ರಾಯಚೂರು: ಬಿಸಿಲ ಝಳಕ್ಕೆ ಪೊಲೀಸ್ ಶ್ವಾನಗಳು ಕಂಗಾಲು: ಏರ್ ಕೂಲರ್ ವ್ಯವಸ್ಥೆ ಮಾಡಿ ಮಕ್ಕಳಂತೆ ಆರೈಕೆ ಮಾಡ್ತಿರುವ ಸಿಬ್ಬಂದಿ – Kannada News | Raichur Heatwave: Police Dogs Get Air Coolers and Special Diet as Temperatures Hit 45 Degrees Celsius
ರಾಯಚೂರು, ಏಪ್ರಿಲ್ 24: ರಾಯಚೂರು ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಅತಿ ಹೆಚ್ಚು ತಾಪಮಾನದಿಂದ ಪೊಲೀಸ್ ಶ್ವಾನಗಳ ಆರೋಗ್ಯಕ್ಕೆ ಧಕ್ಕೆಯಾಗದಂತೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಜಿಲ್ಲಾ ಪೊಲೀಸ್ ಇಲಾಖೆಯು ತಮ್ಮ ಶ್ವಾನದಳಕ್ಕೆ ಬಿಸಿಲಿನಿಂದ ರಕ್ಷಣೆ ಒದಗಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಶ್ವಾನಗಳಿರುವ ಕೊಠಡಿಗಳಲ್ಲಿ ಏರ್ ಕೂಲರ್ಗಳು ಮತ್ತು ಫ್ಯಾನ್ಗಳನ್ನು ಅಳವಡಿಸಲಾಗಿದೆ. ಸದ್ಯ ರಾಯಚೂರಿನಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ವರೆಗೂ ತಲುಪಿದೆ. ಈ ಉಷ್ಣಾಂಶದಿಂದ ಶ್ವಾನಗಳಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬ ಕಾರಣಕ್ಕೆ ಪ್ರತಿದಿನ ಅವುಗಳಿಗೆ ಎಳನೀರು, ಮೊಸರು, ಮಜ್ಜಿಗೆ ಹಾಗೂ…