Headlines

IPL 2026: ಒಂದು ಫೋಟೋಗೆ 100 ರೂ. ಕೇಳಿದ ವೈಭವ್; ವಿಡಿಯೋ ವೈರಲ್ – Kannada News | Vaibhav Suryavanshi’s Viral Selfie: Fans Offer ₹200 When He Asks ₹100! IPL Star’s Humor

ತನ್ನ ಅಬ್ಬರದ ಬ್ಯಾಟಿಂಗ್‌ ಮೂಲಕ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿರುವ ವೈಭವ್ ಸೂರ್ಯವಂಶಿಗೆ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವೈಭವ್ ಸಾರ್ವಜನಿಕವಾಗಿ ಕಾಣಿಸಿಕೊಂಡರೆ, ಅವರೊಂದಿಗೆ ಸೆಲ್ಫಿಗಾಗಿ ಮುಗಿಬೀಳುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಂತಹದ್ದೇ ಒಂದು ಸೆಲ್ಫಿ ಕಥೆಯ ವಿಡಿಯೋ ವೊಂದು ವೈರಲ್ ಆಗಿದೆ. ಇದರಲ್ಲಿ ವೈಭವ್, ಅಭಿಮಾನಿಗಳ ಬಳಿ ಒಂದು ಫೋಟೋಗೆ 100 ರೂ.ಗಳ ಶುಲ್ಕ ವಿಧಿಸಿದ್ದಾರೆ. ಇತ್ತ ಅಭಿಮಾನಿಗಳು ಕೂಡ ವೈಭವ್​ಗೆ 100 ರೂ. ಬದಲು 200 ರೂ. ನೀಡಲು ಮುಂದಾಗಿದ್ದಾರೆ. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಾಸ್ತವವಾಗಿ ನಡೆದಿರುವುದೆನೆಂದರೆ, ಪ್ರಸ್ತುತ ವೈಭವ್ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ. ಪಂದ್ಯಕ್ಕಾಗಿ ತಂಡದೊಂದಿಗೆ ವಿಮಾನಕ್ಕಾಗಿ ವೈಭವ್ ವಿಮಾನ ನಿಲ್ದಾಣದಲ್ಲಿ ಕಾಯುತ್ತ ಕುಳಿತಿದ್ದಾರೆ. ಇದೇ ವೇಳೆ ಇಬ್ಬರು ಪುಟಾಣಿ ಅಭಿಮಾನಿಗಳು ವೈಭವ್ ಬಳಿ ಬಂದು ಒಂದು ಫೋಟೋಗಾಗಿ ಮನವಿ ಮಾಡಿದ್ದಾರೆ. ಇತ್ತ ವೈಭವ್, ಮಕ್ಕಳ ಜೊತೆಗೆ ತಮಾಷೆ ಮಾಡಲು ಮುಂದಾಗಿದ್ದು, ನಾನು ಒಂದು ಫೋಟೋಗೆ 100 ರೂ. ತೆಗೆದುಕೊಳ್ಳುತ್ತೇನೆ. ನೀವು 100 ರೂ. ಕೊಟ್ಟರೆ ಫೋಟೋಗೆ ಪೋಸ್ ನೀಡುತ್ತೇನೆ ಎಂದಿದ್ದಾರೆ.

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಆ ಪುಟ್ಟ ಅಭಿಮಾನಿಗಳು, ವೈಭವ್ 100 ರೂ. ಕೇಳಿದರೆ, ಅವರು ಸರ್ 200 ರೂ. ಇದೆ ತೆಗೆದುಕೊಳ್ಳಿ ಎಂದು ವೈಭವ್​ಗೆ ಹಣ ನೀಡಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ವೈಭವ್ ಜೋರಾಗಿ ನಕ್ಕು, ಆ ಪುಟ್ಟ ಅಭಿಮಾನಿಗಳ ಬಳಿ ಯಾವುದೇ ಹಣವನ್ನು ತೆಗೆದುಕೊಳ್ಳದೆ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *