
19ನೇ ಆವೃತ್ತಿಯ ಐಪಿಎಲ್ನ (IPL 2026) ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಇಂದು ಪ್ರಕಟಿಸಿದೆ. ಅದರಂತೆ ಲೀಗ್ನ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ (RCB vs SRH) ನಡುವೆ ನಡೆಯಲಿದೆ. ಈ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಮಾರ್ಚ್ 28 ರಂದು ನಡೆಯುವ ಈ ಪಂದ್ಯಕ್ಕೆ ಉಭಯ ತಂಡಗಳು ಸಿದ್ಧವಾಗಿವೆ. ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ. ಈ 70 ಪಂದ್ಯಗಳಲ್ಲಿ ಆರ್ಸಿಬಿ ಒಟ್ಟು 14 ಪಂದ್ಯಗಳನ್ನು ಆಡಲಿದೆ. ಈ 14 ಪಂದ್ಯಗಳಲ್ಲಿ 7 ಪಂದ್ಯಗಳು ಆರ್ಸಿಬಿಯ ತವರು ಮೈದಾನದಲ್ಲಿ ನಡೆದರೆ, ಉಳಿದ 7 ಪಂದ್ಯಗಳು ಎದುರಾಳಿ ತಂಡದ ತವರು ಮೈದಾನದಲ್ಲಿ ನಡೆಯಲಿವೆ.
ಈ ಆವೃತ್ತಿಯಲ್ಲಿ ಆರ್ಸಿಬಿ ಎರಡು ತವರು ತಂಡಗಳನ್ನು ಘೋಷಿಸಿಕೊಂಡಿದೆ. ಅದರಂತೆ ಆರ್ಸಿಬಿ, 5 ಪಂದ್ಯಗಳನ್ನು ತನ್ನ ಅಧಿಕೃತ ತವರು ಮೈದಾನವಾದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಉಳಿದ ಎರಡು ಪಂದ್ಯಗಳನ್ನು ಹೊಸ ತವರು ಮೈದಾನ ಎನಿಸಿಕೊಂಡಿರುವ ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಲಿದೆ.
ಯಾವ ತಂಡದ ವಿರುದ್ಧ ಎಷ್ಟು ಪಂದ್ಯಗಳನ್ನಾಡಲಿದೆ?
ಉಳಿದಂತೆ ಈ 14 ಲೀಗ್ ಪಂದ್ಯಗಳಲ್ಲಿ ಆರ್ಸಿಬಿ ಕೆಲವು ತಂಡಗಳ ವಿರುದ್ಧ 2 ಪಂದ್ಯಗಳನ್ನು ಆಡಿದರೆ, ಇನ್ನು ಕೆಲವು ತಂಡಗಳ ವಿರುದ್ಧ ಕೇವಲ 1 ಪಂದ್ಯವನ್ನು ಆಡಲಿದೆ. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಆರ್ಸಿಬಿ ತಲಾ 2 ಪಂದ್ಯಗಳನ್ನು ಆಡಲಿದೆ. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತಲಾ ಒಂದು ಪಂದ್ಯವನ್ನು ಆಡಲಿದೆ.
IPL 2026: 12 ಸ್ಥಳ, 50 ಪಂದ್ಯಗಳು; ಐಪಿಎಲ್ನ ಎರಡನೇ ಹಂತದ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
ಆರ್ಸಿಬಿ ಲೀಗ್ ಹಂತದ ವೇಳಾಪಟ್ಟಿ
1. ಮಾರ್ಚ್ 28 (ಶನಿವಾರ): ಸನ್‌ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಸಂಜೆ 7:30)
2. ಏಪ್ರಿಲ್ 05 (ಭಾನುವಾರ): ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಸಂಜೆ 7:30)
3. ಏಪ್ರಿಲ್ 10 (ಶುಕ್ರವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್ – ಗುವಾಹಟಿ (ಸಂಜೆ 7:30)
4. ಏಪ್ರಿಲ್ 12 (ಭಾನುವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7:30)
5. ಏಪ್ರಿಲ್ 15 (ಬುಧವಾರ): ಲಕ್ನೋ ಸೂಪರ್‌ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಸಂಜೆ 7:30)
6. ಏಪ್ರಿಲ್ 18 (ಶನಿವಾರ): ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಮಧ್ಯಾಹ್ನ 3:30)
7. ಏಪ್ರಿಲ್ 24 (ಶುಕ್ರವಾರ): ಗುಜರಾತ್ ಟೈಟಾನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಸಂಜೆ 7:30)
8. ಏಪ್ರಿಲ್ 27 (ಸೋಮವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್ – ದೆಹಲಿ (ಸಂಜೆ 7:30)
9. ಏಪ್ರಿಲ್ 30 (ಗುರುವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7:30)
10. ಮೇ 07 (ಗುರುವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್‌ಜೈಂಟ್ಸ್ – ಲಕ್ನೋ (ಸಂಜೆ 7:30)
11. ಮೇ 10 (ಭಾನುವಾರ): ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ರಾಯ್ಪುರ (ಸಂಜೆ 7:30)
12. ಮೇ 13 (ಬುಧವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ರಾಯ್ಪುರ (ಸಂಜೆ 7:30)
13. ಮೇ 17 (ಭಾನುವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ – ಧರ್ಮಶಾಲಾ (ಮಧ್ಯಾಹ್ನ 3:30)
14. ಮೇ 22 (ಶುಕ್ರವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7:30)
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ