ಟೋಕಿಯೋ, ಏಪ್ರಿಲ್ 20: ಜಪಾನ್ನ ಈಶಾನ್ಯ ಕರಾವಳಿಯಲ್ಲಿ ಇಂದು 7.4 ತೀವ್ರತೆಯ ಪ್ರಬಲ ಭೂಕಂಪ (Japan Earthquake) ಸಂಭವಿಸಿದೆ. ಇದರಿಂದ ದೇಶಾದ್ಯಂತ ಆತಂಕ ಉಂಟಾಗಿದ್ದು, ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿದೆ. ಅಧಿಕಾರಿಗಳು ಕರಾವಳಿ ಪ್ರದೇಶಗಳಿಂದ ದೂರ ಹೋಗುವಂತೆ ನಿವಾಸಿಗಳನ್ನು ಒತ್ತಾಯಿಸಿದ್ದಾರೆ. ಅಲೆಗಳು ದಡವನ್ನು ತಲುಪುವ ನಿರೀಕ್ಷೆಯಿರುವುದರಿಂದ ಕರಾವಳಿ ವಲಯಗಳಿಂದ ದೂರವಿರಲು ಅಧಿಕಾರಿಗಳು ನಿವಾಸಿಗಳಿಗೆ ಎಚ್ಚರಿಕೆ ನೀಡಿದರು.
3 ಮೀಟರ್ (ಸುಮಾರು 10 ಅಡಿ)ವರೆಗಿನ ಅಲೆಗಳು ಏಳುವ ಸಾಧ್ಯತೆ ಇರುವುದರಿಂದ ಕರಾವಳಿ ವಲಯದ ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ಸಮುದ್ರದೊಳಗಿನ ಭೂಕಂಪನವು ಸ್ಥಳೀಯ ಸಮಯ ಸಂಜೆ 4.53ಕ್ಕೆ ಇವಾಟೆ ಕರಾವಳಿಯಿಂದ ಕೇವಲ 10 ಕಿಲೋಮೀಟರ್ (ಸುಮಾರು 6 ಮೈಲುಗಳು) ಆಳದಲ್ಲಿ ಸಂಭವಿಸಿದೆ.
Developing : A massive earthquake with a preliminary magnitude of 7.4 hit near Miyako, Japan, triggering a tsunami alert for waves up to 10 feet.
This is 2024 earthquake video when a 7.1 magnitude earthquake hit Japan. This time 7.4. Prayers for our Japanese brothers & sisters. pic.twitter.com/wl6P70tHMm
— Baba Banaras™ (@RealBababanaras) April 20, 2026
ಇದನ್ನೂ ಓದಿ: ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 114 ಭಾರಿ ಭೂಕಂಪ: ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚು; ಕಾರಣ ಏನು?
ಈ ಭೂಕಂಪ ಸಂಭವಿಸಿದ ಕೂಡಲೆ ಜಪಾನ್ ಪ್ರಧಾನಿ ಸನೇ ತಕೈಚಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ, ತುರ್ತು ಕಾರ್ಯಪಡೆಯ ನಿಯೋಜನೆಯನ್ನು ದೃಢಪಡಿಸಿದರು. ಭೂಕಂಪಪೀಡಿತ ಪ್ರದೇಶಗಳಲ್ಲಿ ತಕ್ಷಣದ ಸ್ಥಳಾಂತರಿಸುವಿಕೆಯ ನಿರ್ಣಾಯಕ ಅಗತ್ಯವನ್ನು ಅವರು ಪುನರುಚ್ಚರಿಸಿದರು. ಸುನಾಮಿಯ ಸಾಧ್ಯತೆಯಿದೆ. ತಕ್ಷಣ ಕರಾವಳಿ ತೀರದಿಂದ ಜನರು ಸ್ಥಳಾಂತರಗೊಳ್ಳಿರಿ. ಮುಂದಿನ ಸೂಚನೆ ಬರುವವರೆಗೂ ವಾಪಾಸ್ ಬರಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
Massive 7.4 magnitude Earthquake in Japan . Tsunami warning issued .#JapanEarthquake pic.twitter.com/QccDeThlbd
— God (@Indic_God) April 20, 2026
ಭೂಕಂಪನದ ನಂತರ ಟೋಕಿಯೊ ಮತ್ತು ಅಮೋರಿ ನಡುವಿನ ಬುಲೆಟ್ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ