ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್​ಗಳೇ ಗಮನಿಸಿ; ಮಾನಿಟೈಸಿಂಗ್ ನಿಯಮಗಳಲ್ಲಿ ಆಗಿದೆ ಪ್ರಮುಖ ಬದಲಾವಣೆ – Kannada News | YouTube sets new criteria for content creators, here are few rule changes

ಯೂಟ್ಯೂಬ್Image Credit source: CFOTO/Future Publishing via Getty Images

ನವದೆಹಲಿ, ಆಗಸ್ಟ್ 16: ಯೂಟ್ಯೂಬ್ ತನ್ನ ಯೂಟ್ಯೂಬ್ ಪಾರ್ಟ್‌ನರ್ ಪ್ರೋಗ್ರಾಂಗೆ (YPP) ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಘೋಷಿಸಿದೆ. 2018ರ ನಂತರ ಯೂಟ್ಯೂಬ್ ಅರ್ಹತಾ ನಿಯಮಗಳಲ್ಲಿ (Youtube eligibility rules) ಮಾಡುತ್ತಿರುವ ಪ್ರಮುಖ ಬದಲಾವಣೆ ಇದಾಗಿದ್ದು, 2027ರ ಫೆಬ್ರವರಿ 1ರಿಂದ ಹೊಸದಾಗಿ ಸೇರ್ಪಡೆಯಾಗುವ ಕ್ರಿಯೇಟರ್ಸ್‌ಗಳಿಗೆ ಇದು ಅನ್ವಯಿಸಲಿದೆ. ಯೂಟ್ಯೂಬ್​ನಲ್ಲಿ ಹೊಸದಾಗಿ ಚಾನಲ್ ಆರಂಭಿಸಿ, ಆದಾಯ ಗಳಿಸಲು ಬಯಸುವ ಕಂಟೆಂಟ್ ಕ್ರಿಯೇಟರ್ಸ್​ಗೆ (content creators) ತುಸು ಕ್ಲಿಷ್ಟಕರ ಸವಾಲು ಇರಲಿದೆ.

ಜಾಹೀರಾತು (Ads) ಮತ್ತು ಯೂಟ್ಯೂಬ್ ಪ್ರೀಮಿಯಂ (YouTube Premium) ಮೂಲಕ ಗಳಿಕೆ ಆರಂಭಿಸಲು ಹೊಸ ಕ್ರಿಯೇಟರ್ಸ್‌ಗಳು ಇನ್ಮುಂದೆ ಹೆಚ್ಚಿನ ಅರ್ಹತೆ ಹೊಂದಿರಬೇಕಾಗುತ್ತದೆ:

  • ವೀಕ್ಷಣಾ ಅವಧಿ (Watch Hours): ಕಳೆದ 365 ದಿನಗಳಲ್ಲಿ 8,000 ಅರ್ಹ ವಾಚ್ ಅವರ್ಸ್‌ ಹೊಂದಿರಬೇಕು. ಹಿಂದೆ ಇದು 4,000 ಗಂಟೆಗಳಷ್ಟಿತ್ತು. ವಾಟ್ ಅವರ್ಸ್ ಎಂದರೆ ಒಂದು ಚಾನಲ್​ನ ಎಲ್ಲಾ ವಿಡಿಯೋಗಳನ್ನು ಸೇರಿಸಿ ವೀಕ್ಷಕರು ಒಟ್ಟಾರೆ ಎಷ್ಟು ಗಂಟೆ ವೀಕ್ಷಿಸಿದ್ದಾರೆ ಎಂಬುದು.
  • ಶಾರ್ಟ್ಸ್ ವೀಕ್ಷಣೆ (Shorts Views): ಕಳೆದ 90 ದಿನಗಳಲ್ಲಿ 2 ಕೋಟಿ ಶಾರ್ಟ್ಸ್ ವೀವ್ಸ್ ಪಡೆದಿರಬೇಕು. ಹಿಂದೆ 1 ಕೋಟಿ ಇತ್ತು.
  • ಸಬ್‌ಸ್ಕ್ರೈಬರ್‌ಗಳು: ಕನಿಷ್ಠ 1,000 ಸಬ್‌ಸ್ಕ್ರೈಬರ್ ಹೊಂದಿರಬೇಕೆಂಬ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ.

ಇದನ್ನೂ ಓದಿ: ಕರ್ನಾಟಕಕ್ಕೆ 2047ಕ್ಕೆ 3 ಟ್ರಿಲಿಯನ್ ಆರ್ಥಿಕತೆ ಗುರಿ; ಉದ್ಯೋಗ ಸಂಕಲ್ಪ, ಉದ್ಯೋಗ ನಿಧಿ, ಶಿಕ್ಷಣದಲ್ಲಿ ಎಐ ಇತ್ಯಾದಿ ಯೋಜನೆ ಪ್ರಕಟ

ವೀಕ್ಷಣಾ ಅವಧಿ ಮತ್ತು ಶಾರ್ಟ್ಸ್ ವೀಕ್ಷಣೆಯ ನಿಯಮಗಳಲ್ಲಿ ಮಾನದಂಡವು ಎರಡು ಪಟ್ಟು ಹೆಚ್ಚಾಗಿರುವುದನ್ನು ಗಮನಿಸಬೇಕು. ಈಗಾಗಲೇ YPP ಸೇರಿರುವ ಹಾಲಿ ಯೂಟ್ಯೂಬರ್‌ಗಳಿಗೆ ಈ ಹೊಸ ನಿಯಮಗಳು ಅನ್ವಯಿಸುವುದಿಲ್ಲ, ಅವರ ಆದಾಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.

ಕೃತಕ ಬುದ್ಧಿಮತ್ತೆ (AI) ಮತ್ತು ನಕಲಿ ವೀಡಿಯೊಗಳಿಗೆ ಕಟ್ಟುನಿಟ್ಟಿನ ತಡೆ

ಎಐ (AI) ಬಳಸಿ ದೊಡ್ಡ ಸಂಖ್ಯೆಯಲ್ಲಿ, ಮತ್ತು ಒಂದೇ ಶೈಲಿ ಹಾಗೂ ಮಾದರಿಯಲ್ಲಿ (Template-based) ದೊಡ್ಡ ಸಂಖ್ಯೆಯಲ್ಲಿ ನಿರ್ಮಿಸುವ ಕಂಟೆಂಟ್​ಗೆ ಕಡಿವಾಣ ಹಾಕಲು ನಿಯಮ ಬಿಗಿಗೊಳಿಸಲಾಗಿದೆ.

ವೀಡಿಯೊಗಳಲ್ಲಿ ಕ್ರಿಯೇಟರ್ಸ್ ಸ್ವಂತ ಧ್ವನಿ, ನಿರೂಪಣೆ, ಎಡಿಟಿಂಗ್ ಅಥವಾ ಹೊಸ ವಿಷಯಗಳನ್ನು ಸೇರಿಸದಿದ್ದರೆ ಅಂತಹ ಚಾನೆಲ್‌ಗಳು ಡಿ-ಮಾನಿಟೈಸ್ (Demonetize) ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ: ತೆರಿಗೆದಾರರಿಗೆ FAST-DS ಸ್ಕೀಮ್; ವಿದೇಶಿ ಆಸ್ತಿಗಳನ್ನು ಸ್ವಯಂ ಆಗಿ ಘೋಷಿಸಲು ಹೊಸ ಯೋಜನೆ

ಫ್ಯಾನ್ ಫಂಡಿಂಗ್ ಮತ್ತು ಶಾಪಿಂಗ್‌ಗೆ ಹಳೆಯ ನಿಯಮವೇ ಅನ್ವಯ

ಸೂಪರ್ ಚಾಟ್, ಚಾನೆಲ್ ಮೆಂಬರ್‌ಶಿಪ್ ಮತ್ತು ಯೂಟ್ಯೂಬ್ ಶಾಪಿಂಗ್ (Shopping) ಫೀಚರ್‌ಗಳ ಮೂಲಕ ಗಳಿಸುವ ಫ್ಯಾನ್ ಫಂಡಿಂಗ್ ಅರ್ಹತಾ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಯೂಟ್ಯೂಬ್‌ನ ಈ ಕ್ರಮವು ಪ್ಲಾಟ್‌ಫಾರ್ಮ್‌ನಲ್ಲಿ ಗುಣಮಟ್ಟದ ಹಾಗೂ ಮೂಲ ಸೃಜನಶೀಲ (Original) ವೀಡಿಯೊಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs SL: 2ನೇ ದಿನ ಲಂಕಾ ಸ್ಪಿನ್ನರ್​ಗಳ ಪ್ರಾಬಲ್ಯ; 460 ರನ್ ಕಲೆಹಾಕಿದ ಭಾರತ – Kannada News | IND vs SL Test Day 2 Report: India Crumbles to 460/9 Amidst Rain Delays

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟ ಅಂತ್ಯವಾಗಿದೆ. ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಮೊದಲ ದಿನ ಕೇವಲ2 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಟೀಂ ಇಂಡಿಯಾ ಎರಡನೇ ದಿನದಾಟದ ಕೆಲವೇ ಗಂಟೆಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ ಎರಡನೇ ದಿನದಾಟದ ಅಂತ್ಯದ ವೇಳೆಗೆ ಭಾರತ 9 ವಿಕೆಟ್‌ ಕಳೆದುಕೊಂಡು 460 ರನ್ ಕಲೆಹಾಕಿದೆ. ತಂಡದ ಪರ ಕುಲ್ದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ ಕ್ರೀಸ್‌ನಲ್ಲಿದ್ದಾರೆ. ಮಳೆಯಿಂದಾಗಿ ಎರಡನೇ ದಿನದ ಆಟ ಸಮಯಕ್ಕೆ ಸರಿಯಾಗಿ ಆರಂಭವಾಗಲಿಲ್ಲ. ಎರಡನೇ ದಿನದ ಮೊದಲ ಸೆಷನ್ ಮಳೆಯಿಂದ ರದ್ದಾಯಿತು. ಹೀಗಾಗಿ ಎರಡನೇ ದಿನದ ಆಟವನ್ನು ಪೂರ್ಣ 4 ಗಂಟೆಗಳ ಕಾಲವೂ ಆಡಲು ಸಾಧ್ಯವಾಗಲಿಲ್ಲ.

Source link

ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್ – Kannada News | Karnataka BJP Leader Files Complaint Against Sonia Gandhi Over Vande Mataram Row: ‘She Disrespected National Song’

ಮಂಗಳೂರು.ನವದೆಹಲಿ, (ಆಗಸ್ಟ್ 16): ನವದೆಹಲಿಯಲ್ಲಿರುವ ಕಾಂಗ್ರೆಸ್ (Congress) ಪ್ರಧಾನ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ (Independence Day) ಕಾರ್ಯಕ್ರಮದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬೆನ್ನಲ್ಲೇ ಹೊಸ ರಾಜಕೀಯ ವಿವಾದ ಸೃಷ್ಟಿಯಾಗಿದೆ. ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ (Vande Mataram) ಗಾಯನವನ್ನು ನಿಲ್ಲಿಸುವಂತೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಕಾರ್ಯಕರ್ತರಿಗೆ ಸನ್ನೆ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರಗೀತೆಗೆ ನೀಡುವ ಗೌರವವನ್ನೇ ವಂದೇ ಮಾತರಂ ಗೀತೆಗೂ ನೀಡಬೇಕೆಂಬ ನಿಯಮವಿದ್ದರೂ ಸೋನಿಯಾ ಗಾಂಧಿ ವಂದೇ ಮಾತರಂ ಗೀತೆ ಪ್ಲೇ ಆಗುತ್ತಿದ್ದಂತೆ ಕಾರ್ಯಕರ್ತರ ಬಳಿ ಬಿಸಿಬಿಸಿ ಚರ್ಚೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿದ್ದು, ಇದೀಗ ಇದನ್ನೇ ಇಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಗಬಿದ್ದಿದ್ದಾರೆ. ಅಲ್ಲದೇ ಈ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಮುಖಂಡ ದೂರು ದಾಖಲಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಶಾಂತಿಭಂಗ ಮಾಡಿದ್ದಾರೆ ಎಂದು ಆರೋಪಿಸಿ ಮಂಗಳೂರು ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಎಂಬುವರು ಸೋನಿಯಾ ಗಾಂಧಿ ವಿರುದ್ಧ ಉರ್ವಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿಕಾಸ್, ‘ವಂದೇ ಮಾತರಂ’ ನಮ್ಮ ರಾಷ್ಟ್ರಗೀತೆಯಾದ ‘ಜನ ಗಣ ಮನ’ಕ್ಕೆ ಸಮಾನವಾಗಿದೆ. ಯಾರೇ ಆಗಲಿ ಅವರ ಹುದ್ದೆ ಅಥವಾ ಅಧಿಕಾರ ಏನೇ ಇರಲಿ ಇದನ್ನು ಅವಮಾನಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ, ಸೋನಿಯಾ ಗಾಂಧಿ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳುವಂತೆ ಮತ್ತು ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಾನು ಉರ್ವ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ನೀಡಿದ್ದೇನೆ’ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Viral: ಕೆಲಸ ಬಿಟ್ಟು ಮನೆಯಲ್ಲಿ ಇರ್ಬೇಕು; ಯುವಕನ ಕಂಡೀಶನ್ ಕೇಳಿ ಪ್ರಪೋಸಲ್ ರಿಜೆಕ್ಟ್ ಮಾಡಿದ ಐಟಿ ಉದ್ಯೋಗಿ – Kannada News | Bengaluru: Bengaluru Young woman calls off proposal due to young man’s condition

ಸಾಂದರ್ಭಿಕ ಚಿತ್ರImage Credit source: SimpleImages/Moment/Getty Images

ಈಗಿನ ಕಾಲದಲ್ಲಿ ಹೆಣ್ಣು ಕೂಡ ಗಂಡಿನಷ್ಟೇ ಸರಿಸಮಾನಳಾಗಿ ನಿಂತಿದ್ದಾಳೆ. ಆರ್ಥಿಕ ಸ್ವಾತಂತ್ರ್ಯ ಬಯಸುವ ಹೆಣ್ಣಿಗೆ ಮದುವೆಯಾದ (marriage) ಬಳಿಕ ಕೆಲಸಕ್ಕೆ ಹೋಗಬೇಡ ಅಂದ್ರೆ ಅಂತಹ ಹುಡುಗನೇ ಬೇಡ ಅನ್ನೋರೇ ಹೆಚ್ಚು. ಹೀಗಿರುವಾಗ ಈಗಿನ ಕಾಲದ ಹೆಣ್ಣು ಮಕ್ಕಳಿಗೆ ಕಂಡೀಶನ್ ಹಾಕಿದ್ರೆ ಕ್ಯಾರೇ ಅನ್ನಲ್ಲ. ಇದೀಗ ಬೆಂಗಳೂರಿನ ಯುವತಿಯೊಬ್ಬಳು ಮದುವೆಯ ಬಳಿಕ ಕೆಲಸಕ್ಕೆ ಹೋಗಬಾರದು ಎಂದು ಕಂಡೀಷನ್ ಹಾಕಿದ್ದೇ ತಡ, ತಿಂಗಳಿಗೆ ಬರೊಬ್ಬರಿ 2 ಲಕ್ಷ  ರೂ ವೇತನ ಪಡೆಯುತ್ತಿದ್ದ ಪ್ರಪೋಸಲ್‌ನ್ನೇ ರಿಜೆಕ್ಟ್ ಮಾಡಿದ್ದಾಳೆ. ಈ ಬಗ್ಗೆ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಯುವಕನ ಮನಸ್ಥಿತಿಯನ್ನು ಟೀಕಿಸಿದ್ದಾರೆ.

ನಂದಿನಿ ಎಂ (nandini m) ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾಳೆ. ಈ ಪೋಸ್ಟ್ ನಲ್ಲಿ ಕೆಲವು ತಿಂಗಳ ಹಿಂದೆ ನನ್ನ ತಾಯಿ ಮದುವೆ ಪ್ರಸ್ತಾಪ ಮುಂದಿಟ್ಟು ಎಮೋಷನಲ್ ಬ್ಲಾಕ್ ಮೇಲ್ ಮಾಡಿದ್ರು. ಈ ಯುವಕನು ತಿಂಗಳಿಗೆ 2 ಲಕ್ಷ ರೂ ಮೊತ್ತವನ್ನು ಗಳಿಸುತ್ತಿದ್ದ. ನಾನು ಐಟಿ ಕೆಲಸದಲ್ಲಿದ್ದ ಕಾರಣ ನನ್ನ ತಿಂಗಳ ಸಂಬಳ 90,000 ರೂ ಆಗಿತ್ತು. ಆದರೆ ಈ ಯುವಕನು ನನ್ನ ಕುಟುಂಬದ ವೆಚ್ಚಕ್ಕೆ ಶೇ. 50ರಷ್ಟು ಹಣ ನೀಡಬೇಕು ಇಲ್ಲವಾದ್ರೆ ಈ ಕೆಲಸ ಬಿಟ್ಟು ಗೃಹಿಣಿಯಾಗಿ ಮನೆಯಲ್ಲಿ ಇರುತ್ತೀಯಾ ಎಂದು ಪ್ರಶ್ನೆ ಮಾಡಿದ್ದಾನೆ.

ವೈರಲ್ ಪೋಸ್ಟ್ ಇಲ್ಲಿದೆ

ಇದಕ್ಕೆ ಏನು ಪ್ರತಿಕ್ರಿಯೆ ನೀಡದೇ ಇದ್ದಾಗ ಮತ್ತೆ ಮಹಿಳೆಯರಿಗೆ ಕೆಲಸದ ಅಗತ್ಯವೇನಿದೆ? ಎಂದು ಮರು ಪ್ರಶ್ನಿಸಿದ್ದಾನೆ. ನೀವು ಅವಲಂಬಿತ ಹೆಂಡತಿಯನ್ನು ಬಯಸ್ತೀರಿ ಅಂತಾದ್ರೆ ಗೃಹಿಣಿಯಾಗಲು ಬಯಸುವವರನ್ನು ಏಕೆ ಮದುವೆಯಾಗಬಾರದು?. ಆದರೆ ನೀವು ಕೆಲಸ ಮಾಡುವ ಯುವತಿಯರನ್ನು ಮನವೊಲಿಸಲು ಏಕೆ ಪ್ರಯತ್ನಿಸುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿರುವುದನ್ನು ಕಾಣಬಹುದು.

ಇದನ್ನೂ ಓದಿ: ವೆಡ್ಡಿಂಗ್ ಆನಿವರ್ಸರಿ ದಿನ ಬೈಕ್ ಗಿಫ್ಟ್ ಕೊಟ್ಟ ಮಡದಿ, ಸರ್ಪ್ರೈಸ್‌ಗೆ ಪತಿ ಭಾವುಕ

ಈ ಪೋಸ್ಟ್ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತನ್ನನ್ನು ಮದುವೆಯಾಗುವ ಹುಡುಗಿ ಆರ್ಥಿಕ ಸ್ವಾತಂತ್ರ್ಯಳಾಗಿ ಬಿಟ್ಟರೆ ಕೈ ತಪ್ಪಿ ಹೋಗುತ್ತಾಳೆ ಅನ್ನೋ ಮನಸ್ಥಿತಿ ಈ ಯುವಕನದ್ದಿರಬೇಕು ಎಂದಿದ್ದಾರೆ. ಇನ್ನೊಬ್ಬರು, ನೀವು ಸರಿಯಾದ ನಿರ್ಧಾರ ಮಾಡಿದ್ದೀರಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇಂದಿನ ಜಗತ್ತಿನಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುತ್ತಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಶತಕ ವಂಚಿತ ಕೆಎಲ್ ರಾಹುಲ್ – Kannada News | K.L. Rahul’s 82 vs Sri Lanka: A Century Missed in Galle Test

ಆದರೆ ಎರಡನೇ ದಿನ ಬ್ಯಾಟಿಂಗ್‌ ಮಾಡುವ ಅವಕಾಶ ರಾಹುಲ್​ಗೆ ಸಿಕ್ಕಿತು. ಆದಾಗ್ಯೂ ಎರಡನೇ ದಿನದಾಟ ಮಳೆಯಿಂದಾಗಿ ತಡವಾಗಿ ಪ್ರಾರಂಭವಾಯಿತು. ಮೊದಲ ದಿನ ಅಜೇಯರಾಗಿ ಉಳಿದಿದ್ದ ರಿಷಭ್ ಪಂತ್ 39 ರನ್‌ಗಳಿಗೆ ಔಟಾದ ನಂತರ, ರಾಹುಲ್ ಎರಡನೇ ದಿನ ಬ್ಯಾಟಿಂಗ್‌ಗೆ ಮರಳಿದರು. ಮೊದಲ ದಿನದ ರಾಹುಲ್ ಬ್ಯಾಟಿಂಗ್ ಪ್ರದರ್ಶನವನ್ನು ಗಮನಿಸಿದರೆ, ಅವರು ಶತಕ ಪೂರೈಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು(PC-PTI).

Source link

Chanakya Niti: ಸಂಬಂಧಿಕರ ಮನೆಗೆ ಭೇಟಿ ನೀಡುವ ಮುನ್ನ ಈ ವಿಷಯಗಳನ್ನು ನೆನಪಿಡಿ – Kannada News | Chanakya Niti: Know these things before visiting relatives’ houses

ಬಾಂಧವ್ಯವನ್ನು ಗಟ್ಟಿಗೊಳಿಸಲು, ಎಲ್ಲರೂ ಜೊತೆಗೂಡಿ ಒಂದೊಳ್ಳೆ ಸಮಯವನ್ನು ಕಳೆಯಲು ನಾವೆಲ್ಲರೂ ಸಹ ಸಂಬಂಧಿಕರ (relatives) ಮನೆಗೆ ಭೇಟಿ ನೀಡುತ್ತೇವೆ. ಹೀಗೆ ರಿಲೆಟಿವ್ಸ್‌ ಮನೆಗೆ ಹೋಗುವಂತಹ ಸಂದರ್ಭದಲ್ಲಿ ಕೆಲವೊಮ್ಮೆ, ನಾವು ತಿಳಿಯದೆ ಒಂದಷ್ಟು ತಪ್ಪುಗಳನ್ನು ಮಾಡುತ್ತೇವೆ ಅದು ನಮ್ಮ ಇಮೇಜ್ ಅನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ, ನಮ್ಮ ಮೇಲಿನ ಗೌರವವನ್ನು ಕುಗ್ಗಿಸುತ್ತದೆ. ಆದ್ದರಿಂದ ಸಂಬಂಧಿಕರ ಮನೆಗೆ ಹೋಗುವಾಗ ಈ ಕೆಲವೊಂದು ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಗೌರವ, ಸಂಬಂಧ ಎರಡೂ ಹಾಳಾಗಬಾರದೆಂದರೆ ಸಂಬಂಧಿಕರ ಮನೆಗೆ ಹೋಗುವಾಗ ಯಾವ ಸಂಗತಿಗಳ ಬಗ್ಗೆ ಮುಖ್ಯವಾಗಿ ಗೊತ್ತಿರಬೇಕು ಎಂಬುದನ್ನು ನೋಡೋಣ ಬನ್ನಿ.

ಸಂಬಂಧಿಕರ ಮನೆಗೆ ಭೇಟಿ ನೀಡುವ ಮುನ್ನ ಈ ವಿಚಾರಗಳು ತಿಳಿದಿರಲಿ:

ತಿಳಿಸದೆ ಅಥವಾ ಆಹ್ವಾನಿಸದೆ ಎಂದಿಗೂ ಹೋಗಬೇಡಿ:

ಆಚಾರ್ಯ ಚಾಣಕ್ಯರ ಪ್ರಕಾರ, ನೀವು ನಿಮ್ಮ ಸಂಬಂಧಿಕರ ಮನೆಗಳಿಗೆ ಅವರಿಗೆ ತಿಳಿಸದೆ ಅಥವಾ ಅನಿರೀಕ್ಷಿತವಾಗಿ ಹೋಗಬಾರದು. ಏಕೆಂದರೆ ಆ ಮನೆಯವರು ಯಾವುದಾದರೂ ಪ್ರಮುಖ ಕೆಲಸಗಳಲ್ಲಿ ನಿರತರಾಗಿರಬಹುದು ಅಥವಾ ಕೆಲಸದ ಮೇಲೆ ಹೊರಗೆ ಹೋಗಲು ತಯಾರಿ ನಡೆಸುತ್ತಿರಬಹುದು. ಹೀಗಿರುವಾಗ ನೀವು ಅನಿರೀಕ್ಷಿತವಾಗಿ ಅವರ ಮನೆಗೆ ಹೋದ್ರೆ, ಅದು ಅವರ ಕೆಲಸಕ್ಕೆ ಅಡ್ಡಿಪಡಿಸಿದಂತಾಗಬಹುದು ಮತ್ತು ಅವರನ್ನು ಅಸಮಾಧಾನಗೊಳಿಸಬಹುದು. ಆದ್ದರಿಂದ, ನೀವು ಯಾರ ಮನೆಗೆ ಹೋಗುತ್ತಿದ್ದರೂ ಅವರಿಗೆ ಮುಂಚಿತವಾಗಿ ತಿಳಿಸಿಬಿಡಿ, ಇಲ್ಲದೆ ಕರೆಯದೆ ಯಾವ ಸಂಬಂಧಿಕ ಮನೆಗೂ ತೆರಳಬೇಡಿ. ಕರೆಯದೆ ಇನ್ನೊಬ್ಬರ ಮನೆಗೆ ಹೋದ್ರೆ ಕೆಲವರು ನಿಮ್ಮನ್ನು ಕೀಳಾಗಿ ಕಾಣುವ ಸಾಧ್ಯತೆಯೂ ಇರುತ್ತದೆ.

ಸಂಬಂಧಿಕರ ಮನೆಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬೇಡಿ:

ಚಾಣಕ್ಯರ ಪ್ರಕಾರ, ನೀವು ಸಂಬಂಧಿಕರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅವರ ವೈಯಕ್ತಿಕ ವಿಷಯಗಳಿಗೆ ತಲೆ ಹಾಕಬೇಡಿ ಅಥವಾ ಅನಗತ್ಯ ಸಲಹೆಯನ್ನು ನೀಡುವ ತಪ್ಪನ್ನು ಮಾಡಬೇಡಿ. ಅವರು ತಮ್ಮ ಮನೆಯನ್ನು ಹೇಗೆ ನಡೆಸುತ್ತಾರೆ, ಅವರು ತಮ್ಮ ಮಕ್ಕಳಿಗೆ ಹೇಗೆ ಶಿಕ್ಷಣ ನೀಡುತ್ತಾರೆ ಅಥವಾ ಅವರು ತಮ್ಮ ಹಣವನ್ನು ಎಲ್ಲಿ ಖರ್ಚು ಮಾಡುತ್ತಾರೆ, ಇದ್ಯಾವುದರ ಬಗ್ಗೆ ನೀವು ಕೇಳಬೇಡಿ ಅಥವಾ ಅವರು ಈ ರೀತಿ ಹೇಳಿದಾಗ ನೀವು ಸಲಹೆಗಳನ್ನು ನೀಡಲು ಹೋಗಬೇಡಿ. ನೀವು ಇತರರ ವೈಯಕ್ತಿಕ ವಿಷಯಗಳಿಂದ ದೂರವಿದ್ದಷ್ಟೂ ನಿಮಗೆ ಒಳ್ಳೆಯದು.

ಎಂದಿಗೂ ಬರಿಗೈಯಲ್ಲಿ ಹೋಗಬೇಡಿ:

ಚಾಣಕ್ಯ ನೀತಿಯ ಪ್ರಕಾರ, ನೀವು ಸಂಬಂಧಿಕರು ಅಥವಾ ಸ್ನೇಹಿತರ ಮನೆಗೆ ಭೇಟಿ ನೀಡಿದಾಗ, ನೀವು ಎಂದಿಗೂ ಬರಿಗೈಯಲ್ಲಿ ಹೋಗಬಾರದು. ನೀವು ಯಾವಾಗಲೂ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಏನನ್ನಾದರೂ ತೆಗೆದುಕೊಂಡು ಹೋಗುವುದು ಉತ್ತಮ. ಹೌದು ಹಣ್ಣು, ಸಿಹಿ ತಿಂಡಿ ಏನನ್ನಾದರೂ ತೆಗೆದುಕೊಂಡು ಹೋಗಿ, ಇದು ಅವರಿಗೆ ಖುಷಿಯ ಭಾವನೆಯನ್ನು ಮೂಡಿಸುತ್ತದೆ.

ಇದನ್ನೂ ಓದಿ: ಅಂದಚೆಂದವಲ್ಲ, ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ವಿಷಯಗಳನ್ನು ಅಗತ್ಯವಾಗಿ ಪರಿಗಣಿಸಿ

ಅಗತ್ಯಕ್ಕಿಂತ ಹೆಚ್ಚು ಸಮಯ ಇರಬೇಡಿ:

ನೀವು ಬೇರೆಯವರ ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಹೊತ್ತು ಇದ್ದರೆ, ಅದರಿಂದ ನಿಮ್ಮ ಗೌರವ ಕುಗ್ಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ನೀವು ಎಷ್ಟೇ ಆಪ್ತ ಸಂಬಂಧಿಯಾಗಿದ್ದರೂ, ಹೆಚ್ಚು ಸಮಯ ಸಂಬಂಧಿಕರ ಮನೆಯಲ್ಲಿ ಇದ್ದರೆ, ಅವರು ನಿಮ್ಮ ಉಪಸ್ಥಿತಿಯಿಂದ ಸ್ವಲ್ಪ ಅನಾನುಕೂಲತೆಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಜೊತೆಗೆ ನಿಮ್ಮ ಮೇಲಿನ ಗೌರವವೂ ಕಳೆದು ಹೋಗುತ್ತದೆ. ಆದ್ದರಿಂದ ಹೆಚ್ಚು ಸಮಯ ಸಂಬಂಧಿಕರ ಮನೆಯಲ್ಲಿ ಕಳೆಯುವುದು ಸೂಕ್ತವಲ್ಲ.

ದಯೆಯಿಂದ ಮಾತನಾಡಿ:

ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಯಾರ ಮನೆಗಾದರೂ ಭೇಟಿ ನೀಡಿದ ಸಂದರ್ಭದಲ್ಲಿ ನಿಮ್ಮ ಅಂತಸ್ತು ಮತ್ತು ಅಹಂಕಾರವನ್ನು ಪ್ರದರ್ಶಿಸಬಾರದು. ಯಾವಾಗಲೂ ಎಲ್ಲರೊಂದಿಗೂ ಸಭ್ಯ ಮತ್ತು ಸೌಜನ್ಯದಿಂದ ಮಾತನಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಇತರ ಸಂಬಂಧಿಕರ ಬಗ್ಗೆ ಗಾಸಿಪ್ ಮಾಡುವುದು ಅಥವಾ ಕೆಟ್ಟದಾಗಿ ಮಾತನಾಡುವುದನ್ನು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧಾರವಾಡದಲ್ಲಿ ಮತ್ತೆ ಹೋರಾಟಕ್ಕೆ ಮುಂದಾದ ಉದ್ಯೋಗಾಕಾಂಕ್ಷಿಗಳು; ಅನುಮತಿ ನಿರಾಕರಿಸಿದ ಖಾಕಿ – Kannada News | Dharwad Job Aspirants Gear Up for Protest Again as Police Deny Permission

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ (ಸಂಗ್ರಹ ಚಿತ್ರ)Image Credit source: tv9 kannada

ಧಾರವಾಡ, ಆಗಸ್ಟ್​ 16: ಉದ್ಯೋಗಕ್ಕಾಗಿ ಹಕ್ಕೊತ್ತಾಯ ಮಂಡಿಸಲು ಸಜ್ಜಾಗುತ್ತಿದ್ದ ಸಾವಿರಾರು ನಿರುದ್ಯೋಗಿ ಯುವಜನರ ಹೋರಾಟಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಆಗಸ್ಟ್ 18ರಂದು ಧಾರವಾಡದಲ್ಲಿ (dharwad) ಪ್ರತಿಭಟನೆ ನಡೆಸಲು ಅನುಮತಿ ಕೋರಿದ್ದ ಉದ್ಯೋಗಾಕಾಂಕ್ಷಿಗಳ (job aspirants) ‘ಆಕ್ಸಾ’ ಸಂಘಟನೆಯ ಮನವಿಯನ್ನು ಪೊಲೀಸ್ ಇಲಾಖೆ ತಿರಸ್ಕರಿಸಿದೆ. ಹಳೆಯ ಘಟನೆ ಉಲ್ಲೇಖಿಸಿ ಉಪನಗರ ಠಾಣೆಯ ಪೊಲೀಸರು​ ಪ್ರತಿಭಟನೆಗೆ (protest) ಅವಕಾಶ ನಿರಾಕರಿಸಿದ್ದಾರೆ.

ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಪ್ರತಿಭಟನೆಗೆ ಅನುಮತಿ ನಿರಾಕರಣೆ

ಆಕ್ಸಾ ಸಂಘಟನೆಯ ರಾಜ್ಯಾಧ್ಯಕ್ಷ ಕಾಂತಕುಮಾರ್ ನೇತೃತ್ವದಲ್ಲಿ ಧಾರವಾಡದ ಮಿಚಿಗನ್ ಕಾಂಪೌಂಡ್ ಬಳಿ ಹೋರಾಟ ನಡೆಸಲು ಅನುಮತಿ ಕೋರಲಾಗಿತ್ತು. ಆದರೆ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್​ ನಿರ್ದೇಶನದಂತೆ ಉಪನಗರ ಠಾಣೆಯ ಪೊಲೀಸರು ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ.

ಇದನ್ನೂ ಓದಿ: ಖಾಲಿ ಹುದ್ದೆಗಳ ಭರ್ತಿಗೆ ಹೋರಾಟಕ್ಕಿಳಿದವರ ಬಂಧನ: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಬಿತ್ತು ಬ್ರೇಕ್

ಈ ಹಿಂದೆ ಧಾರವಾಡ ಹೈಕೋರ್ಟ್ ಪೀಠವು ನಗರದ ನೆಹರು ಮೈದಾನದಲ್ಲಿ ಗರಿಷ್ಠ 100 ಜನರಿಗೆ ಸೀಮಿತವಾಗಿ ಶಾಂತಿಯುತ ಪ್ರತಿಭಟನೆ ನಡೆಸಲು ಷರತ್ತುಬದ್ಧ ಅವಕಾಶ ಕಲ್ಪಿಸಿತ್ತು. ಆದರೆ, ಸಂಘಟಕರು ನ್ಯಾಯಾಲಯ ಸೂಚಿಸಿದ ಸ್ಥಳದಲ್ಲಿ ಪ್ರತಿಭಟನೆ ಮಾಡಿರಲಿಲ್ಲ. ಇದೀಗ ಮಿಚಿಗನ್ ಕಾಂಪೌಂಡ್ ಬಳಿ ಧರಣಿಗೆ ಅನುಮತಿ ಕೇಳಿದ್ದಾರೆ. ಹೀಗಾಗಿ ಉಪನಗರ ಠಾಣೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಹಿಂದೊಮ್ಮೆ ಅನುಮತಿ ನಿರಾಕರಣೆ

ಇನ್ನು ಉದ್ಯೋಗಾಕಾಂಕ್ಷಿಗಳು ಮತ್ತು ಧಾರವಾಡ ಪೊಲೀಸರ ನಡುವಿನ ಈ ತಿಕ್ಕಾಟ ಇಂದು ನಿನ್ನೆಯದಲ್ಲ. ಕಳೆದ ವರ್ಷದ ಸೆಪ್ಟೆಂಬರ್​​ನಲ್ಲಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್ ಹೋರಾಟ ನಡೆದಿತ್ತು. ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ನಡೆದಿದ್ದ ಹೋರಾಟ ರಾಜ್ಯದ ಜನರು ಸೇರಿದಂತೆ ಸರ್ಕಾರದ ಗಮನವನ್ನು ಸೆಳೆದಿತ್ತು. ಸರ್ಕಾರ ಕೆಲ ಭರವಸೆಗಳನ್ನು ನೀಡಿ ಸಮಾಧಾನ ಮಾಡಿತ್ತು.

ಇದನ್ನೂ ಓದಿ: ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಕೋರ್ಟ್​​ ಗ್ರೀನ್​​ ಸಿಗ್ನಲ್​​: ಷರತ್ತು ಅನ್ವಯ

ಆದರೆ ಅಷ್ಟಕ್ಕೆ ಸುಮ್ಮನಾಗದ ಉದ್ಯೋಗಾಕಾಂಕ್ಷಿಗಳು, ಸ್ವಲ್ಪ ದಿನಗಳ ನಂತರ ಮತ್ತೆ ಪ್ರತಿಭಟನೆಗೆ ಕರೆ ನೀಡಿದ್ದರು. ಆದರೆ ಆ ವೇಳೆ ಪೊಲೀಸರು ಅನುಮತಿ ಕೊಟ್ಟಿರಲಿಲ್ಲ. ಬಳಿಕ ಕೋರ್ಟ್​​​​​ ಮೆಟ್ಟಿಲೇರಿದ ಉದ್ಯೋಗಾಕಾಂಕ್ಷಿಗಳಿಗೆ ಷರತ್ತುಬದ್ಧ ಹೋರಾಟಕ್ಕೆ ಗ್ರೀನ್​​ ಸಿಗ್ನಲ್ ನೀಡಲಾಗಿತ್ತು. ಆದರೆ ವೇಳೆ ಕೆಲ ಅಹಿತಕರ ಘಟನೆಗಳು ಸಂಭವಿಸಿದ್ದವು. ಆ ಕಹಿ ಘಟನೆಗಳನ್ನು ಉಲ್ಲೇಖಿಸಿರುವ ಪೊಲೀಸರು, ಸಾರ್ವಜನಿಕ ಶಾಂತಿಗೆ ಭಂಗ ಬರಬಾರದೆಂಬ ಕಾರಣಕ್ಕೆ ಸದ್ಯದ ಹೋರಾಟಕ್ಕೆ ಅನುಮತಿ ನಿರಾಕರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮತ್ತೆ ಮುನ್ನೆಲೆಗೆ ಬಂದ ಬೆಂಗಳೂರಿನ ನೈಸ್ ರಸ್ತೆ ವಿವಾದ: ಟೋಲ್ ವಿರುದ್ಧ ಸಿಡಿದೆದ್ದ ಪ್ರತಿಪಕ್ಷಗಳು – Kannada News | Stop NICE’s Unauthorised Toll Collection: urged By HD Kumaraswamy And R Ashok

ಬೆಂಗಳೂರು, (ಆಗಸ್ಟ್​ 16): ನೈಸ್ ಸಂಸ್ಥೆಯಲ್ಲಿರುವ ಟೋಲ್ ಗೇಟ್ ರಾಜಜೀಯ ಸ್ವರೂಪ ಪಡೆದುಕೊಂಡಿದೆ. ಈ ಸಂಬಂಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ನೈಸ್ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್​ಗಳನ್ನು ತತ್‌ಕ್ಷಣ ಜಾರಿಗೆ ಬರುವಂತೆ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಬಿಜೆಪಿ ಸಹ ಬೆಂಬಲಿಸಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಅಶೋಕ್ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಆಗ್ರಹಕ್ಕೆ‌ ನನ್ನ ಬೆಂಬಲ ಇದೆ. ನಾನು‌ ಆ ಭಾಗದ ಶಾಸಕನಾಗಿದ್ದೆ. ನಾನೊಬ್ಬನೇ ಆಗ ಪ್ರತಿಭಟನೆ ಮಾಡಿದ್ದೆ. ಜೆ.ಎಚ್ ಪಾಟೀಲ್ ಆಗ ಉದ್ಘಾಟನೆ ಮಾಡಿದ್ರು. ಆಗ ಜೆಡಿಎಸ್ ಸರ್ಕಾರ ಇತ್ತು. ನೈಸ್ ಅನ್ನೋದು‌ ನೈಸಾಗಿ ಕರ್ನಾಟಕ ಜನತೆಯ ಲೂಟಿ ಹೊಡೆದಿದೆ. ಕೋಟ್ಯಾಂತರ ರೂಪಾಯಿ ಲೂಟಿ ಆಗಿದೆ. ಕ್ರಾಸ್ ರೋಡ್ ಗಳಿಗೆ‌ ಫ್ಲೈಓವರ್ ಮಾಡಬೇಕು ಪ್ರತಿವರ್ಷ ಟೋಲ್ ದರ ಹೆಚ್ಚಳ ಮಾಡುತ್ತಾ ಹೋಗಿದ್ದಾರೆ. ಅವತ್ತು ಕಾಂಗ್ರೆಸ್ ಸರ್ಕಾರ ಇತ್ತು ಮತ್ತೆ ಅದೇ ಸರ್ಕಾರ ಬಂದಿರುವುದಕ್ಕೆ ಶಲ್ಟರ್ ಕೊಡ್ತಿದ್ದಾರೆ. ಟೋಲ್ ತೆಗೆದು ಹಾಕಿದ್ರೆ ಜನರ ಹೊರೆ ಕಡಿಮೆ ಆಗುತ್ತೆ. ಕೋರ್ಟ್ ಆದೇಶದಂತೆ ಟೋಲ್ ತೆರವು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ನ ಆ ದೃಶ್ಯಗಳ ನೋಡಿ ಪತ್ನಿ ರಾಧಿಕಾ ಹೇಳಿದ್ದೇನು? ಸತ್ಯ ಹೇಳಿದ ಯಶ್ – Kannada News | Yash talks about his wife’s reaction after watching Toxic movie’s intimate scenes

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಇನ್ನು 10 ದಿನಗಳಷ್ಟೆ ಇದೆ. ಸಿನಿಮಾದ ಪ್ರಚಾರ ಕಾರ್ಯ ಚಾಲ್ತಿಯಲ್ಲಿದೆ. ಈಗಾಗಲೇ ಸಿನಿಮಾದ ಕೆಲ ಪ್ರೋಮೊ, ಟೀಸರ್, ಟ್ರೈಲರ್, ಹಾಡುಗಳು ಬಿಡುಗಡೆ ಆಗಿವೆ. ಹಾಡು, ಟೀಸರ್ ನೋಡಿದವರು ಸಿನಿಮಾನಲ್ಲಿ ಹಸಿ-ಬಿಸಿ ದೃಶ್ಯಗಳ ಬಗ್ಗೆ ಮಾತನಾಡಿದ್ದಾರೆ. ಕುಟುಂಬವೆಲ್ಲ ಸೇರಿ ನೋಡಲಾಗದ ಸಿನಿಮಾನಲ್ಲಿ ನಟಿಸಲ್ಲ ಎಂದಿದ್ದ ಯಶ್ ಇಂಥಹಾ ದೃಶ್ಯಗಳಲ್ಲಿ ನಟಿಸಿದ್ದಾರಲ್ಲ ಎಂದು ಕೆಲವರು ಟೀಕೆ ಸಹ ಮಾಡಿದ್ದಾರೆ. ಆದರೆ ಅದಕ್ಕೆಲ್ಲ ಯಶ್ ಉತ್ತರ ಕೊಟ್ಟಾಗಿದೆ. ಇದೀಗ, ‘ಟಾಕ್ಸಿಕ್’ ಸಿನಿಮಾದ ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಿದ್ದಕ್ಕೆ ತಮ್ಮ ಪತ್ನಿ ರಾಧಿಕಾ ಪಂಡಿತ್ ಪ್ರತಿಕ್ರಿಯೆ ಏನಿತ್ತು ಎಂದು ಪ್ರಾಮಾಣಿಕವಾಗಿ ತಿಳಿಸಿದ್ದಾರೆ.

‘ಆಪ್ ಕಿ ಅದಾಲತ್’ ಸಂದರ್ಶನದಲ್ಲಿ ಭಾಗಿ ಆಗಿದ್ದ ನಟ ಯಶ್ ಅವರು, ‘ಟಾಕ್ಸಿಕ್’ ಸಿನಿಮಾದ ಬಗ್ಗೆ, ತಮ್ಮ ಸಿನಿಮಾ ಪಯಣದ ಬಗ್ಗೆ, ತಮ್ಮ ಸಂಭಾವನೆ, ರಾಜಕೀಯ ಎಂಟ್ರಿ ಬಗ್ಗೆ ಅಭಿಪ್ರಾಯ ಇನ್ನೂ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದೇ ಸಂದರ್ಶನದಲ್ಲಿ, ‘ಟಾಕ್ಸಿಕ್’ ಸಿನಿಮಾನಲ್ಲಿರುವ ಹಸಿ ಬಿಸಿ ದೃಶ್ಯಗಳು, ಅಶ್ಲೀಲತೆ, ಅಪ್ರಾಪ್ತ ವಯಸ್ಕರಷ್ಟೆ ನೋಡಬಹುದಾದ ದೃಶ್ಯಗಳ ಬಗ್ಗೆಯೂ ಯಶ್ ಅವರಿಗೆ ಪ್ರಶ್ನೆಗಳು ಎದುರಾದವು. ಅವುಗಳಿಗೂ ಸಹ ಯಶ್ ಉತ್ತರ ನೀಡಿದ್ದಾರೆ. ಅದರಲ್ಲೂ, ಆ ಹಾಟ್ ದೃಶ್ಯಗಳಲ್ಲಿ ನಟಿಸಿರುವುದಕ್ಕೆ ಪತ್ನಿ ರಾಧಿಕಾರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಸಹ ಅವರು ಪ್ರಾಮಾಣಿಕವಾಗಿ ಹೇಳಿದ್ದಾರೆ.

ಇದನ್ನೂ ಓದಿ:‘ಯಶ್ ಮಿಸ್ಟರ್ ಶೋಆಫ್’ ಎಂದಿದ್ದ ರಶ್ಮಿಕಾಗೆ ಈಗ ಪ್ರತಿಕ್ರಿಯೆ ನೀಡಿದ ರಾಕಿ ಭಾಯ್

‘ಅವರಿಗೆ ಇಷ್ಟ ಆಗಲಿಲ್ಲ. ಪ್ರತಿಯೊಬ್ಬ ಪಾರ್ನರ್​​ಗೆ ಸಹ ಅದರ ಬಗ್ಗೆ ಬೇಸರ ಇದ್ದೆ ಇರುತ್ತದೆ. ತನ್ನ ಪತಿ ಅಥವಾ ಪತ್ನಿ ತೆರೆಯ ಮೇಲೆಯೇ ಆಗಲಿ ಇನ್ನೊಬ್ಬರ ಜೊತೆಗೆ ಅಂಥಹಾ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಾಗ ಬೇಸರ ಆಗುವುದು ಸಹಜವೇ. ರಾಧಿಕಾಗೂ ಸಹ ಬೇಸರ ಆಗಿದೆ. ಆದರೆ ಅಂತಿಮವಾಗಿ ಅರ್ಥ ಮಾಡಿಕೊಳ್ಳಬೇಕಿರುವುದು ಅದೊಂದು ಕಲೆ, ನಾವು ಏನನ್ನೋ ಸಾಧಿಸಲೆಂದು ಆ ಕಾರ್ಯವನ್ನು ಮಾಡುತ್ತಿದ್ದೇವೆ. ನನಗೂ ಸಹ ಅದನ್ನೆಲ್ಲ ಮಾಡುವುದು ಸುಲಭವಾಗಿರಲಿಲ್ಲ. ನಾನೂ ಸಹ ನನ್ನ ಇನ್​​ಸೆಕ್ಯೂರಿಟಿಗಳಿಂದ ಹೊರಗೆ ಬಂದು ಅದನ್ನೆಲ್ಲ ಮಾಡಿದ್ದೇನೆ’ ಎಂದಿದ್ದಾರೆ.

‘ಅದನ್ನೆಲ್ಲ ಬೇಕೆಂದು ಮಾಡಿದ್ದಲ್ಲ, ಆ ಕತೆಗೆ ಅದು ಬೇಕಿತ್ತು ಹಾಗಾಗಿ ಮಾಡಿದ್ದು. ಅವರು ಅದನ್ನು ನೋಡಿ ಖುಷಿಯಾಗಂತೂ ಇರಲಿಲ್ಲ, ಹಾಗೆಂದು ನನ್ನ ಮೇಲೆ ಮುನಿಸಿಕೊಂಡಿದ್ದಾರೆ ಎಂದೂ ಸಹ ಅಲ್ಲ. ಅವರು ನನ್ನನ್ನು ನಂಬುತ್ತಾರೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಅವರೂ ಸಹ ಒಬ್ಬ ನಟಿ. ಹಾಗಾಗಿ ಅದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ’ ಎಂದಿದ್ದಾರೆ ನಟ ಯಶ್.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ರಾಯ ಹಾಗೂ ಟಿಕೆಟ್ ಎರಡೂ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಯ ಪಾತ್ರವು ‘ಪ್ಲೇ ಬಾಯ್’ ರೀತಿಯ ಪಾತ್ರವಾಗಿದ್ದು, ನಟಿಯರೊಟ್ಟಿಗೆ ಬಹಳ ಇಂಟಿಮೇಟ್ ಆದ ದೃಶ್ಯಗಳಲ್ಲಿ ಯಶ್ ನಟಿಸಿದ್ದಾರೆ. ಸಿನಿಮಾದ ಟೀಸರ್ ನೋಡಿದ ಕೆಲವರು ಸಿಬಿಎಫ್​​ಸಿಗೆ ದೂರು ಸಹ ಸಲ್ಲಿಸಿದ್ದು, ಸಿನಿಮಾಕ್ಕೆ ಪ್ರಮಾಣ ಪತರ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs SL: 9 ವರ್ಷಗಳ ನಂತರ ಶ್ರೀಲಂಕಾದಲ್ಲಿ ಇತಿಹಾಸ ನಿರ್ಮಿಸಿದ ಪಡಿಕ್ಕಲ್ – Kannada News | Devdutt Padikkal’s Historic 167 vs SL in Galle Test: New Record for India

ಆ ನಂತರ 2017 ರಲ್ಲಿ ಗಾಲೆಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಇದೇ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿ 153 ರನ್ ಕಲೆಹಾಕಿದ್ದರು. ಈಗ, ಒಂಬತ್ತು ವರ್ಷಗಳ ನಂತರ, ದೇವದತ್ ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಈ ಸಾಧನೆ ಮಾಡಿದ್ದಾರೆ(PC-PTI).

Source link

Exit mobile version