ಮೈಗ್ರೇನ್ ಬಿಪಿಯನ್ನು ಹೆಚ್ಚಿಸುತ್ತದೆಯೇ? ಮಹಿಳೆಯರೇ… ಈ ವಿಷಯಗಳ ಬಗ್ಗೆ ಗಮನ ಕೊಡಿ – Kannada News | Women and Migraine: BP Concerns and Precautions

ಇತ್ತೀಚಿನ ದಿನಗಳಲ್ಲಿ, ಮೈಗ್ರೇನ್ (Migraine) ಮತ್ತು ಅಧಿಕ ರಕ್ತದೊತ್ತಡದ (High BP) ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿರುವುದನ್ನು ಗಮನಿಸಿರಬಹುದು. ಮೈಗ್ರೇನ್ ಒಂದು ನರವೈಜ್ಞಾನಿಕ ಸಮಸ್ಯೆಯಾಗಿದ್ದು, ತಲೆಯ ಒಂದು ಭಾಗದಲ್ಲಿ ನೋವು ಕಂಡುಬರುತ್ತದೆ. ಇದರ ಜೊತೆಗೆ, ವಾಕರಿಕೆ, ವಾಂತಿ, ತಲೆತಿರುಗುವಿಕೆ ಮತ್ತು ಬೆಳಕು ಮತ್ತು ಶಬ್ದಕ್ಕೆ ಸೂಕ್ಷ್ಮತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾರ್ಮೋನುಗಳ ಬದಲಾವಣೆಯಿಂದಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಈ ರೀತಿ ಪದೇ ಪದೇ ಬರುವ ಮೈಗ್ರೇನ್ ದೇಹದಲ್ಲಿ ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸುತ್ತವೆ, ರಕ್ತದೊತ್ತಡವನ್ನು ಅಡ್ಡಿಪಡಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ಹೃದಯ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಅಪಾಯವನ್ನು ಕೂಡ ಹೆಚ್ಚಿಸಬಹುದು. ಮಾತ್ರವಲ್ಲ, ದೀರ್ಘಕಾಲದ ವರೆಗೆ ಮೈಗ್ರೇನ್‌ಗಳನ್ನು ನಿರ್ಲಕ್ಷಿಸುವುದು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸಮಯೋಚಿತ ಎಚ್ಚರಿಕೆ ಮತ್ತು ಸರಿಯಾದ ಆರೈಕೆ ಬಹಳ ಮುಖ್ಯವಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೈಗ್ರೇನ್ ಹೈಬಿಪಿ ಗೆ ಕಾರಣವಾಗುತ್ತದೆಯೇ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಮಹಿಳೆಯರಲ್ಲಿ ಮೈಗ್ರೇನ್ ಮತ್ತು ಅಧಿಕ ರಕ್ತದೊತ್ತಡದ ನಡುವಿನ ನೇರ ಸಂಬಂಧವು ಹಾರ್ಮೋನುಗಳ ಬದಲಾವಣೆಗಳಿಗೆ ಸಂಬಂಧಿಸಿದೆ. ಮುಟ್ಟಿನ ಸಮಯ, ಗರ್ಭಾವಸ್ಥೆಯಲ್ಲಿ ಮತ್ತು ಋತುಬಂಧದ ಸಮಯದಲ್ಲಿ, ಈಸ್ಟ್ರೊಜೆನ್ ಹಾರ್ಮೋನ್‌ನಲ್ಲಿನ ಏರಿಳಿತಗಳು ಮೈಗ್ರೇನ್‌ಗೆ ಕಾರಣವಾಗಬಹುದು. ಮೈಗ್ರೇನ್ ಸಮಯದಲ್ಲಿ, ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಮತ್ತು ಹಿಗ್ಗುತ್ತವೆ, ಇದು ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳಕ್ಕೆ ಕಾರಣವಾಗಬಹುದು. ಮೈಗ್ರೇನ್ ಬಹಳ ಸಮಯದವರೆಗೆ ಕಂಡುಬಂದರೆ, ಅದು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇಅಲ್ಲ, ಮೈಗ್ರೇನ್ ನಿದ್ರೆಯ ಕೊರತೆ, ಮಾನಸಿಕ ಒತ್ತಡ ಮತ್ತು ಚಡಪಡಿಕೆಗೆ ಕಾರಣವಾಗಬಹುದು, ಇವು ಅಧಿಕ ರಕ್ತದೊತ್ತಡಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ನೋವು ನಿವಾರಣೆಗೆ ತೆಗೆದುಕೊಳ್ಳುವ ಕೆಲವು ಔಷಧಿಗಳು ಕೂಡ ರಕ್ತದೊತ್ತಡವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಮೈಗ್ರೇನ್ ಮತ್ತು ಸಾಮಾನ್ಯ ತಲೆನೋವಿಗಿರುವ ವ್ಯತ್ಯಾಸವೇನು? ಇದನ್ನು ತಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?

ದೀರ್ಘಕಾಲದವರೆಗೆ ಮೈಗ್ರೇನ್‌ನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಾಗಿ ಕಂಡುಬರುತ್ತದೆ. ಬೊಜ್ಜು, ಒತ್ತಡದ ಜೀವನಶೈಲಿ ಮತ್ತು ಅನಿಯಮಿತ ನಿದ್ರೆ ಕೂಡ ಈ ರೀತಿಯ ಅಪಾಯವನ್ನು ಹೆಚ್ಚಿಸುತ್ತದೆ. ಧೂಮಪಾನ ಮಾಡುವ ಅಥವಾ ಬಹಳಷ್ಟು ಕೆಫೀನ್ ಸೇವಿಸುವ ಮಹಿಳೆಯರೂ ಸಹ ಅಪಾಯದಲ್ಲಿದ್ದಾರೆ. ಜೊತೆಗೆ ಕುಟುಂಬದ ಇತಿಹಾಸದಲ್ಲಿ ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗದವಿದ್ದರೆ ಅಂತವರು ಬಹಳ ಎಚ್ಚರಿಕೆವಹಿಸುವುದು ಅಗತ್ಯ. ಅಷ್ಟೇಅಲ್ಲ, ಋತುಬಂಧ ಸಮೀಪಿಸುತ್ತಿರುವ ಮಹಿಳೆಯರಿಗೆ ಮೈಗ್ರೇನ್ ಜೊತೆಗೆ ಅಧಿಕ ರಕ್ತದೊತ್ತಡ ಬರುವ ಅಪಾಯ ಹೆಚ್ಚಾಗಿರಬಹುದು.

ತಡೆಗಟ್ಟುವುದು ಹೇಗೆ?

ಮೈಗ್ರೇನ್ ಮತ್ತು ಅಧಿಕ ರಕ್ತದೊತ್ತಡವನ್ನು ತಡೆಗಟ್ಟಲು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಪ್ರತಿದಿನ 7- 8 ಗಂಟೆ ನಿದ್ರೆ ಮಾಡಿ ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಉಪ್ಪು ಮತ್ತು ಕೆಫೀನ್ ಸೇವನೆಯನ್ನು ಸೀಮಿತಗೊಳಿಸಿ. ನಿಯಮಿತ ಯೋಗ, ನಡಿಗೆ ಮತ್ತು ಲಘು ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ಮೈಗ್ರೇನ್‌ಗೆ ಕಾರಣವಾಗುವ ಆಹಾರಗಳನ್ನು ತಪ್ಪಿಸಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ನಿಮ್ಮ ರಕ್ತದೊತ್ತಡವನ್ನು ಕಾಲಕಾಲಕ್ಕೆ ಪರೀಕ್ಷಿಸಿಕೊಳ್ಳಿ. ವೈದ್ಯರ ಸಲಹೆಯ ಮೇರೆಗೆ ಮಾತ್ರ ಔಷಧಿಗಳನ್ನು ತೆಗೆದುಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಆಯುರ್ವೇದ ಪಾತ್ರ ಹೇಗೆ? ಬಾಬಾ ರಾಮದೇವ್ ವಿವರಣೆ ಇದು… – Kannada News | Cancer treatment, Baba Ramdev explains how Ayurvedic food and lifestyle can help

ವಿಶ್ವಾದ್ಯಂತ ಕ್ಯಾನ್ಸರ್ (Cancer) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕ್ಯಾನ್ಸರ್​ನಿಂದ ಜೀವ ಉಳಿಸುವುದು ದೊಡ್ಡ ಸವಾಲಿನ ಸಂಗತಿಯಾಗಿದೆ. ಹೆಚ್ಚಿನ ಕ್ಯಾನ್ಸರ್ ರೋಗಿಗಳು ಅಲೋಪತಿ ಚಿಕಿತ್ಸೆಯನ್ನು ಅವಲಂಬಿಸಿದ್ದಾರೆ. ಈಗೀಗ ಕೆಲವರು ಸಪೋರ್ಟಿವ್ ಟ್ರೀಟ್ಮೆಂಟ್​ಗಾಗಿ ಆಯುರ್ವೇದದತ್ತ ಮುಖ ಮಾಡುತ್ತಿದ್ದಾರೆ. ಕ್ಯಾನ್ಸರ್ ಗುಣಪಡಿಸುವ ಚಿಕಿತ್ಸೆಯಲ್ಲಿ ಆಯುರ್ವೇದ ವಿಧಾನಗಳು ಎಷ್ಟು ಉಪಯುಕ್ತ ಎಂಬುದನ್ನು ಬಾಬಾ ರಾಮದೇವ್ (Baba Ramdev) ತಿಳಿಸಿದ್ದಾರೆ.

ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯವಾದರೂ, ರೋಗಿಗಳು ತಮ್ಮ ಆಹಾರ ಮತ್ತು ಜೀವನಶೈಲಿಯ ಬಗ್ಗೆಯೂ ಗಮನ ಹರಿಸಬೇಕು ಎಂದೆನ್ನುತ್ತಾರೆ ಬಾಬಾ ರಾಮದೇವ್. ರೋಗದಿಂದ ಗುಣಮುಖವಾಗಲು ಮತ್ತು ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ಬೇಕಾದ ಚೈತನ್ಯ ಇದರಿಂದ ಸಿಗುತ್ತದೆ. ಆಯುರ್ವೇದ ಶಿಫಾರಸು ಮಾಡುವ ಕೆಲ ಆಹಾರಗಳನ್ನು ಸಪೋರ್ಟಿವ್ ನ್ಯೂಟ್ರಿಯೆಂಟ್​ಗಳಾಗಿ ನೋಡಲಾಗುತ್ತದೆ. ಇವು ಚಿಕಿತ್ಸೆಗೆ ಪರ್ಯಾಯ ಅಲ್ಲವಾದರೂ, ಟ್ರೀಟ್ಮೆಂಟ್ ಸಂದರ್ಭದಲ್ಲಿ ವೈದ್ಯರ ಸಲಹೆ ಮೇರೆಗೆ ಇವನ್ನು ತೆಗೆದುಕೊಳ್ಳುವುದು ಅನುಕೂಲವಾಗುತ್ತದೆ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಪೋರ್ಟಿವ್ ಡಯಟ್ ಯಾಕೆ ಮುಖ್ಯ?

ಕ್ಯಾನ್ಸರ್ ಚಿಕಿತ್ಸೆಯು ರೋಗಿಯ ರೋಗನಿರೋಧಕ ಶಕ್ತಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹಲವಾರು ಅಡ್ಡಪರಿಣಾಮಗಳನ್ನು ಸಹ ಗಮನಿಸಬಹುದು. ಅಂತಹ ಸಂದರ್ಭಗಳಲ್ಲಿ, ಆಯುರ್ವೇದವು ಈ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅನೇಕ ರೋಗಿಗಳಿಗೆ ಅಜೀರ್ಣತೆ, ಹಸಿವಿನ ಕೊರತೆ, ಸುಸ್ತು ಇತ್ಯಾದಿ ಸಮಸ್ಯೆಗಳು ಅನುಭವವಾಗುತ್ತವೆ. ಆದ್ದರಿಂದ, ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಸೇವಿಸಿದರೆ ಪ್ರಯೋಜನಕಾರಿಯಾಗಬಹುದಾದ ಕೆಲವು ಆಯುರ್ವೇದೀಯ ಆಹಾರಗಳಿವೆ. ಇವನ್ನು ಸೇವಿಸುವುದರಿಂದ ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಅಡ್ಡಪರಿಣಾಮಗಳು ಕಾಣಿಸುವುದಿಲ್ಲ. ಈ ಆಹಾರಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ದೌರ್ಬಲ್ಯವನ್ನು ನಿವಾರಿಸಲು ನೆರವಾಗುತ್ತದೆ.

ಇದನ್ನೂ ಓದಿ: ಕಿಡ್ನಿ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲ ಮನೆಮದ್ದುಗಳು; ಬಾಬಾ ರಾಮದೇವ್ ಸಲಹೆ ಇದು

ಆಯುರ್ವೇದದಲ್ಲಿ ಈ ವಿಷಯಗಳು ಪ್ರಯೋಜನಕಾರಿ

ಆಯುರ್ವೇದ ಮತ್ತು ನ್ಯೂಟ್ರಿಶನ್ ಎಕ್ಸ್​ಪರ್ಟ್​ಗಳ ಪ್ರಕಾರ, ಈ ಕೆಳಕಾಣಿಸಿರುವ ಆಹಾರಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತವೆ:

  • ಬಾರ್ಲಿ ರಸ
  • ಗಿಲೋಯ್ ರಸ
  • ಮಸೂರ ಮತ್ತು ದ್ವಿದಳ ಧಾನ್ಯಗಳು
  • ಹಸಿರು ತರಕಾರಿಗಳು
  • ವೀಟ್ ಗ್ರಾಸ್ ಪೌಡರ್
  • ಬೇವಿನ ರಸ

ಈ ವಸ್ತುಗಳನ್ನು ತಿನ್ನಬಾರದು

  • ಸಕ್ಕರೆ
  • ಹುರಿದ ಆಹಾರ
  • ಕೆಂಪು ಮಾಂಸ
  • ಅಧಿಕ ಉಪ್ಪು ಸೇವನೆ

ಇದನ್ನೂ ಓದಿ: Hair Fall Treatment: ಕೂದಲು ಉದುರುವಿಕೆ ನಿಲ್ಲಿಸಲು ಮನೆಮದ್ದುಗಳು: ಸರಳ ಪರಿಹಾರ ಸೂಚಿಸುವ ಬಾಬಾ ರಾಮದೇವ್

ಮುಂಚಿತವಾಗಿ ವೈದ್ಯರನ್ನು ಸಂಪರ್ಕಿಸಿ

ಆಯುರ್ವೇದದಲ್ಲಿ ಉಲ್ಲೇಖಿಸಲಾದ ಈ ಪದಾರ್ಥಗಳು ಕ್ಯಾನ್ಸರ್ ಚಿಕಿತ್ಸೆಗೆ ಪರ್ಯಾಯವಲ್ಲ. ಅವುಗಳನ್ನು ನಿಮ್ಮ ಆಹಾರದಲ್ಲಿ ಸಪೋರ್ಟಿವ್ ಕೇರ್ ಆಗಿ ಮಾತ್ರ ಸೇರಿಸಿಕೊಳ್ಳಬಹುದು. ಆದಾಗ್ಯೂ, ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯಸಭೆಯಲ್ಲಿ ಮತ್ತೆ ಕರ್ನಾಟಕದ ಪರ ಧ್ವನಿ ಎತ್ತಿದ ದೇವೇಗೌಡ್ರು, ಈ ಬಾರಿ ಕೇಳಿದ್ದೇನು? – Kannada News | HD Devegowda Requests In rajyasabha Industrial corridor from Bengaluru to Mangaluru

ನವದೆಹಲಿ, (ಫೆಬ್ರವರಿ 11):  ಕೇಂದ್ರ ಬಜೆಟ್ (Union Budget) ಮೇಲಿನ ಚರ್ಚೆಯಲ್ಲಿ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಎಚ್​​ಡಿ ದೇವೇಗೌಡ (HD Devegowda) ಅವರು ಪಾಲ್ಗೊಂಡು ಮಾತನಾಡಿದ್ದು, ಮೂರು ಪ್ರಮುಖ ಬಂದರುಗಳನ್ನು ಜೋಡಿಸುವ ಬೆಂಗಳೂರಿನಿಂದ – ಮಂಗಳೂರಿನವರೆಗೆ ಕೈಗಾರಿಕಾ ಕಾರಿಡಾರ್ ವಿಸ್ತರಣೆ ಹಾಗೂ ಹಲಸು, ಹುಣಸೆ, ನೇರಳೆ ಮಂಡಳಿ ರಚನೆ ಮಾಡಬೇಕು ಎಂದು ಕೋರಿದರು.

ಈಗಾಗಲೇ ಚೆನ್ನೈನಿಂದ ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಬೆಂಗಳೂರು ನಡುವಿನ ಪ್ರಮುಖ ಬಂದರುಗಳನ್ನು ಹೊಂದಿರುವ ಕೈಗಾರಿಕಾ ಕಾರಿಡಾರ್ ಯೋಜನೆಗಳಿಗೆ ಅನುಮೋದನೆ ನೀಡುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಅದೇ ರೀತಿ, ಬೆಂಗಳೂರಿನಿಂದ ಮಂಗಳೂರಿನವರೆಗೆ ಈ ಕೈಗಾರಿಕಾ ಕಾರಿಡಾರ್ ವಿಸ್ತರಿಸಿದರೆ ಕೈಗಾರಿಕಾ ಅಭಿವೃದ್ಧಿಗೆ ಬಹಳಷ್ಟು ಅನುಕೂಲ ಆಗುತ್ತದೆ. ಮಂಗಳೂರು ಕೂಡ ಪ್ರಮುಖ ಬಂದರು ಆಗಿದ್ದು; ವಿಶಾಖಪಟ್ಟಣ, ಚೆನ್ನೈ ಹಾಗೂ ಮಂಗಳೂರು ಬಂದರುಗಳನ್ನುಜೋಡಿಸಿದರೆ ರಾಷ್ಟ್ರದ ಕೈಗಾರಿಕಾಭಿವೃದಿಗೆ ಪರಿವರ್ತನಾತ್ಮಕ ವೇಗ ಬರುತ್ತದೆ ಎಂದು ಮಾಜಿ ಪ್ರಧಾನಿಗಳು ಪ್ರತಿಪಾದಿಸಿದರು.

ಇದನ್ನೂ ಓದಿ: ನಾನು ಜೀವನದ ಕೊನೆಕಾಲದಲ್ಲಿದ್ದೇನೆ, ಈ ವೃದ್ಧನ ಮನವಿಗೆ ಸ್ಪಂದಿಸಿ: ರಾಜ್ಯಸಭೆಯಲ್ಲಿ ಗದ್ಗದಿತರಾದ ದೇವೇಗೌಡ

ಹಲಸು, ಹುಣಸೆ, ನೇರಳೆ ಮಂಡಳಿ ರಚನೆಗೆ ಸಲಹೆ

ಕರ್ನಾಟಕವೂ ಸೇರಿ ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಬೆಳೆಯಲಾಗುವ ಹಲಸು, ಹುಣಸೆ, ನೇರಳೆಗೆ ಉತ್ತೇಜನ ನೀಡಲು ಮಕಾನ ಮಂಡಳಿಯಂತೆ ಪ್ರತ್ಯೇಕ ಮಂಡಳಿಯನ್ನು ರಚನೆ ಮಾಡಬೇಕು. ಈ ಮೂರು ಬೆಳೆಗಳು ಔಷಧೀಯ ಗುಣಗಳನ್ನು ಹೊಂದಿದ್ದು, ದಕ್ಷಿಣದ ಭಾಗದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಕಡಿಮೆ ಮಳೆ ಅಗತ್ಯವಿರುವ ಬೆಳೆಗಳು ಎಂದು ಮಾಜಿ ಪ್ರಧಾನಿ ದೇವೇಗೌಡರು ಮನವಿ ಹೇಳಿದರು.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮಂಡಳಿ ರಚನೆ ಬಗ್ಗೆ ಕ್ರಮ ವಹಿಸುತ್ತಾರೆ ಎಂಬ ನಂಬಿಕೆ ಹೊಂದಿದ್ದೇನೆ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.

ಈ ಬಜೆಟ್ ಅನ್ನು ಎನ್ಡಿಎ ಮೈತ್ರಿಪಕ್ಷವಾಗಿ ಮುಕ್ತಕಂಠದಿಂದ ಸ್ವಾಗತಿಸಿವೆ ಎಂದ ಮಾಜಿ ಪ್ರಧಾನಿಗಳು; ಆಯವ್ಯಯದಲ್ಲಿ ಅಡಗಿರುವ ಅನೇಕ ಉತ್ತಮ ಅಂಶಗಳನ್ನು ಪಟ್ಟಿ ಮಾಡಿದರು. ಉತ್ಪಾದನೆ, ಎಂಎಸ್‌ಎಂಇಗಳು, ಕೈಗಾರಿಕಾ ಮೂಲಸೌಕರ್ಯ ಮತ್ತು ರಫ್ತು ವಹಿವಾಟಿಗೆ ಉತ್ತೇಜನ ನೀಡುವುದು ಸೇರಿದಂತೆ ಅನಿಶ್ಚಿತತೆಯನ್ನು ಕಡಿಮೆ ಮಾಡುವ ಮತ್ತು ದೀರ್ಘಾವಧಿಯ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶವನ್ನು ಮುಂಗಡಪತ್ರದಲ್ಲಿ ಒತ್ತಿ ಹೇಳಲಾಗಿದೆ. ಇದು ಜಾಗತಿಕ ಮೌಲಿಕ ಸರಪಳಿಗಳಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ದೃಷ್ಟಿಕೋನವನ್ನು ದೃಢವಾಗಿ ಬೆಂಬಲಿಸುತ್ತದೆ ಎಂದು ಹೇಳಿದರು.

ಜನತೆಗೆ ಅನುಕೂಲ ಆಗುವಂತೆ ತೆರಿಗೆ ವ್ಯವಸ್ಥೆಯಲ್ಲಿ ಸರಳೀಕರಣ ಮಾಡಿರುವುದು ಸ್ವಾಗತಾರ್ಹ. ತೆರಿಗೆದಾರರ ವಿಶ್ವಾಸವು ಅಷ್ಟೇ ಮುಖ್ಯವಾಗಿದೆ ಎಂದ ಅವರು; ಸರ್ಕಾರವು ಕರ್ನಾಟಕದ ಕರಾವಳಿ ಸೇರಿ ಇತರ ಪ್ರದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯಲಾಗುವ ತೆಂಗಿನಕಾಯಿ, ಶ್ರೀಗಂಧ, ಕೋಕೋ ಮತ್ತು ಗೋಡಂಬಿಯಂತಹ ವಾಣಿಜ್ಯ ಬೆಳೆಗಳಿಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ನೀಡಿರುವುದು ಉತ್ತಮವಾದ ಹೆಜ್ಜೆ. ತೆಂಗು ‘ಕಲ್ಪವೃಕ್ಷ’ ಎಂದು ಜನಪ್ರಿಯವಾಗಿದೆ. ಇದು ಎಲ್ಲಾ ವಯಸ್ಸಿನ ಜನರಿಗೆ ಬಹುವಿಧದಲ್ಲಿ ಆರೋಗ್ಯ ಪ್ರಯೋಜನಗಳೊಂದಿಗೆ ಪೋಷಣೆ ಒದಗಿಸುತ್ತದೆ. ಹೆಚ್ಚಿನ ಪ್ರದೇಶಗಳಲ್ಲಿ ತೆಂಗು ಜೀವನಾಡಿಯಾಗಿದೆ. ಕೃಷಿಗೆ ಉತ್ತಮ ಬೆಂಬಲ ಕೊಡಲಾಗಿದೆ. ಒಟ್ಟು ಬಜೆಟ್ ನಲ್ಲಿ ಒಟ್ಟು ಬಜೆಟ್‌ನ 3% ರಷ್ಟು ಹಂಚಿಕೆ ನೀಡಲಾಗಿದ್ದು, ಈ ಪ್ರಮಾಣವನ್ನು 5% ಗೆ ಕೃಷಿ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಮಾಜಿ ಪ್ರಧಾನಿಗಳು ಸಲಹೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:18 pm, Wed, 11 February 26

Source link

ಎರಡನೇ ಬಾರಿಗೆ ತಾಯಿ ಆಗುತ್ತಿದ್ದಾರೆ ಕನ್ನಡದಲ್ಲಿ ನಟಿಸಿದ ಸುಂದರಿ

Source link

ವಿವಾದದ ಬೆನ್ನಲ್ಲೇ ಭೂಕಾಂತ್​​ಗೆ ನೀಡಲಾಗಿದ್ದ ಸಚಿವ ಸಂಪುಟ ಸ್ಥಾನಮಾನ ಹಿಂಪಡೆದ ಸರ್ಕಾರ – Kannada News | Arnataka Govt Revokes BJP Leader Bhookant’s Cabinet Rank Amidst Congress Backlash

ಭೂಕಾಂತ್​​ಗೆ ನೀಡಲಾಗಿದ್ದ ಸಚಿವ ಸಂಪುಟದ ಸ್ಥಾನಮಾನ ಹಿಂಪಡೆದ ಸರ್ಕಾರImage Credit source: Tv9 Kannada

ಬೆಂಗಳೂರು, ಫೆಬ್ರವರಿ 11: ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರಾಗಿರುವ ಒಟ್ಟು 54 ಮಂದಿಗೆ ಸಚಿವ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಆ ಪೈಕಿ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ನಿಯಮಿತ ಅಧ್ಯಕ್ಷರಾಗಿರುವ ಭೂಕಾಂತ್​​ ಅವರಿಗೂ ರಾಜ್ಯ ಸಚಿವ ಸ್ಥಾನಮಾನ ನೀಡಿದ್ದರ ವಿರುದ್ಧ ಕಾಂಗ್ರೆಸ್​​ ಪಾಳಯದಿಂದ ಭಾರೀ ಆಕ್ಷೇಪ ಕೇಳಿಬಂದಿತ್ತು. ಬಿಜೆಪಿ ನಾಯಕನಿಗೆ ಕಾಂಗ್ರೆಸ್​​ ಸರ್ಕಾರದಿಂದ ಈ ಸ್ಥಾನ ಮಾನ ನೀಡಿರೋದು ಎಷ್ಟು ಸರಿ ಎಂಬ ವಿರೋಧ ಕೇಳಿಬಂದ ಬೆನ್ನಲ್ಲೇ ಭೂಕಾಂತ್​​ಗೆ ನೀಡಲಾಗಿದ್ದ ಸಚಿವ ಸಂಪುಟದ ಸ್ಥಾನಮಾನವನ್ನು ಸರ್ಕಾರವೀಗ ಹಿಂಪಡೆದಿದೆ. ಕಾರ್ಯಕರ್ತರ ಅಸಮಾಧಾನದ ಬೆನ್ನಲ್ಲೇ ಈ ತೀರ್ಮಾನ ಮಾಡಲಾಗಿದೆ.

ಭೂಕಾಂತ್ ಅವರ ಪತ್ನಿ ಕೂಡ ಬಿಜೆಪಿಯಿಂದ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿದ್ದರು. ಹೀಗಿರುವಾಗ ಅವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿರುವ ಹಿನ್ನೆಲೆ ಕಾಂಗ್ರೆಸ್​​ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇಲ್ಲಿಯವರೆಗೂ ಪ್ರಮುಖ ನಿಗಮಗಳ ಅಧ್ಯಕ್ಷರಾಗಿರುವ ಶಾಸಕರಿಗಷ್ಟೇ ದೊರೆಯುತ್ತಿದ್ದ ಈ ಸ್ಥಾನಮಾನವನ್ನು ಎಲ್ಲ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರಿಗೂ ಅನ್ವಯಿಸುವಂತೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ ಸರಿ. ಆದರೆ ಕಾಂಗ್ರೆಸ್​​ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿರುವಾಗ ಬಿಜೆಪಿ ಮುಖಂಡನಿಗೆ ಈ ಸ್ಥಾನಮಾನ ನೀಡಿದ್ದು ಯಾಕೆ ಎಂದು ಪ್ರಶ್ನಿಸಲಾಗಿತ್ತು.

ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಬಿಜೆಪಿ ಮುಖಂಡನಿಗೆ ರಾಜ್ಯ ಸಚಿವ ಸ್ಥಾನಮಾನ!; ‘ಕೈ’ ಕಾರ್ಯಕರ್ತರ ಕಿಡಿ

ಕಿಡಿ ಕಾರಿದ್ದ ಡಿ.ಕೆ. ಸುರೇಶ್​​

ಕಾರ್ಯಕರ್ತರು ಮಾತ್ರವಲ್ಲದೆ ತಮ್ಮದೇ ಸರ್ಕಾರದ ವಿರುದ್ಧ ಮಾಜಿ ಸಂಸದ, ಡಿಸಿಎಂ ಡಿಕೆಶಿ ಸಹೋದರ ಡಿ.ಕೆ. ಸುರೇಶ್​​ ಕೂಡ ಲೇವಡಿ ಮಾಡದ್ದರು. ನಮ್ಮದು ಸರ್ವಧರ್ಮ ಪಾಲಿಸಿಯಾಗಿದ್ದು, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲರೂ ನಮ್ಮ ಪಕ್ಷದಲ್ಲೇ ಇದ್ದಾರೆ. ಹೀಗಾಗಿ ಎಲ್ಲ ವಿಚಾರದಲ್ಲೂ ಹೊರಗಿನಿಂದ ಬಂದ ಅತಿಥಿಗಳಿಗೆ ಮೊದಲ ಆದ್ಯತೆ ನೀಡಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಎರಡನೇ‌ ಆದ್ಯತೆ ನೀಡುತ್ತೇವೆ ಎಂದು ಪರೋಕ್ಷವಾಗಿ ತಿವಿದಿದ್ದರು.

ವರದಿ: ಈರಣ್ಣಾ ಬಸವ, ಟಿವಿ9 ಕನ್ನಡ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:01 pm, Wed, 11 February 26

Source link

AUS vs IRE: ಆಸ್ಟ್ರೇಲಿಯಾಕ್ಕೆ ಸುಲಭ ತುತ್ತಾದ ಐರ್ಲೆಂಡ್ – Kannada News | T20 World Cup 2026: Australia Dominates Ireland in Opener; Ellis, Zampa Star

ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ 2026 ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಿದೆ. ಕೊಲಂಬೊದಲ್ಲಿ ನಡೆದ ತನ್ನ ಮೊದಲ ಗುಂಪು ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ, ಐರ್ಲೆಂಡ್ ( Australia vs Ireland) ತಂಡವನ್ನು 67 ರನ್‌ಗಳಿಂದ ಸುಲಭವಾಗಿ ಸೋಲಿಸಿ ಗೆಲುವಿನ ಖಾತೆ ತೆರೆದಿದೆ. ನಾಯಕ ಮಿಚೆಲ್ ಮಾರ್ಷ್ ಅನುಪಸ್ಥಿತಿಯಲ್ಲಿ ಟ್ರಾವಿಸ್ ತಂಡವನ್ನು ಮುನ್ನಡೆಸಿದರು. ಅದರಂತೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 182 ರನ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಐರ್ಲೆಂಡ್ ಕೇವಲ 115 ರನ್‌ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಬೌಲಿಂಗ್​ನಲ್ಲಿ ಮಿಂಚಿದ ನಾಥನ್ ಎಲ್ಲಿಸ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು.

182 ರನ್ ಕಲೆಹಾಕಿದ ಆಸೀಸ್

ದುರ್ಬಲ ಐರ್ಲೆಂಡ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಹೇಳಿಕೊಳ್ಳುವಂತಹ ಆರಂಭ ಸಿಗಲಿಲ್ಲ. ಆದಾಗ್ಯೂ ಆ ಬಳಿಕ ಬಂದ ಜೋಶ್ ಇಂಗ್ಲಿಸ್ (37), ಮಾರ್ಕಸ್ ಸ್ಟೊಯಿನಿಸ್ (45) ಮತ್ತು ಕ್ಯಾಮರೂನ್ ಗ್ರೀನ್ (21) ಅವರ ಗಮನಾರ್ಹ ಇನ್ನಿಂಗ್ಸ್ ತಂಡವನ್ನು 182 ರನ್‌ಗಳ ಬಲವಾದ ಮೊತ್ತಕ್ಕೆ ಕೊಂಡೊಯ್ಯಿತು.

ಎಲ್ಲಿಸ್-ಝಂಪಾ ಮಾರಕ ದಾಳಿ

ಆಸೀಸ್ ಬೌಲಿಂಗ್ ಮುಂದೆ ಐರ್ಲೆಂಡ್ ತಂಡಕ್ಕೆ ಈ ಗುರಿ ಬೆನ್ನಟ್ಟುವುದು ಕಷ್ಟಕರ ಎಂಬುದು ಆರಂಭದಲ್ಲೇ ಸ್ಪಷ್ಟವಾಗಿತ್ತು. ಅದರಂತೆ ನಾಥನ್ ಎಲಿಸ್ ಬೌಲಿಂಗ್​ಗೆ ಐರ್ಲೆಂಡ್​ ಬ್ಯಾಟರ್​​ಗಳ ಬಳಿ ಉತ್ತರವಿರಲಿಲ್ಲ. ಇದರ ಜೊತೆಗೆ ನಾಯಕ ಪಾಲ್ ಸ್ಟಿರ್ಲಿಂಗ್ ಗಾಯಗೊಂಡು ನಿವೃತ್ತರಾದರೆ, ಮೂರನೇ ಓವರ್‌ನ ಹೊತ್ತಿಗೆ, ತಂಡದ ಪ್ರಮುಖ ಮೂರು ವಿಕೆಟ್‌ಗಳು ಪತನಗೊಂಡವು. ಅವುಗಳಲ್ಲಿ ಎರಡನ್ನು ಎಲಿಸ್ ಒಂದೇ ಓವರ್‌ನಲ್ಲಿ ಪಡೆದರು. ಏಳನೇ ಓವರ್‌ನ ವೇಳೆಗೆ, ಐರ್ಲೆಂಡ್ ಕೇವಲ 43 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

T20 World Cup: 2ನೇ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗುಡ್​ ನ್ಯೂಸ್

ತಂಡದ ಪರ ಏಕಾಂಗಿ ಹೋರಾಟ ನೀಡಿದ ಜಾರ್ಜ್ ಡಾಕ್ರೆಲ್ 41 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಇನ್ನು ಲೆಗ್-ಸ್ಪಿನ್ನರ್ ಆಡಮ್ ಜಂಪಾ ಮಧ್ಯಮ ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಐರ್ಲೆಂಡ್ ತಂಡವನ್ನು ಬೇಗನೇ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಎಲಿಸ್ ತಮ್ಮ 3.5 ಓವರ್‌ಗಳಲ್ಲಿ ಕೇವಲ 12 ರನ್‌ಗಳನ್ನು ನೀಡಿ ನಾಲ್ಕು ವಿಕೆಟ್‌ಗಳನ್ನು ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:09 pm, Wed, 11 February 26

Source link

93 ವರ್ಷದ ಸಂಭ್ರಮಾಚರಣೆ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ: ಜಯಮಾಲ – Kannada News | Jayamala said no one has has power to oppose film chamber decision

ಕನ್ನಡ ಚಿತ್ರರಂಗದ (Sandalwood) 93ನೇ ವರ್ಷದ ಸಂಭ್ರಮಾಚರಣೆಯನ್ನು ಮಾಡಬೇಕು ಎಂದು ನೂತನ ಅಧ್ಯಕ್ಷೆ ಜಯಮಾಲ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಇದಕ್ಕೆ ನಿರ್ಮಾಪಕರ ಸಂಘ ಆಕ್ಷೇಪ ವ್ಯಕ್ತಪಡಿಸಿದ್ದು, ಕೆ ಮಂಜು, ಪ್ರಿಯಾ ಹಾಸನ್ ಇನ್ನೂ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಫಿಲಂ ಚೇಂಬರ್​​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅಧ್ಯಕ್ಷೆ ಜಯಮಾಲ ಅವರು, 93 ವರ್ಷದ ಸಂಭ್ರಮಾಚರಣೆ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಈ ನಿರ್ಧಾರಕ್ಕೂ ನಿರ್ಮಾಪಕರ ಸಂಘಕ್ಕೂ ಸಂಬಂಧ ಇಲ್ಲ’ ಎಂದಿದ್ದಾರೆ. ಜಯಮಾಲ ಹೇಳಿರುವುದೇನು? ವಿಡಿಯೋ ಇಲ್ಲಿದೆ..

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

T20 World Cup: 2ನೇ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗುಡ್​ ನ್ಯೂಸ್ – Kannada News | T20 World Cup 2026: India vs Namibia – Abhishek Sharma Discharged, Match Update

ಮೇಲೆ ಹೇಳಿದಂತೆ ಫೆಬ್ರವರಿ 12, ಗುರುವಾರ, ಟೀಂ ಇಂಡಿಯಾ ವಿಶ್ವಕಪ್‌ನ ಎರಡನೇ ಗುಂಪು ಹಂತದ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೂ ಮುನ್ನ ಅಭಿಷೇಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದು ತಂಡದ ತಲೆನೋವು ಕಡಿಮೆ ಮಾಡಿದೆ. ಆದರೆ ಅವರು ಈ ಪಂದ್ಯದಲ್ಲಿ ಆಡುವ ಸಾಧ್ಯತೆಗಳಿಲ್ಲ. ಏಕೆಂದರೆ ಮುಂಬರುವ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ವಿಶ್ರಾಂತಿ ನೀಡಬಹುದು.

Source link

ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಪರಾರಿ: ಮಗಳ ನೆನೆದು ಕಣ್ಣೀರಿಟ್ಟ ಹೆತ್ತ ಕರುಳು – Kannada News | Mother Emotional for Her Daughter Escaped With Muslim Man at mangaluru

ಮಂಗಳೂರು, (ಫೆಬ್ರವರಿ 11): ಅನ್ಯಕೋಮಿನ ಯುವಕನೊಂದಿಗೆ ಹಿಂದೂ (Hindu) ಯುವತಿ ಪರಾರಿಯಾಗಿರುವ ಘಟನೆ ಮಂಗಳೂರಿನ (Mangaluru) ಸುರತ್ಕಲ್​​ನಲ್ಲಿ ನಡೆದಿದೆ. ಸುರತ್ಕಲ್​ನ ಮುಕ್ಕ ಕಾಲೇಜಿನಲ್ಲಿ ಓದುತ್ತಿದ್ದ ಕಾಸರಗೋಡು ಆರ್.ಡಿ‌.ನಗರದ ಮೀಪುಗುರಿ ನಿವಾಸಿಯಾದ ವೈಶಾಲಿ ಪರಾರಿಯಾಗಿದ್ದು, ಜನವರಿ 31ರಂದು ಮಿದ್ಲಾಜ್ ಜತೆ ರಿಜಿಸ್ಟರ್​ ಮ್ಯಾರೇಜ್ ಆಗಿರುವ ಮಾಹಿತಿ ತಿಳಿದುಬಂದಿದೆ. ಆದ್ರೆ, ಮಗಳು ಸಂಪರ್ಕಕ್ಕೆ ಸಿಗದಿದ್ದರಿಂದ ಕಂಗಾಲಾಗಿರುವ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ವೈಶಾಲಿ ತಂದೆ ವಿದೇಶದಿಂದ ದೌಡಾಯಿಸಿದ್ದು, ಮಗಳಿಗಾಗಿ ಕಣ್ಣೀರಿಟ್ಟಿದ್ದಾರೆ. ಇನ್ನೊಂದೆಡೆ ವೈಶಾಲಿ ತಾಯಿಯೂ ಸಹ ಕಣ್ಣೀರುತ್ತಲ್ಲೇ ತಮ್ಮ ದುಖವನ್ನು ತೋಡಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ​​: ವಿದೇಶದಿಂದ ಬಂದ ತಂದೆ, ಮಗಳಿಗಾಗಿ ಕಣ್ಣೀರು – Kannada News | Mangaluru: Hindu Young girl Escaped With other religion boy Case: her father came from abroad, sheds tears for daughter

ಮಂಗಳೂರು, ಫೆಬ್ರವರಿ 11: 23 ವರ್ಷದ ವೈಶಾಲಿ ಮನೆಯಲ್ಲಿ ಎಲ್ಲರಿಗೂ ಮುದ್ದು ಮಗಳು. ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕು ಎನ್ನುವ ಆಸೆಗೆ ತಕ್ಕಂತೆ ಪೋಷಕರು (parents) ಆಕೆಯನ್ನು ಕ್ರಿಮಿನಾಲಜಿಯಲ್ಲಿ ಡಿಗ್ರಿ ಓದಿಸುತ್ತಿದ್ದರು. ಆದರೆ ಓದಿ ಕೆಲಸ ಹಿಡಿಯಬೇಕಾದ ಮಗಳು ಅನ್ಯಕೋಮಿಯ ಯುವಕನೊಂದಿಗೆ ಪರಾರಿಯಾಗಿದ್ದಾಳೆ. ಇತ್ತ ಪೋಷಕರು ಮಗಳೇ ವಾಪಾಸ್ ಮನೆಗೆ ಬಾ ಅಂತಾ ಕಣ್ಣೀರಿಟ್ಟಿದ್ದಾರೆ.

ವೈಶಾಲಿ ಮಂಗಳೂರಿನ ಸುರತ್ಕಲ್ ಬಳಿಯ ಮುಕ್ಕಾದ ಕಾಲೇಜ್​ ಒಂದರಲ್ಲಿ ಓದುತ್ತಿರುವ ಕ್ರಿಮಿನಾಲಜಿ ಪದವಿ ವಿದ್ಯಾರ್ಥಿನಿ. ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯವರು. ಇನ್ನು ಈಕೆಯನ್ನು ಮದುವೆ ಮಾಡಿಕೊಂಡಿರುವನ ಹೆಸರು ಮೊಹಮ್ಮದ್ ವಿದ್ಲಾಜ್ ಪಿ.ಎಚ್. ಈತ ಕೇರಳದ ವಯನಾಡಿನವನು. ಈತ ಸುರತ್ಕಲ್​ನ ಜ್ಯುವೆಲ್ಲರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇವರಿಬ್ಬರು ಜ.31ರಂದು ವಯನಾಡಿನ ರಿಜಿಸ್ಟರ್ ಕಚೇರಿಯಲ್ಲಿ ಮದುವೆ ಆಗಿರುವ ವಿಚಾರ ಸಾಮಾಜಿಕ ಜಾಲತಾಣದ ಮೂಲಕ ವೈಶಾಲಿ ಮನೆಯವರಿಗೆ ಗೊತ್ತಾಗಿದೆ.

ಆಕೆಯ ಬ್ರೈನ್ ವಾಶ್ ಮಾಡಲಾಗಿದೆ ಎಂದ ಪೋಷಕರು 

ರಿಜಿಸ್ಟರ್ ಮ್ಯಾರೇಜ್ ವಿಚಾರ ತನ್ನ ಪೋಷಕರಿಗೆ ಗೊತ್ತಾಗಿರುವುದು ವೈಶಾಲಿಗೆ ಗೊತ್ತಾಗುತ್ತಿದ್ದಂತೆ ಫೆಬ್ರವರಿ 9 ರಂದು ತಾನು ವಾಸವಾಗಿದ್ದ ಸುರತ್ಕಲ್ ಪಿಜಿಯಿಂದ ಪರಾರಿಯಾಗಿದ್ದಾಳೆ. ಇನ್ನು ವಿಚಾರ ತಿಳಿದ ತಕ್ಷಣ ಆತನ ತಂದೆ ವಿಶ್ವನಾಥ್ ವಿದೇಶದಿಂದ ದೌಡಾಯಿಸಿದ್ದಾರೆ. ಪೋಷಕರು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ. ಮಗಳು ಲವ್ ಮಾಡುವವಳಂತವಳಲ್ಲ. ಆಕೆಯ ಬ್ರೈನ್ ವಾಶ್ ಮಾಡಲಾಗಿದೆ. ಆಕೆಗೆ ಬ್ಲಾಕ್ ಮೇಲ್ ಮಾಡಿ, ಬೆದರಿಸಿ ಕರೆದುಕೊಂಡು ಹೋಗಾಲಾಗಿದೆ. ಮುಸ್ಲಿಮರು ಷಡ್ಯಂತ್ರ ಮಾಡಿದ್ದಾರೆ ಅಂತಾ ಪೋಷಕರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ, ಆತಂಕದಲ್ಲಿ ಆಕೆಯ ಪೋಷಕರು

ಇನ್ನು ವಯನಾಡು ಪೊಲೀಸ್ ಠಾಣೆಯಲ್ಲಿ ಇವರಿಬ್ಬರು ಇರುವುದು ಗೊತ್ತಾಗಿದೆ. ವಿಶ್ವನಾಥ್ ಮತ್ತು ಲತಾ ದಂಪತಿ ವಯನಾಡು ಠಾಣೆಗೆ ಹೋಗಿ ತಮ್ಮ ಮಗಳನ್ನು ಭೇಟಿಯಾಗಿದ್ದಾರೆ. ಮಗಳು ‘ನಾನು ನಿಮ್ಮ ಜೊತೆ ಬರುತ್ತೇನೆ’ ಅಂತಾ ಹೇಳಿದ್ದಳಂತೆ. ಅದೇ ರೀತಿ ಮುಚ್ಚಳಿಕೆ ಬರೆದುಕೊಟ್ಟಳಂತೆ. ಆದರೆ ವಯನಾಡು ಪೊಲೀಸರು ಮಗಳ ಜೊತೆ ಮಾತನಾಡಲು ಕೇವಲ 5 ನಿಮಿಷ ಕಾಲಾವಕಾಶ ನೀಡಿದ್ದಾರೆ. ಆ ಹುಡುಗನಿಗೆ ಹೆಚ್ಚು ಸಮಯ ನೀಡಿದ್ದಾರೆ. ಪೊಲೀಸರು ಕೂಡ ಆ ಹುಡುಗನ ಪರವಹಿಸಿದರು. ಹೀಗಾಗಿ ಬರೆದುಕೊಟ್ಟ ಮುಚ್ಚಳಿಕೆಯನ್ನು ಹರಿದು ಮತ್ತೆ ಬೇರೆ ಬರೆದುಕೊಟ್ಟಿದ್ದಾಳೆ ಅಂತಾ ಪೋಷಕರು ಕಣ್ಣೀರಿಟ್ಟರು. ಇನ್ನು ಮಗಳೇ ಎಲ್ಲಿದರೂ ಬಾ ಅಂತಾ ತಾಯಿ ಲತಾ ಅಂಗಲಾಚಿ ಬೇಡಿಕೊಂಡರು.

ಇದನ್ನೂ ಓದಿ: Mangaluru: ಕೌಟುಂಬಿಕ ಕಲಹಕ್ಕೆ ಹರಿದ ನೆತ್ತರು; ಗಲಾಟೆ ವೇಳೆ ಹೋಯ್ತು ಇಬ್ಬರ ಪ್ರಾಣ!

ಕೇರಳ ಪೊಲೀಸರು ಹುಡುಗನ ಕಡೆ ಶ್ಯಾಮೀಲಾಗಿದ್ದಾರೆ. ನೀವು ನಮಗೆ ನ್ಯಾಯ ದೊರಕಿಸಿಕೊಡಿ ಅಂತಾ ಪೋಷಕರು ಸುರತ್ಕಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರೀತಿಸಿದವನ ಜೊತೆ ಹೋಗುತ್ತಾಳಾ ಅಥವಾ ಪೋಷಕರ ಪ್ರೀತಿಗೆ ವೈಶಾಲಿ ಕರಗುತ್ತಾಳಾ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version