ನವದೆಹಲಿ, ಜುಲೈ 26: ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಅಸಾಧಾರಣ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಿದ ಪ್ರಧಾನಿ, ಕಾರ್ಗಿಲ್ ದಿನವು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಕೇತವಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ(Narendra Modi) ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 136ನೇ ಸಂಚಿಕೆಯ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.
“ಕಾರ್ಗಿಲ್ ವಿಜಯ್ ದಿವಸ್ ಎಂಬುದು ಕೇವಲ ಒಂದು ದಿನಾಂಕವಲ್ಲ, ಅದು ನಮ್ಮ ರಾಷ್ಟ್ರದ ಶೌರ್ಯ ಮತ್ತು ತ್ಯಾಗದ ಅಮರ ಕಥೆಯಾಗಿದೆ. ದೇಶದ ಗಡಿಯನ್ನು ರಕ್ಷಿಸಲು ನಮ್ಮ ವೀರ ಸೈನಿಕರು ತೋರಿದ ಅಪ್ರತಿಮ ಧೈರ್ಯವನ್ನು ಈ ದಿನ ನಮಗೆ ನೆನಪಿಸುತ್ತದೆ” ಎಂದು ಪ್ರಧಾನಿ ಬಣ್ಣಿಸಿದರು.
ಇದೇ ವೇಳೆ, ಜಲಸಂರಕ್ಷಣೆಯ ಮಹತ್ವವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮಳೆಗಾಲದ ಈ ಸಮಯದಲ್ಲಿ ‘ಕ್ಯಾಚ್ ದಿ ರೇನ್’ಅಭಿಯಾನದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಜುಲೈ 4 ರಿಂದ ದೇಶಾದ್ಯಂತ ಚುರುಕುಗೊಂಡಿರುವ ಈ ವಿಶೇಷ ಆಂದೋಲನದಡಿ, ಪ್ರತಿಯೊಬ್ಬರೂ ಬಿದ್ದ ಪ್ರತಿಯೊಂದು ಹನಿ ಮಳೆನೀರನ್ನು ವ್ಯರ್ಥ ಮಾಡದೆ ಇಂಗುಗುಂಡಿಗಳು ಹಾಗೂ ಜಲಮೂಲಗಳ ಮೂಲಕ ಭೂಮಿಯ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಮತ್ತಷ್ಟು ಓದಿ: “ಥ್ಯಾಂಕ್ಯೂ ಫ್ರೆಂಡ್ಸ್”: ಮತ್ತೊಂದು ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಪ್ರಸಾರ ಭಾರತಿ ಮತ್ತು ಐಐಎಂ ರೋಹ್ಟಕ್ ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಕನಿಷ್ಠ ಒಮ್ಮೆಯಾದರೂ ಕೇಳಿದವರ ಸಂಖ್ಯೆ 100 ಕೋಟಿ (1 ಬಿಲಿಯನ್) ತಲುಪಿದ್ದು, ದೇಶದ ಶೇಕಡಾ 96 ರಷ್ಟು ಜನರಿಗೆ ಈ ಕಾರ್ಯಕ್ರಮದ ಅರಿವಿದೆ. ಸಮಾಜ, ಶಿಕ್ಷಣ, ಸಂಸ್ಕೃತಿ ಮತ್ತು ನಾವೀನ್ಯತೆಯ ಯಶೋಗಾಥೆಗಳನ್ನು ಪ್ರಚುರಪಡಿಸುವ ಈ ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೋ, ದೂರದರ್ಶನ ಮತ್ತು ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಹಿಂದಿ ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲಾಯಿತು.
ಮಾಹಿತಿ ಅಪ್ಡೇಟ್ ಆಗಲಿದೆ
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 11:21 am, Sun, 26 July 26