ಬೆಂಗಳೂರು, ಮೇ 7: ಐಪಿಎಲ್ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಗಳು ಬೆಂಗಳೂರಿನಿಂಂದ ಸ್ಥಳಾಂತರಗೊಂಡಿದ್ದರ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಭದ್ರತೆ ಅಥವಾ ಆಡಳಿತಾತ್ಮಕವಾಗಿ ಯಾವುದೇ ಲೋಪದೋಷಗಳಿಲ್ಲ. ಪಂದ್ಯಗಳು ಸ್ಥಳಾಂತರಗೊಳ್ಳಲು ಮುಖ್ಯವಾಗಿ ‘ವಾಣಿಜ್ಯ ಉದ್ದೇಶ’ ಕಾರಣ ಎಂದು ಅವರು ವಿವರಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸರಿಸುಮಾರು 32,000 ಆಸನಗಳ ಸಾಮರ್ಥ್ಯವಿದೆ. ಇದರಲ್ಲಿ ಸುಮಾರು 7,000 ರಿಂದ 8,000 ಸೀಟುಗಳನ್ನು ವಿಐಪಿಗಳು, ಸ್ಪಾನ್ಸರ್‌ಗಳು ಮತ್ತು ಆರ್‌ಸಿಬಿ ತಂಡಕ್ಕಾಗಿ ಬ್ಲಾಕ್ ಮಾಡಬೇಕಾಗುತ್ತದೆ. ಇಷ್ಟು ಪಾಸುಗಳನ್ನು ಹಂಚಿದ ಮೇಲೆ ಕೇವಲ 25,000 ಸೀಟುಗಳು ಮಾತ್ರ ಟಿಕೆಟ್ ಮಾರಾಟಕ್ಕೆ ಉಳಿಯುತ್ತವೆ. ಇದು ಆರ್ಥಿಕವಾಗಿ ಅಷ್ಟೊಂದು ಲಾಭದಾಯಕವಲ್ಲ ಎಂಬುದು ಆಯೋಜಕರ ಅಭಿಪ್ರಾಯ. ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಇರುವುದರಿಂದ ಅಲ್ಲಿ ಕಮರ್ಷಿಯಲಿ ಹೆಚ್ಚು ಲಾಭವಾಗುತ್ತದೆ ಎಂಬ ಚರ್ಚೆ ಮೊದಲಿನಿಂದಲೂ ಇತ್ತು ಎಂದು ಪರಮೇಶ್ವರ್ ಹೇಳಿದ್ದಾರೆ.
ಶಾಸಕರಿಗೆ ನೀಡುವ ಟಿಕೆಟ್‌ಗಳು ದುರ್ಬಳಕೆ ಆಗಿವೆ ಅಥವಾ ಅದರಿಂದಲೇ ಪಂದ್ಯ ಸ್ಥಳಾಂತರಗೊಂಡಿದೆ ಎಂಬ ಮಾತಿನಲ್ಲಿ ಸತ್ಯವಿಲ್ಲ. ಶಾಸಕರಿಗೆ ನೀಡುವ ಅಲ್ಪ ಪ್ರಮಾಣದ ಪಾಸುಗಳಿಂದ ಇಂತಹ ದೊಡ್ಡ ನಿರ್ಧಾರಗಳು ಬದಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ