ಸೆನ್ಸಾರ್ ಮಂಡಳಿ ವಿರುದ್ಧದ ಅರ್ಜಿ ಹಿಂಪಡೆದ ‘ಜನ ನಾಯಗನ್’; ಮುಂದಿನ ನಡೆ ಏನು? – Kannada News | Jana Nayagan Release Delay: Vijay Film’s Censor and Court Battle Updates

‘ಜನ ನಾಯಗನ್’ ಸಿನಿಮಾ (Jana Nayagan Movie) ರಿಲೀಸ್ ಆಗಲು ಸಾಕಷ್ಟು ಅಡಚಣೆ ಉಂಟಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್​​​ನಲ್ಲಿ ಕೆವಿಎನ್ ಸಂಸ್ಥೆ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ, ಈಗ ಅರ್ಜಿಯನ್ನು ಕೆವಿಎನ್ ಸಂಸ್ಥೆ ಹಿಂದಕ್ಕೆ ಪಡೆದಿದೆ. ಈ ಮೂಲಕ ತಂಡದ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿದೆ. ಸಿನಿಮಾ ಶೀಘ್ರವೇ ತೆರೆಗೆ ಬರುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

ಜನವರಿ 9ರಂದು ವಿಜಯ್ ನಟನೆಯ ‘ಜನ ನಾಯಗನ್’ ರಿಲೀಸ್ ಆಗಬೇಕಿತ್ತು. ಹೀಗಾಗಿ ಸೆನ್ಸಾರ್ ಪ್ರಮಾಣ ಪತ್ರಕ್ಕಾಗಿ ಡಿಸೆಂಬರ್​​ನಲ್ಲೇ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ, ತಂಡಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿರಲಿಲ್ಲ. ಸಿನಿಮಾ ರಿಲೀಸ್​​ಗೆ ಕೆಲವೇ ದಿನ ಬಾಕಿ ಇರುವಾಗ ನಿರ್ಮಾಣ ಸಂಸ್ಥೆ ಕೆವಿಎನ್ ಮದ್ರಾಸ್ ಹೈಕೋರ್ಟ್​​ನಲ್ಲಿ ತುರ್ತು ಅರ್ಜಿ ಸಲ್ಲಿಕೆ ಮಾಡಿತ್ತು.

ಜನವರಿ 9ರಂದು ‘ಸೆನ್ಸಾರ್ ಪ್ರಮಾಣ ಪತ್ರ ನೀಡಿ’ ಎಂದು ಕೋರ್ಟ್​ ಸೆನ್ಸಾರ್ ಮಂಡಳಿಗೆ ಆದೇಶ ನೀಡಿತ್ತು. ಅದೇ ದಿನ ಸಂಜೆ ಮುಖ್ಯ ನ್ಯಾಯಮೂರ್ತಿ ಎಂಎಂ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಅರುಲ್ ಮುರುಗನ್ ಅವರು ಈ ಆದೇಶಕ್ಕೆ ತಡೆ ನೀಡಿದರು.

ಈಗ ಪ್ರಕರಣ ಕೋರ್ಟ್​​ನಲ್ಲೇ ಇದ್ದು ತಿಂಗಳಾಗಿದೆ. ಆದರೆ, ಈವರೆಗೆ ಆದೇಶ ಹೊರ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಕೆವಿಎನ್ ಹಿಂಪಡೆದಿದೆ. ಅಲ್ಲದೆ, ಈ ವಿಷಯವಾಗಿ ತಂಡ ಪರಿಷ್ಕರಣಾ ಸಮಿತಿ ಮೆಟ್ಟಿಲು ಹತ್ತಲಿದೆ. ಅಲ್ಲಿ ಸಿನಿಮಾ ವೀಕ್ಷಣೆ ಆದ ಬಳಿಕ ಸಿನಿಮಾ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ.

ಇದನ್ನೂ ಓದಿ: ಕೊನೆಗೂ ಮಂಡಿಯೂರಿದ ‘ಜನ ನಾಯಗನ್’; ರಿಲೀಸ್ ಮತ್ತಷ್ಟು ವಿಳಂಬ?

ವಿಮರ್ಷೆ ಸಮಿತಿಗೆ ಸಿನಿಮಾ ಸಲ್ಲಿಕೆ ಆದ ಬಳಿಕ 15 ದಿನಗಳಲ್ಲಿ ಸಿನಿಮಾ ರಿವ್ಯೂ ಆಗಿ ಸೆನ್ಸಾರ್ ಪ್ರಮಾಣಪತ್ರ ನೀಡಬೇಕು. ಹೀಗಾಗಿ, ಫೆಬ್ರವರಿ 25ರವೇಳೆಗೆ ಸಿನಿಮಾ ಪ್ರಮಾಣ ಪತ್ರ ಕೈ ಸೇರಿದರೆ ಆ ಬಳಿಕ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಈ ಮಧ್ಯೆ ತಂಡಕ್ಕೆ ಮತ್ತೊಂದು ಭಯ ಕೂಡ ಇದೆ. ತಮಿಳುನಾಡಲ್ಲಿ ಶೀಘ್ರವೇ ವಿಧಾನಸಭೆ ಚುನಾವಣೆ ನಡೆಯಲಿದೆ. ಅದರ ದಿನಾಂಕ ಘೋಷಣೆ ಆದರೆ, ‘ಜನ ನಾಯಗನ್’ ರಿಲೀಸ್ ಮತ್ತಷ್ಟು ವಿಳಂಬ ಆಗಲಿದೆ. ವಿಜಯ್ ಅವರು ರಾಜಕೀಯಕ್ಕೆ ಕಾಲಿಟ್ಟಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಕ್ಲು ಶಿವ ಕೊಲೆ ಪ್ರಕರಣ: ಜಾಮೀನು ಅರ್ಜಿ ವಜಾ, ಬಿಜೆಪಿ ಶಾಸಕನಿಗೆ ಬಂಧನದ ಭೀತಿ – Kannada News | Biklu Shiva Murder Case: BJP MLA Byrathi Basavaraj Bail Plea Rejected By Karnataka High Court

ಬೆಂಗಳೂರು (ಫೆಬ್ರವರಿ.10): ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ (Biklu Shiva Murder Case) ಸಂಬಂಧಿಸಿದಂತೆ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ( BJP MLA Byrathi Basavaraj) ಜಾಮೀನು ಅರ್ಜಿ ವಜಾಗೊಂಡಿದೆ. ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯಾಗಿರುವ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು‌ ಅರ್ಜಿಯನ್ನ ಇಂದು (ಫೆಬ್ರವರಿ 10) ಹೈಕೋರ್ಟ್​​ ವಜಾ‌ಗೊಳಿಸಿ ಆದೇಶ ಹೊರಡಿಸಿದ್ದು, ಹಲವು ದಿನಗಳಿಂದ ತಲೆಮರೆಸಿಕೊಂಡಿರುವ ಬೈರತಿ ಬಸವರಾಜ್​​ಗೆ ಬಂಧನದ ಭೀತಿ ಎದುರಾಗಿದೆ. ಇದೀಗ ಜಾಮೀನು ಅರ್ಜಿ ವಜಾಗೊಂಡಿರುವುದರಿಂದ ಯಾವುದೇ ಸಂದರ್ಭದಲ್ಲೂ ಬಂಧನವಾಗಬಹುದು.

Source link

ಚಿಕ್ಕಬಳ್ಳಾಪುರ: ಚಿಂತಾಮಣಿಯಲ್ಲಿ ಚಿನ್ನದ ಅಂಗಡಿ ಬೀಗ ಒಡೆದು ಕಳ್ಳತನ – Kannada News | Gold Jewellery Shop Burglary in Chintamani: Thieves Break Lock, Steal Gold and Silver Ornaments in Chikkaballapur

ಚಿಕ್ಕಬಳ್ಳಾಪುರ, ಫೆಬ್ರವರಿ 10: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿರುವ ಶಿವ ಜ್ಯುವೆಲರ್ಸ್ ಚಿನ್ನದ ಅಂಗಡಿಯಲ್ಲಿ ದೊಡ್ಡ ಪ್ರಮಾಣದ ಕಳ್ಳತನ ನಡೆದಿದೆ. ಕಳ್ಳರು ಅಂಗಡಿಯ ಶಟರ್ಸ್ ಬೀಗ ಒಡೆದು ಒಳನುಗ್ಗಿದ್ದು, ಅಲ್ಲಿ ಸಂಗ್ರಹಿಸಿದ್ದ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಚಿಂತಾಮಣಿ ನಗರ ಠಾಣೆಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಕಳ್ಳತನದ ಪ್ರಮಾಣ ಮತ್ತು ದರೋಡೆಯಾದ ಆಭರಣಗಳ ನಿಖರ ಮೌಲ್ಯ ಇನ್ನಷ್ಟೇ ತಿಳಿದುಬರಬೇಕಿದೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಹಾಗೂ ಸಾಕ್ಷ್ಯಾಧಾರಗಳ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BESCOM Power Cut: ಫೆಬ್ರವರಿ 11, 12ರಂದು ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ಪವರ್ ಕಟ್ – Kannada News | BESCOM Power Cut on Feb 11 and 12: Electricity Outage in Several Areas for Maintenance Works

ಬೆಂಗಳೂರು, ಫೆಬ್ರವರಿ 10: ಕೆಪಿಟಿಸಿಲ್ ತುರ್ತು ನಿರ್ವಹಣೆ ಮತ್ತು ಇತರ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಫೆಬ್ರವರಿ 11 ಹಾಗೂ 12 ರಂದು ಪವರ್ ಕಟ್ (Power Cut) ಇರಲಿದೆ. ಈ ಬಗ್ಗೆ ಪ್ರಕಟಣೆ ಮೂಲಕ ಬೆಸ್ಕಾಂ ಮಾಹಿತಿ ನೀಡಿದೆ.

ಚಿತ್ರದುರ್ಗ ಜಿಲ್ಲೆಯ ತಳಕು ಬೆಸ್ಕಾಂ ಉಪ ವಿಭಾಗದ ‘ತಳಕು 66/11’ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆಬ್ರವರಿ 11ರ ಬುಧವಾರ ಕೆಪಿಟಿಸಿಎಲ್ ವತಿಯಿಂದ 4ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ. ಹೀಗಾಗಿ, ಬೇಡರಡ್ಡಿ-ಹಳ್ಳಿ, ತಿಮ್ಮಪ್ಪಯನಹಳ್ಳಿ, ಎನ್.ದೇವರಹಳ್ಳಿ, ತಳಕು, ಮೊನ್ನೆಕೋಟೆ, ದೇವರೆಡ್ಡಿಹಳ್ಳಿ, ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೂ ನಿರಂತರ ಜ್ಯೋತಿ, ಕೃಷಿ ಬಳಕೆಯ ವಿದ್ಯುತ್‌ ಪೂರೈಕೆ ಸ್ಥಗಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ರೈತರು, ಸಾರ್ವಜನಿಕರು ಸಹಕರಿಸಬೇಕೆಂದು ಎಇಇ ಎನ್​​ಜಿ ಮಮತಾ ಹಾಗೂ ಎಂಜಿನಿಯರ್ ವೆಂಕಟೇಶ್ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ಫೆಬ್ರವರಿ 12ಕ್ಕೆ ತುಮಕೂರಿನ ಈ ಪ್ರದೇಶಗಳಲ್ಲಿ ಪವರ್ ಕಟ್

ತುಮಕೂರಿನಲ್ಲಿ ಬೆಸ್ಕಾಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ಕಾಮಗಾರಿ ಕೈಗೊಂಡಿರುವುದರಿಂದ ಫೆ.12ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ 66/11 ಕೆವಿ ಅಂಕಸಂದ್ರ ಉಪಸ್ಥಾವರದಿಂದ ವಿದ್ಯುತ್‌ ಸರಬರಾಜಾಗುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್

ಕೆಪಿಟಿಸಿಎಲ್ ವತಿಯಿಂದ ಜಾಲಹಳ್ಳಿ ವಿಭಾಗದ 66/11 ಕೆವಿ ಎಂಇಐ ಉಪಕೇಂದ್ರದಲ್ಲಿ ತುರ್ತು ನಿರ್ವ ಹಣಾ ಕಾರ್ಯ ಹಮ್ಮಿಕೊಂಡಿರುವ ಕಾರಣ ಈ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಯ್ತು ಟ್ರೇಡಿಂಗ್ ಅಡಿಕ್ಷನ್: ಡ್ರಗ್ಸ್ ಅಡಿಕ್ಷನ್​ನಂತೆಯೇ ಸಿಟಿ ಜನರಿಗೆ ಈಗ ಟ್ರೇಡಿಂಗ್ ಖಯಾಲಿ

ಎಜಿಬಿಜಿ-ಲೇಔಟ್, ಭೈರವೇಶ್ವರ ಹೋಟೆಲ್, ಕಾವೇರಿ ಲೇಔಟ್, ಬೋನ್‌ವಿಲ್ ಏರಿಯಾ ಚಿಕ್ಕಸಂದ್ರ ಐರ್ ಲೇಔಟ್, ಗಣೇಶ ಸಾ ಮಿಲ್, ಕೆಂಪೇಗೌಡ ನಗರ, ಬೃಂದಾವನ ಲೇಔಟ್, ಕಲ್ಯಾಣನಗರ ಬಾಗಲಗುಂಟೆ, ಸೌರ ಲೇಔಟ್, ಮೀನಾಕ್ಷಿ ಲೇಔಟ್ ಸೇರಿದಂತೆ ಹಲವು ಕಡೆಗಳಲ್ಲಿ ಪವರ್ ಕಟ್ ಆಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಧಾನಸೌಧ ಪಡಸಾಲೆಯಲ್ಲಿ ನಗದು, ಚಿನ್ನ ಇದ್ದ ಬ್ಯಾಗ್ ಬಿಟ್ಟುಹೋದ ವ್ಯಕ್ತಿ! – Kannada News | Man leaves bag containing cash and gold in Vidhana Soudha lobby

ಬೆಂಗಳೂರು, ಫೆಬ್ರವರಿ 10: ವಿಧಾನಸೌಧದ ಸಚಿವರ ಕಚೇರಿಯೊಂದರ ಬಳಿ ವ್ಯಕ್ತಿಯೊಬ್ಬರು 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂಪಾಯಿ ನಗದು ಇದ್ದ ಕೈಚೀಲ ಬಿಟ್ಟುಹೋದ ಘಟನೆ ನಡೆದಿದೆ. ನವೀನ್ ಎಂಬವರು ಸಚಿವರೊಬ್ಬರನ್ನು ಭೇಟಿಯಾಗಲು ಬಂದಾಗ ಕೈಚೀಲವನ್ನು ಮರೆತುಹೋಗಿದ್ದರು. ಮರುದಿನ ಬಂದಾಗ ಚೀಲ ಅಲ್ಲಿ ಇಲ್ಲದೇ ಇದ್ದುದು ಕಂಡು ಗಾಬರಿಯಾಗಿದ್ದಾರೆ. ನಂತರ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಕಚೇರಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಡಿ ಗ್ರೂಪ್ ನೌಕರನೊಬ್ಬ ಕೈಚೀಲವನ್ನು ಹೊತ್ತುಕೊಂಡು ಹೋಗಿರುವುದು ಪತ್ತೆಯಾಗಿದೆ. ನಂತರ ಆತನನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಏತನ್ಮಧ್ಯೆ, ಸಚಿವರ ಕಚೇರಿಯಿಂದಲೇ ಚಿನ್ನ, ನಗದು ಇದ್ದ ಬ್ಯಾಗ್ ಕಳವಾಗಿದೆ ಎಂಬ ವದಂತಿ ಹರಡಿದೆ. ಈ ವಿಚಾರವಾಗಿ ಸಚಿವರ ಕಚೇರಿ ಸ್ಪಷ್ಟನೆ ನೀಡಿದ್ದು, ಕಚೇರಿಯಲ್ಲಿ ಎಲ್ಲೂ ಕಳ್ಳತನವಾಗಿಲ್ಲ ಎಂದು ದೃಢಪಡಿಸಿದೆ. ವ್ಯಕ್ತಿಯೊಬ್ಬರು ವಿಧಾನಸೌಧದ ಪಡಸಾಲೆಯಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರು. ಭದ್ರತಾ ಸಿಬ್ಬಂದಿ ಸಿಸಿಟಿವಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕಚೇರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:09 am, Tue, 10 February 26

Source link

ಜೀ ಕನ್ನಡದ ಹೊಸ ಧಾರಾವಾಹಿಗೆ ನಾಯಕಿಯಾದ ಮೋಕ್ಷಿತಾ ಪೈ – Kannada News | Mokshita Pai to Act In Zee Kannada New Serial Jagaddhaatri

ಮೋಕ್ಷಿತಾ ಪೈ ಅವರು ಬಿಗ್ ಬಾಸ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ಈ ಬಾರಿ ಅವರು ಬಿಗ್ ಬಾಸ್ ಮನೆಗೆ ಅತಿಥಿಯಾಗಿ ತೆರಳಿದ್ದರು. ಈಗ ಅವರಿಗೆ ಜೀ ಕನ್ನಡ ವಾಹಿನಿಯಿಂದ ಆಫರ್ ಸಿಕ್ಕಿದೆ. ‘ಜಗದ್ಧಾತ್ರಿ’ ಹೆಸರಿನ ಹೊಸ ಧಾರಾವಾಹಿ ಶೀಘ್ರವೇ ಪ್ರಸಾರ ಕಾಣಲಿದೆ. ಈ ಧಾರಾವಾಹಿಗೆ ಮೋಕ್ಷಿತಾ ಪೈ ನಾಯಕಿ ಎಂದು ವರದಿ ಆಗಿದೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

 

Source link

ಒಂದೆರಡಲ್ಲ ಸುಚಿತ್ರಾ ರಂಗಿನಾಟ: ಜ್ಯೋತಿಷಿ, ಜಮೀನ್ದಾರ್​ ಮಾತ್ರವಲ್ಲದೆ ಮತ್ತೊಬ್ಬನ ಜೊತೆಗೂ ಇತ್ತು ದೋಸ್ತಿ!

ಶಿವಮೊಗ್ಗ, ಫೆಬ್ರವರಿ 10: ಸಿದ್ದಾಪುರದ ವಸಂತ್ ನಾಯಕ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಸುಚಿತ್ರಾ ಅಲಿಯಾಸ್ ಸುರೇಖಾಳ ಹಲವು ರಂಗಿನಾಟಗಳು ಇದೀಗ ಬಯಲಾಗುತ್ತಿವೆ. ಜ್ಯೋತಿಷಿ ಕಮಲಾಕರ ಭಟ್ ಹಾಗೂ ಜಮೀನ್ದಾರ್ ಶರಣಬಸಪ್ಪ ಜೊತೆಗಿನ ಈಕೆಯ ಸಂಬಂಧಗಳ ಬಗ್ಗೆ ಈಗಾಗಲೇ ಮಾಹಿತಿ ಹೊರಬಿದ್ದಿತ್ತು. ಇದೀಗ ಜೆಸಿಬಿ ಪ್ರಕಾಶ್ ಎಂದು ಗುರುತಿಸಲ್ಪಟ್ಟ ಸಿದ್ದಾಪುರದ ಯುವಕನೊಂದಿಗೆ ಆಕೆ ರೀಲ್ಸ್ ಮತ್ತು ಫೋಟೋಶೂಟ್ ಮಾಡಿಸಿಕೊಂಡಿರೋದು ಬಹಿರಂಗವಾಗಿದೆ. ಮಹೇಶ್ ನಾಯಕ್ ಅವರೊಂದಿಗೆ ವಿವಾಹವಾದ ನಂತರವೂ ಸುಚಿತ್ರಾ ಪ್ರಕಾಶ್ ಜೊತೆ ಸ್ನೇಹ ಮುಂದುವರಿಸಿದ್ದಳು. ಪ್ರಕಾಶ್‌ಗೆ ಜೆಸಿಬಿ ಖರೀದಿಸಲು ಆರ್ಥಿಕವಾಗಿ ಸಹಾಯ ಕೂಡ ಮಾಡಿದ್ದಳು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು ಮೂಲದ ಸರ್ವಮ್​ನಿಂದ ಎಐ ಸಂಚಲನ; ಈ ಕಂಪನಿ ಹಿಂದಿನ ಇಬ್ಬರು ವ್ಯಕ್ತಿಗಳು ಯಾರು? – Kannada News | Sarvam AI, the Bengaluru based startup and its new products and co founders

ಬೆಂಗಳೂರು, ಫೆಬ್ರುವರಿ 10: ಭಾರತೀಯ ಭಾಷೆಗಳಲ್ಲಿ ಎಐ ಸೇವೆ ಒದಗಿಸಬೇಕು ಮತ್ತು ಜಾಗತಿಕ ಎಐ ಮಾಡಲ್​ಗಳಿಗೆ ಯಾವುದರಲ್ಲೂ ಕಡಿಮೆ ಇರಬಾರದು, ಎನ್ನುವ ಸರ್ಕಾರದ ಆಶಯದಂತೆ ಸರ್ವಮ್ ಎಐ (Sarvam AI) ರೂಪುಗೊಳ್ಳುತ್ತಿದೆ. 2023ರಲ್ಲಿ ಶುರುವಾದ ಸರ್ವಮ್ ಎಐ ತನ್ನ ವಿವಿಧ ಲ್ಯಾಂಗ್ವೇಜ್ ಸೇವೆಗಳಿಂದ ಗಮನ ಸೆಳೆಯತೊಡಗಿದೆ. ವರ್ಷದ ಹಿಂದೆ ಎಐ ಮಾಡಲ್​ಗಳನ್ನು ಬಿಡುಗಡೆ ಮಾಡಿದ್ದ ಸರ್ವಮ್ ಇದೀಗ ಎರಡು ಹೊಸ ಪ್ರಾಡಕ್ಟ್ಸ್ ಲಾಂಚ್ ಮಾಡಿದೆ. ಸರ್ವಮ್ ವಿಷನ್ ಮತ್ತು ಬುಲ್​ಬುಲ್ ವಿ3 ಮಾಡಲ್​ಗಳು ಬಿಡುಗಡೆ ಆಗಿವೆ.

ಈ ಎರಡೂ ಮಾಡಲ್​ಗಳು ಚ್ಯಾಟ್​ಜಿಪಿಟಿ ಮತ್ತು ಜೆಮಿನಿಯ ಅಡ್ವಾನ್ಸ್ಡ್ ವರ್ಷನ್​ಗಳಿಗೆ ಪೈಪೋಟಿ ನೀಡುವಷ್ಟು ಉತ್ತಮ ಪ್ರದರ್ಶನ ತೋರುತ್ತಿವೆ. ಸರ್ವಮ್ ವಿಷನ್ ಮಾಡಲ್ ಭಾರತೀಯ ಭಾಷೆಗಳ ಡಾಕ್ಯುಮೆಂಟ್​ಗಳನ್ನು ಸಂಸ್ಕರಿಸಬಲ್ಲುದು. ಬುಲ್​ಬುಲ್ ವಿ3 ಮಾಡಲ್ ಪಠ್ಯವನ್ನು ಮಾತಿಗೆ ಪರಿವರ್ತಿಸಬಲ್ಲುದು. ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಇದರ ಸೇವೆ ಇದೆ. ಇದರ ಕನ್ನಡ ಸೇವೆ ಪರಿಶೀಲಿಸಿದಾಗ, ಅಪ್ಪಟ ಕನ್ನಡಿಗರ ಶೈಲಿಯಲ್ಲಿ ಓದಿದ ರೀತಿ ಭಾಸವಾಗಿದ್ದು ಹೌದು. ಈ ವಿಚಾರದಲ್ಲಿ ಚ್ಯಾಟ್​ಜಿಟಿಪಿ, ಗೂಗಲ್ ಜೆಮಿನಿ, ಡೀಪ್​ಸೀಕ್ ಇತ್ಯಾದಿ ಯಾವ ಮಾಡಲ್​ಗಳು ಸಾಟಿ ಇಲ್ಲ ಎನ್ನಲಾಗತ್ತಿದೆ.

ಇದನ್ನೂ ಓದಿ: ಸರ್ವಮ್ ಎಐನಿಂದ ಹೊಸ ಮಾಡಲ್; ಡಾಕ್ಯುಮೆಂಟ್ ಇಂಟೆಲಿಜೆನ್ಸ್​ನಲ್ಲಿ ವಿಶ್ವಲ್ಲೇ ಬೆಸ್ಟ್; ಕಟು ಟೀಕಾಕಾರರಿಗೂ ಅಚ್ಚರಿ

ಸರ್ವಮ್ ಎಐ ಹಿಂದಿದ್ದಾರೆ ವಿವೇಕ್ ರಾಘವನ್ ಮತ್ತು ಪ್ರತ್ಯುಶ್ ಕುಮಾರ್

ಐಐಟಿ ಎಂಜಿನಿಯರುಗಳಾದ ವಿವೇಕ್ ರಾಘವನ್ ಮತ್ತು ಪ್ರತ್ಯುಶ್ ಕುಮಾರ್ ಅವರು 2023ರ ಆಗಸ್ಟ್ ತಿಂಗಳಲ್ಲಿ ಸರ್ವಮ್ ಎಐ ಅನ್ನು ಸ್ಥಾಪಿಸಿದ್ದಾರೆ. ಬೆಂಗಳೂರಿನಲ್ಲಿ ಇದರ ಕಚೇರಿ ಇರುವುದು. ಐಐಟಿ ಡೆಲ್ಲಿಯಲ್ಲಿ ಬಿಟೆಕ್, ಅಮೆರಿಕದ ಕಾರ್ನೇಜೀ ಮೆಲ್ಲೋನ್ ಯೂನಿವರ್ಸಿಟಿಯಲ್ಲಿ ಪಿಎಚ್​ಡಿ ಮಾಡಿದ್ದಾರೆ.

ವಿವೇಕ್ ರಾಘವನ್ ಅವರು ಆಧಾರ್ ಪ್ರಾಜೆಕ್ಟ್​ನಲ್ಲೂ ಭಾಗಿಯಾಗಿದ್ದಾರೆ. 2010ರಲ್ಲಿ ಆಧಾರ್ ಪ್ರೋಗ್ರಾಮ್​ನಲ್ಲಿ ಚೀಫ್ ಬಯೋಮೆಟ್ರಿಕ್ ಆರ್ಕಿಟೆಕ್ಟ್ ಆಗಿ ಕೆಲಸ ಮಾಡಿದ್ದಾರೆ. ಆಧಾರ್​ನ ಬಯೋಮೆಟ್ರಿಕ್ ಸಿಸ್ಟಂಗಳನ್ನು ಸಮರ್ಪಕವಾಗಿ ರೂಪಿಸುವುದರ ಹಿಂದೆ ಅವರ ಶ್ರಮ ಇದೆ.

ಇದನ್ನೂ ಓದಿ: ಹೊಸ ಇಪಿಎಫ್​ಒ ಆ್ಯಪ್​ನಲ್ಲಿ ಯುಪಿಐ ಮೂಲಕ ಹಣ ವಿತ್​ಡ್ರಾಗೆ ಅವಕಾಶ?

ಪ್ರತ್ಯುಶ್ ಕುಮಾರ್ ಬಗ್ಗೆ…

2014ರಲ್ಲಿ ಪಿಎಚ್​​ಡಿ ಮಾಡಿರುವ ಪ್ರತ್ಯುಶ್ ಕುಮಾರ್ ಅವರು ಐಬಿಎಂನಲ್ಲಿ ಕೆಲಸ ಮಾಡಿದ್ದಾರೆ. ಒನ್ ಫೋರ್ತ್ ಲ್ಯಾಬ್ಸ್, ಎಐ4ಭಾರತ್ ಕಂಪನಿಗಳ ಸಹ-ಸಂಸ್ಥಾಪಕರಾಗಿದ್ದಾರೆ. ಆನ್ಲೈನ್ ಶಿಕ್ಷಣ ಒದಗಿಸುವ ಪಧ್​ಎಐ ಅನ್ನೂ ಆರಂಭಿಸಿದ ಅನುಭವ ಅವರಿಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಿಂದೂ ಧರ್ಮದ ಬಗ್ಗೆ ನಿಕ್ ಜೋನಸ್ ಮಾತು – Kannada News | Nick Jonas talks about Hindi religion and praised it

ನಿಕ್ ಜೋನಸ್ (Nick Jonas), ಹಾಲಿವುಡ್​ನ (Hollywood) ಖ್ಯಾತ ಪಾಪ್ ಗಾಯಕ ಮತ್ತು ನಟ. ನಿಕ್ ಜೋನಸ್ ಭಾರತದ ಅಳಿಯ ಸಹ ಹೌದು, ಪ್ರಿಯಾಂಕಾ ಚೋಪ್ರಾ ಪತಿಯಾಗಿರುವ ನಿಕ್ ಜೋನಸ್, ಭಾರತದೊಂದಿಗೆ ಹತ್ತಿರದ ಬಂಧ ಹೊಮದಿದ್ದಾರೆ. ನಟಿ ಪ್ರಿಯಾಂಕಾ, ನಿಕ್ ಜೋನಸ್​​ಗೆ ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಬಗ್ಗೆ ಕಲಿಸಿಕೊಟ್ಟಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ಭಾರತ ಮತ್ತು ವಿಶೇಷವಾಗಿ ಹಿಂದೂ ಧರ್ಮದ ಬಗ್ಗೆ ನಿಕ್ ಜೋನಸ್ ಮಾತನಾಡಿದ್ದಾರೆ, ಹಿಂದೂ ಧರ್ಮದ ಬಗ್ಗೆ ಅಪಾರ ಗೌರವವನ್ನು ಅವರು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ‘ಸ್ಯಾಚ್ ಸಂಗ್ ಶೋ’ನಲ್ಲಿ (Zach Sang Show) ಮಾತನಾಡಿರುವ ನಿಕ್ ಜೋನಸ್, ‘ನಾನು ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಕಲಿಯುತ್ತಿದ್ದೇನೆ. ಹಿಂದೂ ಧರ್ಮ ನಿಜಕ್ಕೂ ಅದ್ಭುತವಾಗಿದೆ. ವಿಶೇಷವಾಗಿ ಹಿಂದೂ ಧರ್ಮದ ಕರ್ಮದ ಸಿದ್ಧಾಂತ ನನ್ನನ್ನು ಹೆಚ್ಚು ಪ್ರಭಾವಿಸಿದೆ. ನಾವು ಇತರರಿಗೆ ಒಳ್ಳೆಯದನ್ನು ಮಾಡಿದರೆ ಅದು ನಮಗೆ ಮರಳಿ ಬರುತ್ತದೆ, ಕೆಟ್ಟದು ಮಾಡಿದರೆ ನಮಗೆ ಕೆಟ್ಟದು ಆಗುತ್ತದೆ ಎಂಬ ತತ್ವವು ನನಗೆ ತುಂಬಾ ಇಷ್ಟ’ ಎಂದಿದ್ದಾರೆ. ಜೊತೆಗೆ ಅಲ್ಲದೆ ಭಾರತದ ಹಬ್ಬಗಳು ಮತ್ತು ಸಂಪ್ರದಾಯಗಳು ಈಗ ತಮ್ಮ ಮನೆಯ ಅವಿಭಾಜ್ಯ ಅಂಗವಾಗಿವೆ, ನಾನು ಭಾರತೀಯ ಹಬ್ಬಗಳನ್ನು ಬಹಳ ಇಷ್ಟಪಟ್ಟು ಆಚರಿಸುತ್ತೇನೆ’ ಎಂದಿದ್ದಾರೆ ನಿಕ್.

ತಮ್ಮ ಪುತ್ರಿ ಮಾಲತಿ ಮೇರಿ ಅವರನ್ನು ಹಿಂದೂ ಮತ್ತು ಕ್ರಿಶ್ಚಿಯನ್ ಎರಡು ಧರ್ಮಗಳ ಸಮನ್ವಯದೊಂದಿಗೆ ಬೆಳೆಸುತ್ತಿರುವುದಾಗಿ ನಿಕ್ ತಿಳಿಸಿದ್ದಾರೆ. ‘ನಮ್ಮ ಮಗಳು ಹಿಂದೂ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದರ ಅರ್ಥಪೂರ್ಣ ಜೀವನ ಕ್ರಮವನ್ನು ಅಳವಡಿಸಿಕೊಳ್ಳಬೇಕು ಎಂಬುದು ನಮ್ಮ ಆಶಯ. ಬಹುಸಂಸ್ಕೃತಿಯ ಕುಟುಂಬವನ್ನು ಹೊಂದಿರುವುದು ನನ್ನ ಸೌಭಾಗ್ಯ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಪ್ರಿಯಾಂಕಾ ಚೋಪ್ರಾ ಮನವಿಯನ್ನು ಪುರಸ್ಕರಿಸಿದ ರಾಜಮೌಳಿ, ಆದರೆ…

ನಿಕ್ ಜೋನಸ್ ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ನೆಟ್ಟಿಗರು ನಿಕ್ ಜೋನಸ್ ಅನ್ನು ‘ರಾಷ್ಟ್ರೀಯ ಅಳಿಯ’ ಎಂದು ಕರೆಯುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಸದ್ಯಕ್ಕೆ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ನಿಕ್ ಜೋನಾಸ್ ಅವರು ಪತ್ನಿಯ ವೃತ್ತಿಜೀವನಕ್ಕೆ ಬೆಂಬಲವಾಗಿ ನಿಂತಿದ್ದಾರೆ. ನಿಕ್ ಸಹ ಲೈವ್ ಕಾನ್ಸರ್ಟ್, ಹೊಸ ಆಲ್ಬಂ ಮತ್ತು ಸಿನಿಮಾ ನಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅವರು 2018ರಲ್ಲಿ ವಿವಾಹವಾದರು. ನಿಕ್ ಜೋನಸ್, ಪ್ರಿಯಾಂಕಾ ಅವರಿಗಿಂತಲೂ ವಯಸ್ಸಿನಲ್ಲಿ 10 ವರ್ಷ ಚಿಕ್ಕವರು. ಈ ವಯಸ್ಸಿನ ಅಂತರದ ಕಾರಣಕ್ಕೆ ಆರಂಭದಲ್ಲಿ ಈ ಜೋಡಿ ಟ್ರೋಲ್​​ಗೆ ಒಳಗಾಗಿತ್ತು. ಅಲ್ಲದೆ, ಇವರ ಅದ್ಧೂರಿ ವಿವಾಹ ಭಾರತದಲ್ಲಿ ಭಾರತೀಯ ಸಂಸ್ಕೃತಿಯಂತೆ ನಡೆದಿತ್ತು. ಆಗಲೂ ಸಹ ಇದನ್ನು ಪಿಆರ್ ಸ್ಟಂಟ್ ಎಂದೆಲ್ಲ ಕರೆಯಲಾಗಿತ್ತು. ಆದರೆ ಮದುವೆಯಾಗಿ ಇಷ್ಟು ವರ್ಷಗಳ ಬಳಿಕವೂ ಈ ಜೋಡಿ ಖುಷಿಯಾಗಿ ಒಟ್ಟಿಗೆ ಇದ್ದಾರೆ. ಇಬ್ಬರಿಗೂ ಮಾಲತಿ ಹೆಸರಿನ ಮುದ್ದಾದ ಮಗಳು ಸಹ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:21 pm, Tue, 10 February 26

Source link

ಬೆಂಗಳೂರು: ಅಂಜನಾಪುರದಲ್ಲಿ ಮನೆ ಗೇಟ್ ಒಳಗೇ ಬಂತು ಚಿರತೆ!

ಬೆಂಗಳೂರು, ಫೆಬ್ರವರಿ 10: ಬೆಂಗಳೂರಿನ ಅಂಜನಾಪುರದಲ್ಲಿ ಚಿರತೆ ಬಂದಿರುವ ಸಿಸಿಟಿವಿ ವಿಡಿಯೋ ಕೆಲವು ದಿನಗಳ ಹಿಂದೆ ಜನರನ್ನು ಭಯಭೀತರನ್ನಾಗಿಸಿತ್ತು. ಇದೀಗ ಮತ್ತೆ ಅಂಜನಾಪುರದ 5ಜಿ ಬ್ಲಾಕ್​​ನಲ್ಲಿ ಚಿರತೆ ಕಾಣಿಸಿಕೊಂಡಿದೆ. ಸಂದೀಪ್ ಎಂಬುವರ ಮನೆ ಗೇಟ್​ ಬಳಿ ಚಿರತೆ ಕಾಣಿಸಿಕೊಂಡಿದೆ. ತಡರಾತ್ರಿ ಮನೆ ಗೇಟ್ ಒಳಗೇ ಬಂದ ಚಿರತೆ ನಂತರ ಹೊರ ಹೋಗುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version