Indian Army Agniveer 2026: ಭಾರತೀಯ ಸೇನಾ ಅಗ್ನಿವೀರ್ ನೇಮಕಾತಿ; ಅರ್ಜಿ ಸಲ್ಲಿಕೆಯ ಕಾಲಾವಕಾಶ ವಿಸ್ತರಣೆ

Indian Army Agniveer 2026: ಭಾರತೀಯ ಸೇನಾ ಅಗ್ನಿವೀರ್ ನೇಮಕಾತಿ; ಅರ್ಜಿ ಸಲ್ಲಿಕೆಯ ಕಾಲಾವಕಾಶ ವಿಸ್ತರಣೆ

ಭಾರತೀಯ ಸೇನೆಯು 2026 ರ ಅಗ್ನಿವೀರ್ ನೇಮಕಾತಿಯ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ವಿಸ್ತರಿಸಿದೆ. ಮೂಲತಃ ಏಪ್ರಿಲ್ 1 ರಂದು ಮುಕ್ತಾಯಗೊಳ್ಳಬೇಕಿದ್ದ ಈ ಗಡುವನ್ನು ಈಗ ಏಪ್ರಿಲ್ 10 ರವರೆಗೆ ವಿಸ್ತರಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ದೇಶ ಸೇವೆ ಮಾಡಲು ಬಯಸುವ ಅವಿವಾಹಿತ ಪುರುಷ ಅಭ್ಯರ್ಥಿಗಳು ಸೇನೆಯ ಅಧಿಕೃತ ವೆಬ್‌ಸೈಟ್ www.joinindianarmy.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ವಿವಿಧ ಹುದ್ದೆಗಳ ವಿವರ ಮತ್ತು ಅರ್ಹತೆ:

ಈ ನೇಮಕಾತಿಯು ಅಗ್ನಿವೀರ್ ಜನರಲ್ ಡ್ಯೂಟಿ (GD), ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ (SKT) ಹಾಗೂ 8ನೇ ಮತ್ತು 10ನೇ ತರಗತಿ ಉತ್ತೀರ್ಣರಾದವರಿಗಾಗಿ ಅಗ್ನಿವೀರ್ ಟ್ರೇಡ್ಸ್‌ಮನ್ ಹುದ್ದೆಗಳನ್ನು ಒಳಗೊಂಡಿದೆ.

  • ಜನರಲ್ ಡ್ಯೂಟಿ: ಕನಿಷ್ಠ ಶೇ. 45 ಅಂಕಗಳೊಂದಿಗೆ 10ನೇ ತರಗತಿ ಪಾಸಾಗಿರಬೇಕು.
  • ತಾಂತ್ರಿಕ ಹುದ್ದೆ: ಪಿಸಿಎಂ (Physics, Chemistry, Maths) ವಿಷಯಗಳೊಂದಿಗೆ 12ನೇ ತರಗತಿ ಪಾಸಾಗಿರಬೇಕು.
  • ಕ್ಲರ್ಕ್/ಎಸ್‌ಕೆಟಿ: ಯಾವುದೇ ವಿಭಾಗದಲ್ಲಿ ಶೇ.60 ಅಂಕಗಳೊಂದಿಗೆ 12ನೇ ತರಗತಿ ಪಾಸಾಗಿರಬೇಕು.
  • ಟ್ರೇಡ್ಸ್‌ಮನ್: ಹುದ್ದೆಗೆ ಅನುಗುಣವಾಗಿ 8ನೇ ಅಥವಾ 10ನೇ ತರಗತಿ ಉತ್ತೀರ್ಣರಾಗಿರಬೇಕು.

ವಯೋಮಿತಿ ಮತ್ತು ಅರ್ಜಿ ಶುಲ್ಕ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 1, 2026 ಕ್ಕೆ ಅನ್ವಯವಾಗುವಂತೆ 17.5 ರಿಂದ 21 ವರ್ಷ ವಯಸ್ಸಿನವರಾಗಿರಬೇಕು. ಸರ್ಕಾರದ ನಿಯಮಗಳ ಪ್ರಕಾರ ಮೀಸಲು ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಇನ್ನು ಅರ್ಜಿ ಶುಲ್ಕವಾಗಿ ರೂ.250 ನಿಗದಿಪಡಿಸಲಾಗಿದ್ದು, ಇದನ್ನು ನೆಟ್ ಬ್ಯಾಂಕಿಂಗ್, UPI ಅಥವಾ ಕಾರ್ಡ್‌ಗಳ ಮೂಲಕ ಪಾವತಿಸಬಹುದು. ಅರ್ಜಿಯೊಂದಿಗೆ ಭಾವಚಿತ್ರ, ಸಹಿ ಮತ್ತು ಗುರುತಿನ ಚೀಟಿಯ ಸ್ಕ್ಯಾನ್ ಪ್ರತಿಗಳನ್ನು ಲಗತ್ತಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಆಯ್ಕೆ ಪ್ರಕ್ರಿಯೆಯ ಹಂತಗಳು:

ಅಗ್ನಿವೀರ್ ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಐದು ಹಂತಗಳಲ್ಲಿ ನಡೆಯುತ್ತದೆ:

  • ಆನ್‌ಲೈನ್ ಲಿಖಿತ ಪರೀಕ್ಷೆ (ಜೂನ್ 1 ರಿಂದ 15, 2026 ರವರೆಗೆ).
  • ದೈಹಿಕ ದಕ್ಷತೆ ಪರೀಕ್ಷೆ (PET) ಮತ್ತು ದೈಹಿಕ ಮಾಪನ ಪರೀಕ್ಷೆ (PMT).
  • ಟೈಪಿಂಗ್ ಅಥವಾ ಟ್ರೇಡ್ ಪರೀಕ್ಷೆ (ಅನ್ವಯವಾಗುವ ಹುದ್ದೆಗಳಿಗೆ ಮಾತ್ರ).
  • ದಾಖಲೆಗಳ ಪರಿಶೀಲನೆ.
  • ಅಂತಿಮ ವೈದ್ಯಕೀಯ ಪರೀಕ್ಷೆ.

ಬಹು ವಿಭಾಗಗಳಲ್ಲಿ ಅರ್ಜಿ ಸಲ್ಲಿಕೆ:

ಅಭ್ಯರ್ಥಿಗಳು ತಮ್ಮ ಅರ್ಹತೆಗೆ ಅನುಗುಣವಾಗಿ ನಿಯಮಿತ ವಿಭಾಗದ ಜೊತೆಗೆ ಇನ್ನು ಎರಡು ವಿಭಾಗಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ಪ್ರತಿಯೊಂದು ವರ್ಗಕ್ಕೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ, ಸಂಬಂಧಪಟ್ಟ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ, ಅಭ್ಯರ್ಥಿಯು ಕೇವಲ ಒಂದು ನೇಮಕಾತಿ ರ‍್ಯಾಲಿಯಲ್ಲಿ ಮಾತ್ರ ಭಾಗವಹಿಸಲು ಸಾಧ್ಯವಿದ್ದು, ಅಲ್ಲಿಯೇ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *