
ನವದೆಹಲಿ, ಏಪ್ರಿಲ್ 6: ಹೊಸ ಹಣಕಾಸು ವರ್ಷ ಆರಂಭವಾಗಿದ್ದು, ಈಗ ಟ್ಯಾಕ್ಸ್ ರಿಟರ್ನ್ ಸಲ್ಲಿಸುವ ಸಮಯದ ಆರಂಭ. ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಐಟಿಆರ್ ಫಾರ್ಮ್ಗಳನ್ನು ನೋಟಿಫೈ ಮಾಡಿದೆ. ಈ ಫಾರ್ಮ್ಗಳಲ್ಲಿ ಕೆಲ ಬದಲಾವಣೆಗಳಾಗಿವೆ. ಪ್ರಕ್ರಿಯೆ ಸರಳಗೊಳಿಸಲಾಗಿರುವುದು, ಕಾನೂನು ಬದ್ಧತೆ ನಿಯಮ (compliance rules) ಕಠಿಣಗೊಳಿಸಿರುವುದು ಇತ್ಯಾದಿ ಬದಲಾವಣೆಗಳಿವೆ. ಆದರೆ, ಫಾರ್ಮ್ಗಳ ಸಂಖ್ಯೆಯಲ್ಲಿ ಬದಲಾವಣೆ ಆಗಿಲ್ಲ.
ಅಂದಹಾಗೆ, ಐಟಿ ರಿಟರ್ನ್ ಸಲ್ಲಿಸಲು ಜುಲೈ 31ರವರೆಗೆ ಕಾಲಾವಕಾಶ ಇರುತ್ತದೆ. ಹೀಗಾಗಿ, ಐಟಿಆರ್ ಫಾರ್ಮ್ಗಳಲ್ಲಿ ಮಾಡಲಾಗಿರುವ ಕೆಲ ಪ್ರಮುಖ ಬದಲಾವಣೆಗಳ ಬಗ್ಗೆ ಮಾಹಿತಿ ತಿಳಿದಿರುವುದು ಲೇಸು.
ರಾಜಕೀಯ ಪಕ್ಷಗಳಿಗೆ ದೇಣಿಗೆ
ಹಳೆದ ಟ್ಯಾಕ್ಸ್ ರಿಜೈಮ್ನಲ್ಲಿ ವಿವಿಧ ಡಿಡಕ್ಷನ್ಗಳಿಗೆ ಅವಕಾಶ ಇದೆ. ಅದರಲ್ಲಿ 80ಜಿ ಸೆಕ್ಷನ್ ಕೂಡ ಒಂದು. ಇದರಲ್ಲಿ ಚಾರಿಟಿ ಸಂಸ್ಥೆಗಳು, ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಕ್ಲೇಮ್ ಮಾಡಬಹುದು. ಈ ಸಂಬಂಧ ಒಂದು ಸಣ್ಣ ನಿಯಮ ಬದಲಾವಣೆ ಮಾಡಲಾಗಿದೆ. ನೀವು ದೇಣಿಗೆ ನೀಡುವ ರಾಜಕೀಯ ಪಕ್ಷದ ಪ್ಯಾನ್ ನಂಬರ್, ಹೆಸರನ್ನು ನಮೂದಿಸಬೇಕಾಗುತ್ತದೆ. ಕ್ಯಾಷ್ನಲ್ಲಿ ಎಷ್ಟು ಪಾವತಿಸಲಾಗಿದೆ, ಬೇರೆ ಮಾರ್ಗಗಳಲ್ಲಿ ಎಷ್ಟು ಪಾವತಿಸಲಾಗಿದೆ ಎಂಬುದನ್ನೂ ತಿಳಿಸಬೇಕಾಗುತ್ತದೆ.
ಇದನ್ನೂ ಓದಿ: ಬೆಂಗಳೂರಿಂದ ರಸ್ತೆ ಮೂಲಕ ಮುಂಬೈಗೆ ಕೇವಲ 5.5 ಗಂಟೆ ಪ್ರಯಾಣ; ಇದು ಎಕ್ಸ್ಪ್ರೆಸ್ವೇ ಮ್ಯಾಜಿಕ್
ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲ ಸೆಕ್ಷನ್ 80ಜಿ ಅಡಿಯಲ್ಲಿ ಚಾರಿಟಬಲ್ ಸಂಸ್ಥೆಗಳಿಗೆ ನೀಡುವ ದೇಣಿಗೆಗೆ ಡಿಡಕ್ಷನ್ ಕ್ಲೇಮ್ ಮಾಡಬಹುದು. ಅಲ್ಲಿಯೂ ಕೂಡ ಸ್ವೀಕೃತರ ಹೆಸರು, ಪ್ಯಾನ್ ಇತ್ಯಾದಿ ವಿವರ ನೀಡಬೇಕು. ಆನ್ಲೈನ್ನಲ್ಲಿ ಪೇಮೆಂಟ್ ಮಾಡಿದ್ದರೆ ರೆಫರೆನ್ಸ್ ನಂಬರ್, ಬ್ಯಾಂಕ್ನ ಐಎಫ್ಎಸ್ ಕೋಡ್ ಅನ್ನೂ ಹಾಕಬೇಕಾಗುತ್ತದೆ.
ಎಫ್ ಅಂಡ್ ಒ ಟ್ರೇಡಿಂಗ್ನ ಟರ್ನೋವರ್
ಫ್ಯೂಚರ್ಸ್ ಟ್ರೇಡಿಂಗ್, ಆಪ್ಷನ್ಸ್ ಟ್ರೇಡಿಂಗ್ನಲ್ಲಿ ತೊಡಗಿರುವವರು ಐಟಿಆರ್ ಸಲ್ಲಿಸುವಾಗ, ಪ್ರಾಫಿಟ್ ಮತ್ತು ಲಾಸ್ ಸ್ಟೇಟ್ಮೆಂಟ್ಗೆ ಡೆಬಿಟ್ ಮತ್ತು ಕ್ರೆಡಿಟ್ ಆಗಿರುವ ಪ್ರಮುಖ ಐಟಂಗಳ ಮಾಹಿತಿ ನೀಡಬೇಕಾಗುತ್ತದೆ. ಎಫ್ ಅಂಡ್ ಒ ಟ್ರೇಡಿಂಗ್ನ ಒಟ್ಟು ಟರ್ನೋವರ್ ಅನ್ನು ವರದಿ ಮಾಡಲು ನಿರ್ದಿಷ್ಟ ಕಾಲಂಗಳು ಫಾರ್ಮ್ನಲ್ಲಿ ಇರಲಿವೆ.
ಇದನ್ನೂ ಓದಿ: ಜಿಡಿಪಿಯಲ್ಲಿ 4ನೇ ಸ್ಥಾನ, ತಲಾದಾಯದಲ್ಲಿ 126ನೇ ಸ್ಥಾನ; ಭಾರತದ ಆರ್ಥಿಕ ಅಂತರ ಎತ್ತಿತೋರಿಸಿದ ಸ್ಟೀವ್ ಹ್ಯಾಂಕ್
ಹೆಚ್ಚುವರಿ ವಿಳಾಸದ ಆಯ್ಕೆ
ಟ್ಯಾಕ್ಸ್ ಫೈಲ್ ಮಾಡುವಾಗ ನಮ್ಮ ಹೆಸರು, ಆಧಾರ್ ನಂಬರ್, ವಿಳಾಸ, ಸಂಪರ್ಕ ಇತ್ಯಾದಿ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡುತ್ತೇವೆ. ಎರಡು ಮೊಬೈಲ್ ನಂಬರ್, ಎರಡು ಇಮೇಲ್ ಐಡಿಗಳನ್ನು ಹಾಕಬಹುದು. ಆದರೆ, ಒಂದೇ ವಿಳಾಸ ನಮೂದಿಸಲು ಅವಕಾಶ ಇತ್ತು. ಈಗ ಹೊಸ ಐಟಿಆರ್ ಫಾರ್ಮ್ಗಳಲ್ಲಿ ಸೆಕೆಂಡರಿ ಅಡ್ರೆಸ್ಗೆ ಪ್ರತ್ಯೇಕ ಫೀಲ್ಡ್ ಜಾರಿ ತರಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ