Headlines

KKR ಇತಿಹಾಸದಲ್ಲೇ ಕಪ್ಪು ಚುಕ್ಕೆ: ಗೆಲುವಿಲ್ಲದೆ ದಾಖಲೆ ಬರೆದ ನೈಟ್ ರೈಡರ್ಸ್! – Kannada News | For the first time in history, KKR remain winless after the first 5 matches

IPL 2026: ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಕೋಲ್ಕತ್ತಾ ನೈಟ್ ರೈಡರ್ಸ್ (KKR), 2026ರ ಸೀಸನ್‌ನಲ್ಲಿ ಎಂದೂ ಕಂಡಿರದಂತಹ ಹೀನಾಯ ಸ್ಥಿತಿಗೆ ತಲುಪಿದೆ. ಸೀಸನ್ ಆರಂಭವಾಗಿ 5 ಪಂದ್ಯಗಳು ಕಳೆದಿದ್ದರೂ, ಕೆಕೆಆರ್ ಖಾತೆಯಲ್ಲಿ ಈವರೆಗೆ ಒಂದೂ ಗೆಲುವು ದಾಖಲಾಗಿಲ್ಲ. ಇದು ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಇತಿಹಾಸದಲ್ಲೇ ಅತ್ಯಂತ ಕಳಪೆ ಆರಂಭ ಎಂಬುದು ವಿಶೇಷ.

ಇತಿಹಾಸದಲ್ಲಿ ಇದೇ ಮೊದಲು!

ಹಿಂದಿನ ಸೀಸನ್‌ಗಳಲ್ಲಿ ಕೆಕೆಆರ್ ಸತತ ಸೋಲುಗಳನ್ನು ಕಂಡಿದ್ದ ನಿದರ್ಶನಗಳಿವೆ (ಉದಾಹರಣೆಗೆ 2009ರಲ್ಲಿ ಸತತ 9 ಸೋಲು). ಆದರೆ, ಸೀಸನ್‌ನ ಮೊದಲ 5 ಪಂದ್ಯಗಳಲ್ಲಿ ಯಾವುದೇ ಗೆಲುವು ಸಾಧಿಸದಿರುವುದು ಇದೇ ಮೊದಲು. ಹೀಗಾಗಿ ಐಪಿಎಲ್ 2026ರ ಕೆಕೆಆರ್ ಪಾಲಿನ ಅತ್ಯಂತ ಕೆಟ್ಟ ಸೀಸನ್​ ಎಂದು ವಿಶ್ಲೇಷಿಸಲಾಗುತ್ತಿದೆ.

ಕೆಕೆಆರ್ ಪ್ರದರ್ಶನ:

  • ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್‌ಗಳ ಸೋಲು.
  • ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 65 ರನ್‌ಗಳ ಬೃಹತ್ ಸೋಲು.
  • ಪಂಜಾಬ್ ಕಿಂಗ್ಸ್ ವಿರುದ್ಧ  ಮಳೆಯಿಂದಾಗಿ ಪಂದ್ಯ ರದ್ದು.
  • ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 3 ವಿಕೆಟ್‌ಗಳ ಸೋಲು.
  • ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 32 ರನ್‌ಗಳ ಸೋಲು.

ತಂಡದ ಹಿನ್ನಡೆಗೆ ಪ್ರಮುಖ ಕಾರಣಗಳು:

ಬ್ಯಾಟಿಂಗ್ ವೈಫಲ್ಯ: ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ. ವಿಶೇಷವಾಗಿ ಪವರ್‌ಪ್ಲೇ ಅವಧಿಯಲ್ಲಿ ವಿಕೆಟ್ ಕಳೆದುಕೊಳ್ಳುತ್ತಿರುವುದು ತಂಡಕ್ಕೆ ದೊಡ್ಡ ಹೊಡೆತ ನೀಡುತ್ತಿದೆ.

ಬೌಲಿಂಗ್‌ನಲ್ಲಿ ಲಯದ ಕೊರತೆ: ಡೆತ್ ಓವರ್‌ಗಳಲ್ಲಿ ರನ್ ನಿಯಂತ್ರಿಸಲು ಬೌಲರ್‌ಗಳು ಪರದಾಡುತ್ತಿದ್ದಾರೆ.

ನಾಯಕತ್ವದ ಒತ್ತಡ: ನಾಯಕ ಅಜಿಂಕ್ಯ ರಹಾನೆ ತಂಡದಲ್ಲಿ ಸಮತೋಲನ ತರಲು ಪ್ರಯತ್ನಿಸುತ್ತಿದ್ದರೂ, ಮೈದಾನದಲ್ಲಿ ಅದು ಫಲ ನೀಡುತ್ತಿಲ್ಲ.

ಸ್ಟಾರ್ ಆಟಗಾರರ ವೈಫಲ್ಯ: ಕೆಕೆಆರ್ ತಂಡದಲ್ಲಿ ಕ್ಯಾಮರೋನ್ ಗ್ರೀನ್, ಸುನಿಲ್ ನರೈನ್, ಫಿನ್ ಅಲೆನ್​ನಂತಹ ಸ್ಟಾರ್ ಆಟಗಾರರಿದ್ದರೂ ಯಾರಿಂದಲೂ ಕೂಡ ನಿರೀಕ್ಷಿತ ಪ್ರದರ್ಶನ ಮೂಡಿ ಬರುತ್ತಿಲ್ಲ.

ಮುಂದಿರುವ ಸವಾಲು:

ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಕೆಕೆಆರ್, ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಏಪ್ರಿಲ್ 17ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯ ತಂಡಕ್ಕೆ ಮಾಡು ಇಲ್ಲವೇ ಮಡಿ ಎಂಬಂತಿದೆ.

ಇದನ್ನೂ ಓದಿ: RCB vs LSG ಪಂದ್ಯಕ್ಕೆ 4 ಆಟಗಾರರು ಅಲಭ್ಯ..!

ಇತ್ತ ಮೊದಲ ಐದು ಮ್ಯಾಚ್​ಗಳಲ್ಲಿ 4 ರಲ್ಲಿ ಸೋತಿದ್ದರೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಮುಂದಿನ ಮ್ಯಾಚ್​ಗಳಲ್ಲಿ ಗೆಲ್ಲುವ ಮೂಲಕ ಫೈನಲ್​ಗೇರುವ ವಿಶ್ವಾಸದಲ್ಲಿದ್ದಾರೆ ಕೆಕೆಆರ್​ ಅಭಿಮಾನಿಗಳು. ಅದರಲ್ಲೂ 2012 ರಲ್ಲಿ ಮೊದಲೆರಡು ಮ್ಯಾಚ್​ಗಳಲ್ಲಿ ಸೋತು ಟ್ರೋಫಿ ಎತ್ತಿ ಹಿಡಿದಿದ್ದ ಕೆಕೆಆರ್ ತಂಡದ ಇತಿಹಾಸ ಮರುಕಳಿಸಲು ಎಂದು ಅಭಿಮಾನಿಗಳು
ಆಶಿಸುತ್ತಿದ್ದಾರೆ. ಅದರಂತೆ ಕಳಪೆ ಆರಂಭದ ನಡುವೆಯೂ ಟ್ರೋಫಿ ಗೆದ್ದಿದ್ದ ಕೆಕೆಆರ್, ಈ ಬಾರಿಯೂ ಅದೇ ರೀತಿ ಫೀನಿಕ್ಸ್‌ನಂತೆ ಎದ್ದು ಬರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Published On – 8:23 am, Wed, 15 April 26

Source link

Leave a Reply

Your email address will not be published. Required fields are marked *