ಬೆಂಗಳೂರು, (ಮೇ 06): 2026ರ ಇಂಡಿಯನ್ ಪ್ರೀಮಿಯರ್ ಲೀಗ್ನ (IPL Season 2026) ಲೀಗ್ ಹಂತವು ಮುಕ್ತಾಯದ ಹಂತಕ್ಕೆ ತಲುಪಿದೆ. ಈಗ ಎಲ್ಲರೂ ಪ್ಲೇಆಫ್ಗಳು ಮತ್ತು ಫೈನಲ್ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಫೈನಲ್ ಪಂದ್ಯವನ್ನು ಸಾಮಾನ್ಯವಾಗಿ (RCB) ಹಾಲಿ ಚಾಂಪಿಯನ್ನ ತವರು ಮೈದಾನದಲ್ಲಿ ಆಡಲಾಗುತ್ತದೆ, ಅದರಂತೆ ಈ ಬಾರಿಯ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ (Bengaluru) ಅಹಮದಾಬಾದ್ ಗೆ ಸ್ಥಳಾಂತರಿಸಲಾಗಿದೆ. ಆ ಮೂಲಕ ಬಿಸಿಸಿಐ ಆರ್ಸಿಬಿ ಸೇರಿ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಬಿಗ್ಶಾಕ್ ನೀಡಿದೆ.
ಇನ್ನು ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಶಾಸಕರಿಗೆ ಐಪಿಎಲ್ ಟಿಕೆಟ್ಗೂ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ. ಬೇರೆ ಕಡೆ ಶೇಕಡಾ 50ರಷ್ಟು ಸೀಟ್ ಕೊಡ್ತಾರೆ. ಅವರೇನೋ ಇನ್ಫ್ಲ್ಯೂಯೆನ್ಸ್ ಮಾಡಿ ಗುಜರಾತ್ಗೆ ಸ್ಥಳಾಂತರಿಸಿದ್ದಾರೆ. ದೊಡ್ಡ ಸ್ಟೇಡಿಯಂ ಒಂದು ಲಕ್ಷ ಜನ ಸೇರಬಹುದು ಅಂತ ಮಾಡಿರಬಹುದು ಅಷ್ಟೇ. ಟಿಕೆಟ್ ಗೂ ಅದಕ್ಕೂ ಸಂಬಂಧ ಇಲ್ಲ. ಯಾರ ಹೇಳಿದ್ದು ಟಿಕೆಟ್ ವಿಚಾರವಾಗಿ ಶಿಫ್ಟ್ ಮಾಡ್ತಿದ್ದಾರೆ ಅಂತ? ಬಿಸಿಸಿಐ ಅವರು ಹೇಳಿಕೆ ಕೊಡಲಿ ಅವರಿಗೆ ಆಮೇಲೆ ಉತ್ತರ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.