Headlines

IPL 2026: ಆರ್​​ಸಿಬಿಯ ಉಳಿದೆರಡು ಲೀಗ್ ಪಂದ್ಯಗಳು ಯಾರ ವಿರುದ್ಧ? ಆ 2 ತಂಡಗಳ ಪ್ಲೇಆಫ್ ಲೆಕ್ಕಾಚಾರವೇನು? – Kannada News | RCB’s IPL 2026 Playoff Path: After KKR Win, Decisive Battles Await Against PBKS and SRH

ಐಪಿಎಲ್ 2026 ರ 57 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಆರ್​​ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದಲ್ಲದೆ 16 ಪಾಯಿಂಟ್​ಗಳೊಂದಿಗೆ ಪ್ಲೇಆಫ್​ಗೆ ಮತ್ತಷ್ಟು ಹತ್ತಿರವಾಗಿದೆ. ಪ್ಲೇಆಫ್ ದೃಷ್ಟಿಯಿಂದ ಉಭಯ ತಂಡಗಳಿಗೂ ಈ ಪಂದ್ಯ ಬಹಳ ಮುಖ್ಯವಾಗಿತ್ತು. ಅದರಲ್ಲೂ ಕೆಕೆಆರ್​​ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆದರೆ ಈ ಪಂದ್ಯದಲ್ಲಿ ಆರ್​​ಸಿಬಿ ಎದುರು ಶರಣಾದ ಕೆಕೆಆರ್ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ. ಇತ್ತ ಆರ್​ಸಿಬಿ 16 ಅಂಕಗಳನ್ನು ಹೊಂದಿದ್ದರೂ ಪ್ಲೇಆಫ್​ಗೆ ತನ್ನ ಸ್ಥಾನವನ್ನು ಇನ್ನು ಖಚಿತಪಡಿಸಿಕೊಂಡಿಲ್ಲ. ಹೀಗಾಗಿ ಲೀಗ್ ಹಂತದಲ್ಲಿ ಉಳಿದಿರುವ ಎರಡೂ ಪಂದ್ಯಗಳು ಆರ್​​ಸಿಬಿ ಪಾಲಿಗೆ ನಿರ್ಣಾಯಕವಾಗಿವೆ. ಈ ಎರಡು ಪಂದ್ಯಗಳಲ್ಲಿ ಆರ್​ಸಿಬಿ ಗೆದ್ದರಷ್ಟೇ ಟಾಪ್ 2 ರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಸೋತರೆ ಪ್ಲೇಆಫ್​ನಿಂದಲೇ ಹೊರಬೀಳಲಿದೆ.

ಆರ್​ಸಿಬಿ ತನ್ನ ಮುಂದಿನ ಎರಡು ಲೀಗ್ ಪಂದ್ಯಗಳನ್ನು ತವರಿನಿಂದ ಹೊರಗೆ ಆಡಲಿದೆ. ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ಫೈನಲ್ ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು ಮೇ 17 ರಂದು ಎದುರಿಸಿದರೆ, ಕೊನೆಯ ಲೀಗ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮೇ 22 ರಂದು ಎದುರಿಸಲಿದೆ. ಈ ಎರಡು ತಂಡಗಳು ಪ್ರಸ್ತುತ ಅದ್ಭುತ ಫಾರ್ಮ್​ನಲ್ಲಿದ್ದು ಈ ತಂಡಗಳನ್ನು ಮಣಿಸುವುದು ಆರ್​ಸಿಬಿಗೆ ಸವಾಲಿನ ಕೆಲಸವಾಗಿದೆ. ಇದರ ಜೊತೆಗೆ ಎದುರಾಳಿ ತಂಡಗಳಿಗೆ ತವರಿನ ಲಾಭ ಬೇರೆ ಸಿಗುವುದರಿಂದ ಆರ್​ಸಿಬಿ ವಿಭಿನ್ನ ತಂತ್ರದೊಂದಿಗೆ ಕಣಕ್ಕಿಳಿಯಬೇಕಾಗುತ್ತದೆ.

ಆರ್​ಸಿಬಿ ಈ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯವನ್ನಾದರೂ ಗೆಲ್ಲಬೇಕು. ಆಗ ಮಾತ್ರ ಅದಕ್ಕೆ ಪ್ಲೇಆಫ್ ಹಾದಿ ತೆರೆಯಲಿದೆ. ಒಂದು ವೇಳೆ ಆರ್​ಸಿಬಿ ಎರಡೂ ಪಂದ್ಯಗಳಲ್ಲಿ ಸೋತರೆ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಹೀಗಾಗಿ ಆರ್​ಸಿಬಿ ಯಾವುದೇ ಅಡೆತಡೆಗಳಿಲ್ಲದೆ ಪ್ಲೇಆಫ್​ಗೇರಬೇಕೆಂದರೆ ಈ ಎರಡೂ ತಂಡಗಳನ್ನು ಮಣಿಸಿದರೆ ಒಳಿತು. ಇತ್ತ ಆರ್​​ಸಿಬಿಗೆ ಎದುರಾಳಿಗಳಾಗಿರುವ ಆ ಎರಡು ತಂಡಗಳಿಗೂ ಆರ್​ಸಿಬಿ ವಿರುದ್ಧದ ಗೆಲುವು ಪ್ಲೇಆಫ್ ದೃಷ್ಟಿಯಿಂದ ಅತ್ಯವಶ್ಯಕವಾಗಿದೆ.

ಆರ್​ಸಿಬಿಗೆ ಮುಂದಿನ ಎದುರಾಳಿಯಾಗಿರುವ ಪಂಜಾಬ್ ಕಿಂಗ್ಸ್​ಗೆ ಲೀಗ್ ಹಂತದಲ್ಲಿ ಇನ್ನ 3 ಪಂದ್ಯಗಳು ಬಾಕಿ ಉಳಿದಿವೆ. ಪ್ರಸ್ತುತ 6 ಗೆಲುವುಗಳೊಂದಿಗೆ 13 ಅಂಕಗಳನ್ನು ಹೊಂದಿರುವ ಪಂಜಾಬ್ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಹೀಗಾಗಿ ಪಂಜಾಬ್ ಪ್ಲೇಆಫ್​ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಉಳಿದಿರುವ 3 ಪಂದ್ಯಗಳನ್ನು ಗೆಲ್ಲಬೇಕಿದೆ. ಆದರೆ ಪಂಜಾಬ್ ತಂಡ ಕಳೆದ ಐದು ಪಂದ್ಯಗಳಲ್ಲಿ ಸೋತು ಸೋಲಿನ ಸುಳಿಗೆ ಸಿಲುಕಿದೆ. ಹೀಗಾಗಿ ಪಂಜಾಬ್ ಪ್ಲೇಆಫ್​ ರೇಸ್​ನಲ್ಲಿ ಉಳಿಯಬೇಕೆಂದರೆ ಆರ್​ಸಿಬಿ ವಿರುದ್ಧ ಹೈವೋಲ್ಟೇಜ್ ಕದನವನ್ನು ಗೆಲ್ಲಲೇಬೇಕಿದೆ.

ಪಂಜಾಬ್ ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್ ಕೂಡ ಪ್ಲೇಆಫ್​ ರೇಸ್​ನಲ್ಲಿದೆ. ಪ್ರಸ್ತುತ ಆಡಿರುವ 12 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿರುವ ಸನ್‌ರೈಸರ್ಸ್ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್​ಗೆ ಲೀಗ್ ಹಂತದಲ್ಲಿ ಇನ್ನ 2 ಪಂದ್ಯಗಳು ಬಾಕಿ ಉಳಿದಿದ್ದು ಅದರಲ್ಲಿ ಒಂದು ಪಂದ್ಯವನ್ನು ಆರ್​ಸಿಬಿ ವಿರುದ್ಧ ಆಡಲಿದೆ. ಆರ್​ಸಿಬಿ ವಿರುದ್ಧ ಗೆಲ್ಲುವುದರ ಜೊತೆಗೆ ಇನ್ನೊಂದು ಪಂದ್ಯದಲ್ಲೂ ಸನ್‌ರೈಸರ್ಸ್ ಗೆಲ್ಲಬೇಕಿದೆ. ಅದರಲ್ಲೂ ಆರ್​ಸಿಬಿ ವಿರುದ್ಧ ಲೀಗ್​ನ ಉದ್ಘಾಟನಾ ಪಂದ್ಯದಲ್ಲೇ ಸೋತಿರುವ ಸನ್‌ರೈಸರ್ಸ್​ಗೆ ಇದು ಸೇಡಿನ ಸಮರವಾಗಿದೆ.

Source link

Leave a Reply

Your email address will not be published. Required fields are marked *