ಕರ್ನಾಟಕ ಹವಾಮಾನ ವರದಿ: ಕರಾವಳಿಯಲ್ಲಿ ಉಷ್ಣ ಅಲೆಯ ಅಬ್ಬರ! ಉತ್ತರ ಕರ್ನಾಟಕದಲ್ಲಿರಲಿದೆ ವರುಣಾರ್ಭಟ – Kannada News | Karnataka Weather Forecast: Thunderstorm all over Karnataka, Heat wave in Coastal area

ಬೆಂಗಳೂರು, ಏಪ್ರಿಲ್ 22: ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ (Karnataka Weather)ಹೆಚ್ಚಾಗಿದ್ದು, ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕವು ಬಿಸಿಲಿನ ಬೇಗೆ ತತ್ತರಿಸಿದೆ. ಇಂದು ಕರಾವಳಿಯಲ್ಲಿ ಉಷ್ಣ ಅಲೆಯ ಆರ್ಭಟವಿರಲಿದ್ದು ಜೊತೆಗೆ ರಾಜ್ಯದ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಉಷ್ಣ ಅಲೆ

ಕರಾವಳಿಯ ತಾಪಮಾನದಲ್ಲಿ ಏರುಪೇರಾಗುತ್ತಿದ್ದು, ಬಿಸಿಲ ಬೇಗೆಗೆ ಜನರು ತತ್ತರಿಸಿಹೋಗಿದ್ದಾರೆ. ಇಂದು ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೀಟ್​ ವೇವ್ ಅಲರ್ಟ್​ ಘೋಷಿಸಲಾಗಿದೆ. ಅದರ ಜೊತೆಗೆ ಗುಡುಗು ಸಹಿತ ಗಾಳಿ-ಮಳೆಯಾಗುವ ಸಂಭವವೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 5 ದಿನದವರೆಗೂ ಕರಾವಳಿಯಲ್ಲಿ ಇದೇ ರೀತಿಯ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಗುಡುಗು ಸಹಿತ ಮಳೆ

ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 30-40 ಕಿ.ಮೀ ವೇಗದ ಗಾಳಿಯ ಜೊತೆಗೆ ಗುಡುಗು ಸಹಿತ ಮಳೆಯೂ ಆಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಉಳಿದೆಡೆ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಉಷ್ಣಾಘಾತದಿಂದ ರಕ್ಷಣೆ ಹೇಗೆ?

ಮುಂಬರುವ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದನ್ನು ತಪ್ಪಿಸುಂತೆ ಹೇಳಲಾಗಿದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಬಿಸಿಲಲ್ಲಿ ಆಟವಾಡುವುದನ್ನು ಆದಷ್ಟು ನಿಯಂತ್ರಿಸುವಂತೆ ಸೂಚಿಸಲಾಗಿದೆ.

ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಮುಖ ಸುಟ್ಟು ಹೋಗಿದೆ, ಪ್ಲಾಸ್ಟಿಕ್ ಸರ್ಜರಿ ಬಳಿಕವಷ್ಟೇ ಮಾತನಾಡಲು ಸಾಧ್ಯ – Kannada News | Mojtaba Khamenei’s Secret Rule: Injured Iranian Leader Communicates Via Notes

ಟೆಹ್ರಾನ್, ಏಪ್ರಿಲ್ 24:ಇರಾನ್‌(Iran)ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಜೀವಂತವಾಗಿದ್ದಾರೆ. ಆದರೆ, ಅವರು ಅಧಿಕಾರ ನಡೆಸುತ್ತಿರುವ ರೀತಿ ಮತ್ತು ಅವರ ಪ್ರಸ್ತುತ ಆರೋಗ್ಯ ಸ್ಥಿತಿ ಅಕ್ಷರಶಃ ಬೆಚ್ಚಿಬೀಳಿಸುವಂತಿದೆ. ಫೆಬ್ರವರಿ 28ರ ಅಮೆರಿಕ-ಇಸ್ರೇಲಿ ವೈಮಾನಿಕ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಅವರು, ಈಗ ಮಾತಿಲ್ಲದೆ ‘ನಿಗೂಢ ನಾಯಕ’ನಾಗಿ ಉಳಿದಿದ್ದಾರೆ.

ದಿ ನ್ಯೂಯಾರ್ಕ್​ ಟೈಮ್ಸ್​ ವರದಿ ಪ್ರಕಾರ, ಮೊಜ್ತಬಾ ಖಮೇನಿ ಸದ್ಯ ವೈದ್ಯಕೀಯ ಸಿಬ್ಬಂದಿಯ ಕಣ್ಗಾವಲಿನಲ್ಲಿದ್ದಾರೆ. ಅವರ ಮುಖ ಮತ್ತು ತುಟಿಗಳ ಮೇಲೆ ತೀವ್ರವಾದ ಸುಟ್ಟಗಾಯಗಳಾಗಿದ್ದು, ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಸಹಜ ಸ್ಥಿತಿಗೆ ಮರಳಲು ಅವರಿಗೆ ಪ್ಲಾಸ್ಟಿಕ್ ಸರ್ಜರಿಯ ಅಗತ್ಯವಿದೆ.
ಅವರ ಒಂದು ಕಾಲಿಗೆ ಈಗಾಗಲೇ ಮೂರು ಶಸ್ತ್ರಚಿಕಿತ್ಸೆಗಳಾಗಿದ್ದು, ಅವರು ಈಗ ಕೃತಕ ಅಂಗದ (Prosthetic leg) ಜೋಡಣೆಗಾಗಿ ಕಾಯುತ್ತಿದ್ದಾರೆ.

ಒಂದು ಕೈ ಕೂಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಇಂದಿನ ಡಿಜಿಟಲ್ ಯುಗದಲ್ಲಿ ಮೊಜ್ತಬಾ ಖಮೇನಿ ಅವರು ದೇಶದ ಆಡಳಿತ ನಡೆಸುತ್ತಿರುವುದು ‘ಕೈಬರಹದ ಚೀಟಿಗಳ’ ಮೂಲಕ. ಐಆರ್‌ಜಿಸಿ (IRGC) ಕಮಾಂಡರ್‌ಗಳು ಅಥವಾ ಸಚಿವರು ಅವರನ್ನು ನೇರವಾಗಿ ಭೇಟಿ ಮಾಡುತ್ತಿಲ್ಲ.

ವಿಶ್ವಾಸಾರ್ಹ ಕೊರಿಯರ್‌ಗಳ ಮೂಲಕ ಮೊಹರು ಮಾಡಿದ ಕೈಬರಹದ ಸಂದೇಶಗಳು ರಸ್ತೆಯ ಮೂಲಕ ರವಾನೆಯಾಗುತ್ತವೆ. ಮೊಜ್ತಬಾ ಅವರ ಪ್ರತಿಕ್ರಿಯೆಗಳು ಕೂಡ ಅದೇ ಮಾದರಿಯಲ್ಲಿ ಮರಳಿ ಬರುತ್ತವೆ. ಅವರ ದೈಹಿಕ ಅಸಮರ್ಥತೆ ಮತ್ತು ಸುರಕ್ಷತೆಯ ಕಾರಣದಿಂದಾಗಿ ದೇಶದ ಪ್ರಮುಖ ನಿರ್ಧಾರಗಳನ್ನು ಪ್ರಸ್ತುತ ಮಿಲಿಟರಿ ನಾಯಕರಿಗೆವಹಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ಲಾಸ್ಟಿಕ್ ಸರ್ಜರಿ ಮತ್ತು ಕೃತಕ ಅಂಗಗಳ ಜೋಡಣೆಯ ನಂತರ ಮೊಜ್ತಬಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆಯೇ? ಅಥವಾ ತೆರೆಯ ಮರೆಯಲ್ಲೇ ಮಿಲಿಟರಿ ಆಡಳಿತ ಮುಂದುವರೆಯುತ್ತದೆಯೇ ಎಂಬುದು ಈಗಿನ ದೊಡ್ಡ ಪ್ರಶ್ನೆ. ಇಸ್ರೇಲ್ ಅವರನ್ನು ಪತ್ತೆಹಚ್ಚಿ ಕೊಲ್ಲಬಹುದು ಎಂಬ ಭಯದಿಂದ ಹಿರಿಯ ಸರ್ಕಾರಿ ಅಧಿಕಾರಿಗಳು ಅವರನ್ನು ಭೇಟಿ ಮಾಡುತ್ತಿಲ್ಲ.

ಮತ್ತಷ್ಟು ಓದಿ: ಸತ್ತಿರಬಹುದು ಅಥವಾ ಕೆಟ್ಟ ಸ್ಥಿತಿಯಲ್ಲಿರಬಹುದು; ಇರಾನ್‌ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಬಗ್ಗೆ ಟ್ರಂಪ್ ಶಾಕಿಂಗ್ ಹೇಳಿಕೆ

ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ದೇಶದ ಬಗ್ಗೆ ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸಿಎನ್‌ಎನ್ ವರದಿಗಳ ಪ್ರಕಾರ, ಮೊಜ್ತಬಾ ಖಮೇನಿಯು ಸಕ್ರಿಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಿಂದ ದೂರವಿರುವುದು ಇರಾನ್ ನಾಯಕತ್ವದೊಳಗೆ ಬಿರುಕು ಮೂಡಿಸಿದೆ. ಇರಾನ್ ನಾಯಕತ್ವದ ವಿವಿಧ ಹಂತಗಳಲ್ಲಿ ಅಮೆರಿಕದೊಂದಿಗೆ ಯಾವ ರೀತಿ ಸಂಧಾನ ಮಾಡಿಕೊಳ್ಳಬೇಕು ಎಂಬ ಬಗ್ಗೆ ಒಮ್ಮತ ಮೂಡುತ್ತಿಲ್ಲ. ಸಂಧಾನಕಾರರಿಗೆ ಎಷ್ಟು ಅಧಿಕಾರ ನೀಡಬೇಕು ಎಂಬ ಬಗ್ಗೆಯೂ ಗೊಂದಲಗಳಿವೆ. ಫೆಬ್ರವರಿ 28 ರಂದು ನಡೆದ ಅಮೆರಿಕ-ಇರಾನ್ ದಾಳಿಯಲ್ಲಿ ಮೊಜ್ತಬಾ ಅವರ ಪಾದಕ್ಕೆ ಗಂಭೀರ ಗಾಯವಾಗಿದ್ದು, ಮುಖ ಮತ್ತು ಕಣ್ಣಿಗೆ ಪೆಟ್ಟಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೇರಳದವರಾದರೂ ಚೆನ್ನೈನಲ್ಲಿ ವೋಟ್ ಮಾಡಿದ್ದೇಕೆ ದುಲ್ಖರ್ ಸಲ್ಮಾನ್? ಶುರುವಾಗಿದೆ ಚರ್ಚೆ – Kannada News | Dulquer Salmaan Votes in Tamil Nadu Elections: Chennai Residency Sparks Debate

ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ 24ರಂದು ನಡೆದಿದೆ. ರಾಜ್ಯದಲ್ಲಿ ಶೇ.85 ಮತದಾನ ಆಗಿದೆ. ಇದು ತಮಿಳು ನಾಡು ಇತಿಹಾಸದಲ್ಲೇ ದಾಖಲೆಯ ಮತದಾನ ಎನಿಸಿಕೊಂಡಿದೆ. ಕಾಲಿವುಡ್​​ನ ಅನೇಕ ಸೆಲೆಬ್ರಿಟಿಗಳು ವೋಟ್ ಮಾಡಿದ್ದಾರೆ. ಈ ಮಧ್ಯೆ ಮಲಯಾಳಂ ನಟ ದುಲ್ಖರ್ ಸಲ್ಮಾನ್ (Dulquer Salmaan) ಮತ ಚಲಾಯಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ. ಮಲಯಾಳಿಯಾದ ದುಲ್ಖರ್ ತಮಿಳುನಾಡು ಚುನಾವಣೆಯಲ್ಲಿ ಹೇಗೆ ಮತ ಚಲಾಯಿಸಿದರು ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ.

ಇತ್ತೀಚೆಗೆ ಕೇರಳದಲ್ಲಿ ಮತದಾನ ನಡೆಯಿತು. ಆ ಸಂದರ್ಭದಲ್ಲಿ ಕೊಚ್ಚಿಯಲ್ಲಿ ಅನೇಕ ಸೆಲೆಬ್ರಿಟಿಗಳು ಮತ ಹಾಕಿದರು. ಈ ವೇಳೆ ದುಲ್ಖರ್ ಸಲ್ಮಾನ್ ಕಾಣಿಸಿಕೊಂಡಿರಲಿಲ್ಲ. ಇದು ಯಾಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಈಗ ಅವರು ತಮಿಳು ನಾಡು ಚುನಾವಣೆಯಲ್ಲಿ ವೋಟ್ ಹಾಕಿದ್ದಾರೆ. ದುಲ್ಖರ್ ಮತ ಚಲಾಯಿಸಿದ ಮಾಹಿತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಕಾರಣ ಅವರು ಚೆನ್ನೈ ನಿವಾಸಿ ಎಂಬುದು.

ದುಲ್ಖರ್ ಕೇರಳವನ್ನು ತ್ಯಜಿಸಿದ್ದಾರೆಯೇ ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಅವರನ್ನು ಟೀಕಿಸುವ ಕೆಲಸ ಆಗಿದೆ.
‘ದುಲ್ಖರ್ ಮಾಡೋದು ಮಲಯಾಳಂ ಚಿತ್ರ, ಆದರೆ ವೋಟ್ ಹಾಕೋದು ತಮಿಳುನಾಡಿನಲ್ಲೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಅವರು ಅಲ್ಲಿ ಮತ ಹಾಕಲು ಕಾರಣವೂ ಇದೆ. ದುಲ್ಖರ್ ಸಲ್ಮಾನ್ ತಮ್ಮ ಶಿಕ್ಷಣವನ್ನು ಪಡೆದಿದ್ದು ಚೆನ್ನೈನಲ್ಲಿ. ಅವರ ಪತ್ನಿ ಚೆನ್ನೈ ಮೂಲದವರು. ಇನ್ನು, ಅವರು ಚೆನ್ನೈನಲ್ಲಿ ಬಿಸ್ನೆಸ್ ಕೂಡ ಹೊಂದಿದ್ದಾರೆ. ಈ ಕಾರಣದಿಂದ ಅವರು ಚೆನ್ನೈನಲ್ಲಿ ಸೆಟಲ್ ಆಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕೇರಳದಲ್ಲಿ ‘ಸು ಫ್ರಮ್ ಸೋ’ ಹಂಚಿಕೆಗೆ ಸಹಾಯ ಮಾಡಿದ್ದ ದುಲ್ಖರ್ ಸಲ್ಮಾನ್​ ಋಣ ತೀರಿಸಿದ ರಾಜ್ ಬಿ ಶೆಟ್ಟಿ

2016ರ ವಿಧಾನಸಭಾ ಚುನಾವಣೆಯಲ್ಲಿ ದುಲ್ಖರ್ ಕೇರಳದಲ್ಲಿ ಮತ ಚಲಾಯಿಸಿದ್ದರು. ಅವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ತಮಿಳುನಾಡು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಚೆನ್ನೈನಲ್ಲಿ ರಜನಿಕಾಂತ್, ಸೌಂದರ್ಯ ರಜನಿಕಾಂತ್, ಕಮಲ್ ಹಾಸನ್, ಅವರ ಪುತ್ರಿ ಶ್ರುತಿ ಹಾಸನ್, ವಿಜಯ್, ತ್ರಿಷಾ ಸೇರಿದಂತೆ ಅನೇಕರು ವೋಟ್ ಮಾಡಿದ್ದಾರೆ. ಸೂರ್ಯ ಹಾಗೂ ಪತ್ನಿ ಜ್ಯೋತಿಕಾ ಮತ ಹಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:05 am, Fri, 24 April 26

Source link

ನನ್ನಿಂದ ತಪ್ಪಾಗಿದೆ, ಐಆರ್​ಎಸ್ ಅಧಿಕಾರಿ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಹೇಳಿದ್ದೇನು? – Kannada News | IRS Officer’s Daughter Murder Case, Accused Confesses, Detained

ಆರೋಪಿ ರಾಹುಲ್ ಮೀನಾ Image Credit source: Mathrubhumi English

ನವದೆಹಲಿ, ಏಪ್ರಿಲ್ 24: ‘‘ನನ್ನಿಂದ ಅಪರಾಧವಾಗಿದೆ, ತಪ್ಪು ಮಾಡಿದ್ದೇನೆ’’ ಎಂದು ಐಆರ್​ಎಸ್(IRS) ಅಧಿಕಾರಿಯ ಪುತ್ರಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ರಾಹುಲ್ ಮೀನಾ ಹೇಳಿದ್ದಾನೆ. ಗುರುವಾರ ನ್ಯಾಯಾಲಯವು ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಆರೋಪಿಯನ್ನು ನಾಲ್ಕು ದಿನಗಳ ಕಾಲ ಕಸ್ಟಡಿಗೆ ವಹಿಸುವಂತೆ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಪುರಸ್ಕರಿಸಿದೆ.

ಮುಖಕ್ಕೆ ಬಟ್ಟೆಯಿಂದ ಮುಚ್ಚಲಾಗಿದ್ದ ಆರೋಪಿಯನ್ನು ಮಧ್ಯಾಹ್ನ 2.30 ರ ಸುಮಾರಿಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ರಾಜಸ್ಥಾನದ ಅಲ್ವಾರ್‌ನಲ್ಲಿ ಆರೋಪಿ ಮತ್ತು ಅವನ ಸಹಚರರು ಮತ್ತೊಬ್ಬ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕೆಲವೇ ಗಂಟೆಗಳ ನಂತರ, ಬುಧವಾರ ಬೆಳಗ್ಗೆ 22 ವರ್ಷದ ಐಐಟಿ ಪದವೀಧರೆಯನ್ನು ಕೈಲಾಶ್ ಹಿಲ್ಸ್​ನಲ್ಲಿರುವ ನಿವಾಸದಲ್ಲಿ ಅತ್ಯಾಚಾರ ಮಾಡಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಮೆಡಿಕೋ-ಲೀಗಲ್ ವರದಿಯಲ್ಲಿ (MLC) ತೋರಿಸಿರುವ ಗಾಯಗಳ ಬಗ್ಗೆ ಮ್ಯಾಜಿಸ್ಟ್ರೇಟ್ ಮೀನಾ ಅವರನ್ನು ಕೇಳಿದಾಗ, ಆರೋಪಿಯು ಟೆರೇಸ್‌ನಿಂದ ಇಳಿಯುವಾಗ ಗಾಯಗೊಂಡಿದ್ದೇನೆ ಎಂದು ಹೇಳಿದ್ದಾನೆ. ನ್ಯಾಯಾಲಯದಿಂದ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಆರೋಪಿಯು ತಾನು ತಪ್ಪು ಮತ್ತು ಅಪರಾಧ ಮಾಡಿರುವುದಾಗಿ ಎಂದು ಒಪ್ಪಿಕೊಂಡಿದ್ದಾನೆ.

ಅಪರಾಧ ಮಾಡಲು ಕಾರಣವೇನೆಂದು ನ್ಯಾಯಾಲಯ ಆರೋಪಿಯನ್ನು ಕೇಳಿದಾಗ, ಲಾಕರ್ ತೆರೆಯಲು ಆಕೆಯ ಬೆರಳಚ್ಚುಗಳು ಅಗತ್ಯವಿತ್ತು ಎಂದು ಮೀನಾ ಹೇಳಿದ್ದಾನೆ. ಐಆರ್​ಎಸ್ ಅಧಿಕಾರಿ ಮತ್ತು ಅವರ ಪತ್ನಿ ಬೆಳಗ್ಗೆ ಮನೆಯಿಂದ ಹೊರಬಂದ ಬಳಿಕ, ಆರೋಪಿ ಮನೆಗೆ ನುಗ್ಗಿದ್ದ, ಕೀಯನ್ನು ಮನೆಯ ಶೂ ರ್ಯಾಕ್​ನಲ್ಲಿ ಇರಿಸಿರುವುದು ಆತನಿಗೆ ತಿಳಿದಿತ್ತು. ಆ ಕೀ ಮೂಲಕ ಆತ ಮನೆಯೊಳಗೆ ಪ್ರವೇಶಿಸಿದ್ದ.

ಮತ್ತಷ್ಟು ಓದಿ: ಎರಡು ದಿನ, ಎರಡು ಅತ್ಯಾಚಾರ, ಒಂದು ಕೊಲೆ, ಐಆರ್​ಎಸ್ ಅಧಿಕಾರಿ ಮಗಳ ಕೊಂದವನು ಸಾಮಾನ್ಯದವನಲ್ಲ

ಆತ ನೇರವಾಗಿ ಐಆರ್​ಎಸ್ ಅಧಿಕಾರಿ ಮಗಳ ಸ್ಟಡಿ ರೂಮ್​ಗೆ ಹೋಗಿದ್ದಾನೆ. ಮೊದಲು ಆಕೆಯ ತಾಯಿಯೇ ಅವನಿಗೆ ಬರಲು ಹೇಳಿದ್ದಾರೆಂದು ಆಕೆಗೆ ತಿಳಿಸಿದ್ದ.ಅವನು ಹೇಗೆ ಒಳಗೆ ಬಂದನೆಂದು ಅವಳು ಪ್ರಶ್ನಿಸಿದಾಗ, ತಪ್ಪಿಸಿಕೊಳ್ಳುವ ಉತ್ತರಗಳನ್ನು ನೀಡಿ ನಂತರ ಅವಳ ಮೇಲೆ ಹಲ್ಲೆ ನಡೆಸಿದ್ದಾನೆ.
ಮೊಬೈಲ್ ಫೋನ್ ಚಾರ್ಜರ್ ಕೇಬಲ್ ಬಳಸಿ ಕತ್ತು ಹಿಸುಕಿದ್ದಾನೆ, ಆಕೆ ಪ್ರಜ್ಞೆ ತಪ್ಪಿದ ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ, ಬಳಿಕ ಕೆಳ ಮಹಡಿಯಲ್ಲಿರುವ ಲಾಕರ್ ರೂಮ್​ಗೆ ಆಕೆಯನ್ನು ಎಳೆದೊಯ್ದಿದ್ದಾನೆ.

ಬೆರಳುಗಳನ್ನು ಬಯೋಮೆಟ್ರಿಕ್ ಸ್ಕ್ಯಾನರ್‌ಗೆ ಒತ್ತಿ ಅದನ್ನು ಅನ್‌ಲಾಕ್ ಮಾಡಲು ಪ್ರಯತ್ನಿಸಿದ್ದಾನೆ, ಆದರೆ ಆಕೆಯ ಬೆರಳಿಗೆ ರಕ್ತ ಮೆತ್ತಿಕೊಂಡಿದ್ದ ಕಾರಣ ಅದು ಸಾಧ್ಯವಾಗಲಿಲ್ಲ.ನಂತರ ಅವನು ಸ್ಕ್ರೂಡ್ರೈವರ್ ಬಳಸಿ ಲಾಕರ್ ಅನ್ನು ಬಲವಂತವಾಗಿ ತೆರೆದು, ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಸಿಲ ಬೇಗೆ ತಾಳಲಾರದೆ ಹೆಚ್ಚೆಚ್ಚು ಕೂಲ್ ಡ್ರಿಂಕ್ಸ್ ಕುಡಿಯುತ್ತೀರಾ? ಹಾಗಿದ್ರೆ ವೈದ್ಯರ ಈ ಎಚ್ಚರಿಕೆ ಗಮನಿಸಲೇಬೇಕು – Kannada News | Bengaluru Heatwave: Doctors Warn Against Excessive Ice Cream and Cold Drinks Consumption as Temperatures Rise

ಕೆಸಿ ಜನರಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಮುರಳೀಧರ್ ಹಾಗೂ ಕೂಲ್ ಡ್ರಿಂಕ್ಸ್​ನ ಸಾಂದರ್ಭಿಕ ಚಿತ್ರImage Credit source: tv9

ಬೆಂಗಳೂರು, ಏಪ್ರಿಲ್ 24: ಬೆಂಗಳೂರಿನಲ್ಲಿ (Bengaluru) ಬಿಸಿಲ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮನೆಯಿಂದ ಹೊರಬಂದರೆ ಸಾಕು ಕೆಂಡದಂತಹ ವಾತಾವರಣ ಜನರನ್ನು ಹೈರಾಣಾಗಿಸುತ್ತಿದೆ. ಈ ಸುಡುವ ಬಿಸಿಲಿನಿಂದ ಪಾರಾಗಲು ಮತ್ತು ದೇಹವನ್ನು ತಂಪಾಗಿಸಿಕೊಳ್ಳಲು ಜನರು ಐಸ್‌ಕ್ರೀಂ ಹಾಗೂ ಕೂಲ್ ಡ್ರಿಂಕ್ಸ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಇವುಗಳ ಅತಿಯಾದ ಸೇವನೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಹೆಚ್ಚಿದ ಬೇಡಿಕೆ, ಹೆಚ್ಚಿದ ಆತಂಕ

ನಗರದ ಗರಿಷ್ಠ ತಾಪಮಾನ ಏರುತ್ತಿರುವ ಹಿನ್ನೆಲೆಯಲ್ಲಿ ಐಸ್‌ಕ್ರೀಂ ಪಾರ್ಲರ್‌ ಹಾಗೂ ತಂಪು ಪಾನೀಯಗಳ ಅಂಗಡಿಗಳ ಮುಂದೆ ಜನವೋ ಜನ. ದಣಿವು ಆರಿಸಿಕೊಳ್ಳಲು ಜನರು ಅತಿಯಾಗಿ ತಂಪು ಪಾನೀಯಗಳನ್ನು ಕುಡಿಯುತ್ತಿದ್ದಾರೆ. ಆದರೆ ಇದು ತಾತ್ಕಾಲಿಕವಾಗಿ ತಂಪು ನೀಡಿದರೂ, ದೇಹದ ಆಂತರಿಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ವೈದ್ಯರ ಎಚ್ಚರಿಕೆ ಏನು?

ಈ ಕುರಿತು ಮಾಹಿತಿ ನೀಡಿರುವ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಮುರಳೀಧರ್, ‘ಹೊರಗಿನ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿದ್ದಾಗ ದೇಹಕ್ಕೆ ಅತಿ ತಣ್ಣನೆಯ ಆಹಾರ ಅಥವಾ ಪಾನೀಯ ಸೇರಿದರೆ ರೋಗನಿರೋಧಕ ಶಕ್ತಿ ಕುಂದಬಹುದು. ಇದರಿಂದ ಕೆಮ್ಮು, ನೆಗಡಿ, ಶೀತ ಮಾತ್ರವಲ್ಲದೆ ನ್ಯುಮೋನಿಯಾದಂತಹ ಗಂಭೀರ ಕಾಯಿಲೆಗಳಿಗೂ ಕಾರಣವಾಗಬಹುದು’ ಎಂದು ತಿಳಿಸಿದ್ದಾರೆ.

ನೈಸರ್ಗಿಕ ಪಾನೀಯಕ್ಕೆ ಒತ್ತು ನೀಡಿ

ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಕೃತಕ ಪಾನೀಯಗಳಿಗಿಂತ ಎಳನೀರು, ಮಜ್ಜಿಗೆಯಂತಹ ನೈಸರ್ಗಿಕ ಪಾನೀಯಗಳಿಗೆ ಆದ್ಯತೆ ನೀಡುವುದು ಉತ್ತಮ. ಐಸ್‌ಕ್ರೀಂ ಮತ್ತು ಕೂಲ್ ಡ್ರಿಂಕ್ಸ್‌ಗಳ ಸೇವನೆ ಮಿತವಾಗಿರಲಿ ಎಂಬುದು ವೈದ್ಯರ ಕಿವಿಮಾತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಜೆ ಮಳೆ ಫಿಕ್ಸ್: ಕರಾವಳಿ ಜನರಿಗೆ ಸೆಖೆಯ ಕಾಟ; ಉಷ್ಣಾಂಶದ ಮಟ್ಟ ಏರಿಕೆಯಾಗುವ ಸಾಧ್ಯತೆ

ವರದಿ: ಲಕ್ಷ್ಮಿ ನರಸಿಂಹ, ಟಿವಿ9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ವಧು-ವರರ ನಕ್ಷತ್ರ ಒಂದೇ ಇದ್ರೆ ಮದುವೆ ಮಾಡಬಹುದಾ? – Kannada News | Same Nakshatra Marriages: Astrological Guidelines and Compatibility

ವಧು-ವರರ ನಕ್ಷತ್ರ ಒಂದೇ ಇದ್ರೆ ಮದುವೆ ಮಾಡಬಹುದಾ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಯಾವುದೇ ನಕ್ಷತ್ರಕ್ಕೆ ನಾಲ್ಕು ಪಾದಗಳಿರುತ್ತವೆ. ರೋಹಿಣಿ, ಆರ್ದ್ರ, ಮಕಾ, ಹಸ್ತ, ವಿಶಾಖ, ಶ್ರವಣ, ಉತ್ತರಾಭಾದ್ರ, ರೇವತಿ ನಕ್ಷತ್ರಗಳಲ್ಲಿ ವಧು-ವರರ ಪಾದಗಳು ಭಿನ್ನವಾಗಿದ್ದಲ್ಲಿ ವಿವಾಹವಾಗಬಹುದು. ಆದರೆ ಅಶ್ವಿನಿ, ಕೃತಿಕ, ಮೃಗಶಿರ, ಪುನರ್ವಸು, ಪುಷ್ಯ, ಪೂರ್ವಾಷಾಡ, ಉತ್ತರಾಷಾಡ ನಕ್ಷತ್ರಗಳಲ್ಲಿ ವಿವಾಹ ಅಷ್ಟು ಸಮಂಜಸವಲ್ಲ, ಇದು ಮಧ್ಯಮ ಫಲಿತಾಂಶ ನೀಡುತ್ತದೆ.

ಇನ್ನು ಕೆಲವು ನಕ್ಷತ್ರಗಳಲ್ಲಿ ಏಕ ನಕ್ಷತ್ರ ವಿವಾಹವನ್ನು ಕಡ್ಡಾಯವಾಗಿ ನಿಷಿದ್ಧವೆಂದು ಪರಿಗಣಿಸಲಾಗುತ್ತದೆ. ಅವು ಭರಣಿ, ಆಶ್ಲೇಷ, ಸ್ವಾತಿ, ಜ್ಯೇಷ್ಠ, ಮೂಲ, ಧನಿಷ್ಠ, ಶತಭಿಷ ಮತ್ತು ಪೂರ್ವಭಾದ್ರ ನಕ್ಷತ್ರಗಳು. ಈ ನಕ್ಷತ್ರಗಳಲ್ಲಿ ಏಕ ನಕ್ಷತ್ರ ವಿವಾಹ ನಡೆದರೆ ಆರೋಗ್ಯ ಸಮಸ್ಯೆಗಳು, ಸಂತಾನ ಭಾಗ್ಯವಿಲ್ಲದಿರುವುದು, ಜೀವನಪೂರ್ತಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. ಇಂತಹ ಸಂದರ್ಭದಲ್ಲಿ ತಜ್ಞ ಜ್ಯೋತಿಷಿ ಅಥವಾ ಪಂಡಿತರನ್ನು ಸಂಪರ್ಕಿಸಿ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಪಡೆಯುವುದು ಅತ್ಯವಶ್ಯಕ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

 

 

 

Source link

Horoscope Today: ಇಂದು ಈ ರಾಶಿಯವರು ಪ್ರಯಾಣ ಮಾಡುವಾಗ ಹುಷಾರಾಗಿರಿ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 24, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪುಷ್ಯ ನಕ್ಷತ್ರವಿರುವ ಈ ಶುಭ ದಿನದ ಕುರಿತು ಗುರೂಜಿ ವಿವರಣೆ ನೀಡಿದ್ದಾರೆ.

ಇಂದು ರವಿ ಮೇಷ ರಾಶಿಯಲ್ಲಿ ಮತ್ತು ಚಂದ್ರ ಕರ್ಕಾಟಕ ರಾಶಿಯ ಪುಷ್ಯ ನಕ್ಷತ್ರದಲ್ಲಿ ಸಂಚರಿಸಲಿದ್ದಾರೆ. ಇದು ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಸೂಕ್ತವಾದ ಶುಕ್ರವಾರವಾಗಿದೆ. ಪ್ರತಿಯೊಂದು ರಾಶಿಯವರಿಗೂ ಆರ್ಥಿಕ ಸ್ಥಿತಿ, ಉದ್ಯೋಗ, ಸಂಬಂಧಗಳು, ಆರೋಗ್ಯ, ಪ್ರಯಾಣದ ಯೋಗ, ಅದೃಷ್ಟದ ಬಣ್ಣ, ಸಂಖ್ಯೆ ಮತ್ತು ವಿಶೇಷ ಮಂತ್ರಗಳನ್ನು ಕುರಿತು ವಿವರವಾದ ಮಾಹಿತಿ ನೀಡಿದ್ದಾರೆ.

 

 

 

Source link

ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್ ಹಾಕಲು ಖಾಸಗಿ ಕಂಪನಿ ವಿಭಿನ್ನ ಪ್ಲಾನ್: ಮೆಟ್ರೋ ಬಳಸುವ ಉದ್ಯೋಗಿಗಳಿಗೆ ಸಿಗಲಿದೆ ತಿಂಗಳಿಗೆ 2,000 ರೂ! – Kannada News | Biocon Incentivizes Metro Travel: Employees to Get Rs 2000 Monthly Bonus to Tackle Bengaluru Traffic

ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಏಪ್ರಿಲ್ 24: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸುಮಾರು ಒಂದು ಕೋಟಿಗೂ ಅಧಿಕ ವಾಹನಗಳು ರಸ್ತೆಗಿಳಿಯುತ್ತಿರುವುದರಿಂದ ಬೆಂಗಳೂರು ವಿಶ್ವದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ಎರಡನೇ ನಗರ ಎಂಬ ಅಪಖ್ಯಾತಿಗೆ ಗುರಿಯಾಗಿದೆ. ಈ ಗಂಭೀರ ಸಮಸ್ಯೆಯನ್ನು ಹೋಗಲಾಡಿಸಲು ಈಗ ಖಾಸಗಿ ಕಂಪನಿಗಳು ವಿನೂತನ ಹಾದಿ ಹಿಡಿದಿದ್ದು, ಬಯೋಕಾನ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ವಿಶೇಷ ಕೊಡುಗೆ ಪ್ರಕಟಿಸಿದೆ.

ಸಾರ್ವಜನಿಕ ಸಾರಿಗೆ ಬಳಸಿದರೆ ಬೋನಸ್

ನಗರದ ಟ್ರಾಫಿಕ್ ಕಡಿಮೆ ಮಾಡಲು ಮತ್ತು ಉದ್ಯೋಗಿಗಳು ಸರಿಯಾದ ಸಮಯಕ್ಕೆ ಕಚೇರಿ ತಲುಪಲು ನೆರವಾಗುವಂತೆ ಬಯೋಕಾನ್ ಸಂಸ್ಥೆ ಟೆಕ್ಕಿಗಳಿಗೆ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಸಲು ಸೂಚಿಸಿದೆ. ವಾರದಲ್ಲಿ ಕನಿಷ್ಠ ಎರಡು ದಿನ ಸಾರ್ವಜನಿಕ ಸಾರಿಗೆ ಬಳಸುವ ಉದ್ಯೋಗಿಗಳಿಗೆ ಸಂಬಳದ ಜೊತೆಗೆ ಪ್ರೋತ್ಸಾಹಧನ (Incentive) ನೀಡಲು ಮುಂದಾಗಿದೆ. ಮೊದಲ ಹಂತದಲ್ಲಿ ಒಂದು ಸಾವಿರ ಉದ್ಯೋಗಿಗಳಿಗೆ ಪ್ರತಿ ತಿಂಗಳು 2,000 ರೂಪಾಯಿಗಳ ಮೆಟ್ರೋ ಪಾಸ್ ಅಥವಾ ಇನ್ಸೆಂಟಿವ್ ನೀಡಲು ಸಂಸ್ಥೆ ನಿರ್ಧರಿಸಿದೆ.

ಕಿರಣ್ ಮಜುಂದಾರ್ ಷಾ ಅವರ ಆಶಯ

ಈ ಕುರಿತು ಮಾತನಾಡಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು, ‘ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗ (Yellow Line) ಮೆಟ್ರೋ ಸಂಚಾರದಿಂದ ಈ ಭಾಗದಲ್ಲಿ ಟ್ರಾಫಿಕ್ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ. ನಮ್ಮ ಸಂಸ್ಥೆಯ ಈ ನಿರ್ಧಾರವನ್ನು ನೋಡಿ ಇತರ ಐಟಿ-ಬಿಟಿ ಕಂಪನಿಗಳು ಕೂಡ ತಮ್ಮ ಉದ್ಯೋಗಿಗಳಿಗೆ ಇಂತಹ ಸೌಲಭ್ಯ ನೀಡಲು ಮುಂದೆ ಬರಬಹುದು’ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಪಾರ್ಕಿಂಗ್ ಚಾರ್ಜ್‌ ಮತ್ತು ಕಾರ್ ಪೂಲಿಂಗ್

ಕೇವಲ ಇನ್ಸೆಂಟಿವ್ ಮಾತ್ರವಲ್ಲದೆ, ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಕೆಯನ್ನು ಉತ್ತೇಜಿಸಲು ಕಂಪನಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿವೆ. ಸ್ವಂತ ಕಾರು ಅಥವಾ ಬೈಕ್‌ನಲ್ಲಿ ಕಚೇರಿಗೆ ಬರುವವರಿಗೆ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತಿದೆ. ಇದರಿಂದಾಗಿ ಅನೇಕ ಟೆಕ್ಕಿಗಳು ಪಾರ್ಕಿಂಗ್ ಹಣ ಪಾವತಿಸುವ ಬದಲು ಮೆಟ್ರೋ ಅಥವಾ ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸುತ್ತಿದ್ದಾರೆ. ಅಲ್ಲದೆ, ಒಂದೇ ಭಾಗದಿಂದ ಬರುವ ಉದ್ಯೋಗಿಗಳು ‘ಕಾರ್ ಪೂಲಿಂಗ್’ ಮೂಲಕ ಬರಲು ಉತ್ತೇಜನ ನೀಡಲಾಗುತ್ತಿದೆ.

ಇದನ್ನೂ ಓದಿ: ಬಿಸಿಲ ಝಳಕ್ಕೆ ತತ್ತರಿಸಿದ ಬೆಂಗಳೂರಿಗರು: ಬಸ್, ಮೆಟ್ರೋಗೆ ಭರ್ಜರಿ ಆದಾಯ, ಹೇಗಂತೀರಾ?

ಬಯೋಕಾನ್ ಸಂಸ್ಥೆಯ ಈ ನಿರ್ಧಾರವು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮಾದರಿಯಾಗಿದ್ದು, ಇತರ ಕಂಪನಿಗಳು ಇದನ್ನು ಹೇಗೆ ಅಳವಡಿಸಿಕೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಮಾತಿನಿಂದ ಹಣ ಪಡೆಯುವ ಯೋಜನೆ ಮಾಡುವರು – Kannada News | Horoscope April 24 Friday 2026; Dina Rashi Bhavishya Today, Checkout the details here

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ಅತಿಗಂಡ, ಕರಣ : ತೈತಿಲ, ಸೂರ್ಯೋದಯ – 06 – 06 am, ಸೂರ್ಯಾಸ್ತ – 06 – 38 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:49 – 12:23, ಯಮಗಂಡ ಕಾಲ 15:30 – 17:04, ಗುಳಿಕ ಕಾಲ 07:41 – 09:15

ಮೇಷ ರಾಶಿ:

ಇಂದು ನಿಮ್ಮನ್ನು ಹುಡುಕಿಕೊಂಡು ಬರುವರಿಂದ ನಿಮ್ಮ ವಿವಾಹವು ನಿಶ್ಚಯವಾಗಲಿದೆ. ಬೇರೆಯವರನ್ನು ಗೊಂದಲಕ್ಕೆ ಸಿಕ್ಕಿ ಹಾಕಿಸುವುದು ಬೇಡ. ಹೂಡಿಕೆಯ ಹೊಸ ವಿಧಾನದಿಂದ ಸಂತೋಷ. ನಿಮ್ಮ‌‌ ಸ್ನೇಹವನ್ನು ಬಯಸಲು ಇಂದು ಅನೇಕರು ಇರಲಿದ್ದಾರೆ. ಅಮುಖ್ಯವಾದ ಕಾರ್ಯಗಳಿಗೆ ಓಡಾಟವನ್ನು ಮಾಡಬೇಕಾದೀತು. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮುಗಿಸುವ ಕೌಶಲವು ನಿಮ್ಮಲ್ಲಿರುವುದು. ಹೂಡಿಕೆಯ ವಿಚಾರದಲ್ಲಿ ಯಾರಾದರೂ ದಾರಿಯನ್ನು ತಪ್ಪಿಸಿಯಾರು.

ವೃಷಭ ರಾಶಿ:

ಪ್ರೀತಿಗೆ ಬೆಲೆಯನ್ನು ಕೊಡುವ ನಿಮ್ಮ ಹವ್ಯಾಸವು ಮುಂದುವರಿಯಲಿ. ರಾಜಕೀಯದ ನಿಮ್ಮ ರಹಸ್ಯ ನಡೆಯು ಬಯಲಾಗಬಹುದು. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು. ತುರ್ತು ಚಿಕಿತ್ಸೆಯ ಅವಶ್ಯಕತೆ ಎದುರಾಗುವುದು. ಅನಗತ್ಯ ಅಲೆದಾಟವನ್ನು ನಿಲ್ಲಿಸಿ ಕಾರ್ಯದಲ್ಲಿ ಮಗ್ನರಾಗಿ. ಇಂದು ಖರ್ಚಿನ ಬಗ್ಗೆ ಊಹೆಗೂ ಸಿಗದು. ಶ್ರಮಕ್ಕೆ ಯೋಗ್ಯವಾದ ಆದಾಯವನ್ನು ನಿರೀಕ್ಷಿಸುವಿರಿ. ಹೇಳಬೇಕಾದ‌ ವಿಷಯದಲ್ಲಿ ಮುಚ್ಚು ಮರೆ ಇಲ್ಲದೇ ಸರಿಯಾಗಿ ಹೇಳಿ.‌

ಮಿಥುನ ರಾಶಿ:

ಮನಸ್ಸಿಗೆ ಯಾವುದನ್ನಾದರೂ ತಂದುಕೊಂಡು ಅನಂತರ ಮುಂದುವರಿಯುವಿರಿ. ಪ್ರಯಾಣದ ಆಯಾಸವು ನಿಮ್ಮನ್ನು ದುರ್ಬಲಗೊಳಿಸುತ್ತದೆ‌. ನಿಮ್ಮ ಯೋಜನೆಗೆಳಿಗೆ ಪುರಸ್ಕಾರಗಳು ಸಿಗಬಹುದು. ಅಮೂಲ್ಯ ಸಮಯವನ್ನು ಆಲಸ್ಯದಿಂದ ಕಳೆಯುವಿರಿ. ಚಿತ್ರಕಾರರಿಗೆ ಅವಕಾಶಗಳು ಬರಬಹುದು. ಜೀವನದಲ್ಲಿ ಅನೇಕರಿಂದ ನೀವು ಹಿಂದೆ ಬೀಳುತ್ತೀರಿ. ಇದು ನಿಮ್ಮ ಜೀವನಸಂಗಾತಿಯೊಂದಿಗಿನ ಅದ್ಭುತ ದಿನವಾಗಿದೆ.

ಕರ್ಕಾಟಕ ರಾಶಿ:

ನಿಯಮ ಭಂಗದಿಂದ ನಿಮಗೆ ಕಷ್ಟ. ನಿಮ್ಮವರೆಂದುಕೊಂಡವರು ನಿಮ್ಮವರಾಗದೇ ಇರಬಹುದು. ಸಂಗಾತಿಗಳ ಕಲಹವು ಮಕ್ಕಳ ಕಾರಣದಿಂದ ತಣ್ಣಗಾಗುತ್ತದೆ. ಧಾರ್ಮಿಕ ಕಾರ್ಯಗಳಿಗೆ ಸಂಪತ್ತು ಬಳಕೆಯಾಗಲಿದೆ. ದಾಖಲೆಗಳು ನಿಮ್ಮ ಬಗ್ಗೆ ಸರಿಯಾದ ಮಾಹಿತಿ ಕೊಡುವುದು. ಅಪರೂಪದ ವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ. ನಿಂತ ಕಾರ್ಯಕ್ಕೆ ಚಾಲನೆ ನೀಡುವಿರಿ. ಆಶ್ರಯದಾತರನ್ನು ಅಪಮಾನ ಮಾಡುವಿರಿ. ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ನಿಮ್ಮ‌ ಮೇಲಿರುವ ಭಾವನೆಯು ದೂರಾಗಬಹುದು.

ಸಿಂಹ ರಾಶಿ:

ಪಿರ್ತಾರ್ಜಿತ ಆಸ್ತಿಯನ್ನು ಅನುಭವಿಸುವ ಕ್ಷಣ ನಿಮ್ಮದಾಗಿದೆ. ಶತ್ರುಗಳು ನಿಮ್ಮ ಚಲನವಲನಗಳನ್ನು ಗಮನಿಸುತ್ತ ಇರುವರು. ತುಂಬಾ ದಿನಗಳಿಂದ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ. ಅಶುಭವಾರ್ತೆಯಿಂದ ಉತ್ಸಾಹಕ್ಕೆ ಭಂಗ. ಇಂದು ಹಲವು ಕಾರ್ಯಗಳನ್ನು ಒಂದೇ ಸಲ ಮಾಡಬೇಕಾಗಬಹುದು. ಎಲ್ಲವೂ ಆಗಿಹೋದಂತೆ ನಿಮಗೆ ಅನ್ನಿಸಬಹುದು. ನಿಮ್ಮವರನ್ನು ಬಿಟ್ಟು ಹೋದವರ ಬಗ್ಗೆ ಆಲೋಚನೆ ಬೇಡ. ವಸತಿಯಲ್ಲಿ ತೊಂದರೆ ಬಂದ ಕಾರಣ ಬದಲಾಯಿಸುವ ಸಂದರ್ಭವೂ ಬರಬಹುದು.

ಕನ್ಯಾ ರಾಶಿ:

ಮನಸ್ಸು ಶಾಂತವಾದಷ್ಟು ಕಾರ್ಯದಲ್ಲಿ ಪ್ರಗತಿ ಹೆಚ್ಚು. ಉಕರಣಗಳಿಗೆ ಕಾರಣಾಂತರಗಳಿಂದ ಧನವ್ಯಯವಾದೀತು. ನಂಬಿಕೆಯನ್ನು ಉಳಿಸಿಕೊಳ್ಳಲು ಬಹಳ ಪ್ರಯತ್ನವನ್ನು ಮಾಡಬೇಕಾದೀತು. ಉತ್ತಮರ ಸಹವಾಸ ನಿಮ್ಮ ಜೀವನಕ್ಕೆ ತಿರುವನ್ನು ಕೊಟ್ಟೀತು. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ನಿಮ್ಮನ್ನು ಅರಿತವರು ಬಿಡಲಾರರು. ಅನಾರೋಗ್ಯದ ಕಾರಣ ಉತ್ಸಾಹದ ಯಾವ ಕಾರ್ಯವನ್ನೂ ಮಾಡಲಾಗದು. ದಿನದ ಕೆಲಸವನ್ನು ಮಾಡುವಷ್ಟರಲ್ಲಿ ನಿಮ್ಮ ಸಮಯವು ಕಳೆದುಹೋಗುವುದು.

ತುಲಾ ರಾಶಿ:

ಯಾರ ವಿರೋಧವನ್ನೂ ನೀವು ಸಹಿಸಲಾರಿರಿ. ಪರೀಕ್ಷೆಯ ಭಯವು ನಿಮ್ಮನ್ನು ಅತಿಯಾಗಿ ಕಾಡುವುದು. ಭೂವ್ಯವಹಾರದಲ್ಲಿ ನಷ್ಟವಾಗುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸಿ ಪಡೆದುಕೊಳ್ಳುವಿರಿ. ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ. ಯಾರಾದರೂ ನಿಮ್ಮ ಬಗ್ಗೆ ಅಸತ್ಯವನ್ನು ಆಡಿದರೆ ಅದನ್ನು ಕಂಡು ಹಿಡಿಯುವಿರಿ.‌

ವೃಶ್ಚಿಕ ರಾಶಿ:

ಕುಟುಂಬದಿಂದ ಅಶುಭವಾದ ಸುದ್ದಿಯು ನಿಮಗೆ ತಿಳಿಯಲಿದೆ‌. ನಿಮ್ಮ ಉಪಾಯವು ಸರಳವಾಗಿದ್ದು, ಉಚಿತವೂ ಆಗಿರಲಿದೆ‌. ಪ್ರಾಮಾಣಿಕತೆಯು ಇಂದು ನಿಮಗೆ ವರವಾಗಿ ಅನೇಕರ ಪ್ರಶಂಸೆಗೆ ಕಾರಣವಾಗಲಿದೆ. ವಿದ್ಯಾರ್ಥಿಗಳು ಯಾರ ಬೆಂಬಲಕ್ಕೂ ಕಾಯದೇ ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಮುನ್ನುಗ್ಗುವುದು ಸೂಕ್ತ. ನಿಮ್ಮ ಕೆಲವು ವರ್ತನೆಯನ್ನು ಮಿತ್ರರು ವಿರೋಧಿಸುವರು. ಅಮೂಲ್ಯ ವಸ್ತುಗಳನ್ನು ಖರೀದಿಸುವುದು ಕಷ್ಟವಾದರೂ ಮಾಡುವಿರಿ.

ಧನು ರಾಶಿ:

ನಿಮ್ಮ ಬಗ್ಗೆ ಅಪಪ್ರಚಾರಗಳು ಕೇಳಿ ಬರಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ಪಡೆಯುವಿರಿ. ನಿಮ್ಮ‌ ವಸ್ತುಗಳ ಮೇಲೆ ಅತಿಯಾದ ಮೋಹವು ಇರುವುದು. ಸ್ನೇಹಿತರ ಜೊತೆ ಇಂದು ಕಾಲವನ್ನು ಕಳೆಯುವಿರಿ. ಇತರ ನೋವಿಗೆ ನೀವಾಗಿಯೇ ಸ್ಪಂದಿಸುವಿರಿ. ಸಂಗಾತಿಯ ಯೋಚನೆಗಳಿಗೆ ಪ್ರತಿಸ್ಪಂದನೆಯು ಸಿಗಲಿದೆ. ಆಕಸ್ಮಿಕ ಧನಪ್ರಾಪ್ತಿಯಿಂದ ಹರ್ಷಗೊಳ್ಳುವಿರಿ. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ.

ಮಕರ ರಾಶಿ:

ಹಣದ ಪ್ರಾಮುಖ್ಯವನ್ನು ತಿಳಿದುಕೊಳ್ಳುವ ಸಮಯವಿಂದು. ದಾಂಪತ್ಯದಲ್ಲಿ ಶತ್ರುತ್ವ ಕೆಲಸಮಾಡಬಹುದು. ನಿಮ್ಮ ವಿದ್ಯುದುಪಕರಣದಿಂದ ನಿಮಗೆ ನಷ್ಟವಾಗಲಿದೆ. ಅಗತ್ಯವಿದ್ದಷ್ಟು ಮಾತ್ರ ಮಾತನಾಡಿ. ನಿಮ್ಮ ಅಸೂಯಾಗುಣದಿಂದ ನಿಮಗೇ ತೊಂದರೆಯಾದೀತು. ಚಂಚಲ ಮನಸ್ಸು ಸ್ಥಿರವಾಗುವ ತನಕ ಯಾವ ವಿವಾದಕ್ಕೂ ಆಸ್ಪದ ಬೇಡ. ನಿಮ್ಮ ಜೀವನಸಂಗಾತಿ ಇಂದು ನಿಮಗೆ ಪೂರ್ಣ ಬಲ ಮತ್ತು ಪ್ರೀತಿಯನ್ನು ನೀಡುವರು. ಎಲ್ಲರ ಜೊತೆಗಿದ್ದರೂ ಒಂಟಿಯಂತೆ ಅನ್ನಿಸುವುದು.‌

ಕುಂಭ ರಾಶಿ:

ಸಂಗಾತಿಯಿಂದ ಹಣವನ್ನು ನಿರೀಕ್ಷಿಸುವಿರಿ. ಹಿರಿಯ ಆಶೀರ್ವಾದವೇ ನಿಮ್ಮ ಕಾರ್ಯಗಳಿಗೆ ಬೆಂಬಲವಾಗಲಿದೆ. ಹಣದ ವ್ಯಯವು ನಿಮ್ಮನ್ನು ಆತಂಕಕ್ಕೆ ತಳ್ಳಬಹುದು. ವಿವೇಚನೆ ಇರಲಿ. ಅಚಲವಾದ ನಂಬಿಕೆಯೇ ನಿಮ್ಮ ಕಾರ್ಯವನ್ನು ಸರಿಯಾಗಿ ಆಗುವಂತೆ ಮಾಡುವುದು. ನಿಮ್ಮ ಅಂದಾಜು ಮೀರಬಹುದು. ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ಆಕಸ್ಮಿಕವಾಗಿ ಆರೋಗ್ಯವು ಹದ ತಪ್ಪಬಹುದು. ನಿಮ್ಮನ್ನು ನೀವು ಬದಲಾಯಿಸಲು ಪ್ರಯತ್ನಿಸುವಿರಿ.

ಮೀನ ರಾಶಿ:

ಹಣದ ಸಮಸ್ಯೆಗಳಿಂದ ಮುಕ್ತರಾಗುವಿರಿಸಿ. ಅನೇಕ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ವೈದ್ಯವೃತ್ತಿಯನ್ನು ಆರಿಸಿಕೊಂಡ ನಿಮಗೆ ಗೌರವಾದರಗಳು ಸಿಗಲಿವೆ. ಪರೋಪಕಾರದಿಂದ ಆತ್ಮತೃಪ್ತಿ ಆಗಲಿದೆ. ಕೃಷಿ ಉತ್ಪನ್ನಗಳ ಉದ್ಯಮದವರಿಗೆ ಹೆಚ್ಚು ಲಾಭವಾಗಲಿದೆ‌. ಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ಇತ್ಯರ್ಥ ಮಾಡಿಕೊಳ್ಳುವುದು ಉಚಿತ. ನಿಮ್ಮ ಕಾರ್ಯವು ಆಗಬೇಕಾದರೆ ಓಡಾಟ ಅನಿವಾರ್ಯವಾಗಲಿದೆ.

-ಲೋಹಿತ ಹೆಬ್ಬಾರ್ – 8762924271 (what’s app only)

Source link

MI vs CSK: ಬರೋಬ್ಬರಿ 103 ರನ್..! ಐಪಿಎಲ್ ಇತಿಹಾಸದಲ್ಲೇ ಅತಿ ಹೀನಾಯ ಸೋಲು ಕಂಡ ಮುಂಬೈ – Kannada News | IPL 2026: CSK Crushes MI by 103 Runs at Wankhede; Mumbai’s Historic Defeat!

ಐಪಿಎಲ್ 2026 ರ 33 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು. ಮುಂಬೈನ ತವರು ಮೈದಾನವಾದ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ಮುಂಬೈ 103 ರನ್​​ಗಳ ಹೀನಾಯ ಸೋಲು ಅನುಭವಿಸಿತು. ಈ ಆವೃತ್ತಿಯಲ್ಲಿ ಮುಂಬೈ ತಂಡದ 5ನೇ ಸೋಲು ಇದಾದರೆ, ಸಿಎಸ್​​ಕೆ ತಂಡದ ಮೂರನೇ ಗೆಲುವಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್​​ಕೆ ತಂಡ 20 ಓವರ್​ಗಳಲ್ಲಿ 207 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡ ಬ್ಯಾಟಿಂಗ್‌ ವಿಭಾಗದ ವೈಫಲ್ಯದಿಂದಾಗಿ ಕೇವಲ 104 ರನ್​ ಕಲೆಹಾಕಲಷ್ಟೇ ಶಕ್ತವಾಗಿ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಸೋಲು ದಾಖಲಿಸಿತು.

Source link

Exit mobile version