Headlines

International Friendship Day 2026: ಫ್ರೆಂಡ್‌ಶಿಪ್‌ ನಮ್ಮ ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ – Kannada News | International Friendship Day 2026: History of International Friendship Day and the benefits of friendship

ಅಂತಾರಾಷ್ಟ್ರೀಯ ಸ್ನೇಹ ದಿನImage Credit source: Getty Images

ಸ್ನೇಹ (Friendship) ರಕ್ತ ಸಂಬಂಧಕ್ಕೂ ಮೀರಿದ ಬಂಧ. ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಿತರು ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಒಳ್ಳೆಯ ಸ್ನೇಹಿತರು ಮುಖದಲ್ಲಿ ನಗುವನ್ನು ತರಿಸುವುದು ಮಾತ್ರವಲ್ಲ, ಜೀವನದಲ್ಲಿ ಸಕಾರಾತ್ಮಕವಾಗಿ ಮುಂದುವರೆಯಲು ಕೂಡ ಸಹಾಯ ಮಾಡುತ್ತಾರೆ. ಈ ಸ್ನೇಹ ಸಂಬಂಧದ ಮಹತ್ವವನ್ನು ಸಾರುವ ಹಾಗೂ ರಾಷ್ಟ್ರ ರಾಷ್ಟ್ರಗಳು, ಧರ್ಮಗಳು, ಸಂಸ್ಕೃತಿ, ಜನಾಂಗಗಳ ನಡುವೆಯೂ ಸ್ನೇಹ ಸಂಬಂಧ, ಸಾಮರಸ್ಯವನ್ನು ಬೆಸೆಯುವ ಉದ್ದೇಶದಿಂದ ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸಲಾಗುತ್ತದೆ. ಸ್ನೇಹವನ್ನು ಸಂಭ್ರಮಿಸಲು ಮೀಸಲಿರುವ ಈ ದಿನದಂದು ಒಂದೊಳ್ಳೆ ಸ್ನೇಹದಿಂದ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ ಬನ್ನಿ.

ಅಂತಾರಾಷ್ಟ್ರೀಯ ಸ್ನೇಹಿತರ ದಿನದ ಇತಿಹಾಸವೇನು?

ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನು 1958ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ರಾಷ್ಟ್ರ ರಾಷ್ಟ್ರಗಳು, ಧರ್ಮಗಳು, ಸಂಸ್ಕೃತಿ, ಜನಾಂಗಗಳ ನಡುವೆಯೂ ಸ್ನೇಹ ಸಂಬಂಧ, ಸಾಮರಸ್ಯವನ್ನು ಬೆಸೆಯುವ ಉದ್ದೇಶದಿಂದ ಮೊದಲು ಪರಾಗ್ವೆಯಲ್ಲಿ 1958ರಲ್ಲಿ ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಪ್ರಸ್ತಾಪಿಸಲಾಯಿತು. ಆ ಬಳಿಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜುಲೈ 30ನ್ನು ಅಧಿಕೃತ ಅಂತಾರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಜೀವನದಲ್ಲಿ ಸ್ನೇಹ ಎಷ್ಟು ಮುಖ್ಯ?

ಉತ್ತಮ ಸ್ನೇಹವು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸನ್ನು ನಿರಾಳವಾಗಿಡಲು ಸಹಾಯ ಮಾಡುತ್ತದೆ. ನಾವು ಸ್ನೇಹಿತರೊಂದಿಗೆ ಸಮಯ ಕಳೆಯುವಾಗ, ನಮ್ಮ ದೇಹವು ಎಂಡಾರ್ಫಿನ್‌ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದು ಸಂತೋಷ ಮತ್ತು ಶಾಂತಿಯನ್ನು ತರುವ ಹಾರ್ಮೋನು ಆಗಿದ್ದು, ಅದಕ್ಕಾಗಿಯೇ ನಾವು ಸ್ನೇಹಿತರೊಂದಿಗೆ ಇದ್ದಾಗ ಖುಷಿಯಾಗಿ ಇರುತ್ತೇವೆ. ಸ್ನೇಹಿತರು ಮುಖದಲ್ಲಿ ನಗುವನ್ನು ತರಿಸುವುದು ಮಾತ್ರವಲ್ಲ, ಕಷ್ಟಕಾಲಕ್ಕೆ ಹೆಗಲಾಗಿ, ಜೀವನದ ಪ್ರತಿಯೊಂದು ಹಂತದಲ್ಲೂ ಬೆಂಬಲವಾಗಿ ನಿಲ್ಲುತ್ತಾರೆ. ಅದಕ್ಕಾಗಿಯೇ ಜೀವದಲ್ಲಿ ಉತ್ತಮ ಸ್ನೇಹಿತರು ಇರಬೇಕು ಅನ್ನೋದು.

ಇದನ್ನೂ ಓದಿ: ಕರ್ನಾಟಕದಲ್ಲಿರುವ ಪ್ರಮುಖ ಹುಲಿ ಸಂರಕ್ಷಿತ ತಾಣಗಳಿವು

ಒಳ್ಳೆಯ ಸ್ನೇಹದ ಪ್ರಯೋಜಗಳೇನು?

ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ: ನಾವು ಸ್ನೇಹಿತರೊಂದಿಗೆ ಇರುವಾಗ, ನಮ್ಮ ಮಾನಸಿಕ ಆರೋಗ್ಯವು ಗಮನಾರ್ಹವಾಗಿ ಸುಧಾರಿಸುತ್ತದೆ. ಈ ಸಮಯದಲ್ಲಿ ಧನಾತ್ಮಕ ಹಾರ್ಮೋನುಗಳ ಬಿಡುಗಡೆಯು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ, ನಮಗೆ ಉತ್ತಮ ಭಾವನೆ ನೀಡುತ್ತದೆ. ಸ್ನೇಹಿತರೊಂದಿಗೆ ಕುಳಿತು ಮಾತನಾಡುವುದರಿಂದ ಮಾನಸಿಕ ಒತ್ತಡ, ಖಿನ್ನತೆ ಮತ್ತು ಆತಂಕ ಕಡಿಮೆಯಾಗುತ್ತದೆ. ಸ್ನೇಹಿತರು ನಿಮ್ಮ ಭಾವನಾತ್ಮಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಬೆಂಬಲವನ್ನು ನೀಡುತ್ತಾರೆ.

ಉತ್ತಮ ಸ್ನೇಹ ಹೃದಯಕ್ಕೂ ಪ್ರಯೋಜನಕಾರಿ: ಸ್ನೇಹವು ಮನಸಿಕ ಆರೋಗ್ಯ ಮಾತ್ರವಲ್ಲದೆ ಹೃದಯಕ್ಕೂ ಪ್ರಯೋಜನಕಾರಿ. ಸ್ನೇಹವು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ.  ಒಳ್ಳೆಯ ಸ್ನೇಹಿತರನ್ನು ಹೊಂದಿರುವ ಜನರು ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಯಂತಹ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಕಡಿಮೆ ಇರುತ್ತಂತೆ.

ಭಾವನಾತ್ಮಕ ಬೆಂಬಲ ದೊರೆಯುತ್ತದೆ: ಸ್ನೇಹವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಿಮ್ಮನ್ನು ಬಲಶಾಲಿಯನ್ನಾಗಿ ಮಾಡುತ್ತದೆ, ಕಷ್ಟಕರವಾದ ಕೆಲಸಗಳಲ್ಲಿಯೂ ಸಹ ನೀವು ಯಶಸ್ವಿಯಾಗಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಸ್ನೇಹಿತರು ಭಾವನಾತ್ಮಕ ಬೆಂಬಲವನ್ನು ನೀಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಅಲ್ಲದೆ ಒಬ್ಬ ಒಳ್ಳೆಯ ಸ್ನೇಹಿತ ನಿಮ್ಮನ್ನು ಜೀವನದಲ್ಲಿ ಮುಂದುವರೆಯಲು ಸಹ ಪ್ರೋತ್ಸಾಹಿಸುತ್ತಾನೆ. ಆದ್ದರಿಂದ ಯಾವಾಗಲೂ ಉತ್ತಮರ ಸ್ನೇಹವನ್ನು ಮಾಡಿ.

ಜೀವನಶೈಲಿಯ ಮೇಲೆ ಸಕಾರಾತ್ಮಕ ಪರಿಣಾಮ: ಸ್ನೇಹಿತರೊಂದಿಗೆ ಸಮಯ ಕಳೆಯುವುದು ನಮ್ಮ ಜೀವನಶೈಲಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸ್ನೇಹವು ಜನರು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ಸಂಶೋಧನೆ ತೋರಿಸಿದೆ. ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮದಂತಹ ಅಭ್ಯಾಸಗಳು ಜೀವನಶೈಲಿಯನ್ನು ಪರಿವರ್ತಿಸಬಹುದು, ಇದು ಸಂತೋಷದ ಜೀವನಕ್ಕೆ ಕಾರಣವಾಗಬಹುದು ಮತ್ತು ರೋಗಗಳನ್ನು ದೂರವಿಡಬಹುದು. ಹಾಗಾಗಿ ಯಾವಾಗಲೂ ಒಳ್ಳೆಯ ಮತ್ತು ಸಕಾರಾತ್ಮಕ ಮನೋಭಾವವಿರುವ ಸ್ನೇಹಿತರ ಜೊತೆಗಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *