T20 World Cup 2026 Live Cricket Score IND vs ZIM Today Match Match at Chennai live cricket score and updates in Kannada

LIVE NEWS & UPDATES

  • 26 Feb 2026 06:04 PM (IST)

    India vs Zimbabwe Live Score: ಮುಖಾಮುಖಿ ದಾಖಲೆ

    ಜಿಂಬಾಬ್ವೆ ತಂಡವು ಭಾರತದ ವಿರುದ್ಧ ಭಾರತದ ನೆಲದಲ್ಲಿ 24 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 19 ಏಕದಿನ ಪಂದ್ಯಗಳು ಮತ್ತು ಐದು ಟೆಸ್ಟ್ ಪಂದ್ಯಗಳು ಸೇರಿವೆ. ಜಿಂಬಾಬ್ವೆ ಕೊನೆಯ ಬಾರಿಗೆ ಭಾರತದಲ್ಲಿ ಭಾರತವನ್ನು ಎದುರಿಸಿದ್ದು ಮಾರ್ಚ್ 2002 ರಲ್ಲಿ, ಏಕದಿನ ಪಂದ್ಯದಲ್ಲಿ.

  • 26 Feb 2026 06:02 PM (IST)

    India vs Zimbabwe Live Score: ಎರಡನೇ ಮುಖಾಮುಖಿ

    ಇದು ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಜಿಂಬಾಬ್ವೆಯ ಎರಡನೇ ಮುಖಾಮುಖಿಯಾಗಲಿದೆ. 2022 ರ ಟಿ20 ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಮೆಲ್ಬೋರ್ನ್‌ನಲ್ಲಿ ನಡೆದ ಆ ಪಂದ್ಯವನ್ನು ಭಾರತ 71 ರನ್‌ಗಳಿಂದ ಗೆದ್ದುಕೊಂಡಿತು, ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ 61 ರನ್ ಬಾರಿಸಿದ್ದರು.

ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಜಿಂಬಾಬ್ವೆ ಪರಸ್ಪರ ಮುಖಾಮುಖಿಯಾಗುತ್ತಿವೆ. ಇದು ಭಾರತದಲ್ಲಿ ಟೀಂ ಇಂಡಿಯಾ ವಿರುದ್ಧ ಜಿಂಬಾಬ್ವೆಯ ಮೊದಲ ಟಿ20 ಪಂದ್ಯವಾಗಿದೆ. ಈ ಪಂದ್ಯವು ಉಭಯ ತಂಡಗಳಿಗೂ ಹೆಚ್ಚಿನ ಮಹತ್ವದ್ದಾಗಿದೆ. ಏಕೆಂದರೆ ಸೂಪರ್ 8 ಸುತ್ತಿನ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಸೋತಿರುವುದರಿಂದ ಈ ಪಂದ್ಯವನ್ನು ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಗೆದ್ದ ತಂಡಕ್ಕೆ ಸೆಮಿ ಫೈನಲ್ ಕನಸು ಜೀವಂತವಾಗಿರಲಿದೆ. ಹೀಗಾಗಿ ಎರಡೂ ತಂಡಗಳು ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯಲಿವೆ.

Published On – Feb 26,2026 6:01 PM

Source link

Leave a Reply

Your email address will not be published. Required fields are marked *