Headlines

Karnataka Dam Water Level: ರಾಜ್ಯದ ಪ್ರಮುಖ ಡ್ಯಾಂಗಳಿಗೆ ಹರಿದುಬರುತ್ತಿದೆ ಭಾರಿ ಒಳಹರಿವು! – Kannada News | Karnataka Reservoir Water Level on August 16; Inflow Rises in Almatti and Kabini

ರಾಜ್ಯದ ಪ್ರಮುಖ ಡ್ಯಾಂಗಳಿಗೆ ಹರಿದುಬರುತ್ತಿದೆ ಭಾರಿ ಒಳಹರಿವು!

ಬೆಂಗಳೂರು, ಆಗಸ್ಟ್ 16: ಕರ್ನಾಟಕದಾದ್ಯಂತ ಮುಂಗಾರು ಮಳೆ ಮುಂದುವರಿದಿದ್ದು, ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಕೃಷ್ಣಾ, ಕಾವೇರಿ ಮತ್ತು ಶರಾವತಿ ಕೊಳ್ಳದ ಜಲಾಶಯಗಳಿಗೆ ಉತ್ತಮ ಪ್ರಮಾಣದ ಒಳಹರಿವು ದಾಖಲಾಗುತ್ತಿದ್ದು, ಕೃಷಿ ಹಾಗೂ ಕುಡಿಯುವ ನೀರಿನ ಅಭಾವ ತಗ್ಗುವ ನಿರೀಕ್ಷೆಯಿದೆ. ಆಲಮಟ್ಟಿ, ಲಿಂಗನಮಕ್ಕಿ, ಹೇಮಾವತಿ, ಕಬಿನಿ ಹಾಗೂ ಭದ್ರಾ ಜಲಾಶಯಗಳಲ್ಲಿ ಇಂದಿನ ನೀರಿನ ಸಂಗ್ರಹ ಹಾಗೂ ಒಳ-ಹೊರಹರಿವಿನ ಸಂಪೂರ್ಣ ಮಾಹಿತ ಇಲ್ಲಿದೆ.

ಆಲಮಟ್ಟಿ ಜಲಾಶಯ

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 519.54 ಮೀಟರ್
  • ಒಳಹರಿವು: 34,3243 ಕ್ಯೂಸೆಕ್
  • ಹೊರಹರಿವು: 26,155 ಕ್ಯೂಸೆಕ್

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ.

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1819 ಅಡಿ
  • ಇಂದಿನ ನೀರಿನ ಮಟ್ಟ: 1794.45 ಅಡಿ
  • ಒಳಹರಿವು: 12,348 ಕ್ಯೂಸೆಕ್
  • ಕಳೆದ ವರ್ಷ ಇದೇ ದಿನ: 1812.75 ಅಡಿ

ಶಿವಮೊಗ್ಗ ಜಿಲ್ಲೆಯ ಶರಾವತಿ ನದಿ ಕೊಳ್ಳದ ಲಿಂಗನಮಕ್ಕಿ ಡ್ಯಾಂನಲ್ಲಿ ನೀರಿನ ಮಟ್ಟ ಸ್ಥಿರವಾಗಿ ಏರಿಕೆಯಾಗುತ್ತಿದೆ.

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 84 ಅಡಿ
  • ಇಂದಿನ ನೀರಿನ ಮಟ್ಟ: 80.89 ಅಡಿ
  • ಒಳಹರಿವು: 8,559 ಕ್ಯೂಸೆಕ್
  • ಹೊರಹರಿವು (ನದಿಗೆ): 13,600 ಕ್ಯೂಸೆಕ್
  • ಮಳೆ ಪ್ರಮಾಣ: 10 ಮಿ.ಮೀ

ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಉತ್ತಮ ಒಳಹರಿವಿದ್ದು, ನದಿಗೆ ಅಪಾರ ಪ್ರಮಾಣದ ನೀರನ್ನು ಹರಿಮುಕ್ತಗೊಳಿಸಲಾಗಿದೆ.

ಹೇಮಾವತಿ ಜಲಾಶಯ

  • ಗರಿಷ್ಠ ಮಟ್ಟ: 2922 ಅಡಿ
  • ಇಂದಿನ ನೀರಿನ ಮಟ್ಟ: 2916.85 ಅಡಿ
  • ಒಳಹರಿವು: 4163 ಕ್ಯೂಸೆಕ್
  • ಹೊರಹರಿವು: ನದಿಗೆ 200 ಕ್ಯೂಸೆಕ್
  • ಕಾಲುವೆಗೆ 1845 ಕ್ಯೂಸೆಕ್
  • ಕಳೆದ ವರ್ಷ ಇದೇ ದಿನ: 2921.85 ಅಡಿ (36.958 TMC ನೀರಿತ್ತು, ಒಳಹರಿವು 8475 ಕ್ಯೂಸೆಕ್ ಇತ್ತು)

ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯಕ್ಕೆ ಒಳಹರಿವು ಸ್ಥಿರವಾಗಿದೆ.

ಭದ್ರಾ ಜಲಾಶಯ

ಚಿಕ್ಕಮಗಳೂರು-ಶಿವಮೊಗ್ಗ ಭಾಗದ ಪ್ರಮುಖ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹದ ವಿವರ ಹೀಗಿದೆ:

  • ಗರಿಷ್ಠ ಮಟ್ಟ: 186 ಅಡಿ
  • ಇಂದಿನ ನೀರಿನ ಮಟ್ಟ: 173 ಅಡಿ 2 ಇಂಚು
  • ಒಳಹರಿವು: 5793 ಕ್ಯೂಸೆಕ್
  • ಹೊರಹರಿವು: 203 ಕ್ಯೂಸೆಕ್

ಕಳೆದ ವರ್ಷ ಇದೇ ದಿನ 185 ಅಡಿ (70.279 TMC ) ಸಂಗ್ರಹ ಹಾಗೂ 17007 ಕ್ಯೂಸೆಕ್ ಒಳಹರಿವಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು  ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *