Headlines

ಬಿಜೆಪಿ ಮಾಜಿ ಮುಖಂಡನ ಪುತ್ರನಿಂದ ಯುವತಿಗೆ ದೋಖಾ ಕೇಸ್​: ಹೈಕೋರ್ಟ್​​ನಿಂದ ಮಹತ್ವದ ಆದೇಶ – Kannada News | BJP Ex Leader’s Son Cheating Case: High Court Orders 75K Monthly Payment for Child and Mother

ಬೆಂಗಳೂರು, ಏಪ್ರಿಲ್​​ 24: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಮಗುವಿಗೆ ಜನ್ಮ ನೀಡಿದ ಬಳಿಕ ವಂಚಿಸಿದ್ದ ಪುತ್ತೂರಿನ ಬಿಜೆಪಿ ಮಾಜಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ. ರಾವ್ ಮೇಲಿನ ಪ್ರಕರಣ ಸಂಬಂಧ ಹೈಕೋರ್ಟ್​​ ಮಹತ್ವದ ಆದೇಶ ನೀಡಿದೆ. ಪ್ರಕರಣ ರದ್ದು ಕೋರಿ ಕೃಷ್ಣ ಜೆ.ರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಷರತ್ತಿನ ಮೇರೆಗೆ ಕೃಷ್ಣ ಜೆ.ರಾವ್ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದೆ….

Read More

ದಾವಣಗೆರೆ ಉಪಚುನಾವಣೆ ಅಭ್ಯರ್ಥಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; ಮನೆಗೆ ನುಗ್ಗಿ ಅಟ್ಯಾಕ್ ಮಾಡಿದ ಗ್ಯಾಂಗ್! – Kannada News | Shahbaz Khan Attacked in Bengaluru After Davangere By Election Return

ದಾವಣಗೆರೆ ಉಪಚುನಾವಣೆ ಅಭ್ಯರ್ಥಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಬೆಂಗಳೂರು, ಏಪ್ರಿಲ್ 24: ದಾವಣಗೆರೆ ಉಪಚುನಾವಣೆಯ (Byelection) ಅಭ್ಯರ್ಥಿ,‘ಯಂಗ್ ಸ್ಟಾರ್ ಎಂಪೋರಿಯಂ’ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶಹಬಾಜ್ ಖಾನ್​ಗೆ ಈ ಹಿಂದೆ ಹಲ್ಲೆ ನಡೆಸಿ, ಕಸದ ಬುಟ್ಟಿಗೆ ಹಾಕುತ್ತೇವೆ ಎಂದು ಬೆದರಿಕೆಯೊಂದು ಬಂದಿತ್ತು. ಅದರಂತೆಯೇ ನಗರದ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದ್ದು, ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಪಕ್ಷದಿಂದ ವಜಾಗೊಳಿಸಿದ್ದಕ್ಕೆ ಗ್ಯಾಂಗ್ ಕಟ್ಟಿಕೊಂಡು…

Read More

BPCL Recruitment 2026: ಭಾರತ್ ಪೆಟ್ರೋಲಿಯಂನಲ್ಲಿ 250 ಹುದ್ದೆಗಳಿಗೆ ಅರ್ಜಿ ಆಹ್ವಾನ; 1.40 ಲಕ್ಷ ರೂ. ವರೆಗೆ ವೇತನ! – Kannada News | BPCL Recruitment 2026: Apply Online for 250 Junior Executive and Other Vacancies!

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ದೇಶದ ಪ್ರಮುಖ ತೈಲ ಸಂಸ್ಥೆಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ದೇಶಾದ್ಯಂತ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 250 ಜೂನಿಯರ್ ಎಕ್ಸಿಕ್ಯೂಟಿವ್ ಮತ್ತು ಇತರ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹುದ್ದೆಗಳ ವಿವರ (Vacancy Details): ಒಟ್ಟು 250 ಹುದ್ದೆಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ: ಜೂನಿಯರ್ ಎಕ್ಸಿಕ್ಯುಟಿವ್ (ಎಂಜಿನಿಯರಿಂಗ್): 175 ಅಸೋಸಿಯೇಟ್ ಎಕ್ಸಿಕ್ಯೂಟಿವ್ (ಕ್ವಾಲಿಟಿ…

Read More

ರವಿ ಕಿಶನ್ ಡೈರೆಕ್ಷನ್: “ಮಹಾರಾಜ್ ಜಿ, ಸ್ವಲ್ಪ ಈ ಕಡೆ ನೋಡಿ ಸಿಂಹದ ಮುಖ ಮತ್ತು ನೀವು ಮಾತ್ರ ಫ್ರೇಮ್‌ನಲ್ಲಿ ಇರಲಿ” – Kannada News | CM Yogi Adityanath’s Hilarious Photo Moment: Ravi Kishan’s Film Direction Goes Viral

ಲಕ್ನೋ, ಏ.24 : ರಾಜಕೀಯದ ಗಂಭೀರ ಚರ್ಚೆಗಳ ನಡುವೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಗೋರಖ್‌ಪುರ ಸಂಸದ ಹಾಗೂ ನಟ ರವಿ ಕಿಶನ್ ಅವರ ಅಪರೂಪದ ಮೋಜಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ಹಳೆಯ ಟೈರ್‌ಗಳಿಂದ ನಿರ್ಮಿಸಲಾದ ಬೃಹತ್ ಸಿಂಹದ ಪ್ರತಿಮೆಯ ಮುಂದೆ ಸಿಎಂ ಯೋಗಿ ಆದಿತ್ಯನಾಥ್ ಅವರು ಫೋಟೋಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಪಕ್ಕದಲ್ಲೇ ಇದ್ದ ಖ್ಯಾತ ನಟ ರವಿ ಕಿಶನ್ ಅವರಲ್ಲಿದ್ದ ‘ಸಿನಿಮಾ…

Read More

ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್

ಕನ್ನಡದ ಹೀರೋ ದಿಗಂತ್ ಅವರು ‘ರುದ್ರ ಕಾಲ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ನಡೆದಿದೆ. ಈ ಸಿನಿಮಾ ವೇಳೆ ಮಾತನಾಡುವಾಗ ತೆಲುಗಿನ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ ಹೇಗಿದೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ಸಮಂತಾ ಪತಿ ಪಾತ್ರದಲ್ಲಿ ದಿಗಂತ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಜೊತೆ ಕೆಲಸ ಮಾಡುವ ಅನುಭವ ವಿವರಿಸಿರೋ ಅವರು, ‘ಸಮಂತಾ ಸೂಪರ್ ಕೂಲ್’ ಎಂದಿದ್ದಾರೆ. ಈ ಚಿತ್ರದ ಬಗ್ಗೆ ಅವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ….

Read More

KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಆಟೋ ಚಾಲಕರ ಹುಚ್ಚಾಟ – Kannada News | Drunk Auto Drivers Block KSRTC Bus, Create Ruckus Taking Selfies in Chikkamagaluru

ಚಿಕ್ಕಮಗಳೂರು, ಏಪ್ರಿಲ್​​ 24: ಕುಡಿದ ಅಮಲಿನಲ್ಲಿ KSRTC ಬಸ್​ ಅಡ್ಡಗಟ್ಟಿ ಆಟೋ ಚಾಲಕರು ಕಿರಿಕ್ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಕೆ‌ಎಂ ರಸ್ತೆಯಲ್ಲಿ ನಡೆದಿದೆ. ಕಡೂರಿನಿಂದ ಚಿಕ್ಕಮಗಳೂರು KSRTC ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಬಸ್​​ಗೆ ರಸ್ತೆ ಮಧ್ಯೆ ಆಟೋ ಅಡ್ಡಹಾಕಿ ಪುಂಡಾಟ ಮೆರೆಯಲಾಗಿದೆ. ಬಸ್ ಚಾಲಕ ಮನವಿ ಮಾಡಿದ್ರೂ ಜಾಗ ಬಿಡದೆ, ಬಸ್​​ಗೆ ಅಡ್ಡಲಾಗಿ ಆಟೋ ನಿಲ್ಲಿಸಿ ಮೂವರು ಯುವಕರು ಕಿರಿಕ್ ಮಾಡಿದ್ದಾರೆ. ಆಟೋ ನಿಲ್ಲಿಸಿ ಸೆಲ್ಫಿ ತೆಗೆಯುತ್ತಿರುವ ಯುವಕರ ವಿಡಿಯೋ ವೈರಲ್​ ಆಗಿದ್ದು, ಚಿಕ್ಕಮಗಳೂರು ನಗರ…

Read More

‘ವಿದ್ಯಾರ್ಥಿ ಭವನ’ ಮತ್ತು ಡಾ ರಾಜ್ಕುಮಾರ್: ನೆನಪಿನ ಬುತ್ತಿ ತೆರೆದಿಟ್ಟ ಮಾಲೀಕರು – Kannada News | Famous Vidyarthi Bhavan hotel owner talks about Dr Rajkumar and his connection with hotel

ಡಾ ರಾಜ್​ಕುಮಾರ್ (Dr Rajkumar) ಅವರ ಪುಣ್ಯ ಜಯಂತಿ ಇಂದು. ರಾಜ್ಯದ ಹಲವಾರು ಕಡೆ ಡಾ ರಾಜ್​ಕುಮಾರ್ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ರಾಜ್ಯದ ಯಾವ ಮೂಲೆಗೆ ಹೋದರೂ ರಾಜ್​ಕುಮಾರ್ ಅವರ ಚಿತ್ರ, ಪ್ರತಿಮೆಗಳು ಇಂದಿಗೂ ಹೆಜ್ಜೆಗೊಂದರಂತೆ ಕಾಣುತ್ತವೆ. ವಿಶೇಷವೆಂದರೆ ರಾಜ್ಯದ ಯಾವುದೇ ಜನಪ್ರಿಯ ಹೋಟೆಲ್​​ಗಳಿಗೆ ಹೋದರೂ ಅಲ್ಲಿ ರಾಜ್​ಕುಮಾರ್ ಅವರ ಫೋಟೊ ಒಂದು ಇದ್ದೇ ಇರುತ್ತದೆ. ಅಭಿಮಾನಿಗಳಿಗೆ ಗೊತ್ತಿರುವಂತೆ ರಾಜ್​ಕುಮಾರ್ ಅವರು ಮಹಾನ್ ಭೋಜನಪ್ರಿಯರು. ಬೆಂಗಳೂರಿನ ಪ್ರಖ್ಯಾತ ಹೋಟೆಲ್ ವಿದ್ಯಾರ್ಥಿ ಭವನಕ್ಕೂ ರಾಜ್​ಕುಮಾರ್ ಅವರೊಟ್ಟಿಗೆ ನಂಟಿದೆ. ಆ…

Read More

ರಂಗಾಯಣದ ಅಂಗಳದಲ್ಲಿ ಹಸಿರು ಕ್ರಾಂತಿ: ಮಣ್ಣಿನೊಂದಿಗೆ ಬೆರೆತು ಪರಿಸರ ಪಾಠ ಕಲಿತ ಚಿಣ್ಣರು! – Kannada News | Mysuru Rangayana Chinnara Mela: Student Nilay Nandan Shares Heartwarming Experience of Kai Thota Program

ರಂಗಾಯಣದ ‘ಚಿಣ್ಣರ ಮೇಳ’ದಲ್ಲಿ ‘ಕೈತೋಟ’ ಕಾರ್ಯಕ್ರಮImage Credit source: tv9 ಮೈಸೂರು, ಏಪ್ರಿಲ್ 24: ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ಕಿರೀಟಪ್ರಾಯವಾದ ರಂಗಾಯಣದ ಅಂಗಳದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ‘ಚಿಣ್ಣರ ಮೇಳ’ ಸಂಭ್ರಮದಿಂದ ಜರುಗುತ್ತಿದೆ. ಆದರೆ, ಈ ಬಾರಿಯ ಮೇಳ ಕೇವಲ ರಂಗಭೂಮಿ, ನಾಟಕ ಮತ್ತು ನೃತ್ಯಕ್ಕೆ ಸೀಮಿತವಾಗದೆ, ಮಕ್ಕಳಿಗೆ ಬದುಕಿನ ಪಾಠವನ್ನು ಕಲಿಸುವ ಮೂಲಕ ಹೊಸ ಆಯಾಮ ಪಡೆದುಕೊಂಡಿದೆ. ವಿಶೇಷವಾಗಿ ‘ಕೈತೋಟ’ ಕಾರ್ಯಕ್ರಮದ ಮೂಲಕ ಮಕ್ಕಳು ಮಣ್ಣಿನ ಒಡನಾಟ ಬೆಳೆಸಿಕೊಂಡಿರುವುದು ವಿಶೇಷವಾಗಿ ಮೂಡಿಬಂದಿದೆ. ಮಕ್ಕಳ…

Read More

ರಾಜ್ಯ ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆ: ಕುತೂಹಲ ಮೂಡಿಸಿದ ಅತ್ಯಾಪ್ತರ ಜೊತೆಗಿನ ಸಿಎಂ ಸಭೆ – Kannada News | CM Siddaramaiah pressured by key allies amid Karnataka Congress political crisis

ಬೆಂಗಳೂರು, ಏಪ್ರಿಲ್​​ 24: ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು, ಕಾಂಗ್ರೆಸ್​​ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರೇ ಟಾರ್ಗೆಟ್​​ ಆಗುತ್ತಿರುವ ಆರೋಪ ಕೇಳಿಬಂದಿದೆ. ಈ ನಡುವೆ ಸಿಎಂ ಹಾಗೂ ಅತ್ಯಾಪ್ತ ಸಚಿವರಿಂದ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ಖಾಸಗಿ ಕಟ್ಟಡದಲ್ಲಿ ಪ್ರತ್ಯೇಕ ಸಭೆ ನಡೆದಿರೋದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಚಿವರಾದ ಭೈರತಿ ಸುರೇಶ್, ಡಾ.ಜಿ.ಪರಮೇಶ್ವರ್, ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್ ಭಾಗಿಯಾಗಿದ್ದರು. ಸಭೆಯಲ್ಲಿ ಚರ್ಚೆಯಾಗಿದ್ದೇನು? ಆಪ್ತರೇ ಟಾರ್ಗೆಟ್​​…

Read More

ಬೇಸಿಗೆ ರಜೆಯಲ್ಲಿ ಮಕ್ಕಳ ಮೇಲೆ ನಿಗಾ ಇರಲಿ! ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುಣಿಕೆ ಬಿಗಿದು ಬಾಲಕಿ ಸಾವು – Kannada News | Shivamogga Child Death: 9 Year Old Dies in Tragic Swing Accident in summer holidays

ಶಿವಮೊಗ್ಗ, ಏಪ್ರಿಲ್ 24: ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಸಾವನ್ನಪ್ಪಿರುವ ದುರ್ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಸಂಭವಿಸಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಬಾಲಕಿಯನ್ನು ಶಿವಮೊಗ್ಗ (Shivamogga) ನಗರದ ವಿದ್ಯಾನಗರ ನಿವಾಸಿ ಪ್ರಣಮ್ಯ ಎಂದು ಗುರುತಿಸಲಾಗಿದೆ. ಘಟನೆಯಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದ್ದು, ಪಾಲಕರ ಆಕ್ರಂದನ ಮನಕಲಕುವಂತಿದೆ. ಕೋಣೆ ಬಾಗಿಲು ಹಾಕಿಕೊಂಡು ಜೋಕಾಲಿ ಆಡುತ್ತಿದ್ದ ಬಾಲಕಿ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ…

Read More