ಪ್ರಸ್ತುತ ವಿಶ್ವ ಕ್ರಿಕೆಟ್ನ ಅತ್ಯುತ್ತಮ ಬೌಲರ್ಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಬುಮ್ರಾ ಬೌಲಿಂಗ್ನಲ್ಲಿ ರನ್ ಕಲೆಹಾಕುವುದೆ ಕಷ್ಟಕರವಾಗಿರುವಾಗ ಅವರ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹಾಗಿದ್ದರೂ ಐಪಿಎಲ್ನಲ್ಲಿ ಬುಮ್ರಾ ವಿರುದ್ಧ ಸುಲಭವಾಗಿ ಸಿಕ್ಸರ್ ಬಾರಿಸಿದ ಬ್ಯಾಟರ್ಗಳಿದ್ದಾರೆ. ಅವರ ವಿವರ ಇಲ್ಲಿದೆ.
ಐಪಿಎಲ್ ಇತಿಹಾಸದಲ್ಲಿ, ಕೇವಲ ನಾಲ್ಕು ಬ್ಯಾಟ್ಸ್ಮನ್ಗಳು ಮಾತ್ರ ಬುಮ್ರಾ ವಿರುದ್ಧ ಐದು ಅಥವಾ ಹೆಚ್ಚಿನ ಸಿಕ್ಸರ್ಗಳನ್ನು ಹೊಡೆದಿದ್ದಾರೆ. ಅವರಲ್ಲಿ ದಕ್ಷಿಣ ಆಫ್ರಿಕಾದ ಲೆಜೆಂಡರಿ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬುಮ್ರಾ ಬೌಲಿಂಗ್ನಲ್ಲಿ ಡಿವಿಲಿಯರ್ಸ್ ಅತ್ಯಧಿಕ ಎಂಟು ಸಿಕ್ಸರ್ ಸಿಡಿಸಿದ್ದಾರೆ. ಡಿವಿಲಿಯರ್ಸ್, ಬುಮ್ರಾ ಬೌಲಿಂಗ್ನಲ್ಲಿ ಒಟ್ಟು 85 ಎಸೆತಗಳನ್ನು ಎದುರಿಸಿದ್ದು, 147.05 ರ ಸ್ಟ್ರೈಕ್ ರೇಟ್ನಲ್ಲಿ 125 ರನ್ ಕಲೆಹಾಕಿದ್ದಾರೆ.
ಬುಮ್ರಾ ವಿರುದ್ಧ 101 ಎಸೆತಗಳಲ್ಲಿ ಆರು ಸಿಕ್ಸರ್ಗಳು ಸೇರಿದಂತೆ 150 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿಯ ಸ್ಥಿರತೆ ಬುಮ್ರಾ ವಿರುದ್ಧ ಉತ್ತಮ ದಾಖಲೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡಿದೆ. ಐಪಿಎಲ್ನಲ್ಲಿ ಬುಮ್ರಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ ಕೊಹ್ಲಿ.
ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಜೆಪಿ ಡುಮಿನಿ ಮೂರನೇ ಸ್ಥಾನದಲ್ಲಿ ಇದ್ದಾರೆ. ಅವರು ಬುಮ್ರಾ ವಿರುದ್ಧ ಕೇವಲ 33 ಎಸೆತಗಳಲ್ಲಿ ಆರು ಸಿಕ್ಸರ್ಗಳು ಸೇರಿದಂತೆ 70 ರನ್ ಕಲೆಹಾಕಿದ್ದಾರೆ.
ಪಟ್ಟಿಯಲ್ಲಿರುವ ಕೊನೆಯ ಬ್ಯಾಟ್ಸ್ಮನ್ ಸನ್ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್. ವಾಸ್ತವವಾಗಿ ಕಮ್ಮಿನ್ಸ್ ಬೌಲರ್ ಆಗಿದ್ದರೂ, ಅವರು ಬುಮ್ರಾ ವಿರುದ್ಧ 34 ಎಸೆತಗಳಲ್ಲಿ ಐದು ಸಿಕ್ಸರ್ಗಳು ಸೇರಿದಂತೆ 54 ರನ್ ಬಾರಿಸಿದ್ದಾರೆ.




