Headlines

LSG vs CSK: 3 ವಿಕೆಟ್ ಉರುಳಿಸಿ ಚೀಟಿ ಹೊರ ತೆಗೆದು ಸಂಭ್ರಮಿಸಿದ ಲಕ್ನೋ ವೇಗಿ – Kannada News | Akash Singh’s IPL 2026 Heroics: LSG Pacer Shines vs CSK with 3 Wicket Haul

ಐಪಿಎಲ್ 2026 ರ 59 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ವೇಗಿ ಆಕಾಶ್ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದರು. ಈ ಸೀಸನ್​ನಲ್ಲಿ ಮೊದಲ ಪಂದ್ಯವನ್ನಾಡಿದ ಆಕಾಶ್ ಸಿಕ್ಕ ಅವಕಾಶವನ್ನು ಸ್ಮರಣೀಯವಾಗಿಸಿದರು. ಆಕಾಶ್ ಸಿಂಗ್ ತಮ್ಮ ಮೊದಲ ಓವರ್‌ನಲ್ಲಿ ಕೇವಲ 7 ರನ್‌ಗಳನ್ನು ಬಿಟ್ಟುಕೊಟ್ಟು ಉತ್ತಮ ಆರಂಭ ಪಡೆದರು. ನಂತರ, ತಮ್ಮ ಎರಡನೇ ಓವರ್‌ನಲ್ಲಿ, ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಔಟ್ ಮಾಡಿ, ಸೀಸನ್​ನ ಮೊದಲ ವಿಕೆಟ್ ಪಡೆದರು.

ವಿಕೆಟ್ ಪಡೆದ ನಂತರ ವಿಶಿಷ್ಟ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ ಆಕಾಶ್ ತಮ್ಮ ಜೇಬಿನಿಂದ ಒಂದು ಕಾಗದದ ತುಣುಕನ್ನು ಹೊರತೆಗೆದರು, ಅದರಲ್ಲಿ “ಅಕ್ಕಿ ಆನ್ ಫೈಯರ್! ಟಿ20 ಪಂದ್ಯಗಳಲ್ಲಿ ವಿಕೆಟ್ ಪಡೆಯುವುದು ಹೇಗೆ ಎಂಬುದು ಆಕಾಶ್​ಗೆ ಗೊತ್ತು ಎಂದು ಬರೆಯಲಾಗಿತ್ತು. ನಂತರ, ಮೂರನೇ ಓವರ್‌ನಲ್ಲಿ, ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಎರಡನೇ ವಿಕೆಟ್ ಪಡೆದರು. ಆಗಲೂ ಸಹ ಮತ್ತದೇ ಕಾಗದದ ತುಣುಕನ್ನು ಹೊರ ತೆಗೆದು ಆಚರಿಸಿದರು.

ಪವರ್‌ಪ್ಲೇ ನಂತರವೂ ಬೌಲಿಂಗ್ ಮುಂದುವರೆಸಿದ ಆಕಾಶ್ ಸಿಂಗ್ ತಮ್ಮ ಸತತ ನಾಲ್ಕನೇ ಓವರ್ ಬೌಲಿಂಗ್ ಮಾಡಿದರು. ಈ ಓವರ್‌ನಲ್ಲಿ ಅವರು ಉರ್ವಿಲ್ ಪಟೇಲ್ ಅವರನ್ನು ಸಹ ಔಟ್ ಮಾಡಿದರು. ಇದರರ್ಥ ಅವರು 4 ಓವರ್‌ಗಳಲ್ಲಿ 26 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿದರು, ಇದು ಅವರ ಐಪಿಎಲ್ ವೃತ್ತಿಜೀವನದ ಅತ್ಯುತ್ತಮ ಸ್ಪೆಲ್ ಆಗಿದೆ.

Source link

Leave a Reply

Your email address will not be published. Required fields are marked *