ನಿಧಿ ಆಸೆಗಾಗಿ ಹೆತ್ತ ತಾಯಿಯನ್ನೇ ಬಲಿ ಕೊಡಲು ಹೊರಟ ಪುತ್ರ: ಮಾಟಗಾರ ಎಸ್ಕೇಪ್​​, ಓರ್ವನ ಬಂಧನ – Kannada News | Son Arrested for Attempting to Sacrifice 80 Year Old Mother for Treasure in Chamarajanagar

ಚಾಮರಾಜನಗರ, ಮೇ 01: ನಿಧಿ ಆಸೆಗಾಗಿ ಹೆತ್ತ ತಾಯಿಯನ್ನೇ ಪಾಪಿ ಪುತ್ರನೋರ್ವ ಬಲಿ ಕೊಡಲು ಮುಂದಾಗಿದ್ದ ಆಘಾತಕಾರಿ ಘಟನೆ ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ನಡೆದಿದೆ. ಇಂದು (ಮೇ 1) ಹುಣ್ಣಿಮೆ ಹಿನ್ನೆಲೆಯಲ್ಲಿ ಬಲಿ ಕೊಟ್ಟರೆ ನಿಧಿ ಸಿಗುತ್ತೆಂದು ಸ್ಕೆಚ್ ಹಾಕಿದ್ದ ಕೊಂಡಯ್ಯನ ಮಾದಶೆಟ್ಟಿ, 80 ವರ್ಷದ ಕಣ್ಣು ಕಾಣದ ಮತ್ತು ಕಿವಿ ಕೇಳದ ತಾಯಿ ಮಾದಮ್ಮಶೆಟ್ಟಿಯನ್ನು ಬಲಿ ಕೊಡಲು ಸಿದ್ಧತೆ ನಡೆಸಿದ್ದ. ಬೆಳಗ್ಗೆ ತನ್ನ ಮನೆಯಲ್ಲೇ 4 ಅಡಿ ಗುಂಡಿ ತೆಗೆದು ಮಾಟದ ಮಡಕೆ ಇಟ್ಟು ಲಿಂಬೆಹಣ್ಣು, ಅರಿಶಿನ ಕುಂಕುಮ ಹಾಗೂ ಕಳಸವಿಟ್ಟು ಪೂಜೆ ಮಾಡಿದ್ದ. ಈ ಬಗ್ಗೆ ಅನುಮಾನಗೊಂಡು ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮನೆಗೆ ಪೊಲೀಸರು ಬರ್ತಿದ್ದಂತೆ ಮಾಟಗಾರ ಎಸ್ಕೇಪ್ ಆಗಿದ್ದು, ಮಾದಶೆಟ್ಟಿಯನ್ನು ಬಂಧಿಸಲಾಗಿದೆ. ನಿಧಿಗಾಗಿ ಮಾಟ ಮಾಡಿದ ವಿಚಾರ ತಿಳಿದು ಸಾಗಡೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಬಂದ ಫೋನ್​ನಿಂದ ಬಯಲಾಯ್ತು ಮಹಿಳೆಯ ಸಾವಿನ ರಹಸ್ಯ – Kannada News | Uttar Pradesh Woman’s digital arrest trail revealed after her phone rang during cremation

ನೊಯ್ಡಾ, ಮೇ 1: ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ಸೈಬರ್ ವಂಚಕರು ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ 28 ವರ್ಷದ ಮಹಿಳೆಯನ್ನು ಕಿರುಕುಳ, ಬ್ಲ್ಯಾಕ್‌ಮೇಲ್ ಮತ್ತು ಡಿಜಿಟಲ್ ಬಂಧನದ (digital arrest) ಬೆದರಿಕೆ ಹಾಕಿದ್ದರು. ಆಕೆ ಇದಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಅಂತ್ಯಕ್ರಿಯೆಯ ಸಿದ್ಧತೆಗಳ ಸಮಯದಲ್ಲಿ ಅವರ ಫೋನ್‌ಗೆ ಪದೇ ಪದೇ ವಾಟ್ಸಾಪ್ ಕರೆಗಳು ಬಂದಾಗ ಈ ವಂಚನೆ ಬೆಳಕಿಗೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.

ಫರೀದ್‌ಪುರ ಭೋಗಿ ಗ್ರಾಮದ ನಿವಾಸಿ ಮೋನಿಕಾ ದೇವಿ ಸೋಮವಾರ ರಾತ್ರಿ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದು, 9 ಮತ್ತು 11 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳು ಅವರ ಹತ್ತಿರದಲ್ಲಿಯೇ ಮಲಗಿದ್ದರು. ಮರುದಿನ ಅವರು ಎದ್ದಾಗ ಅಮ್ಮ ನೇಣು ಹಾಕಿಕೊಂಡಿರುವುದನ್ನು ನೋಡಿ ಮಕ್ಕಳು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದರು.

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಸೈಬರ್ ಅಪರಾಧದ ಈ ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿ ಮಹಿಳೆಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗಲೂ ಆಕೆಯ ಫೋನ್ ರಿಂಗಣಿಸುತ್ತಲೇ ಇತ್ತು. ಮೋನಿಕಾ ಪ್ರಕರಣವು ಬೆದರಿಕೆ, ಕಿರುಕುಳ, ಆನ್‌ಲೈನ್ ವಂಚನೆ ಮತ್ತು ತಿಂಗಳುಗಳ ಡಿಜಿಟಲ್ ಬಂಧನದ ಗೊಂದಲದ ಹಾದಿಯನ್ನು ಬಹಿರಂಗಪಡಿಸಿದೆ.

ಇದನ್ನೂ ಓದಿ: 2-3 ಗಂಟೆಗಳಲ್ಲಿ ಸಿಮ್ ಕಾರ್ಡ್ ಬ್ಲಾಕ್, ಡಿಜಿಟಲ್ ಅರೆಸ್ಟ್ ತಡೆಯಲು ಸಂಪೂರ್ಣ ಸಿದ್ಧತೆ, ವಾಟ್ಸ್ಆ್ಯಪ್​ನಿಂದಲೂ ಕ್ರಮ

ಏಪ್ರಿಲ್ 27 ಮತ್ತು 28ರ ಮಧ್ಯರಾತ್ರಿ ಮೋನಿಕಾ ಆತ್ಮಹತ್ಯೆ ಮಾಡಿಕೊಂಡರು. 8 ಮತ್ತು 11 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳು ಪಕ್ಕದಲ್ಲಿ ಮಲಗಿದ್ದಾಗ ಅವರು ತಮ್ಮ ಮನೆಯ ಕೋಣೆಯಲ್ಲಿ ದುಪಟ್ಟಾ ಬಳಸಿ ನೇಣು ಬಿಗಿದುಕೊಂಡಿದ್ದರು. ಮರುದಿನ ಬೆಳಿಗ್ಗೆ, ಅವರ ಮಕ್ಕಳು ಎಚ್ಚರವಾದಾಗ ಅವರ ತಾಯಿ ನೇಣು ಬಿಗಿದುಕೊಂಡಿರುವುದನ್ನು ಕಂಡರು. ಆದರೆ, ಬಿಜ್ನೋರ್‌ನ ಫರೀದ್‌ಪುರ ಭೋಗಿ ಗ್ರಾಮದಲ್ಲಿ 28 ವರ್ಷದ ಮಹಿಳೆಯ ಆತ್ಮಹತ್ಯೆಯನ್ನು ಪೊಲೀಸರಿಗೆ ತಿಳಿಸಿರಲಿಲ್ಲ.

ಆಕೆಯ ಅಂತ್ಯಕ್ರಿಯೆಯ ಸಮಯದಲ್ಲಿ ಮೋನಿಕಾ ಅವರ ಫೋನ್ ರಿಂಗ್ ಆಗಿತ್ತು. ಇದಾದ ನಂತರ ಅವರ ಕುಟುಂಬದ ಸದಸ್ಯರಿಗೆ ಮೋನಿಕಾ ಅವರನ್ನು ಬಲವಂತವಾಗಿ ಸಾಯಿಸಲಾಗಿದೆ ಮತ್ತು ಮಹಿಳೆಗೆ ಕರೆ ಮಾಡುತ್ತಲೇ ಇದ್ದ ವ್ಯಕ್ತಿಯೊಬ್ಬರು ಅವರನ್ನು ಡಿಜಿಟಲ್ ರೂಪದಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ಎಂದು ಯಾಮಾರಿಸಿ ವೃದ್ಧ ಉದ್ಯಮಿಯ 15 ಕೋಟಿ ರೂ. ಎಗರಿಸಿದ್ರು!

ಮೋನಿಕಾ ಆತ್ಮಹತ್ಯೆಯ ನಂತರ, ಅವರ ಕುಟುಂಬವು ಏನೋ ಅಸಾಮಾನ್ಯವಾದುದನ್ನು ಅನುಮಾನಿಸಿತ್ತು. ಆದರೂ ಅದನ್ನು ಎಲ್ಲೂ ಹೇಳಲಾಗದೆ ಕುಟುಂಬವು ಮೋನಿಕಾ ಅವರ ಅಂತ್ಯಕ್ರಿಯೆಯೊಂದಿಗೆ ಮುಂದಾಯಿತು. ಪೊಲೀಸರಿಗೆ ಸಹ ಮಾಹಿತಿ ನೀಡಿರಲಿಲ್ಲ. ಆದರೆ, ಅಂತ್ಯಕ್ರಿಯೆಯ ಸಮಯದಲ್ಲಿ ಮೋನಿಕಾ ಅವರ ಮೊಬೈಲ್ ಫೋನ್ ಪದೇ ಪದೇ ರಿಂಗ್ ಆದ ನಂತರ ಹೊಸ ನಿಗೂಢ ವಿವರಗಳು ಹೊರಬಿದ್ದವು.

ಮೋನಿಕಾ ಸಾವಿನ ಬಳಿಕವೂ ವಾಟ್ಸಾಪ್​ನಲ್ಲಿ ಫೋನ್ ಬಂದ ನಂತರ ಮೋನಿಕಾ ಅವರ ಸೋದರಳಿಯ ಸನ್ಯೋಗ್ ಒಂದು ಕಾಲ್ ಎತ್ತಿದ್ದರು. ಆಗ ಪೊಲೀಸ್ ಯೂನಿಫಾರಂ ಧರಿಸಿದ ಒಬ್ಬ ವ್ಯಕ್ತಿ ವಿಡಿಯೋ ಕಾಲ್ ಮಾಡಿದ್ದ. ಆತ ತಾನು ಕ್ರೈಮ್ ಬ್ರಾಂಚ್ ಅಧಿಕಾರಿ ಎಂದು ಹೇಳಿಕೊಂಡು, ಮೋನಿಕಾ ಅವರೊಂದಿಗೆ ಮಾತನಾಡಬೇಕು ಎಂದಿದ್ದ. ಆಕೆ ಇಲ್ಲ ಎಂದು ಹೇಳಿದಾಗ ಬೆದರಿಕೆ ಹಾಕಿದ್ದ. ಮೋನಿಕಾ ಸಾವನ್ನಪ್ಪಿದ್ದಾಳೆ ಎಂದು ಆ ವ್ಯಕ್ತಿಗೆ ತಿಳಿಸಿದ ನಂತರ ನಂತರ, ಆ ವ್ಯಕ್ತಿ ಮೋನಿಕಾ ಅವರ ಪತಿಗೆ ಬೆದರಿಕೆ ಹಾಕಿದ್ದ. ಇದು ಅನುಮಾನ ಹುಟ್ಟುಹಾಕಿತ್ತು. ಬಳಿಕ ಪೊಲೀಸರು ತನಿಖೆ ನಡೆಸತೊಡಗಿದರು.

ಆಗ ಮೋನಿಕಾ ತಮ್ಮ ಡೈರಿಯಲ್ಲಿ ಬರೆದ ಸೂಸೈಡ್ ನೋಟ್​​​ನಲ್ಲಿ ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮತ್ತು ಬೆದರಿಕೆ ಹಾಕುತ್ತಿದ್ದ ಅಪರಿಚಿತರಿಂದ ಆಗುತ್ತಿದ್ದ ನಿರಂತರ ಕಿರುಕುಳದ ಬಗ್ಗೆ ಮೋನಿಕಾ ಬರೆದಿದ್ದರು. ಆ ಕುಟುಂಬವು ಮೋನಿಕಾಳ ಫೋನ್ ಅನ್ನು ಸ್ಕ್ಯಾನ್ ಮಾಡಿದಾಗ ಹಲವಾರು ವಾಟ್ಸಾಪ್ ಕರೆಗಳು, ಮೆಸೇಜ್​ಗಳು ಮತ್ತು ಆಡಿಯೊ ಕ್ಲಿಪ್‌ಗಳು ಹೊರಬಂದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಟಾರ್ ನಟಿಯರ ಜೊತೆ ‘ತುಂಬಾಡ್ 2’ ಚಿತ್ರತಂಡದ ಮಾತುಕಥೆ; ಹೆಚ್ಚಾಗಿದೆ ನಿರೀಕ್ಷೆ – Kannada News | Who is the lead actress in Tumbbad 2 Priyanka Chopra Katrina Kaif Alia Bhatt Nayanthara

2018ರಲ್ಲಿ ಬಿಡುಗಡೆಯಾದ ‘ತುಂಬಾಡ್’ (Tumbbad) ಸಿನಿಮಾ ಬಾಲಿವುಡ್ ಚಿತ್ರರಂಗದಲ್ಲೇ ಒಂದು ವಿಶಿಷ್ಟ ಪ್ರಯೋಗವಾಗಿತ್ತು. ರಾಹಿ ಅನಿಲ್ ಬಾರ್ವೆ ಮತ್ತು ಆನಂದ್ ಗಾಂಧಿ ನಿರ್ದೇಶನದ ಈ ಜಾನಪದ ಹಿನ್ನೆಲೆಯ ಹಾರರ್ ಥ್ರಿಲ್ಲರ್ ಸಿನಿಮಾ ಮೊದಲು ಬಿಡುಗಡೆಯಾದಾಗ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ, 2024ರಲ್ಲಿ ಮರು ಬಿಡುಗಡೆ ಆದಾಗ ಈ ಸಿನಿಮಾ ದಾಖಲೆ ಮಟ್ಟದ ಕಲೆಕ್ಷನ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿತು. ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಈಗ ಚಿತ್ರತಂಡ ಸೀಕ್ವೆಲ್ (Tumbbad 2) ತಯಾರಿಗೆ ಸಜ್ಜಾಗಿದೆ.

‘ತುಂಬಾಡ್’ ಮೊದಲ ಭಾಗದಲ್ಲಿ ಬಹುತೇಕ ಹೊಸ ಮುಖಗಳೇ ಕಾಣಿಸಿಕೊಂಡಿದ್ದವು. ಆದರೆ ಎರಡನೇ ಭಾಗದ ಮೇಲೆ ನಿರೀಕ್ಷೆಗಳು ಹೆಚ್ಚಿರುವುದರಿಂದ, ಈ ಬಾರಿ ದೊಡ್ಡ ತಾರಾಗಣವನ್ನು ಕರೆತರಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಚಿತ್ರದ ಪ್ರಮುಖ ಪಾತ್ರಕ್ಕಾಗಿ ಬಾಲಿವುಡ್‌ನ ಟಾಪ್ ನಟಿಯರಾದ ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಆಲಿಯಾ ಭಟ್ ಅಥವಾ ದಕ್ಷಿಣದ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರ ಹೆಸರುಗಳನ್ನು ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ.

ಈ ಸ್ಟಾರ್ ನಟಿಯರಲ್ಲಿ ಯಾರಾದರೂ ಒಬ್ಬರು ಚಿತ್ರತಂಡಕ್ಕೆ ಸೇರಿದರೆ, ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಕ್ರೇಜ್ ಸೃಷ್ಟಿಸುವುದರಲ್ಲಿ ಸಂಶಯವಿಲ್ಲ. ಆದರೆ ಈ ನಾಲ್ವರಲ್ಲಿ ಯಾರು ಈ ಚಾನ್ಸ್ ಗಿಟ್ಟಿಸಿಕೊಳ್ಳಲಿದ್ದಾರೆ ಎಂಬುದು ಇನ್ನು ಕುತೂಹಲವಾಗಿಯೇ ಉಳಿದಿದೆ. ಈಗಾಗಲೇ ಸೀಕ್ವೆಲ್‌ನಲ್ಲಿ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ದಿಕಿ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿರುವುದು ಖಚಿತವಾಗಿದೆ.

ಮೊದಲ ಭಾಗದ ಚಿತ್ರಕಥೆಯಲ್ಲಿ ಕೆಲಸ ಮಾಡಿದ್ದ ಆದೇಶ್ ಪ್ರಸಾದ್ ಈ ಬಾರಿ ಸೀಕ್ವೆಲ್ ಅನ್ನು ನಿರ್ದೇಶಿಸಲಿದ್ದಾರೆ. ‘ಮೊದಲ ಭಾಗದ ಆತ್ಮ ಮತ್ತು ಕಥೆಯ ಮೂಲವನ್ನು ಹಾಗೆಯೇ ಉಳಿಸಿಕೊಂಡು, ಸೀಕ್ವೆಲ್ ಅನ್ನು ಮತ್ತಷ್ಟು ರೋಚಕವಾಗಿ ಮತ್ತು ಭಯಾನಕವಾಗಿ ರೂಪಿಸಲಾಗುವುದು’ ಎಂದು ಅವರು ಭರವಸೆ ನೀಡಿದ್ದಾರೆ. ಆ ಕಾರಣದಿಂದಾಗಿ ‘ತುಂಬಾಡ್ 2’ ಮೇಲೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ಬರ್ತಿದೆ ‘ತುಂಬಾಡ್ 2’ ಸಿನಿಮಾ; ಖಳನಾಗಿ ಅಕ್ಷಯ್ ಖನ್ನಾ ಎಂಟ್ರಿ?

ಒಟ್ಟಿನಲ್ಲಿ, ‘ತುಂಬಾಡ್’ ಸೀಕ್ವೆಲ್ ದೊಡ್ಡ ಕ್ಯಾನ್ವಾಸ್‌ನಲ್ಲಿ ನಿರ್ಮಾಣವಾಗುತ್ತಿದ್ದು, ಯಾವ ನಟಿ ಈ ಹಾರರ್ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ ಈ ಸ್ಟಾರ್ ನಟಿಯರ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Career Horoscope: ನಿಮ್ಮ ರಾಶಿಗನುಗುಣವಾಗಿ ಮೇ 3ರಿಂದ 9ರ ವರೆಗಿನ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ – Kannada News | Weekly Career Horoscope: May 3 9 Navigate Job Challenges and Opportunities

ಮೇ 03ರಿಂದ ಮೇ 09ರವರೆಗಿನ ಮೊದಲ ವಾರವಾಗಿದ್ದು ಉದ್ಯೋಗರಂಗದಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದ ಆತಂಕ ಸೃಷ್ಟಿ ಆಗಬಹುದು. ಹಲವು ಆದಾಯ ಮೂಲಕ್ಕೆ ಹಿನ್ನಡೆ ಸಾಧ್ಯತೆ. ಕೆಲವರಿಗೆ ನಿರ್ವಹಣೆ ಕಷ್ಟ ಎನಿಸಬಹುದು.

​ಮೇಷ:

ಮೊದಲನೇ ವಾರದಲ್ಲಿ ನಿಮ್ಮ ರಾಶ್ಯಾಧಿಪತಿ ಕುಜನು ಸ್ವಕ್ಷೇತ್ರದಲ್ಲಿ ಬಲವಾಗಿದ್ದಾನೆ. ಉದ್ಯೋಗದಲ್ಲಿ ನಿಮ್ಮ ಶೌರ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಲಿದೆ. ಕಠಿಣ ಸವಾಲುಗಳನ್ನು ಸುಲಭವಾಗಿ ಗೆಲ್ಲುವಿರಿ.

​ವೃಷಭ:

ಈ ವಾರ ಕೆಲಸದ ಸ್ಥಳದಲ್ಲಿ ತಾಳ್ಮೆ ಅಗತ್ಯ. ಗ್ರಹಗಳು ಶನಿಯ ಪ್ರಭಾವದಲ್ಲಿರುವುದರಿಂದ ಕೆಲಸ ವಿಳಂಬವಾಗಬಹುದು. ಮೇಲಾಧಿಕಾರಿಗಳ ಜೊತೆ ವಾಗ್ವಾದ ಬೇಡ, ಸಮಾಧಾನದಿಂದ ಕೆಲಸ ಮುಗಿಸುವುದು ಉತ್ತಮ.

ಮಿಥುನ:

ಬುಧ ಮತ್ತು ಗುರುವಿನ ಶುಭ ದೃಷ್ಟಿಯಿಂದ ವ್ಯಾಪಾರದಲ್ಲಿ ಲಾಭದಾಯಕ ಬದಲಾವಣೆ ಕಂಡುಬರಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಉತ್ತಮ ಅವಕಾಶಗಳು ಕೈಸೇರಲಿವೆ. ಚತುರತೆಯಿಂದ ಕಾರ್ಯಸಿದ್ಧಿ ಮಾಡಿಕೊಳ್ಳುವಿರಿ

​ಕರ್ಕಾಟಕ :

ಚಂದ್ರನು ನವಾಂಶದಲ್ಲಿ ಶುಕ್ರನ ಮನೆಯಲ್ಲಿರುವುದರಿಂದ ಕಲಾತ್ಮಕ ವೃತ್ತಿಯವರಿಗೆ ಸುಸಮಯ. ಕಚೇರಿಯಲ್ಲಿ ಸ್ತ್ರೀ ಸಹೋದ್ಯೋಗಿಗಳಿಂದ ಸಹಾಯ ದೊರೆಯಲಿದೆ. ಮಾನಸಿಕ ನೆಮ್ಮದಿಯೊಂದಿಗೆ ಕೆಲಸ ನಿರ್ವಹಿಸುವಿರಿ.

ಸಿಂಹ:

ರವಿಯು ಗುರುವಿನ ದ್ರೇಕ್ಕಾಣದಲ್ಲಿ ಇದ್ದುದರಿಂದ ವೃತ್ತಿಯಲ್ಲಿ ಅತ್ಯಂತ ಪ್ರಭಾವಶಾಲಿ ಸ್ಥಾನ ದೊರೆಯಲಿದೆ. ನಿಮ್ಮ ಮಾತಿಗೆ ಬೆಲೆ ಸಿಗಲಿದ್ದು, ಆಡಳಿತಾತ್ಮಕ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಗೌರವ ವೃದ್ಧಿಯಾಗಲಿದೆ.

​ಕನ್ಯಾ:

ಉದ್ಯೋಗದಲ್ಲಿ ಸ್ವಲ್ಪ ಗೊಂದಲಗಳು ಉಂಟಾಗಬಹುದು. ಶ್ರಮಕ್ಕೆ ತಕ್ಕ ಫಲ ತಕ್ಷಣ ಸಿಗದಿದ್ದರೂ ಧೃತಿಗೆಡಬೇಡಿ. ವ್ಯವಹಾರದಲ್ಲಿ ಲೆಕ್ಕಾಚಾರದ ಬಗ್ಗೆ ಹೆಚ್ಚಿನ ಗಮನವಿರಲಿ. ತಾಂತ್ರಿಕ ಕೆಲಸಗಾರರಿಗೆ ಶುಭಕರ.

ತುಲಾ:

ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಜನರೊಂದಿಗೆ ವ್ಯವಹರಿಸುವ ವೃತ್ತಿಯಲ್ಲಿದ್ದವರಿಗೆ ಈ ವಾರ ಅತ್ಯಂತ ಲಾಭದಾಯಕವಾಗಿರಲಿದೆ.

​ವೃಶ್ಚಿಕ:

ವೃತ್ತಿ ಜೀವನದಲ್ಲಿ ಎದುರಾಳಿಗಳ ಮೇಲೆ ಜಯ ಸಾಧಿಸುವಿರಿ. ಕುಜನ ಬಲದಿಂದ ಶಕ್ತಿಯುತವಾಗಿ ಕೆಲಸ ಮಾಡುವಿರಿ. ರಿಯಲ್ ಎಸ್ಟೇಟ್ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಆದಾಯ ಹೆಚ್ಚಾಗುವ ಸಂಭವವಿದೆ.

ಧನುಸ್ಸು:

ಗುರುವಿನ ಸ್ಥಾನವು ಉದ್ಯೋಗದಲ್ಲಿ ಸ್ಥಿರತೆಯನ್ನು ನೀಡಲಿದೆ. ಬೋಧನೆ ಅಥವಾ ಸಲಹಾ ಕೇಂದ್ರಗಳಲ್ಲಿ ಕೆಲಸ ಮಾಡುವವರಿಗೆ ಮನ್ನಣೆ ಸಿಗಲಿದೆ. ದೂರದ ಪ್ರಯಾಣದಿಂದ ವೃತ್ತಿಯಲ್ಲಿ ಅನುಕೂಲವಾಗಲಿದೆ.

​ಮಕರ:

ಶನಿಯ ಪ್ರಭಾವದಿಂದ ಕೆಲಸದ ಒತ್ತಡ ಹೆಚ್ಚಿರಲಿದೆ. ಹಿರಿಯ ಅಧಿಕಾರಿಗಳಿಂದ ಟೀಕೆಗಳು ಬರಬಹುದು, ಆದರೆ ನಿಮ್ಮ ಶ್ರಮಕ್ಕೆ ಕೊನೆಯಲ್ಲಿ ಜಯ ಸಿಗಲಿದೆ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

​ಕುಂಭ:

ಹೊಸ ಯೋಜನೆಗಳಿಗೆ ಚಾಲನೆ ನೀಡಲು ಈ ವಾರ ಪೂರಕವಾಗಿದೆ. ಸಮಾಜ ಸೇವೆಯಲ್ಲಿರುವವರಿಗೆ ಅಥವಾ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಸಾರ್ವಜನಿಕವಾಗಿ ಹೆಸರು ಮಾಡುವ ಅವಕಾಶ ದೊರೆಯಲಿದೆ.

​ಮೀನ:

ಹಣಕಾಸಿನ ವೃತ್ತಿಯಲ್ಲಿರುವವರಿಗೆ ಅಭಿವೃದ್ಧಿ ಕಂಡುಬರಲಿದೆ. ನಿಮ್ಮ ಕ್ರಿಯಾಶೀಲತೆಗೆ ತಕ್ಕ ಪುರಸ್ಕಾರ ಸಿಗಲಿದೆ. ಮನೆಯಿಂದಲೇ ಕೆಲಸ ಮಾಡುವವರಿಗೆ ಅಥವಾ ಫ್ರೀಲಾನ್ಸಿಂಗ್ ಮಾಡುವವರಿಗೆ ಹೆಚ್ಚಿನ ಆದಾಯ ಸಿಗಲಿದೆ.

– ಲೋಹಿತ ಹೆಬ್ಬಾರ್ – 8762924271

Source link

Personality Test: ‘S’ ಅಕ್ಷರದಿಂದ ಹೆಸರು ಪ್ರಾರಂಭವಾಗುವವರ ಸ್ವಭಾವ ಹೇಗಿರುತ್ತೆ? ಇವರ ಯಶಸ್ಸಿನ ರಹಸ್ಯವೇನು? – Kannada News | S Letter Personality: Astrology’s Secrets and Traits Explained

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೆಸರಿನ ಮೊದಲ ಅಕ್ಷರವು ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯದ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಅದರಲ್ಲೂ ‘S’ ಅಕ್ಷರದಿಂದ ಹೆಸರು ಪ್ರಾರಂಭವಾಗುವವರು ಬಹಳ ವಿಶೇಷವಾದ ಸ್ವಭಾವವನ್ನು ಹೊಂದಿರುತ್ತಾರೆ ಮತ್ತು ಇತರರಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ.

ರಹಸ್ಯ ಕಾಪಾಡುವುದರಲ್ಲಿ ಇವರು ಎತ್ತಿದ ಕೈ:

‘S’ ಅಕ್ಷರದ ವ್ಯಕ್ತಿಗಳು ತಮ್ಮ ಜೀವನದ ಅನೇಕ ವಿಷಯಗಳನ್ನು ಗೌಪ್ಯವಾಗಿಡಲು ಇಷ್ಟಪಡುತ್ತಾರೆ. ವಿಶೇಷವಾಗಿ ಕುಟುಂಬದ ವಿಷಯಗಳು ಮತ್ತು ತಮ್ಮ ಯಶಸ್ಸಿನ ಹಿಂದಿನ ಗುಟ್ಟುಗಳನ್ನು ಅವರು ಯಾರೊಂದಿಗೂ ಅಷ್ಟು ಸುಲಭವಾಗಿ ಹಂಚಿಕೊಳ್ಳುವುದಿಲ್ಲ. ಈ ರಹಸ್ಯ ಪ್ರವೃತ್ತಿಯೇ ಅವರಿಗೆ ಒಂದು ರೀತಿಯ ವಿಶೇಷ ವ್ಯಕ್ತಿತ್ವವನ್ನು ನೀಡುತ್ತದೆ.

ಪರಿಶ್ರಮ ಮತ್ತು ಸ್ಪಷ್ಟತೆ:

ಇವರಲ್ಲಿ ಕೆಲಸದ ಬಗ್ಗೆ ಅಪಾರವಾದ ನಿಷ್ಠೆ ಇರುತ್ತದೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ಅತ್ಯಂತ ಪರಿಶ್ರಮದಿಂದ ಮಾಡುತ್ತಾರೆ. ಜೀವನದ ಬಗ್ಗೆ ಇವರಿಗೆ ಸ್ಪಷ್ಟವಾದ ಗುರಿ ಮತ್ತು ಜ್ಞಾನವಿರುತ್ತದೆ. ಎಂತಹ ಏರಿಳಿತಗಳು ಎದುರಾದರೂ ಎದೆಗುಂದದೆ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಇವರು ಮುನ್ನುಗ್ಗುತ್ತಾರೆ. ಒಮ್ಮೆ ಪ್ರಾರಂಭಿಸಿದ ಕೆಲಸವನ್ನು ಅರ್ಧಕ್ಕೆ ಬಿಡುವುದು ಇವರ ಸ್ವಭಾವವಲ್ಲ.

ಬಹುಮುಖ ಪ್ರತಿಭೆ ಮತ್ತು ಬುದ್ಧಿವಂತಿಕೆ:

  • ಮಲ್ಟಿ-ಟಾಸ್ಕಿಂಗ್: ಇವರು ಕೇವಲ ಒಂದು ಕೆಲಸಕ್ಕೆ ಸೀಮಿತವಾಗದೆ, ಏಕಕಾಲದಲ್ಲಿ ನಾಲ್ಕೈದು ಕೆಲಸಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತಾರೆ.
  • ವ್ಯಕ್ತಿತ್ವ: ಇತರರನ್ನು ಸುಲಭವಾಗಿ ಮೆಚ್ಚಿಸುವ ಮತ್ತು ಪ್ರಭಾವಿಸುವ ಕಲೆ ಇವರಿಗೆ ಸಿದ್ಧಿಸಿರುತ್ತದೆ.
  • ವೃತ್ತಿಜೀವನ: ತಮ್ಮ ಬುದ್ಧಿವಂತಿಕೆಯಿಂದಾಗಿ ಇವರು ರಾಜಕೀಯ ಮತ್ತು ವ್ಯವಹಾರ ರಂಗದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಪರೋಪಕಾರಿ ಗುಣ:

‘S’ ಅಕ್ಷರದವರು ಸಹಾಯ ಹಸ್ತ ಚಾಚುವುದರಲ್ಲಿ ಯಾವಾಗಲೂ ಮೊದಲಿಗರು. ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಇತರರಿಗೆ ಸಹಾಯ ಮಾಡಲು ಇವರು ಹಿಂದೆಮುಂದೆ ನೋಡುವುದಿಲ್ಲ. ಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆ ಮಾಡುವ ಛಲ ಇವರಲ್ಲಿ ಮನೆಮಾಡಿರುತ್ತದೆ.

ಎಚ್ಚರಿಕೆ ವಹಿಸಬೇಕಾದ ಅಂಶ:

ಇವರು ಎಲ್ಲಾ ಪರಿಸ್ಥಿತಿಗಳಿಗೂ ಚೆನ್ನಾಗಿ ಹೊಂದಿಕೊಂಡರೂ, ಇವರಲ್ಲಿ ಒಂದು ಸಣ್ಣ ಮೈನಸ್ ಪಾಯಿಂಟ್ ಎಂದರೆ ಹಠಮಾರಿತನ. ಕೆಲವೊಮ್ಮೆ ಈ ಹಠವೇ ಇವರನ್ನು ಸಂಕಷ್ಟಕ್ಕೆ ಸಿಲುಕಿಸಬಹುದು. ಆದ್ದರಿಂದ, ಅತಿಯಾದ ಹಠದ ವಿಷಯದಲ್ಲಿ ಇವರು ಸ್ವಲ್ಪ ಜಾಗರೂಕರಾಗಿರುವುದು ತಮ್ಮ ಏಳಿಗೆಗೆ ಒಳ್ಳೆಯದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಾತ್ರೆಗೆ ಹಣ ಕೊಡದಿದ್ದಕ್ಕೆ 7 ಕುಟುಂಬಗಳಿಗೆ ಊರಿನಿಂದಲೇ ಬಹಿಷ್ಕಾರ: ಬಾಗಲಕೋಟೆಯಲ್ಲೊಂದು ಅಮಾನವೀಯ ಘಟನೆ – Kannada News | Bagalkote Social Boycott: 7 Families Ostracized Over Festival Fund Dispute

7 ಕುಟುಂಬಗಳಿಗೆ ಊರಿಂದ ಬಹಿಷ್ಕಾರImage Credit source: Tv9 Kannada

ಬಾಗಲಕೋಟೆ, ಮೇ 01: ರಾಜ್ಯ ಸರ್ಕಾರ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಕೆಲ ಅನಿಷ್ಟ ಪದ್ಧತಿಗಳಿಗೆ ಮಾತ್ರ ಬ್ರೇಕ್​​ ಬೀಳುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆಯೆಂದರೆ ಬಾಗಲಕೋಟೆ ಜಿಲ್ಲೆಯಲ್ಲಿ 7 ಕುಟುಂಬಗಳಿಗೆ ಊರಿನಿಂದಲೇ ಬಹಿಷ್ಕಾರ ಹಾಕಿರೋದು. ಹೌದು, ಹನುಮಂತ ದೇವರ ಓಕುಳಿ ಜಾತ್ರೆಗೆ 600 ರೂಪಾಯಿ ಹಣ ನೀಡಿಲ್ಲ ಎಂಬ ಕಾರಣಕ್ಕೆ ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಜಮಖಂಡಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಯಲಪ್ಪ ಛಗಣ್ಣವರ, ಅಣ್ಣಪ್ಪ ಕಡಪಟ್ಟಿ, ಸಿದ್ದಪ್ಪ ಎಣ್ಣಿ, ಕರೆಪ್ಪ ಎಣ್ಣಿ, ಯಲ್ಲಪ್ಪ, ಮಲ್ಲಪ್ಪ ಬಟಕುರ್ಕಿ, ರಾಮಪ್ಪ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ಸಾಲದ್ದಕ್ಕೆ ಈ 7 ಕುಟುಂಬ ಹೊರಗೆ ಇಟ್ಟಿದ್ದೇವೆ ಎಂದು ಡಂಗುರ ಕೂಡ ಸಾರಲಾಗಿದೆ.

ಏಪ್ರಿಲ್​​ 2ರಂದು ಹನುಮನ ಓಕುಳಿ ಜಾತ್ರೆ ಹಿನ್ನೆಲೆ ಹಣ ಸಂಗ್ರಹಕಾರ್ಯ ನಡೆದಿತ್ತು. ಆದರೆ ಈ 7 ಕುಟುಂಬಗಳು ದುಡ್ಡನ್ನು ನೀಡದ ಕಾರಣಕ್ಕೆ ಏಪ್ರಿಲ್​​ 5ರಂದು ಬಹಿಷ್ಕಾರದ ಬಗ್ಗೆ ಡಂಗುರ ಸಾರಲಾಗಿದೆ. ಇವರ ಮನೆಗೆ ಸ್ವಾಮಿಗಳು, ಪೂಜಾರಿಗಳು ಹೋಗುವ ಹಾಗಿಲ್ಲ. ಇವರ ಮನೆ ಕಾರ್ಯಗಳಿಗೆ ಯಾರೂ ಹೋಗಬಾರದು. ಕಿರಾಣಿ ಅಂಗಡಿಯವರು ಈ ಕುಟುಂಬಗಳಿಗೆ ಏನು ಕೊಡುವ ಹಾಗಿಲ್ಲ ಎಂದು ಡಂಗುರ ಸಾರಲಾಗಿದೆ.

ಇದನ್ನೂ ಓದಿ: ಬಾಗಲಕೋಟೆ ಕಾರ್ಮಿಕರ ಖಾತೆಗೆ ಕೋಟಿ ಕೋಟಿ ಹಣ; ಮುಂದಾಗಿದ್ದೇನು ಗೊತ್ತಾ?

ಬಹಿಷ್ಕಾರ ಹಾಕಿರೋದನ್ನು ಪ್ರಶ್ನಿಸಿದ ವ್ಯಕ್ತಿ

ಇನ್ನು ಬಹಿಷ್ಕಾರಕ್ಕೆ ಒಳಗಾಗಿರುವ 7 ಕುಟುಂಬಗಳ ಸದಸ್ಯರ ಪೈಕಿ ರೇಲ್ವೆ ಇಲಾಖೆಯ ನೌಕರರಾಗಿರುವ ಯಲ್ಲಪ್ಪ ಛಗಣ್ಣವರ ಈ ನಿರ್ಧಾರವನ್ನು ಪ್ರಶ್ನೆ ಮಾಡಿದ್ದಾರೆ. ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವವರ ಮೇಲೆ ಕ್ರಮಕ್ಕೆ ಆಗ್ರಹಿಸಿರುವ ಅವರು, ಜಮಖಂಡಿ ತಹಶೀಲ್ದಾರ್​​, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ನಮಗೆ ಊರಲ್ಲಿ ಬಹಿಷ್ಕಾರ ಹಾಕಿದ ಹಿನ್ನೆಲೆ ಅಪಮಾನವಾಗಿದೆ, ಗೌರವಕ್ಕೆ ಧಕ್ಕೆಯಾಗಿದೆ. ಹೀಗಾಗಿ ಡಂಗುರ ಸಾರಿದವರು ಮತ್ತು ಸಾರಿಸಿದವರ ಮೇಲೆ‌ ಕಾನೂನು ಕ್ರಮ ಆಗಬೇಕು. ಅವರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ಊರಿಗೆ ಬಂದ ಅಧಿಕಾರಿಗಳು ಸಭೆ ನಡೆಸಿ ಎಲ್ಲರನ್ನೂ ಸಮಾಧಾನ ಮಾಡಿ ಹೋಗಿದ್ದಾರೆ. ಆದರೆ ನಮಗಾದ ಅಪಮಾನಕ್ಕೆ ಹೊಣೆ ಯಾರು ಎಂದು ಅವರು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜಬಲ್ಪುರ ದೋಣಿ ದುರಂತ, ಸಾವು ಬಂದ್ರೂ, ತಬ್ಬಿಕೊಂಡ ಮಗನನ್ನು ಬಿಡದ ತಾಯಿ – Kannada News | Jabalpur Boat Tragedy: Mother and Child Found Embraced After Bargi Dam Capsize

ಜಬಲ್ಪುರ, ಮೇ 1: ಮಧ್ಯಪ್ರದೇಶದ ಬಾರ್ಗಿ ಅಣೆಕಟ್ಟಿನಲ್ಲಿ ಕ್ರೂಸ್‌‍ ದೋಣಿ ಮುಳುಗಿ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನರ್ಮದಾ ನದಿಯ ಶಾಂತ ಅಲೆಗಳ ಮೇಲೆ ಸಾಗುತ್ತಿದ್ದ ಆ ಕ್ರೂಸ್ ದೋಣಿಯೇ ಅಲ್ಲಿದ್ದವರ ಪಾಲಿಗೆ ಯಮನಾಗಬಹುದು ಎನ್ನುವ ಕಲ್ಪನೆಯೂ ಇರಲಿಲ್ಲ. 30 ಜನರನ್ನು ಹೊತ್ತು ಹೊರಟಿದ್ದ ದೋಣಿ ಬಲವಾದ ಗಾಳಿ, ಅಲೆಯಿಂದಾಗಿ ಮಗುಚಿತ್ತು. ರಕ್ಷಣಾ ಸಿಬ್ಬಂದಿ ಶುಕ್ರವಾರ ಬೆಳಗ್ಗೆ ನೀರಿನ ಆಳದಲ್ಲಿ ಮೃತದೇಹಗಳನ್ನು ಹುಡುಕುತ್ತಿದ್ದಾಗ ಕಂಡ ದೃಶ್ಯ ಅವರ ಕಣ್ಣಾಲಿಗಳನ್ನು ಒದ್ದೆ ಮಾಡಿತು.

ನಾಲ್ಕು ವರ್ಷದ ಪುಟ್ಟ ಮಗುವನ್ನು ಅವನ ತಾಯಿ ತನ್ನ ಎದೆಗೆ ಬಿಗಿಯಾಗಿ ಅಪ್ಪಿಕೊಂಡ ಸ್ಥಿತಿಯಲ್ಲೇ ಇಬ್ಬರೂ ಪ್ರಾಣಬಿಟ್ಟಿದ್ದರು. ಮಗುವನ್ನು ಸಾವಿನ ದವಡೆಯಿಂದ ಹೇಗಾದರೂ ಉಳಿಸಬೇಕೆಂಬ ಆ ತಾಯಿಯ ಹತಾಶ ಪ್ರಯತ್ನ ನೀರಿನ ಆಳದಲ್ಲೂ ಸ್ಥಿರವಾಗಿತ್ತು. ಇದೇ ಕುಟುಂಬದ ತಂದೆ ಮತ್ತು ಮಗಳು ಪಾರಾಗುವಲ್ಲಿ ಯಶಸ್ವಿಯಾಗಿದ್ದರೂ, ಪ್ರೀತಿಯ ತಾಯಿ ಮತ್ತು ಮಗನನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದ್ದಾರೆ.

ದೋಣಿ ಅಸಮತೋಲನಗೊಳ್ಳುತ್ತಿತ್ತು ಮತ್ತು ನೀರಿನಿಂದ ತುಂಬಲು ಪ್ರಾರಂಭಿಸಿತು, ಕಣ್ಣು ಮಿಟುಕಿಸುವಷ್ಟರಲ್ಲಿ ಎಲ್ಲರೂ ಕಣ್ಮರೆಯಾದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಅಂದಿನ ಭೀಕರತೆಯನ್ನು ನೆನೆದಿದ್ದಾರೆ. ಏಕಾಏಕಿ ಹವಾಮಾನ ವೈಪರೀತ್ಯದಿಂದ ಎದ್ದ ಬಿರುಗಾಳಿ ಆಡುತ್ತಾ ನಲಿಯುತ್ತಿದ್ದ ಪ್ರವಾಸಿಗರ ಚೀರಾಟಕ್ಕೆ ಕಾರಣವಾಯಿತು. ಯಾರಿಗೂ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ದೋಣಿ ಜಲಸಮಾಧಿಯಾಗಿತ್ತು.

ಮತ್ತಷ್ಟು ಓದಿ: Video: ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ದೋಣಿ ವಿಹಾರ ನಡೆಸಿದ ಪ್ರಧಾನಿ ಮೋದಿ

ಸೈಯದ್ ರಿಯಾಜ್ ಹುಸೇನ್ ಎಂಬುವವರು ಬದುಕುಳಿದ ರೀತಿ ಒಂದು ಪವಾಡವೇ ಸರಿ. ನನ್ನ ತಲೆ ಮಾತ್ರ ನೀರಿನ ಮೇಲಿರುವ ಸ್ಥಳದಲ್ಲಿ ನಾನು ಸಿಲುಕಿಕೊಂಡಿದ್ದೆ. ನನ್ನ ಹಿಂದೆ ದೇಹಗಳು ತೇಲುತ್ತಿರುವುದು ಕಾಣಿಸುತ್ತಿತ್ತು ಎಂದು ಅವರು ವಿವರಿಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಸಾವಿನ ನೆರಳಿನಲ್ಲಿ ಸಿಲುಕಿದ್ದ ಅವರನ್ನು ಅದೃಷ್ಟವಶಾತ್ ರಕ್ಷಣಾ ಪಡೆಗಳು ಗುರುತಿಸಿ ಬದುಕಿಸಿದವು. ಆದರೆ, ಅವರ ಕುಟುಂಬದವರು ಇನ್ನೂ ಕಾಣೆಯಾಗಿದ್ದು, ಅವರ ಹುಡುಕಾಟ ಮುಂದುವರಿದಿದೆ. ಮಗುವನ್ನು ಉಳಿಸಲು ಪ್ರಾಣವನ್ನೇ ಪಣಕ್ಕಿಟ್ಟ ಆ ತಾಯಿಯ ತ್ಯಾಗ ಶಾಶ್ವತವಾಗಿ ಜನರ ಮನದಲ್ಲಿ ಉಳಿಯಲಿದೆ.

ಕಾಣೆಯಾದ ಪ್ರಯಾಣಿಕರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ರಾತ್ರಿಯಿಡೀ ಮುಂದುವರೆದಿದ್ದು, ಸೇನೆ, ಎನ್‌ಡಿಆರ್‌ಎಫ್‌‍ ಮತ್ತು ಎಸ್‌‍ಡಿಆರ್‌ಎಫ್‌‍ ತಂಡಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ರಾಕೇಶ್‌ ಸಿಂಗ್‌ ತಿಳಿಸಿದ್ದಾರೆ. ಕ್ರೂಸ್‌‍ ದೋಣಿಯನ್ನು ನೀರಿನ ಮೂಲದಿಂದ ಹೊರತೆಗೆಯಲು ಹೈಡ್ರಾಲಿಕ್‌ ಕ್ರೇನ್‌ಗಳನ್ನು ಬಳಸಲಾಗುತ್ತಿದೆ ಎಂದು ಅವರು ಹೇಳಿದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಲವಾದ ಗಾಳಿಯಿಂದಾಗಿ ನೀರು ಒಡೆದು ಹೋಯಿತು, ಇದರಿಂದಾಗಿ ಹಡಗಿನಲ್ಲಿದ್ದ ಅನೇಕರು ಎಚ್ಚರಿಕೆ ನೀಡಿ ದೋಣಿಯನ್ನು ದಡಕ್ಕೆ ಹಿಂತಿರುಗಿಸುವಂತೆ ಸಿಬ್ಬಂದಿಯನ್ನು ಕೇಳಿದರು.

ಆದಾಗ್ಯೂ, ಸಿಬ್ಬಂದಿಗೆ ಈ ಕೂಗುಗಳು ಕೇಳಿಸಲಿಲ್ಲ, ಮತ್ತು ದೋಣಿ ಅಲೆಯಿತು ಮತ್ತು ನಂತರ ಪಲ್ಟಿಯಾಯಿತು ಎಂದು ಅವರು ಹೇಳಿದರು, ಕೆಲವು ಸ್ಥಳೀಯರು ಹಗ್ಗದ ಸಹಾಯದಿಂದ ಲೈಫ್‌ ಜಾಕೆಟ್‌ ಧರಿಸಿದ ಕೆಲವು ಪ್ರಯಾಣಿಕರನ್ನು ರಕ್ಷಿಸಿದರು. ಪಿಟಿಐ ವೀಡಿಯೊಗಳೊಂದಿಗೆ ಮಾತನಾಡಿದ ಮಧ್ಯಪ್ರದೇಶ ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಭಾವ್‌ ಸಿಂಗ್‌ ಲೋಧಿ, ಕೆಲವು ಪ್ರವಾಸಿಗರು ಇನ್ನೂ ಕಾಣೆಯಾಗಿದ್ದಾರೆ ಮತ್ತು ಅವರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಹೇಳಿದರು.

ಜಬಲ್ಪುರದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ನರ್ಮದಾ ನದಿಯ ದಂಡೆಯಲ್ಲಿರುವ ಬರಗಿ ಅಣೆಕಟ್ಟೆಯಲ್ಲಿ ಮಧ್ಯಪ್ರದೇಶ ಪ್ರವಾಸೋದ್ಯಮ ನಿರ್ವಹಿಸುವ ರೆಸಾರ್ಟ್ ಹಲವಾರು ಜಲ ಕ್ರೀಡಾ ಚಟುವಟಿಕೆಗಳನ್ನು ನಿರ್ವಹಿಸುತ್ತದೆ.

ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಯಾದವ್ ಅವರು ಆರ್ಥಿಕ ನೆರವು ಘೋಷಿಸಿದ್ದಾರೆ. ರಾಜ್ಯ ಸರ್ಕಾರದಿಂದ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲು ಆದೇಶ ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಾಸ್ಟೆಲ್​ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ: ಮಾದಕವಸ್ತು ಸೇವನೆ ಕೇಸ್​​​ನಲ್ಲಿ ಫಿಟ್ ಮಾಡಿಸಿದ ಆರೋಪ – Kannada News | BSC Nursing Student Commits Suicide In BTL College Hostel at Bengaluru

ಬೆಂಗಳೂರು, (ಮೇ 01): ಹಾಸ್ಟೆಲ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ (Student) ಶವ ಪತ್ತೆಯಾಗಿದೆ. ಬೆಂಗಳೂರು (Bengaluru) ಹೊರವಲಯದ ಬೊಮ್ಮಸಂದ್ರದ ಬಿಟಿಎಲ್ ಕಾಲೇಜಿನ ಹಾಸ್ಟೆಲ್​ನಲ್ಲಿ ಎ.ಪಿ‌.ಆದಿತ್ಯ(19) ಶವ ಪತ್ತೆಯಾಗಿದ್ದು, ಈ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ. 2ನೇ ವರ್ಷದ ಬಿಎಸ್​ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಆದಿತ್ಯ, ಏಪ್ರಿಲ್ 29ರಂದೇ ಹಾಸ್ಟೆಲ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಹಪಾಠಿಗಳು ಕೊಠಡಿಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. ಇನ್ನು  ಕಾಲೇಜು ಆಡಳಿತ ಮಂಡಳಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಮೃತ ಆದಿತ್ಯ ತಂದೆ ಪ್ರದೀಪ್ ಆರೋಪಿಸಿದ್ದಾರೆ.

ಮಾದಕವಸ್ತು ಸೇವನೆ ಕೇಸ್​​​ನಲ್ಲಿ ಮಗನನ್ನು ಸಿಲುಕಿಸಿ ವಿದ್ಯಾರ್ಥಿಗಳ ಮುಂದೆ ಅವಮಾನಿಸಿ ಮಾನಸಿಕ ಹಿಂಸೆ ನೀಡಲಾಗಿದೆ. ಇದರಿಂದ ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆದಿತ್ಯ ತಂದೆ ಪ್ರದೀಪ್ ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಧಾರವಾಡ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಮೂವರು ಪೇದೆ ಬೆನ್ನಲ್ಲೇ ಇನ್ಸ್​​ಪೆಕ್ಟರ್​​ ತಲೆದಂಡ

ಖಾಸಗಿ ಬಸ್ ಡಿಕ್ಕಿಯಾಗಿ ಬಾಲಕ ಸಾವು

ಇನ್ನೊಂದೆಡೆ ಖಾಸಗಿ ಬಸ್ ಡಿಕ್ಕಿಯಾಗಿ ಬಾಲಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯಲ್ಲಿ ನಡೆದಿದೆ. 9ನೇ ತರಗತಿ ಪಾಸ್ ಆಗಿದ್ದ ವರುಣ್(15) ಮೃತ ಬಾಲಕ.ಮನೆಯಿಂದ ಅಂಗಡಿಗೆ ವಾಪಸ್ ಬರುಗುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಹೆಣ್ಣೂರು ಸಂಚಾರಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Source link

ಎಲ್ಲ ಶಾಸಕರಿಗೂ ಆಲ್ಕೋಹಾಲ್ ಪರೀಕ್ಷೆಯಾಗಲಿ; ಪಂಜಾಬ್ ಸಿಎಂ ಕುಡಿದಿದ್ದಾರೆ ಎಂದು ಆರೋಪಿಸಿ ಸದನದಿಂದ ಹೊರನಡೆದ ಕಾಂಗ್ರೆಸ್ – Kannada News | Get alcohol test done High drama in Punjab assembly Congress alleges CM Bhagwant Mann was drunk

ಪಂಜಾಬ್, ಮೇ 1: ಪಂಜಾಬ್ ವಿಧಾನಸಭೆಯಲ್ಲಿ ಇಂದು ಹೈಡ್ರಾಮಾ ನಡೆದಿದೆ. ಕಾಂಗ್ರೆಸ್ ಮತ್ತು ಅಕಾಲಿ ದಳ ಪಂಜಾಬ್​ನ ಸಿಎಂ ಭಗವಂತ್ ಮಾನ್ ಸದನದ ಕಲಾಪಗಳ ಸಮಯದಲ್ಲಿ ಕುಡಿದಿದ್ದರು ಎಂದು ಆರೋಪಿಸಿದೆ. ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಇಂದು ಪಂಜಾಬ್​​ನಲ್ಲಿ ವಿಶೇಷ ಅಧಿವೇಶನ ಕರೆಯಲಾಗಿತ್ತು. ಪಂಜಾಬ್ (Punjab) ಮುಖ್ಯಮಂತ್ರಿ ಭಗವಂತ್ ಮಾನ್ ಕುಡಿದ ಸ್ಥಿತಿಯಲ್ಲಿ ಸದನಕ್ಕೆ ಬಂದಿದ್ದಾರೆ. ಹೀಗಾಗಿ ಸದನದಲ್ಲಿರುವ ಎಲ್ಲಾ ಶಾಸಕರಿಗೆ ಮದ್ಯ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿತು.

ಕಾರ್ಮಿಕ ದಿನದ ಸಂದರ್ಭದಲ್ಲಿ ನಿರ್ಣಯವನ್ನು ಅಂಗೀಕರಿಸಲು ಕರೆಯಲಾದ ದಿನವಿಡೀ ವಿಶೇಷ ಅಧಿವೇಶನವು ಸೌಹಾರ್ದಯುತ ರೀತಿಯಲ್ಲೇ ಪ್ರಾರಂಭವಾಯಿತು. ಆದರೆ ಸದನ ನಡೆಯುತ್ತಿರುವಾಗ ಕಾಂಗ್ರೆಸ್ ಶಾಸಕ ಸುಖ್‌ಪಾಲ್ ಸಿಂಗ್ ಖೈರಾ ಮೊಬೈಲ್ ಫೋನ್ ಬಳಸುವುದಕ್ಕೆ ಸಿಎಂ ಭಗವಂತ್ ಮಾನ್ ಆಕ್ಷೇಪಿಸಿದಾಗ ಚರ್ಚೆಗಳು ಬೇರೆ ದಿಕ್ಕಿನೆಡೆ ಸಾಗಿದವು.

ಇದನ್ನೂ ಓದಿ: Video:ಪಂಜಾಬ್​ನಲ್ಲಿ ಬಸ್ ಪಲ್ಟಿ, ಐವರು ಸಾವು, 15 ಮಂದಿಗೆ ಗಾಯ

ಸದನದಲ್ಲಿ ಅನುಸರಿಸಬೇಕಾದ ಒಂದು ಶಿಷ್ಟಾಚಾರವಿದೆ. ಅಲ್ಲಿ ಯಾರೂ ಕಾಲುಗಳನ್ನು ಚಾಚಿ ಕುಳಿತುಕೊಳ್ಳಬಾರದು ಎಂದು ಸಿಎಂ ಭಗವಂತ್ ಮಾನ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಖೈರಾ, ಹಿಂದಿನ ಅಧಿವೇಶನದಲ್ಲಿ ಸಂದರ್ಶಕರ ಗ್ಯಾಲರಿಯಲ್ಲಿ ಭಗವಂತ್ ಮಾನ್ ಅವರ ಪತ್ನಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದರು ಎಂದು ಹೇಳಿದರು.

ಅದಕ್ಕೆ ಉತ್ತರಿಸಿದ ಸಿಎಂ, “ಅವರು ಕೂಡಲೆ ತಮ್ಮನ್ನು ತಾವು ಸರಿಪಡಿಸಿಕೊಂಡರು. ಅವರು ಸದನದ ಸದಸ್ಯರಲ್ಲ. ನೀವು ನನ್ನ ಮಗಳನ್ನು ಸಹ ಟಾರ್ಗೆಟ್ ಮಾಡಿದ್ದೀರಿ. ಇವರೆಲ್ಲ ಮನಸಿಗೆ ಬಂದಂತೆ ಮಾತಾಡುತ್ತಿದ್ದಾರೆ ಸ್ಪೀಕರ್ ಸಆಹೇಬ್. ವಿಧಾನಸಭೆಯ ಖರ್ಚಿನಲ್ಲಿ ಇವರಿಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕು” ಎಂದು ಟೀಕಿಸಿದರು.

ಇದಾದ ಸ್ವಲ್ಪ ಸಮಯದ ನಂತರ, ಅಧಿಕೃತ ನಿರ್ಣಯದ ಮೇಲಿನ ಚರ್ಚೆ ಇನ್ನೂ ನಡೆಯುತ್ತಿರುವಾಗ, ಸಿಎಂ ಭಗವಂತ್ ಮಾನ್ ಸದನದಕ್ಕೆ ಕುಡಿದು ಬಂದಿದ್ದಾರೆ ಎಂದು ಖೈರಾ ಆರೋಪಿಸಿದರು. ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ ಅವರು ಈ ಆರೋಪವನ್ನು ಬೆಂಬಲಿಸಿದರು. ಅಲ್ಲದೆ ಸದನದಲ್ಲಿ ಹಾಜರಿದ್ದ ಎಲ್ಲಾ ಸದಸ್ಯರ ಮೇಲೆ ಮದ್ಯ ಪರೀಕ್ಷೆಯನ್ನು ನಡೆಸಬೇಕೆಂದು ಒತ್ತಾಯಿಸಿದರು, ಇದು ಭಾರೀ ವಾದ-ವಿವಾದಕ್ಕೆ ಕಾರಣವಾಯಿತು.

ಇದನ್ನೂ ಓದಿ: ನಾಚಿಕೆಗೇಡಿನ ಸಂಗತಿ; ಆಪರೇಷನ್ ಸಿಂಧೂರ್ ಕುರಿತ ಹೇಳಿಕೆಗೆ ಭಗವಂತ್ ಮಾನ್​ ವಿರುದ್ಧ ಬಿಜೆಪಿ ಟೀಕೆ

ಕಾಂಗ್ರೆಸ್ ಶಾಸಕರು ಸಭಾತ್ಯಾಗ ಮಾಡಿ ಸ್ಪೀಕರ್ ಅವರಲ್ಲಿ ಈ ಭಗವಂತ್ ಮಾನ್ ವಿರುದ್ದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕಾಂಗ್ರೆಸ್ ನಾಯಕ ಸುಖ್‌ಪಾಲ್ ಸಿಂಗ್ ಖೈರಾ ಮದ್ಯ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಪ್ರತಾಪ್ ಸಿಂಗ್ ಬಜ್ವಾ, “ಮುಖ್ಯಮಂತ್ರಿಗಳೇ ಕುಡಿದ ಮತ್ತಿನಲ್ಲಿ ಇರುವ ವಿಧಾನಸಭೆಗೆ ಬಂದು ನಾವು ಏನು ಮಾಡಬೇಕು? ರಾಜ್ಯದ ಮುಖ್ಯಸ್ಥರೇ ಸಂಪೂರ್ಣವಾಗಿ ನಿದ್ದೆಗೆಟ್ಟಿರುವಾಗ ಅಧಿವೇಶನ ನಡೆಸುವ ಉದ್ದೇಶವೇನು? ಎಲ್ಲರ ಆಲ್ಕೋಹಾಲ್ ಪರೀಕ್ಷೆ ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

IPL 2026: 30 ಅಥವಾ 40.. ಕೊಹ್ಲಿ ಪ್ರದರ್ಶನದ ಮೇಲೆ ನಿಂತಿದೆ ಆರ್​ಸಿಬಿ ಸೋಲು, ಗೆಲುವು – Kannada News | RCB’s Kohli Dependence: Stats Reveal Why rcb Loses When Virat Falls Early

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026) ರ 42 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ (RCB vs GT) ವಿರುದ್ಧ 4 ವಿಕೆಟ್‌ಗಳ ಹೀನಾಯ ಸೋಲು ಕಂಡಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಕ್ಕಿತು. ಆದರೆ ಅನುಭವಿ ವಿರಾಟ್ ಕೊಹ್ಲಿ (Virat Kohli) 13 ಎಸೆತಗಳಲ್ಲಿ 28 ರನ್‌ಗಳಿಸಿ ಔಟಾದ ಬಳಿಕ ತಂಡದ ಬ್ಯಾಟಿಂಗ್ ಸಂಪೂರ್ಣವಾಗಿ ಕುಸಿಯಿತು. ಇದರ ಪರಿಣಾಮವಾಗಿ ತಂಡವು 19.2 ಓವರ್‌ಗಳಲ್ಲಿ 155 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಸುಲಭವಾಗಿ ಜಯ ಸಾಧಿಸಿತು. ವಿರಾಟ್ ಕೊಹ್ಲಿ ಬೇಗನೇ ಔಟಾದಗಲೇ ಆರ್​ಸಿಬಿ ಸೋಲು ಖಚಿತವಾಗಿತ್ತು. ಏಕೆಂದರೆ ಅಂಕಿ ಅಂಶಗಳು ಕೂಡ ಇದನ್ನೇ ಹೇಳಿದ್ದವು.

ಕೊಹ್ಲಿ ಪ್ರದರ್ಶನವೇ ಮುಖ್ಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರಂಭದಿಂದಲೂ ವಿರಾಟ್ ಕೊಹ್ಲಿಯ ಮೇಲೆ ಅವಲಂಬಿತವಾಗಿದೆ. ಆದರೆ ಕಳೆದ ಎರಡು ಆವೃತ್ತಿಗಳಿಂದ ತಂಡದ ಸೋಲು, ಗೆಲುವು ನಿಶ್ಚಯವಾಗುವುದು ಕೊಹ್ಲಿಯ ಪ್ರದರ್ಶನದ ಮೇಲೆ ಎಂಬಂತ್ತಾಗಿದೆ. ಅಂಕಿ ಅಂಶಗಳು ಕೂಡ ಇದನ್ನೇ ಹೇಳುತ್ತಿದ್ದು, ಕೊಹ್ಲಿ ಕ್ರೀಸ್‌ನಲ್ಲಿ ಉಳಿದು ದೀರ್ಘ ಇನ್ನಿಂಗ್ಸ್ ಆಡಿದಾಗ, ತಂಡವು ಹೆಚ್ಚಿನ ಪಂದ್ಯಗಳನ್ನು ಗೆದ್ದಿದೆ. ಆದರೆ ಕೊಹ್ಲಿ ಬೇಗನೆ ಔಟಾದಾಗ, ಆರ್‌ಸಿಬಿ ಹೆಚ್ಚು ಪಂದ್ಯಗಳನ್ನು ಸೋತಿದೆ.

30 ಎಸೆತ ಅಥವಾ 40 ಕ್ಕೂ ಹೆಚ್ಚು ರನ್

ಕಳೆದ ಆವೃತ್ತಿಯಿಂದ ವಿರಾಟ್ ಕೊಹ್ಲಿ 40 ರನ್‌ಗಳಿಗಿಂತ ಕಡಿಮೆ ರನ್‌ಗಳಿಗೆ ಔಟಾದಾಗಲೆಲ್ಲಾ, ಆರ್‌ಸಿಬಿಯ ಗೆಲುವಿನ ಶೇಕಡಾವಾರು ಕೇವಲ 33.33% ರಷ್ಟಿದೆ. ಆದಾಗ್ಯೂ, ಕೊಹ್ಲಿ 40 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಿದಾಗ, ತಂಡದ ಗೆಲುವಿನ ಶೇಕಡಾವಾರು 92.85% ಕ್ಕೆ ಏರುತ್ತದೆ. ಅದೇ ರೀತಿ, ಕೊಹ್ಲಿ 30 ಅಥವಾ ಅದಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸಿದಾಗ, ಆರ್‌ಸಿಬಿಯ ಗೆಲುವಿನ ಶೇಕಡಾವಾರು 100% ರಷ್ಟಿದೆ. ಆದಾಗ್ಯೂ, ಕೊಹ್ಲಿ 30 ಕ್ಕಿಂತ ಕಡಿಮೆ ಎಸೆತಗಳಿಗೆ ಔಟಾದಾಗ, ತಂಡದ ಗೆಲುವಿನ ಶೇಕಡಾವಾರು ಕೇವಲ 30% ಕ್ಕೆ ಇಳಿಯುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 30 ಎಸೆತಗಳನ್ನು ಅಥವಾ 40 ಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ, ಇದರ ಪರಿಣಾಮವಾಗಿ ಆರ್‌ಸಿಬಿ ಹೀನಾಯ ಸೋಲಿಗೆ ಕೊರಳೊಡ್ಡಬೇಕಾಯಿತು.

ಆರ್‌ಸಿಬಿಗೆ ಈಗ ಆತಂಕಕಾರಿ ಅಂಶವೆಂದರೆ ತಂಡದ ಯಶಸ್ಸು ವಿರಾಟ್ ಕೊಹ್ಲಿಯ ಮೇಲೆ ಹೆಚ್ಚು ಅವಲಂಬಿತವಾಗಿರುವುದು. ಕೊಹ್ಲಿ ದೊಡ್ಡ ಇನ್ನಿಂಗ್ಸ್ ಆಡಿದಾಗ ಅಥವಾ ದೀರ್ಘಕಾಲದವರೆಗೆ ಕ್ರೀಸ್‌ನಲ್ಲಿದ್ದಾಗ, ಇತರ ಬ್ಯಾಟ್ಸ್‌ಮನ್‌ಗಳು ಆತ್ಮವಿಶ್ವಾಸವನ್ನು ಗಳಿಸುತ್ತಾರೆ, ಇದು ಸ್ಕೋರಿಂಗ್ ಸುಲಭಗೊಳಿಸುತ್ತದೆ. ಆದರೆ ಅವರು ಬೇಗನೆ ಔಟಾದರೆ, ಇಡೀ ಬ್ಯಾಟಿಂಗ್ ಘಟಕವು ಒತ್ತಡಕ್ಕೆ ಒಳಗಾಗುತ್ತದೆ. ಹೀಗಾಗಿ ತಂಡವು ಶೀಘ್ರದಲ್ಲೇ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ, ಮತ್ತು ಇತರ ಆಟಗಾರರು ಜವಾಬ್ದಾರಿಯನ್ನು ಹೊರಬೇಕಾಗುತ್ತದೆ, ಇಲ್ಲದಿದ್ದರೆ ಮುಂಬರುವ ಪಂದ್ಯಗಳಲ್ಲಿ ತಂಡವು ಮತ್ತಷ್ಟು ನಷ್ಟಗಳನ್ನು ಎದುರಿಸಬೇಕಾಗುತ್ತದೆ.

GT vs RCB: ಏಷ್ಯಾದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ವಿರಾಟ್ ಕೊಹ್ಲಿ

9 ಪಂದ್ಯಗಳಲ್ಲಿ 379 ರನ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸ್ತುತ ಒಂಬತ್ತು ಪಂದ್ಯಗಳಲ್ಲಿ ಆರರಲ್ಲಿ ಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ವಿರಾಟ್ ಕೊಹ್ಲಿ ಅವರ ಫಾರ್ಮ್ ಪ್ರಮುಖ ಕಾರಣ. ಅವರು ಒಂಬತ್ತು ಪಂದ್ಯಗಳಲ್ಲಿ 54.14 ರ ಸರಾಸರಿಯಲ್ಲಿ 379 ರನ್ ಗಳಿಸಿದ್ದಾರೆ, ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ. ಈ ಆವೃತ್ತಿಯಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್. ಕೊಹ್ಲಿ ಹೊರತುಪಡಿಸಿ ಆರ್‌ಸಿಬಿಯ ಬೇರೆ ಯಾವುದೇ ಆಟಗಾರ 300 ರನ್‌ಗಳ ಗಡಿಯನ್ನು ತಲುಪಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:30 pm, Fri, 1 May 26

Source link

Exit mobile version