Karnataka Weather Forecast: ಮೇ 26ಕ್ಕೆ ಕೈಕೊಟ್ಟ ಮುಂಗಾರು, ಜೂ.4ಕ್ಕೆ ಪ್ರವೇಶ: ಕರ್ನಾಟಕದಲ್ಲಿ ಮುಂದಿನ 9 ದಿನ ಭಾರೀ ಮಳೆ – Kannada News

ಬೆಂಗಳೂರು (ಜೂ.02): ನೈಋತ್ಯ ಮುಂಗಾರು (monsoon)  ಪ್ರವೇಶದ ಹಿನ್ನೆಲೆಯಲ್ಲಿ, ಚಂಡಮಾರುತದ ಸುಳಿ ಹಾಗೂ ಟ್ರಫ್ ಪ್ರಭಾವದಿಂದಾಗಿ ಕರ್ನಾಟಕದಾದ್ಯಂತ ಇಂದಿನಿಂದ ಅಂದರೆ ಜೂನ್ 2ರಿಂದ 9 ದಿನಗಳ ಕಾಲ  ಭಾರೀ ಮಳೆಯಾಗುವ (Karnataka Rain) ನಿರೀಕ್ಷೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (Karnataka State Natural Disaster Monitoring Centre)  ಮುನ್ಸೂಚನೆ ನೀಡಿದೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಸಲಾಗಿದೆ. ಇನ್ನು ಮೇ 26ಕ್ಕೆ ಮುಂಗಾರು ಪ್ರವೇಶಿಸಲಿದೆ ಎನ್ನಲಾಗಿತ್ತು. ಆದ್ರೆ, ಕೈಕೊಟ್ಟಿದ್ದು, ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಬಳಿಕ ಜೂನ್ 7 ಅಥವಾ 8ಕ್ಕೆ ಕರ್ನಾಟಕಕ್ಕೆ ಪ್ರವೇಶಿಸಲಿದೆ.

ಮುಖ್ಯಾಂಶಗಳು

  • ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶ
  • ಕರ್ನಾಟಕದಲ್ಲಿ ಇಂದಿನಿಂದ 9 ದಿನಗಳ ಕಾಲ ಭಾರೀ ಮಳೆ ಸಾಧ್ಯತೆ
  • ರಾಜ್ಯದಲ್ಲಿ ಮಳೆ ಮುನ್ಸೂಚನೆ ನೀಡಿದ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ

ಕರ್ನಾಟಕದಲ್ಲಿ 9 ದಿನಗಳ ಕಾಲ ಮಳೆ

02.06.2026 ರಿಂದ 10.06.2026 ರವರೆಗಿನ ಮುಂದಿನ 9 ದಿನಗಳ ರಾಜ್ಯದಲ್ಲಿ ಮಳೆ ಮುನ್ಸೂಚನೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದ್ದು, ಜೂನ್ 02 ಮತ್ತು 03 ರಂದು ರಾಜ್ಯಾದ್ಯಂತ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.

ಕರಾವಳಿ ಕರ್ನಾಟಕ ಜೂನ್ 4 ರಂದು ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಆರಂಭವಾಗಿ ಜೂನ್ 5 ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಜೂನ್ 06 ರಿಂದ 10 ರವರೆಗೆ ಮಳೆಯ ತೀವ್ರತೆ ಗಣನೀಯವಾಗಿ ಹೆಚ್ಚಾಗಲಿದ್ದು, ಕರಾವಳಿ ಪ್ರದೇಶದಲ್ಲಿ ವ್ಯಾಪಕ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ಇದನ್ನೂ ಓದಿ: Monsoon 2026: ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶ; ಕರ್ನಾಟಕದಲ್ಲಿ ಮಳೆಗಾಲ ಯಾವಾಗ ಶುರು?

ಮಲೆನಾಡು ಭಾಗದಲ್ಲಿ ಮಳೆ

ಜೂನ್ 06 ರಿಂದ 10 ರ ಅವಧಿಯಲ್ಲಿ ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಉತ್ತರ ಒಳನಾಡು

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಜೂನ್ 05 ರವರೆಗೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜೂನ್ 06 ರಿಂದ ಈ ಪ್ರದೇಶದಾದ್ಯಂತ ಅಲ್ಲಲ್ಲಿ ಹಾಗೂ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ದಕ್ಷಿಣ ಒಳನಾಡು

ಇನ್ನು ಮುನ್ಸೂಚನೆಯ ಇಡೀ ಅವಧಿಯಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ಕರ್ನಾಟಕಕ್ಕೆ ಮುಂಗಾರು ಪ್ರವೇಶ ಯಾವಾಗ ?

ಕಳೆದ ತಿಂಗಳು ಅಂತ್ಯಕ್ಕೆ ಅಂದರೆ ಮೇ 26ರಂದು ಕೇರಳಕ್ಕೆ ಮುಂಗಾರು ಪ್ರವೇಶ ಮಾಡುತ್ತೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿತ್ತು. ಆದ್ರೆ, ಇದೀಗ ಜೂನ್ 4ರಂದು ಅಧಿಕೃತವಾಗಿ ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ ಎಂದು IMD ಸ್ಪಷ್ಟಪಡಿಸಿದೆ. ಹೀಗಾಗಿ ಸಾಮಾನ್ಯವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿದ 3ರಿಂದ 5 ದಿನಗಳ ಒಳಗಾಗಿ ಮಳೆ ಕರ್ನಾಟಕವನ್ನು ತಲುಪುತ್ತದೆ. ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಿದರೆ, ಜೂನ್ 7 ಅಥವಾ 8ರ ವೇಳೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಭಾಗಗಳಿಗೆ ಮುಂಗಾರು ಮಾರುತಗಳು ತಲುಪಲಿವೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಕರ್ನಾಟಕದ ಮ್ತತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:58 pm, Tue, 2 June 26

Source link

Leave a Reply

Your email address will not be published. Required fields are marked *