LSG vs DC: ಮೊದಲ ಓವರ್ ಮೊದಲ ಎಸೆತದಲ್ಲೇ ಸೊನ್ನೆ ಸುತ್ತಿದ ಕೆಎಲ್ ರಾಹುಲ್

LSG vs DC: ಮೊದಲ ಓವರ್ ಮೊದಲ ಎಸೆತದಲ್ಲೇ ಸೊನ್ನೆ ಸುತ್ತಿದ ಕೆಎಲ್ ರಾಹುಲ್

ಲಕ್ನೋದ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ ಐದನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್​ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ, ಡೆಲ್ಲಿ ಬೌಲಿಂಗ್ ದಾಳಿಗೆ ನಲುಗಿ ಪೂರ್ಣ 20 ಓವರ್​ಗಳನ್ನು ಆಡಲಾಗದೆ, ಕೇವಲಮ 141 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ಆಘಾತ ಎದುರಾಯಿತು.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಆವೃತ್ತಿಯಿಂದ ತನ್ನ ಆರಂಭಿಕರಲ್ಲಿ ಬದಲಾವಣೆ ಮಾಡಿದೆ. ಅದರಂತೆ ಕನ್ನಡಿಗ ಕೆಎಲ್ ರಾಹುಲ್ ಹಾಗೂ ಶ್ರೀಲಂಕಾದ ಪಾತುಮ್ ನಿಸ್ಸಾಂಕ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿ ಹೊತ್ತಿದ್ದರು. ಇತ್ತ ಲಕ್ನೋ ಪರ ಅನುಭವಿ ಮೊಹಮ್ಮದ್ ಶಮಿ ಬೌಲ್ ಮಾಡಿದ ಮೊದಲ ಓವರ್​ನ ಮೊದಲ ಎಸೆತವನ್ನು ಎದುರಿಸಲು ಸ್ಟ್ರೈಕ್ ತೆಗೆದುಕೊಂಡ ಕೆಎಲ್ ರಾಹುಲ್ ಮೊದಲ ಎಸೆತವನ್ನು ಸಿಕ್ಸರ್ ಸಿಡಿಸುವ ಯತ್ನದಲ್ಲಿ ಡೀಪ್ ಬ್ಯಾಕ್ವರ್ಡ್​ ಪಾಯಿಂಟ್ ದಿಕ್ಕಿನಲ್ಲಿ ಮೊಹ್ಸಿನ್ ಖಾನ್​ಗೆ ಕ್ಯಾಚ್ ನೀಡಿದರು. ಹೀಗಾಗಿ ರಾಹುಲ್​ಗೆ ಮೊದಲ ಪಂದ್ಯದಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

Source link

Leave a Reply

Your email address will not be published. Required fields are marked *