ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದಾಗ್ಯೂ ಕೊಹ್ಲಿ ಅವರ ಇನ್ನಿಂಗ್ಸ್ನಲ್ಲಿ ಪವರ್ ಇರಲಿಲ್ಲ. ಅಂದರೆ ಈ ಅರ್ಧಶತಕ ಪೂರೈಸಲು ಕೊಹ್ಲಿ 38 ಎಸೆತಗಳಲ್ಲಿ 50 ರನ್ ಬಾರಿಸಿದರು.
ಈ ನಿಧಾನಗತಿಯ ಅರ್ಧಶತಕದ ಹೊರತಾಗಿಯೂ ಕೊಹ್ಲಿ, ಸಾಲ್ಟ್ ಹಾಗೂ ಪಾಟಿದರ್ ಅವರೊಂದಿಗೆ ಶತಕ ಮತ್ತು ಅರ್ಧಶತಕದ ಜೊತೆಯಾಟವನ್ನಾಡುವ ಮೂಲಕ ತಂಡಕ್ಕೆ ನೆರವಾದರು. ಮಾತ್ರವಲ್ಲದೆ ತಮ್ಮ ಅರ್ಧಶತಕದ ಇನ್ನಿಂಗ್ಸ್ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ವಿರಾಟ್ ವಿಶೇಷ ದಾಖಲೆಯನ್ನು ಸೃಷ್ಟಿಸಿದರು.
ಈ ಪಂದ್ಯದಲ್ಲಿ 50 ರನ್ಗಳ ಇನ್ನಿಂಗ್ಸ್ ಆಡಿದ ಕೊಹ್ಲಿ, ಈ ಇನ್ನಿಂಗ್ಸ್ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧ 1000 ರನ್ಗಳ ಗಡಿ ದಾಟಿದ ಸಾಧನೆಯನ್ನು ಮಾಡಿದರು. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು. ಇದರಲ್ಲಿ ಐಪಿಎಲ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಗಳಿಸಿದ ರನ್ಗಳು ಸೇರಿವೆ.
ಈ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಗಳಿಸಿದರು ಆದರೆ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ಅವರು 50 ರನ್ ಗಳಿಸುವ ಮೂಲಕ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಅವರ ಒಟ್ಟು ಮೊತ್ತವನ್ನು 972 ಕ್ಕೆ ಏರಿಸಿದರು. ಈ ವಿಚಾರದಲ್ಲಿ ಕನ್ನಡಿಗ ಕೆಎಲ್ ರಾಹುಲ್, ಮುಂಬೈ ವಿರುದ್ಧ ಇದುವರೆಗೆ 977 ರನ್ ಬಾರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಜೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಉತ್ತಮ ಆರಂಭವನ್ನು ನೀಡಿತು. ಅವರು ಮೊದಲ ವಿಕೆಟ್ಗೆ 65 ಎಸೆತಗಳಲ್ಲಿ 120 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಸಾಲ್ಟ್ ಮತ್ತು ಕೊಹ್ಲಿ ನಡುವಿನ 120 ರನ್ಗಳ ಪಾಲುದಾರಿಕೆ ಐಪಿಎಲ್ನಲ್ಲಿ ಮುಂಬೈ ವಿರುದ್ಧ ಆರ್ಸಿಬಿ ಪರ ಎರಡನೇ ಅತ್ಯಧಿಕ ಆರಂಭಿಕ ಪಾಲುದಾರಿಕೆಯಾಗಿದೆ.




